ಅವು ಬಾಲ್ಯದ ದಿನಗಳು. ಅಪ್ಪ ಅಂದ್ರೆ ಸಾಕು ಅದೇಲ್ಲಿಂದಲ್ಲೋ! ಪ್ರತ್ಯೇಕ್ಷವಾಗಿ ಬೀಡುತ್ತಿದ್ದ. ನಾನು ರಚ್ಚೆ ಹಿಡಿದು ಅಳಲು ಪ್ರಾರಂಭಿಸಿದ್ರೆ ಅಪ್ಪ ತನ್ನ ಕಚ್ಚೆ ಸರಿ ಮಾಡಿಕೊಂಡು ಊರು ತುಂಬಾ ಹೆಗಲ ಮೇಲೆ ಕುಳರಿಸಿ, ಆನೆ ಅಂಬಾರಿಯ ಹಾಗೆ ಹೊತ್ತು ತಿರುಗುತ್ತಿದ್ದ. ಆದರೆ, ಈಗ ಅಪ್ಪ ನನ್ನೊಟ್ಟಿಗಿಲ್ಲ. ಆದರೆ, ಅಪ್ಪ ಕೊಟ್ಟು ಹೋದ ನೆನಪುಗಳು ಮಾತ್ರ ಎಡಬಿಡದೇ ಕಾಡುತ್ತಿವೆ.
ಅಪ್ಪನದು ಊರಿನಲ್ಲಿ ದೊಡ್ಡ ಹೆಸರು. ಶುಭ ಕಾರ‌್ಯಗಳಿಂದ ಹಿಡಿದು ಅಶುಭಕಾರ‌್ಯಗಳೇಲ್ಲವು ಅಪ್ಪ ನೇತೃತ್ವದಲ್ಲೇ ನಡೆಯುತ್ತಿದ್ದವು. ಅಪ್ಪ ನೇಕಾರಿಕೆ, ಅಡುಗೆ, ಗುಡಿಗಳ ಪೂಜಾರಿಕೆ ಹೀಗೆ ಎಲ್ಲದರಲ್ಲೂ ಪಾರಂಗತನಾಗಿದ್ದ. ಆದರೆ ಅಪ್ಪನಿಗೆ ಹಣದ ವ್ಯಾಮೋಹ ಸ್ಪಲ್ಪ ಹೆಚ್ಚಾಗಿಯೇ ಇತ್ತು. ಇದೇ ಕಾರಣಕ್ಕೆ ಪಾರ್ಶ್ವವಾಯು ಹೊಡು ಮೂಲೆ ಗುಂಪಾಗಿ ಹೋದದ್ದು ಈಗ ಇತಿಹಾಸ ಮಾತ್ರ. ಪಾಶ್ವವಾಯು ತಗುಲಿ ಬರೋಬ್ಬರಿ 12 ವರ್ಷ ನನ್ನಪ್ಪ ನನ್ನೊಟ್ಟಿಗೆ ಇದ್ದದ್ದು ಮಾತ್ರ ವಿಸ್ಮಯ. ಹೌದು! ನಮ್ಮ ಊರಲ್ಲೇ ಪಾರ್ಶ್ವವಾಯು ತಗುಲಿ 12 ವರ್ಷ ಜೀವಿಸಿದ್ದ ಒಂದೇ ಒಂದು ಕುರುಹುಗಳು ಸಿಗುವುದಿಲ್ಲ. ಹೀಗಂತ ಊರಿನವರೇ ಮಾತನಾಡಿಕೊಳ್ಳುತ್ತಿದ್ದರು. ಅಪ್ಪನ ನಂತರ ನಾಲ್ಕೈದು ಜನರಿಗೆ ಪಾರ್ಶ್ವವಾಯು ಹೊಡೆಯಿತು. ಅವರ‌್ಯಾರು ಬಹುದಿನ ಬದುಕದೇ ಶಿವನ ಪಾದ ಸೇರಿಕೊಂಡರು. ಆದರೆ, ಅಪ್ಪನದ್ದು ಗಟ್ಟಿ ಜೀವ.
