Sunday, 4 September 2016

ಒಂದಕ್ಷರ ಕಲಿಸಿದಾತ ಗುರುವೇ..!!

ಒಂದು ಗುರಿ, ಆ ಗುರಿ ಹಿಂದೆ ಒಬ್ಬ ಗುರು ಇದ್ದರೆ ಎಂತಹ ಕಷ್ಟಗಳಿಗೂ ಸೆಡ್ಡು ಹೊಡೆದು ಮುನ್ನುಗ್ಗಿ ಸಾಧನೆ ಶಿಖರಕ್ಕೆ ಮುತ್ತಿಕ್ಕ ಬಹುದು. ಆದರೆ ಗುರಿ, ಗುರು ಇಲ್ಲದ ಜೀವನ ದೋಣಿಯಿಲ್ಲದ ನಾವಿಕನಂತೆ. ಕೊನೆಯಿಲ್ಲದ ಅಲೆದಾಟ, ಪರದಾಟ. ಹಾಗೆ ನನ್ನ ಜೀವನವು ದೋಣಿಯಿಲ್ಲದ ನಾವಿಕನಂತೆ ದಿಕ್ಕು ತೋಚಿದೇ, ಮುಳುಗಿ ಹೋಗುತ್ತಿತ್ತು. ಈ ಸಮಯದಲ್ಲಿ ಕೈ ಹಿಡಿದು ಕರೆ ತಂದು ಗುರಿ ಹಾಗು ಗುರುವಾಗಿ ಮಾರ್ಗದರ್ಶನ ತೋರಿಸಿ,ಬದುಕಿಗೆ ಬೆಳಕಾದವರು ನನ್ನ ಗುರು.
ಬದುಕಿನ ಬಡತನ ಎಂಬ ಕತ್ತಲೆಯ ಕೆಳಗೆ ಕೊಳೆತು ಹೋಗುತ್ತಿದ್ದ ಬದುಕು. ಕಲಿಬೇಕು, ಸಾಧಿಸಬೇಕು ಎಂಬ ಹುಚ್ಚು ಹಂಬಲಗಳು ಮನದಲ್ಲಿ ಮನೆ ಮಾಡಿದ್ದವು. ಆದರೆ ಆ ಹಂಬಲಕ್ಕೆ ಬೆಂಬಲವಿಲ್ಲದೇ, ಕನಸುಗಳು ಸೊರಗಿ ಹೋಗುತ್ತಿದವು. ಇದೇ ಸಮಯಕ್ಕೆ ಕನಸುಗಳಿಗೆ ಬಣ್ಣ ತುಂಬಿ, ರಂಗು ರಂಗಾಗಿಸಿ ರೆಕ್ಕೆ ಬಲಿತ ಹಕ್ಕಿಯಂತಾಗಿಸಿದ್ದು ಇದೇ ನನ್ನ ಗುರು.
