ಮೌನ ಎಂಬ ಮಾಯಾಂಗನಿಯನ್ನು ಬೆನ್ನರಿ ಹೊರಟಿದ್ದಾಗ, ಇಳಿ ಸಂಜೆ ಎಂಬ ಕೆಂಪು ಹಾಸು ನಿಧಾನವಾಗಿ ಇಣುಕುತ್ತಿದ್ದ ಆ ಹೊತ್ತಲ್ಲಿ ಮನಸ್ಸಿನ ಮೌನಕ್ಕೆ ಮೂಲಾಮು ಹಚ್ಚಿದ ಆ ನಿನ್ನ ಕುಡಿನೋಟ ಇಂದೆಕೋ! ನನ್ನದೆಯ ಅಂರಂಗದಲ್ಲಿ ವಿರಹ ಗೀತೆಯೊಂದನನ್ನು ಹುಟ್ಟು ಹಾಕಿ ಗುನುಗುತ್ತಿದೆ.
ಆಗತಾನೆ, ಕ್ಲಾಸುಗಳನ್ನು ಮುಗಿಸಿ ಹೊರಗಡೆ ಹೆಜ್ಜೆ ಇಟ್ಟಾಗ ಕತ್ತಲೆಯು ಬೆಳಕನ್ನು ಅಟ್ಟಿಸಿಕೊಂಡು ಹೋಗುತ್ತಿತ್ತು. ಇದರ ಮಧ್ಯ ಗೆಳೆಯರ ಮಾತಿನ ಕಾದಾಟಾ, ಕಾಲು ಎಳೆದಾಟಗಳನ್ನು ಮಾಡುತ್ತಾ ಕಾಡು ಹರಟೆ ಹೋಡೆಯುತ್ತಾ ಲೋಕಾಭಿರಾಮವಾಗಿ ಬರುತ್ತಿದ್ದರು. ನಾನು ಮಾತ್ರ ಅವರ ಗೋಜಿಗೆ ಹೋಗದೆ, ನನ್ನದೆಯಾದ ಪ್ರಪಂಚದಲ್ಲಿ, ಯೋಚಿಸುತ್ತಾ ಬರುತ್ತಿದ್ದೆ.
ನಮ್ಮ ವಿಭಾಗವು ಕ್ಯಾಂಪಸ ಎಂಬ ಜಗತ್ತಿನಿಂದ, ಸಂಬಂಧ ಕಳೆಜಿಕೊಂಡ ಪುಟ್ಟ ರಾಷ್ಟ್ರದಂತಿರುವ ವಿಭಾಗ. ಇಲ್ಲಿಂದ ಕ್ಯಾಂಪಸ ಕಡೆಗೆ ಹೋಗ್ಬೇಕಾದ್ರೆ, ಅದೋನೋ, ಖುಷಿ, ಸುತ್ತಲ್ಲೂ ಹಚ್ಚ ಹಸಿರು, ಅದರ ಮಧ್ಯ ನಮ್ಮ ಪ್ರಯಣ ಎಷ್ಟು ಚಂದ ಅಲ್ವಾ. ಹ್ಞೂ..ಅವತ್ತು ಕೂಡಾ ಅದೇ ಆಹ್ಲಾದಕ ವಾತಾವರಣದ ಮಧ್ಯ ಪುಟ್ಟ ಹೆಜ್ಜೆಗಳನ್ನು ಹಾಕುತ್ತಾ ಬರುತ್ತಿದ್ದೆ. ಆ ಕಾಡ ಹಾದಿಯಲ್ಲಿ ಅಂದು ಕಂಡಳೇ ನೀನು. ಆಗತಾನೆ ಕವಿವಿಯ ಪ್ರಕೃತಿ ಮೈಗೊಡವಿ ಎದ್ದು, ಹೊಸತನದಿಂದ ಶೋಭಿಸುತ್ತಿದ್ದಳು. ಆ ಕ್ಷಣಕ್ಕೆ ಕಂಡ ನಿನ್ನ ಮುಖ ಕೂಡಾ, ಮರ್ಕ್ಯೂರಿ ಬಲ್ಪನ ಹೊಳಪಿನಂತೆ ಕಂಡಿತು.
