ಮಂಜುನಾಥ ಗದಗಿನ
ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಸರ್ಕಾರಿ ನೌಕರಿ ಪಡೆದುಕೊಳ್ಳುವುದು ಎಲ್ಲರ ಕನಸು ಹಾಗೂ ಗುರಿ ಹೌದು. ಆದರೆ, ಸರ್ಕಾರಿ ನೌಕರಿ ಪಡೆಯಬೇಕು ಎಂದರೆ ಇಂದಿನ ದಿನಮಾನಗಳಲ್ಲಿ ತಪಸ್ಸು ಮಾಡಬೇಕು. ಆದರೆ, ಇಲ್ಲೊಬ್ಬರು ತಮ್ಮ ದೈಹಿಕ ನ್ಯೂನತೆಯ ನಡುವೆಯೂ ಆರು ಸರ್ಕಾರಿ ನೌಕರರಿಗೆ ಆಯ್ಕೆಯಾಗಿ ಎಲ್ಲರಿಗೂ ಮಾದರಿ ಆಗಿದ್ದಾರೆ.
ಹೌದು, ಅಥಣಿ ತಾಲ್ಲೂಕಿನ ಕೊಡಗಾನೂರು ಗ್ರಾಮದ ಪದ್ಮಾವತಿ ಹರಗೆ ಆ ಸಾಧಕಿ. ಎಲ್ಲವೂ ಇದ್ದು ಏನು ಇಲ್ಲದವರಂತೆ ಕಾಲ ಕಳೆಯುವ ಜನರ ಮಧ್ಯೆ ಇಂತಹ ಸಾಧಕರು ಇರುವುದು ಹೆಮ್ಮೆಯ ಸಂಗತಿ.
ಬಡತನದಲ್ಲೇ ಆರು ನೌಕರಿ:
ಪದ್ಮಾವತಿ ಅವರದ್ದು ತೀರಾ ಬಡತನದಿಂದ ಬಂದ ಕುಟುಂಬ. ಇವರ ತಂದೆ ತಾಯಿ ಕೂಲಿ ಮಾಡಿ ಮಕ್ಕಳನ್ನು ಸಾಕಿ ಸಲಹಿದ್ದಾರೆ. ಪದ್ಮಾವತಿ ಅವರಿಗೆ ಐವರು ಅಕ್ಕ-ತಂಗಿಯರು, ತಮ್ಮ ಇದ್ದಾನೆ. ಇವರೆಲ್ಲರಿಗೂ ಕೂಲಿ ಮಾಡಿಯೇ ಶಿಕ್ಷಣ ಕೊಡಿಸಿದ್ದಾರೆ ಪದ್ಮಾವತಿ ಪಾಲಕರು. ಪದ್ಮಾವತಿ ಅವರು ಐದು ವರ್ಷದವರು ಇದ್ದಾಗ ಇವರಿಗೆ ಪೋಲಿಯೋ ತಗುಲಿತು. ಇದರಿಂದ ವಿಚಲಿತರಾದ ಪದ್ಮಾವತಿ ಪಾಲಕರು ದೇವರನ್ನು ಶಪಿಸುತ್ತಾ ಕುಳಿತುಕೊಂಡರು. ಆದರೆ, ಪದ್ಮಾವತಿ ಶಾಲೆಯಲ್ಲಿ ಜಾಣೆ ಆಗಿದ್ದಾಳೆ ಮಗಳಿಗೆ ಶಿಕ್ಷಣ ಕೊಡಿ ಅವಳು ಮುಂದೆ ಇತರರಿಗೆ ಮಾದರಿ ಆಗುತ್ತಾ ಎಂದು ಜನರು ಅವರಿಗೆ ತಿಳಿ ಹೇಳಿದರು. ಹೀಗಾಗಿ ಪದ್ಮಾವತಿ ಪಾಲಕರು ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸಲು ಮುಂದಾದರು. ಪದ್ಮಾವತಿ ಹರಗೆ ಕೂಡ ತನ್ನ ನ್ಯೂನ್ಯತೆಯನ್ನೇ ಶಕ್ತಿಯನ್ನಾಗಿಸಿಕೊಂಡು ಮುನ್ನಡೆದಳು. ಹೀಗಾಗಿ ಡಿಎಡ್ ಶಿಕ್ಷಣಪಡೆದುಕೊಂಡರು.
