ಮಂಜುನಾಥ ಗದಗಿನ
ಮನಸ್ಸಿನಲ್ಲಿ ಅದೋನೋ! ಪುಳಕ್,
ಭಾವನೆಗಳಿಲ್ಲಿ ಅದೇನೋ ತಳುಕ,
ಹೃದಯದಲ್ಲಿ ಅದೇನೋ ನಡುಕ,
ಕೊನೆಗೆ ಸುರಿದದ್ದು ಕಣ್ಣಿರ ಜಳಕ.
ಎಂಜಿ..
ಸಂಪ್ರದಾಯಗಳು ಕೂಡಾ ಕೇಲವೊಂದು ಸಾರಿ ಮನಸ್ಸಿಗೆ ನೋವು-ನಲಿವನ್ನು ನೀಡುತ್ತವೆ ಅಲ್ವಾ! ಈ ಸಂಪ್ರದಾಯಗಳು ಇರದೇ ಹೋಗಿದ್ದರೆ ಇಂದು ನಾವೇಲ್ಲರೂ ಒಟ್ಟಿಗೆ ಕೂಡುತ್ತಿರಲಿಲ್ಲ, ಭಾವಾಂತರಂಗದಲ್ಲಿ ತೇಲಿ ಸುಂದರ ಕ್ಷಣಗಳನ್ನು ಸೃಷ್ಠಿಸಿ ಇತಿಹಾಸದ ಪುಟಗಳಲ್ಲಿ ತೇಲಿಬಿಡುತ್ತಿರಲಿಲ್ಲ. ಮೋಜು-ಮಸ್ತಿಯೊಂದಿಗೆ ಬೇರೆಯುತ್ತಿರಲಿಲ್ಲ. ಕೊನೆಗೆ ಪ್ರೀತಿ ಅಪ್ಪುಗೆಯೊಂದಿಗೆ ಮರಳುತ್ತಿರಲಿಲ್ಲ.ಹೌದು! ಅದು ಒಂದು ಅದ್ಭುತ್ ಸುಂದರ ಬಿಳ್ಕೋಡುಗೆಯ ಸಂಪ್ರದಾಯ ಕಾರ್ಯಕ್ರಮ. ಹೊಸತನ ಸ್ವಾಗತಿಸುವದು. ಹಳೇಯದನ್ನ ಬಿಳ್ಕೋಡುವದು ನಮ್ಮ ಸಂಪ್ರದಾಯ. ಆ ಸಭಾಂಗಣದ ತುಂಬೇಲ್ಲಾ ಬಣ್ಣ-ಬಣ್ಣದ ಬಲೂನ್‌ಗಳು, ಅಲ್ಲಲ್ಲಿ ಮಿನುಗುತ್ತಿದ್ದ ನಕ್ಷತ್ರಗಳು, ಮಧ್ಯ ಮಧ್ಯ ಸದ್ದು ಮಾಡುತ್ತಿದ್ದ ಡಿಜೆಗಳು ಇಡೀ ವಾತಾವರಣಕ್ಕೆ ರಂಗು ತಂದಿದ್ದವು. ಇನ್ನೂ ಹುಡುಗಿಯರು ಕಲರ್ ಕಲರ್ ಡ್ರೆಸ್ ಹಾಕ್ಕೊಂಡು ಹುಡುಗರ ಎದೆಯಲ್ಲಿ ಜಗಮಗಿಸುತ್ತಿದ್ದರು.
ಕಾರ್ಯಕ್ರಮ ಯಾವ ರೀತಿಯಾಗಿ ನಡೆಯುತ್ತದೆ, ಯಾರು? ಹೇಗೆ ಮಾತನಾಡುತ್ತಾರೆ. ಏನೆಲ್ಲ ಅಡುಗೆ ಮಾಡಿಸಿದ್ದಾರೆ ಎಂಬ ಪುಳಕ್‌ದೊಂದಿಗೆ ಆರಂಭವಾದ ನಮ್ಮ ಕಾರ್ಯಕ್ರಮ ಅಧ್ಯಕ್ಷರ ಹಾಗೂ ಅತಿಥಿಗಳ ಭಾಷಣದೊಂದಿಗೆ ಸಂಪ್ರದಾಯಿಕವಾಗಿ ಮುಗಿಯಿತು. ಅನಂತರ ಊಟದ ವ್ಯವಸ್ಥೆಯನ್ನು ಮಾಡಲಾಗಿತ್ತು. ಅಬ್ಬಾ..! ಅಬ್ಬಾ..! ಊಟ ಮಾತ್ರ ಯಾವ ಫೈ ಸ್ಟಾರ್ ಹೋಟೆಲ್‌ನ ಊಟಕ್ಕೂ ಕಡಿಮೆ ಇರಲಿಲ್ಲ. ಹುರಕ್ಕಿ ಹೋಳಗಿ, ಪರೋಟಾ, ಎರಡು ತರಹದ ಪಲ್ಯ, ಹಪ್ಪಳ, ಮೊಸರ ಅನ್ನ, ಗೀ ರೈಸ್ ಹಾ..ಹಾ.. ನೆನಸಿಕೊಂಡರೆ ಹೊಟ್ಟೆ ತಾಳ ಹಾಕಲು ಪ್ರಾರಂಭಿಸುತ್ತದೆ.