ನಾಲ್ಕಾರು ನಿಮ್ಮ ಗೆಳತಿಯರ ಜೊತೆ ತಳಕುತ್ತಾ..ಬಳಕುತ್ತಾ..ಬರುತ್ತಿದ್ದ ನಿನ್ನನ್ನು ನೋಡಿದೆ. ಅದೋನೋ! ಪರವಸೆನಾದೇನು, ನೀ ನೋಡು ಮುನ್ನವೆ ಎಂಬ ಯೋಗರಾಜ ಭಟ್ಟರ ಹಾಡು ಎದೆಯಲಿ ಸದ್ದು ಮಾಡಲು ಶುರುಮಾಡಿತು. ನೀನು ಗೆಳತಿಯರ ಜೊತೆ ಮಾತನಾಡುತ್ತಿದ್ದಾಗ ನೀನು ಮಾಡುತ್ತಿದ್ದ ಹಾವ-ಭಾವಗಳು, ಆ ನಿನ್ನ ಮಾತುಗಾರಿಕೆ ನನ್ನರ್ಧ ಕೊಂದು ಹಾಕಿದವು. ಕಾರಣವೇ ಇಲ್ಲದೇ ಗೋಳ್ ಎಂದು ನಗುತ್ತಿದ್ದ, ನಿನ್ನ ಆ ನಗುವಿನ ಸದ್ದು, ಪದೇ ಪದೇ ಜಾರಿ ಬಿಳುತ್ತಿದ್ದ ನಿನ್ನ ಮುಂಗುರಳುಗಳು ಇಂದು ಕನಸಿನಲ್ಲೂ ಕಾಡುತ್ತಿವೆ.
ಕ್ಯಾಂಪಸ ಎಂದ ಜಗತ್ತು ಬಂದಾಕ್ಷಣ ನಿನ್ನ ಸಂಗಡಿಗರು ತಮ್ಮ ದಾರಿಗಳ ಕಡೆಗೆ ಹೋದಾಗ. ನೀನೊಬ್ಬಳೆ ಕಪ್ಪು ಹಾಸಿಗೆ ಮಧ್ಯ ಯುವ ರಾಣಿಯ ಹಾಗೆ ನಡೆದುಕೊಂಡು ಹೋಗುತ್ತಾ ಇದ್ದೆ. ನಾನು ಕೂಡಾ ನಿನ್ನನ್ನೆ ಅನುಸರಿಸುತ್ತಾ ಬಂದು ಬಸ್ಟಾಫನಲ್ಲಿ ನಿಂತುಕೊಂಡು, ನಿನ್ನ ಒಂದು ನೋಡಕ್ಕಾಗಿ ಹಪಹಪಿಸುತ್ತಿದ್ದೆ. ಎಷ್ಟೋ ಹೊತ್ತಾದ್ರು, ನೀ ನನ್ನನ್ನು ನೋಡದೇ ಇದ್ದಾಗ ಆ ದೇವರಿಗೆ ಅಫ್ಲೀಕೇಶನ್ ಹಾಕಿ ದೇವರೆ ಇವಳು ನನ್ನ ನೋಡೋ ಹಾಗೆ ಮಾಡಪ್ಪಾ ಎಂದು ಕೇಳಿಕೊಂಡೆ. ಅದೇನೋ! ನನ್ನ ಪ್ರಾರ್ಥನೆ ಆ ದೇವರಿಗೆ ಕೇಳಿಸಿರ‌್ಬೇಕು. ಅವಳು ಸಡನಾಗಿ ನನ್ನ ಕಡೆ ವಾರೆಗಣ್ಣಿನಿಂದ ನೋಡಿಯೇ ಬಿಟ್ಟಳು. ಹೀಗೆ ಅವಳು ಪದೇ ಪದೇ ನನ್ನು ವಾರೆಗಣ್ಣಿನಿಂದ ನೋಡುತ್ತಾ ನಿಂತುಕೊಂಡಳು. ಅಷ್ಟೋತ್ತಿಗಾಗಲೆ ಬಸ್ ಬಂದೇ ಬಿಟ್ಟಿತು. ಅವ್ಳ ಬಸ್ ಹತ್ತ ಬೇಕಾದ್ರೆ ಪೂರ್ಣ ತಲೆಯತ್ತಿ , ಒಂದು ಕಣ್ಣ ಸನ್ನೆ ಮಾಡಿ ನನ್ನನ್ನು ಬಿಳ್ಕೋಡಬೇಕ್ರಾದೆ, ಅದು ನನಗೆ ಜಗತ್ತಿನ ಎಂಟನೇ ಅದ್ಭುತದ ಹಾಗೆ ಕಾಣಿಸಿತು. ಅಂದು ಬೇಟಿಯಾದ್ಳು ಇನ್ನೂವರೆಗೂ ಮೀಟ್ ಆಗಿಯೇ. ಇಲ್ಲಾ! ನಿನ್ನ ನೋಡುವಿಕೆಗಾಗಿ ನನ್ನ ಮನ ಅಂಕೆ ಇಲ್ಲದ, ಮಂಗನ ತರ ಜಿಗಿದಾಡುತ್ತಿದೆ. ಬೇಗ ಮೀಟ್ ಆಗಿ ಅದಕ್ಕೋಂದು ಅಂಕೆ ಹಾಕುಬಾ...!!!!!!
ಮಂಜುನಾಥ ಗದಗಿನ
8050753148