ಇದು ಐದು ವರ್ಷಗಳ ಹಿಂದಿನ ಮಾತು. ನಾನು ಪಿಯುಸಿ ಓದುತ್ತಿದ್ದ ಸಮಯ. ಮನೆಯಲ್ಲಿ ಬಡತನ ಕಾಲು ಮುರಿದುಕೊಂಡು ಬಿದ್ದಿದ್ದರು ಸಹ ಕಲಿಬೇಕು ಎಂಬ ಅಧಮ್ಯ ಆಸೆ. ಈ ಆಸೆಯಿಂದಲೇ ಪ್ರತಿದಿನ ಕೂಲಿ ಮಾಡಿ ಕಾಲೇಜಿಗೆ ಹೋಗುತ್ತಿದೆ. ಒಂದು ಚಿಕ್ಕ ಆಸೆ ಎಂತಹ ಕಾರ್ಯಕ್ಕೂ ಪ್ರೇರೆಪಿಸುತ್ತದೆ ಅಲ್ವಾ! ಹೌದು! ನನ್ನ ಕಲಿಬೇಕು ಎಂಬ ಆಸೆ ನನ್ನ ಎಲ್ಲ ಕಷ್ಟಗಳಿಗೂ ಕಾವಲಾಗಿತ್ತು. ಇದೇ ಧೈರ್ಯದಿಂದ ಚನ್ನಾಗಿ ಓದಿ ಕ್ಲಾಸ್‌ಗೆ ಪ್ರಥಮ ಸ್ಥಾನ ಪಡೆದುಕೊಂಡೆ. ಆದರೆ ಮುಂದೆ ಕಲಿಬೇಕು ಎಂಬ ಬಯಕೆ ಇದ್ದರೂ ಸಹ ಆರ್ಥಿಕ ತೊಂದರೆಯಿಂದ ಕಲಿಯಲಾಗದ ಪರಸ್ಥಿತಿ. ಇಲ್ಲಿಗೆ ನನ್ನ ಕನಸಿನ ರೆಕ್ಕೆಗಳು ಕತ್ತರಿಸಿ ಬೀಳುತ್ತವೆ. ಎಂದು ಜೀವನದ ಮೇಲೆ ಜಿಗುಪ್ಸೆ ಹುಟ್ಟಿತ್ತು.
ಇದೇ ಸಮಯಕ್ಕೆ ಗುರು,ಮಾರ್ಗದರ್ಶಕ,ಪೋಷಕ ಎಲ್ಲದಕ್ಕಿಂತ ಹೆಚ್ಚಾಗಿ ಒಬ್ಬ ಸ್ನೇಹಿತನಂತೆ ನನ್ನ ಕನಸಿಗೆ, ಬದುಕಿಗೆ ಹೇಗಲಾಗಿ, ನಿಂತು. ಪ್ರತಿದಿನ ಕೈತುತ್ತು ಹಾಕಿದ್ದು ನನ್ನ ಮಾವ. ಒಂದು ಚಿಕ್ಕ ಹಳ್ಳಿಯಲ್ಲಿ, ಬಾವಿಯೊಳಗಿನ ಕಪ್ಪೆಯಂತಿದ್ದ ನನ್ನನ್ನು ತನ್ನ ಕಡೆ ಕರೆಸಿಕೊಂಡು, ವಿಧ್ಯೆ,ಬುದ್ದಿ,ಬಟ್ಟೆ, ಊಟ ತನ್ನೊಟ್ಟಿಗೆ ಇರಲು ಆಶ್ರಯ ಕೊಟ್ಟು ನನ್ನ ಬಾಳಿನಲ್ಲಿ ಬೆಳಕಾಗಿ ಜೀವನಕ್ಕೆ ಗುರುವಾಗಿ, ಮಾರ್ಗದರ್ಶನ ನೀಡುತ್ತಿದ್ದಾರೆ ಈ ನನ್ನ ಮಾವ.