ಇದಾದ ನಂತರ ನಡೆದದ್ದು ಮನರಂಜನಾ ಕಾರ್ಯಕ್ರಮ, ಒಂದು ಕಾರ್ಯಕ್ರಮ ನೆನಪಿನಲ್ಲಿ ಉಳಿಯ ಬೇಕಾದರೆ ಅಲ್ಲಿ ಮೋಜು-ಮಸ್ತಿ ಇರಲೇ ಬೇಕು. ಅದೇ ರೀತಿ ನಮ್ಮ ಜೂನಿಯರ‌್ಸಗಳು ನಮಗೆ ನಾನಾ ವಿಧದ ಮನರಂಜನಾ ಕಾರ್ಯಕ್ರಮಗಳನ್ನು ಆಯೋಜಿಸಿದ್ದರು. ಕೆಲವೊಂದು ಚೀಟಿಯಲ್ಲಿ ಆಟಗಳ ಹೆಸರಗಳನ್ನು ಬರೆದು ಇಟ್ಟಿದ್ದರು. ಸ್ಪರ್ಧೆ ಪ್ರಾರಂಭವಾದ ನಂತರ ಮೊದಲ ಸಾಲಿನಲ್ಲಿ ಕುಳಿತಿದ್ದ ನಮ್ಮ ಆರು ಜನ ಸಹಪಾಠಿಗಳನ್ನು ಕರೆದು ಚೀಟಿ ತೆಗೆಯಲು ಹೇಳಿದರು. ಅವರಿಗೆ ಬಂದ ವಿಷಯ ಮೇಕಫ್ ಮಾಡುವದು. ಹೌದು! ಆರು ಜನರಲ್ಲಿ ಮೂರು ಜನ ಕುಳಿತುಕೊಳ್ಳಬೇಕು, ಮೂರು ಜನ ಮೇಕಫ್ ಮಾಡಬೇಕು. ಇಲ್ಲೇ ಬಂದದ್ದು ನೋಡಿ ಅವರಿಗೆ ತಳುಕ. ಎಲ್ಲರೂ ಮೇಕಫ್ ಮಾಡ್ತಿನಿ ಅನ್ನೋರೆ ಆಗಿದ್ದರು. ಮೇಕಫ್ ಮಾಡಿಸಿಕೊಳ್ಳಲು ಯಾರು ಸಿದ್ಧರಿರಲಿಲ್ಲ. ಕೊನೆಗೆ ಅವರ ನಡುವೆ ಹೊಂದಾಣಿಕೆಯಾಗಿ ಮೇಕಫ್ ಮಾಡಿದ್ರು ನೋಡಿ ಏನ್! ಅದ್ಭುತ್ ಅಂತೀರಾ! ನೋಡೋಕೆ ಎರಡು ಕಣ್ಣು ಸಾಲದಾಗಿದ್ದು. ಹೀಗೆ ವಿಭಿನ್ನ ವಿಶಿಷ್ಟ ಕಾರ್ಯಕ್ರಮಗಳನ್ನು ನಡೆಸಿಕೊಟ್ಟು ನಮಗೆ ಮನರಂಜನೆ ಒದಗಿಸಿದರು. ಆದರೆ ಇಷ್ಟೋತ್ತಿಗಾಗಲೇ ಭಾವನೆಗಳ ಕಟ್ಟೆ ಒಡೆದು ಕೆಲವರ ಕಣ್ಣುಗಳು ಜಳಕ ಮಾಡಲು ಶುರುವಿಟ್ಟಿಕೊಂಡವು. ಆದರೆ ಕೆಲವೊಂದಿಷ್ಟು ಜನರು ಏನು ಮಾಡಬೇಕು ಎಂದು ತಿಳಿಯದೇ ಭಾವಾಂತರಂಗದಲ್ಲಿ ಅಲ್ಲೋಲ್ ಕಲ್ಲೋಲಕ್ಕೆ ಒಳಗಾಗಿದ್ದರು.
ನೀವು ಕೊಟ್ಟ ಆ ಪುಟ್ಟ ಪೋಟೋ. ಮನಸ್ಸಿನ ಪುಟಗಳಿಲ್ಲಿ ಸದಾ ನಲಿದಾಡುತ್ತಿರುತ್ತದೆ. ಆ ಪುಸ್ತಕ್ ನಿಮ್ಮನ್ನು ಸಾದಾ ನೆನಪಿಸುತ್ತಿರುತ್ತದೆ. ಕೊನೆಗೆ ಅದೇ ನೆನಪಿನ ಭಾರದಲ್ಲಿ ಕೊನೆಯಾಗುತ್ತದೆ. ಸೋ..ಥ್ಯಾಂಕ್ಸ ಟು ಆಲ್ ಜೂನಿಯರ‌್ಸ.