ಇಂದು-ನಾಳೆ ಮುಗಿಯದೇ,ನಿತ್ಯ ನಿರಂತರ ಹರಿಯುವುದೇ ಸ್ನೇಹದ ಕಡಲು. ಆ ಕಡಲಲ್ಲಿ ನಮ್ಮ ನೆನೆಪುಗಳು
ಮಿಂಚು ದೋಣಿಗಳು ಇದ್ದ ಹಾಗೆ, ಬಂದು ಹೀಗೆ ಹೋಗುತ್ತೆ. ಅದರೊಟ್ಟಿಗೆ ಸಾಗರದ ಅಲೆಯ ಹಾಗೆ ಮಧುರಕ್ಷಣಗಳನ್ನು
ಹೊತ್ತುಕೊಂಡು ಬಂದು ಎದೆಯಾಳದಲ್ಲಿ ತುಂಟ ನೆನಪುಗಳನ್ನು ಸುರಿಸುತ್ತವೆ.
ಬೆಟ್ಟದಂತಹ ಕನಸುಗಳೊಂದಿಗೆ, ಒಂದು ಭರವಸೆಯೊಂದಿಗೆ
ಅದೇಷ್ಟೋ ವಿದ್ಯಾರ್ಥಿಗಳು ತಂದೆ-ತಾಯಿ,ಬಂಧುಬಳಗ, ಬಾಲ್ಯದ ಸ್ನೇಹಿತರುನ್ನು ಬಿಟ್ಟು ಕಾಣದ ಊರಿಗೆ
ಬಂದು ಶಿಕ್ಷಣ ಪಡೆಯುತ್ತಾರೆ. ಅದರಲ್ಲೂ ಸ್ನಾತಕೋತ್ತರ ಶಿಕ್ಷಣ ಪಡೆಯಬೇಕೆಂದರೆ ಊರು ಬಿಟ್ಟು ಬರಲೇ
ಬೇಕು. ಹ್ಞೂ! ನಾನು ಕೂಡಾ ಒಂದು ಚಿಕ್ಕ ಭರವಸೆಯೊಂದಿಗೆ ನಗರಕ್ಕೆ ಅಂಬೆಗಾಲಿಟ್ಟವನು. ಗೊತ್ತಿಲ್ಲದ
ಊರಿಗೆ ಬಂದ ಮೇಲೆ ಪ್ರಾರಂಭದಲ್ಲಿ ಎಡವುದು ಸಹಜ. ಮತ್ತೆ ಚೇತರಿಸಿಕೊಂಡು ಮುನ್ನುಗುವದು ಕಾಲ ಸಹಜ.
ನಾನು ಕೂಡಾ ಪ್ರಾರಂಭದ ಎಲ್ಲ ಕಷ್ಟಗಳನ್ನು ಅನುಭವಿಸಿ ಸ್ನಾತಕೋತ್ತರ ಮುಗಿಸಿದವನೇ. ಆದರೆ ನನ್ನ ಆ
ಕಷ್ಟಗಳಿಗೆ, ಸುಖಗಳಿಗೆ ಹೇಗಲಾಗಿ ನಿಂತುಕೊಂಡಿದ್ದು ನನ್ನ ಸ್ನೇಹಿತರು.
ಅವು ಕಾಲೇಜಿನ ಆರಂಭದ ದಿನಗಳು. ಕಂಡಷ್ಟು ಬಗೆದಷ್ಟು
ಎಲ್ಲವೂ ಹೊಸದು. ಅದರೊಟ್ಟಿಗೆ ಹೊಸ ಮುಖಗಳ ದರ್ಶನ. ಅನಂತರ ಅವೇ ಮುಖಗಳು ಮಾಗದರ್ಶ ನೀಡಿದ್ದು ಈಗ ಇತಿಹಾಸ.
ಕಾಲಗಳು ಗತಿಸಿದರು ನೆನಪುಗಳು ಗತಿಸವು ಎಂಬುದಕ್ಕೆ ಕ್ಯಾಂಪಸನ್ ಕೆಲವು ಸ್ನೇಹದ ಸಹಾಯಗಳು,ಕಿಟಲೆಗಳು,
ಮುನಿಸು, ದ್ವೇಷ, ಜಗಳ, ಕಾಡು ದಾರಯಲ್ಲಿ ಕಾಡಿಸಿದ್ದು ಎಲ್ಲವೂ ನೆನಪಿನ ದೋಣಿಯಲ್ಲಿ ಸಾಗುವವೇ.
