ಬದುಕು ಎಷ್ಟೋಂದು ಸೂಚಿಗ ನೋಡಿ, ತುತ್ತು ಅನ್ನಕ್ಕಾಗಿ, ಮೈ ಮುಚ್ಚೋ ಬಟ್ಟೆಗಾಗಿ, ಸಾವಧಾನವೇ ಇಲ್ಲದೆ ಹಗಲಿರುಳು ದುಡ್ಡಿಗಾಗಿ ಧನ ದುಡಿದ ಹಾಗೆ ಇದ್ದ ಬದ್ದ ಒತ್ತಡವನ್ನು ಮೈ ಮೇಲೆ ಹಾಕಿಕೊಂಡು ದುಡಿಯುತ್ತಿವೆ. ಇದೇಲ್ಲಾ ಯಾರಿಗೊಸ್ಕರ ಅಂತ ಹಾಗೆ ದುಡಿಯುವವರನ್ನ ಒಂದು ಮಾತು ಕೇಳಿ ಅವರು ನೀಡುವ ಉತ್ತರ ಒಂದೇ ಈನ್ಯಾರಿಗೆ ನಮ್ಮ ವೃದ್ದಾಫ್ಯದಲ್ಲಿ ನಮ್ಮನ್ನ ನೋಡಿಕೊಳ್ಳೊ ಮಕ್ಕಳಿಗೆ ಎಂಬ ಉತ್ತರ ನೀಡುವದು ಗ್ಯಾರಂಟಿ. ಆದರೆ ಆ ಮಕ್ಕಳು ದೊಡ್ಡವರಾದ ಮೇಲೆ, ತಂದೆ-ತಾಯಂದಿರನ್ನ ಎಷ್ಟರ ಮಟ್ಟಿಗೆ ಚನ್ನಾಗಿ ನೋಡ್ಕೋಳ್ತಾರೋ! ಆ ದೇವರಿಗೆ ಗೊತ್ತು. ಆದರೆ ಕೆಲವೊಂದಿಷ್ಟು ಮಕ್ಕಳು ತಮ್ಮ ಸಾಕಿದ ತಂದೆ-ತಾಯಿಗಳನ್ನು ಕಾಲ ಕಸವನ್ನಾಗಿಸಿ ಮನೆ ಬಿಟ್ಟು ಹಾಕುತ್ತಾರೆ. ಪಾಪಾ ಆ ಮುಗ್ದ ಜೀವಗಳು ವಿಧಿಯಿಲದ್ಲೆ ಶಹರಗಳ ಕಡೆ ಮುಖ ಮಾಡಿ ಈ ರೀತಿ ಜೀವನ ಸಾಗಿಸುತ್ತಿರುವದು ಕೆದರಕ.
ಹೌದು! ಇಂತಹ ಜನರು ಎಲ್ಲೆಂದರಲ್ಲಿ ಕಾಣಸಿಗುತ್ತಾರೆ. ಆದರೆ ಇವರು ಯಾರು? ಎಲ್ಲಿಂದ ಬಂದವರು ಎಂಬುವುದು ಯಕ್ಷ ಪ್ರಶ್ನೆಯಾಗಿದೆ. ಹೀಗೆ ಮಹಾನಗರಗಳಿಗೆ ಬರುವವರು ವೃದ್ದರೇ ಹೆಚ್ಚಾಗಿದ್ದಾರೆ. ಆದರೆ ಜನರನ್ನು ಕಾಡುವ ಪ್ರಶ್ನೆಗಳು ಎರಡು. ಇವರನ್ನು ಇಲ್ಲಿ ತಂದು ಬಿಡುತ್ತಿರುವವರು ಯಾರು? ಅದರಲ್ಲೂ ವೃದ್ದರನ್ನು ತಂದು ಬಿಡುತ್ತಿರುವುದು ಯಾಕೆ? ಇಂತಹ ಪ್ರಶ್ನೆಗಳು ನಾಗರಿಕ ಸಮಾಜದಲ್ಲಿ ಪ್ರಶ್ನೆಗಳು ಪ್ರಶ್ನೆಗಳೇ ಆಗಿ ಉಳಿದಿವೆ.

ವೃದ್ದರನ್ನು ಮಹಾನಗರಗಳಲ್ಲಿ ಬಿಟ್ಟು ಹೋದ ಸಂಬಂಧಿಕರು ಅಥವಾ ಮಕ್ಕಳು ಆ ಮೇಲೆ ಅವರು ಏನಾದರೂ ಎಂದು ತಲೆಹಾಕಿಕೂಡ ನೋಡುವುದಿಲ್ಲ. ಆದರೆ ಗೊತ್ತು-ಗುರಿಯಿಲ್ಲದ ಊರಿಗೆ ಬಂದ ವೃದ್ದರೂ ಏನು ಮಾಡಬೇಕೆಂದು ತಿಳಿಯದೆ, ಮಾನಸಿಕವಾಗಿ ಕುಗ್ಗಿ ಮಾನಸಿಕ ರೋಗಿಗಳಾಗಿ, ಜಗತ್ತಿನ ಸಂಪರ್ಕ ಕಳೆದುಕೊಂಡು ನಮ್ಮದೇ ಲೋಕದಲ್ಲಿ ಇದ್ದು ಬಿಡುತ್ತಿದ್ದಾರೆ.

ಇಂತಹ ಜನರ ಸ್ಥಿತಿ ನೋಡಿ, ಎಂತವರ ಹೃದಯ ಕೂಡಾ ಮರುಗದೇ ಇರದು, ಆದರೇ ಪ್ರಜ್ಞಾವಂತ ಜನರ ಪ್ರಶ್ನೆ ಇವರು ಮಾಡಿದ ತಪ್ಪಾದರೂ ಏನು? ಎಂಬುದು.
ಮಂಜುನಾಥ ಗದಗಿನ
8050753148