ಆರು ಸರ್ಕಾರಿ ನೌಕರಿ ಪಡೆದು ಮಾದರಿ:
ಈಗಿನ ಒಂದು ಕಾಲದಲ್ಲಿ ಸರ್ಕಾರಿ ನೌಕರರು ಕಷ್ಟಸಾಧ್ಯವಾಗಿರುವಾಗ ಪದ್ಮಾವತಿ ಅವರು ತಮ್ಮ ಕಠಿಣ ಶ್ರಮದಿಂದ ಸ್ಪರ್ಧಾತ್ಮಕ ಪರೀಕ್ಷೆಗಳ ಮೂಲಕ ಆರು ಸರ್ಕಾರಿ ನೌಕರಿ ಪಡೆದು ಎಲ್ಲರಿಗೂ ಮಾದರಿಯಾಗಿದ್ದಾರೆ. 2017ರಲ್ಲೇ ಪ್ರಥಮ ದರ್ಜೆ ಸಹಾಯಕ(ಎಸ್‌ಡಿಎ) ಹಾಗೂ ದ್ವಿತೀಯ ದರ್ಜೆ ಸಹಾಯಕ(ಎಫ್‌ಡಿಎ)ಗೆ ಆಯ್ಕೆ, 2018ರಲ್ಲಿ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ(ಪಿಡಿಒ) ಹಾಗೂ ಸೆಕ್ರೆಟ್ರಿ ಗ್ರೇಡ್-1 ಅಧಿಕಾರಿ, 2019ರಲ್ಲಿ ಹಾಸ್ಟೆಲ್ ವಾರ್ಡ್‌ನ, ಸುಪರ್ ಇಂಡೆಂಟ್ ಅಧಿಕಾರಿಯಾಗಿ ಆಯ್ಕೆಯಾಗಿದ್ದರು. ಆದರೆ, ಇವರು PDO ಹುದ್ದೆಯನ್ನು ಆಯ್ಕೆ ಮಾಡಿಕೊಂಡಿದ್ದಾರೆ ಹಾಸನ ಜಿಲ್ಲೆಯ ಅರಸಿಕೆರೆ ತಾಲೂಕಿನಲ್ಲಿ ಕಾರ್ಯ ನಿರ್ವಹಣೆ ಮಾಡುತ್ತಿದ್ದಾರೆ.
ಕೆಇಎಸ್ ಮೇನ್ಸ್ ಆಯ್ಕೆ:
ಕರ್ನಾಟಕ ಉನ್ನತ ಮಟ್ಟದ ಪರೀಕ್ಷೆಗಳಲ್ಲಿ ಒಂದಾದ ಕೆಎಎಸ್ ಪರೀಕ್ಷೆ 2017ರಲ್ಲಿ ಇವರು ಬರೆದಿದ್ದಾರೆ. ಮೊದಲ ಪ್ರಯತ್ನದಲ್ಲೇ ಇವರು ಕೆಎಸ್‌ಎಸ್ ಮೇನ್ಸ್ ಪರೀಕ್ಷೆಗೂ ಆಯ್ಕೆ ಆಗಿದ್ದರು. ಆದರೆ, ಕೆಲವೇ ಅಂಕಗಳಲ್ಲಿ ಅನುತೀರ್ಣ ಆದರು.
ಸಮಯ ಪಾಲನೆ ಮುಖ್ಯ:
ಸ್ಪರ್ಧಾತ್ಮಕ ಪರೀಕ್ಷೆಗಳ ಮೂಲಕ ಒಂದು ಸರ್ಕಾರಿ ನೌಕರರು ಪಡೆಯುವುದು ಕಷ್ಟಕರವಾದ ಇಂದಿನ ದಿನಮಾನಗಳಲ್ಲಿ ಇವರು ದೈಹಿಕ ನ್ಯೂನ್ಯತೆಯ ನಡುವೆ ಆರು ನೌಕರರು ಪಡೆದಿರುವ ಪದ್ಮಾವತಿ ಅವರು ಎಲ್ಲರಿಗೂ ಮಾದರಿ ಪದ್ಮಾವತಿ ಸಮಯ ಪಾಲನೆಗೆ ಹೆಚ್ಚು ಮಹತ್ವವನ್ನು ಕೊಡುತ್ತಾರೆ. ಇದಷ್ಟೇ ಅಲ್ಲದೆ ಮೊಬೈಲ್ ಬಳಕೆಯನ್ನು ಕಡಿಮೆ ಮಾಡಲಾಗಿತ್ತು. ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಮಾತ್ರ ಮೊಬೈಲ್ ಬಳಕೆ ಮಾಡಿಕೊಳ್ಳುತ್ತಿದ್ದರು. ಹೀಗಾಗಿ ಸಮಯ ಪಾಲನೆ ಮಾಡಿಕೊಂಡು ಟೈಂ ಟೇಬಲ್ ಹಾಕಿಕೊಂಡು ಸ್ಪರ್ಧಾತ್ಮಕ ಪರೀಕ್ಷೆ ಬರೆದು ಯಶ್ ಕಂಡಿದ್ದಾರೆ. ( ಪದ್ಮಾವತಿ ಅವರ ಜೊತೆ ಮಾತನಾಡಲು ಕರೆ ಮಾಡಿ . ಮೊ . ನಂ . 9845796774
---
ಕೋಟ್
ನಾನು ಐದನೇ ಆದಾಗಲೇ ನನಗೆ ಪೋಲಿಯೋ ತಗುಲಿತು. ವರ್ಷಗಳು ಕಳೆದಂತೆ ನನಗೆ ಜನರ ಮಧ್ಯೆ ಹೋಗಲು ಮುಜುಗರ ಉಂಟಾಯಿತು. ಆದರೆ, ಇಂತಹ ಸಮಯದಲ್ಲಿ ನಾನು ಕೂಡ ಅಧಿಕಾರಿ ಆಗಬೇಕು. ಜನರ ಮಧ್ಯೆ ಇದ್ದು ಕೆಲಸ ಮಾಡಬೇಕು ಎಂದುಕೊಂಡೆ ಇದೇ ಛಲದಲ್ಲೇ ಓದಿದೆ. ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸತತ ಪ್ರಯತ್ನ ಮಾಡಿದೆ. ಇದರ ಫಲವಾಗಿ ನಾನು ಇಂದು ಸರ್ಕಾರಿ ನೌಕರಳಾಗಿದ್ದೇನೆ.
-ಪದ್ಮಾವತಿ ಹರಗೆ. ವಿಕಲಚೇತನ ಸಾಧಕಿ.
No comments:
Post a Comment