ದಿನದ ಖರ್ಚಿಗೆ ಎಂದು ತಂದಿದ್ದ ಸಾವಿರ ರೂಪಾಯಿ,
ಕಾಡುದಾರಿ ಮಧ್ಯೆ ಕಳೆದು ಹೋದಾಗಿ,ಊರಿಗೆ ಹೋಗಲು ದುಡ್ಡು ಇಲ್ಲದಿದ್ದಾಗ, ನನ್ನ ಕಷ್ಟವನ್ನು ಆಲಿಸಿ,
ತನ್ನ ಜೇಬಿನಿಂದ ನೂರರ ಮೂರು ನೋಟುಗಳನ್ನು ನನ್ನ ಕೈಗಿಟ್ಟು ಮಂಜು ಈ ದುಡ್ಡು ತೆಗೆದುಕೊಂಡು ಹೋಗು,
ನಿನ್ನ ಖರ್ಚಿಗೂ ಆಗುತ್ತದೆ, ನೀನು ಊರಿಂದ ಬಂದ ಮೇಲೆ ಕೊಡುವಂತೆ ಎಂದು ಕಷ್ಟ ಕಾಲದಲ್ಲಿ ಕನಿಕರದಿಂದ
ಸಹಾಯ ಮಾಡಿದ ಸುರೇಶಣ್ಣ. ಎಕ್ಸಾಂ ಬಂದಾಗ ವಾರ್ಡನ ಎದುರು ಹಾಕಿಕೊಂಡು ಸ್ನೇಹಕ್ಕೆ ತನ್ನ ಹಾಸ್ಟೇಲ್‌ನಲ್ಲಿ
ನೆಲೆಸಲು ಅವಕಾಶ ಕೊಡುತ್ತಿದ್ದ, ಪ್ರತಿದಿನ ಮಧ್ಯಾಹ್ನ ತುತ್ತು ಊಟ ಕೊಡುತ್ತಿದ್ದ ಯಲ್ಲಪ್ಪ, ಪ್ರತಿದಿನ
ದುಡ್ಡು ಖರ್ಚು ಮಾಡಿ ಲೇಖನಗಳನ್ನು ಟೈಫ ಮಾಡಲು ಹೋಗುತ್ತಿದ್ದಾಗ ಅಣ್ಣ ನನ್ನ ಲ್ಯಾಫಿ ಇದೆ. ಮನೆಗೆ
ತೆಗೆದುಕೊಂಡು ಹೋಗಿ ಟೈಫ್ ಮಾಡು ಎಂದು ಸಹೃದಯ ತೋರಿದ ಮಧುಶ್ರೀ. ಸ್ಟೋರ್ಟ ಟೀಶರ್ಟಗೆ ಕೊಡಲು ದುಡ್ಡು
ಇಲ್ಲದಾದ ತನ್ನ ಕೈಯಿಂದ ದುಡ್ಡು ನೀಡಿದ ಸುಬ್ಬು, ಪ್ರತಿದಿನ ಪ್ರಯಾಣದಲ್ಲಿ ಜತೆಯಾಗಿ ಇರುತ್ತಿದ್ದ
ಶ್ರೀ ಹೀಗೆ ಸ್ನೇಹ ಎಂಬ ಸುಂದರ ಕಡಲನ್ನು ತೆರೆಯುತ್ತಾ ಹೋದ ಹಾಗೆ ಅದರ ಹರವು ಹೆಚ್ಚಾಗುತ್ತಾ ಸಾಗುತ್ತದೆ.
ಲೇಖನ ಕಳುಹಿಸಲು ಲ್ಯಾಫಿ ಕೊಡಲಿಲ್ಲ ಎಂದು, ಮಲ್ಲಿಕಾರ್ಜುನ ಜೊತೆ ಮಾತು ಬಿಟ್ಟದ್ದು, ಅಕ್ಕನ
ಮದುವೆಗೆ ಕರೆದಿಲ್ಲ ಎಂದು ಮೂನಿಸಿಕೊಂಡದ್ದು, ಕಾಲೇಜಗೆ ನನ್ನ ಬಿಟ್ಟು ಹೋದ ಎಂದು ಗೆಳೆಯನೊಂದಿಗೆ ಸೆಟಗೊಂಡಿದ್ದು,
ಎಕ್ಸಾಂ ನಲ್ಲಿ ತೊರಿಸಲಿಲ್ಲ ಎಂದು ಕೋಪಗೊಂಡಿದ್ದು, ಹಾಸ್ಟೇಲ್ ದಾರಿಯಲ್ಲಿ ಮಾವು ಕದ್ದು ತಿನ್ನಂದ್ದು,
ರೈಲ್ವೆ ಹಳಿಗಳ ಮೇಲೆ ಬೇಕಾಬಿಟ್ಟಿ ಸೇಲ್ಪಿ ತೆಗೆದುಕೊಂಡದ್ದು, ಶ್ರೀನಗರ ಸರ್ಕಲ್‌ನಲ್ಲಿ ನಿಂತು ಸ್ನೇಹಿತರೊಟ್ಟಿಗೆ
ಹುಡ್ಗಿಯರಿಗೆ ಕಾಳಹಾಕಿದ್ದು, ಒಂದೇ ಬೈಕ್ ಮೇಲೆ ಪಂಚಪಾಂಡವರು ಪ್ರಯಾಣಿಸಿದ್ದು, ಒಂದೇ ಪ್ಲೇಟ್‌ನಲ್ಲಿ
ಮೂವರು ಊಟ ಮಾಡಿದ್ದು, ನೇರಳೆ ಹಣ್ಣಿಗಾಗಿ ಗಿಡ ನೇತಾಡಿದ್ದು ಎಲ್ಲವು ಸ್ನೇಹದ ಸುಮಧುರ ಕ್ಷಣಗಳೆ.
ಆದರೆ ಆ ಸ್ನೇಹಿತರು ಈಗ ನನ್ನೊಟ್ಟಗಿಲ್ಲ. ಆದರೆ ಅವರ ನೆನಪು ಮಾತ್ರ ನನ್ನೊಟ್ಟಿಗೆ ಸದಾ ಇರುತ್ತವೆ.
ವೃತ್ತಿ ಬದುಕಿನಲ್ಲಿ ಎಲ್ಲ ಸ್ನೇಹಿತರು ಒಂದೊಳ್ಳೆ ಹುದ್ದೆ ಪಡೆಕೊಳ್ಳಿ ಎಂದು ಆಶಿಸುವ ನಿಮ್ಮ ಸ್ನೇಹಿತ
ಮಂಜು.
ಮಂಜುನಾಥ ಗದಗಿನ