ಗುರು ಎಂದರೆ, ಕೇವಲ ಶಾಲೆಯಲ್ಲಿ ಹೇಳಿಕೊಡುವ ಶಿಕ್ಷಕ ಅಷ್ಟೇ ಅಲ್ಲ. ಮನೆಯಲ್ಲಿಯ ತಂದೆ-ತಾಯಿ, ಅಜ್ಜ-ಅಜ್ಜಿ,  ಬಂಧು-ಬಳಗ, ಸ್ನೇಹಿತ, ದಿನಾಲೂ ನಾವು ನೋಡುವ, ಮಾತನಾಡುವ ಜನರನ್ನೂ, ಸಮಾಜದಲ್ಲಿ ಎತ್ತರಕ್ಕೆರಿದ ಮಹನೀಯರನ್ನು ಗುರುಗನ್ನಾಗಿ ಭಾವಿಸಿದರೆ, ಎತ್ತರಕ್ಕೆ ಬೆಳೆಯಲು ಸಾಧ್ಯ. ಗುರುವಿನ ಗುಲಾಮನಾಗದೇ, ದೊರೆಯದೇನ್ನ ಮಕುತಿ ಎಂಬ ಹಿರಿಯ ದಾರ್ಶನಿಕರ ಮಾತಿನಂತೆ ಜೀವನದ ಮೌಲ್ಯಗಳು, ಜೀವನದ ಅರ್ಥ, ಗುರಿ, ಆ ಗುರಿ ಸಾಧನೆಗೆ ಗುರುವಿನ ಮಾರ್ಗದರ್ಶನ ಅವಶ್ಯಕ ಎಂದು ಹೇಳಿದ್ದಾರೆ. ಅದೇ ರೀತಿ ನನ್ನ ಜೀವನದಲ್ಲಿ ಎಲ್ಲವನ್ನು ತಿಳಿಸಿಕೊಟ್ಟಿದ್ದು ಇದೇ ನನ್ನ ಮಾವ.ಇಂದು ಒಂದಿಷ್ಟು ತಿಳುವಳಿಕೆ, ಜ್ಞಾನ ಸಂಪಾದಿಸಿ ಸಮಾಜವನ್ನು ಎದುರಿಸಲು ಕಲಿತ್ತಿದ್ದೇನೆ ಎಂದರೆ ಅದಕ್ಕೆ ಇವರೇ ಕಾರಣ.
ಸಮಾಜದಲ್ಲಿ ಯಾವ ರೀತಿಯಾಗಿ ನಡೆದುಕೊಳ್ಳಬೇಕು, ಯಾವ ರೀತಿಯಾಗಿ ಮಾತನಾಡಬೇಕು ಎಂದು ತಿಳಿದ ನನಗೆ ಎಲ್ಲವನ್ನು ತಿಳಿಸಿ ಮಾರ್ಗದರ್ಶನ ತೋರಿಸಿದ್ದಾರೆ. ಅಷ್ಟೇ ಅಲ್ಲದೇ ನನ್ನ ಶಿಕ್ಷಣದ ಖರ್ಚು ವೆಚ್ಚ, ನನ್ನ ದಿನದ ಖರ್ಚಿಗೆ ದುಡ್ಡು ಕೊಟ್ಟು ತಂದೆ-ತಾಯಿಗಿಂತಲೂ ಚನ್ನಾಗಿ ನೋಡಿಕೊಂಡು, ಉತ್ತಮ ಶಿಕ್ಷಣ ಕೊಡಿಸಿದ್ದಾರೆ. ಇವರ ಈ ಸಹಾಯ, ಪ್ರೀತಿ, ವಿಶ್ವಾಸಗಳನ್ನು ಈ ಜನ್ಮದಲ್ಲಿ ತೀರಿಸಿಲು ನನ್ನಿಂದಾಗದು. ಆದರೆ ಸೂಕ್ತ ಸಮಯದಲ್ಲಿ ಗುರುವಾಗಿ ಸಿಕ್ಕು, ಗುರಿ ತೋರಿ ಸಾಧನಗೆ ದಾರಿ ತೋರಿದ ಈ ನನ್ನ ಜೀವನದ ಗಾಡ್ ಪಾರ್ಧರ್‌ಗೆ ನನ್ನದೊಂದು ಸಲಾಂ.
ಮಂಜುನಾಥ ಗದಗಿನ
8050753148

ಆರು ಸರ್ಕಾರಿ ನೌಕ್ರಿ ಪಡೆದ ವಿಕಲಚೇತನ ಸಾಧಕಿ

  ಮಂಜುನಾಥ ಗದಗಿನ -- ಇಂದಿನ ಸ್ಪರ್ಧಾ ತ್ಮಕ ಯುಗದಲ್ಲಿ ಸರ್ಕಾರಿ ನೌಕರಿ ಪಡೆದುಕೊಳ್ಳುವುದು ಎಲ್ಲರ ಕನಸು ಹಾಗೂ ಗುರಿ ಹೌದು. ಆದರೆ, ಸರ್ಕಾರಿ ನೌಕರಿ ಪಡೆಯಬೇಕು...