ಅಪ್ಪ ಅಂದ್ರೆ, ಆಕಾಶ ನೋಡಿದಷ್ಟು, ಹೇಳಿದಷ್ಟು ವಿಸ್ತಾರವಾಗುತ್ತಾ ಹೋಗುತ್ತಾನೆ. ಅಪ್ಪ ಅಂದ್ರೆ ಗುರು, ಮಾರ್ಗದರ್ಶಿ, ಹಿತೈಸಿ, ಎಲ್ಲದಕ್ಕಿಂತ ಹೆಚ್ಚಾಗಿ ಉತ್ತಮ ಗೆಳೆಯ. ಹೌದು! ನನ್ನಪ್ಪ ಕೂಡಾ ನನ್ಗೆ ಎಲ್ಲವೂ ಆಗಿದ್ದ. ನನ್ನ ಸುಖ, ದುಃಖಕ್ಕೆ ಹೇಗಲಾಗಿ, ಬಾಲ್ಯದ ಪ್ರತಿಯೊಂದು ಪ್ರತಿಯೊಂದು ಕ್ಷಣಗಳಿಗೂ ಜೀವ ತುಂಬುತ್ತಾ, ನನ್ನ ಜೀವನಕ್ಕೆ ಭದ್ರ ಬುನಾದಿ ಹಾಕಿದ್ದ ನನ್ನಪ್ಪ. ಇಂದು ನನ್ನನ್ನ ಯಾರಾದ್ರು, ಗುರುತಿಸುತ್ತಾರೆ, ಒಳ್ಳೆ ಹುಡುಗ, ವಿನಯವಂತ ಅಂತಾ ಕರೆಯುತ್ತಾರೆ ಎಂದ್ರೆ ಅದಕ್ಕೆ ಕಾರಣ ನನ್ನಪ್ಪ.
ಪ್ರಾರಂಭದಲ್ಲೇ ನನ್ಗೆ ಒಳ್ಳೆಯ ವಿದ್ಯಾಭ್ಯಾಸ ನೀಡಿದ, ಒಳ್ಳೆಯ ಸಂಸ್ಕಾರ ತುಂಬಿದ, ಯಾರ ಜೊತೆ ಹೇಗೆ ಮಾತನಾಡಬೇಕು ಎಂದು ತಿಳಿಸಿದ. ಇದೇ ಕಾರಣಕ್ಕೆ ಇಂದು ನಾನೊಂದು ಸುಂದರ ಮೂರ್ತಿಯಾಗಿ ಜಗತ್ತಿಗೆ ತೆರೆದಿಕೊಂಡಿದ್ದೇನೆ. ಈಗ ಊರಿಗೆ ಹೋದರೆ, ಹಸನ್ಮುಖಿಯಾಗಿ ಕುರ್ಚಿ ಮೇಲೆ ಕುಳಿತು ಸ್ವಾಗತಿಸಲು ನನ್ನಪ್ಪ ನನ್ನೊಟ್ಟಿಗಿಲ್ಲ. ಅಪ್ಪ ಇಲ್ಲದ ಬದುಕು ಇಂದೇಕೋ ಬರಿದಾಗಿ ಕಾಣಿಸುತ್ತಿದೆ. ಅಪ್ಪನ ನೆನೆಪುಗಳು ಮೈಯಲ್ಲ ಅಪ್ಪಿಕೊಂಡು ಕಾಡಿ, ಅರೆಬರೆ ನೆನೆಪುಗಳನ್ನು ಕೆಣಕುತ್ತಿವೆ. ಏನೇ ಆಗಲಿ ಮತ್ತೆ ಅಪ್ಪ ಮತ್ತೆ ಹುಟ್ಟಿ ಬಾ..
ಮಂಜುನಾಥ ಗದಗಿನ
8050753148
No comments:
Post a Comment