Thursday, 5 January 2017

ಕುಂದಾನಗರಿಯ ಸುತ್ತ ಸುತ್ತ ಬನ್ನಿ...



ಮಂಜುನಾಥ ಗದಗಿನ

ಬೆಳಗಾವಿ ಕನ್ನಡಿಗರ ಹೆಮ್ಮೆಯ ನಗರ. ಕರ್ನಾಟಕದ ವಾಯವ್ಯ ಭಾಗದ ಗಡಿಯಲ್ಲಿ ನೆಲೆಸಿರುವ ಸುಂದರ ಹಸಿರುಮಯ ಪ್ರದೇಶ. ಮಲೆನಾಡಿನ ಛಾಯೆಯಲ್ಲಿ ಬರುವ ಈ ತಾಣವು ಇತರೆ ಬಯಲು ಸೀಮೆ ಪ್ರದೇಶಗಳಂತಿರದೆ ಸದಾ ತಂಪಾಗಿದ್ದು ಹಿತಕರ ವಾತಾವರಣದಿಂದ ಕೂಡಿದೆ. ಇದೇ ಕಾರಣಕ್ಕೆ ಕುಂದಾನಗರಿ ಎಲ್ಲರಿಗೂ ಹಿತವೇನಿಸುವುದು. ಹೀಗಾಗಿ ಕುಂದಾನಗರಿಯ ಸುತ್ತ ಕಣ್ಮನ ಸೆಳೆಯುವು, ಐತಿಹಾಸಿ, ಧಾರ್ಮಿಕ ಸ್ಥಳಗಳನ್ನು ಒಳಗೊಂಡ ಪ್ರವಾಸಿ ತಾಣವಾಗಿದೆ. ಈ ಕುರಿತು ಒಂದಿಷ್ಟು ಮಾಹಿತಿ ಇಲ್ಲಿದೆ.
ಗೋಕಾಕ ಪಾಲ್ಸ್:
ಬೆಳಗಾವಿ ನಗರದಿಂದ ಸುಮಾರು 70 ಕಿ.ಮೀ ದೂರ ಸಾಗಿದರೆ ಸಿಗುವುದೇ ಗೋಕಾಕ. ಈ ಪಟ್ಟಣ ಖ್ಯಾತಿಗಳಿಸಿರುವುದು ರುದ್ರ ರಮಣೀಯ ಪಾಲ್ಸ್‌ನಿಂದ. ಅದಕ್ಕೆ ಗೋಕಾಕ ಪಾಲ್ಸ್ ಎಂದು ಕರೆಯುತ್ತಾರೆ. ಘಟಪ್ರಭಾ ನದಿಯಿಂದ ಉಂಟಾದ ಈ ಜಲಪಾತಕ್ಕೆ ಅಡ್ಡಲಾಗಿ ತೂಗು ಸೇತುವೆ ನಿರ್ಮಿಸಲಾಗಿದೆ. ಇದರ ಕುಂಟ ಹೊರಟು ನೋಡಿದರೆ ಜಲಪಾತದ ರಮಣೀಯತೆಯನ್ನು ಕಣ್ಣರಳಿಸಿ ಆಸ್ವಾದಿಸಬಹುದು. ಇದೇ ಕಾರಣಕ್ಕೆ ಗೋಕಾಕ ಪಾಲ್ಸ್‌ಗೆ ವರ್ಷ ಪೂರ್ತಿ ಪ್ರವಾಸಿಗರು ಆಗಮಿಸುತ್ತಿರುತ್ತಾರೆ. ಮಳೆಗಾಲದಲ್ಲಿ ಇಲ್ಲಿ ಜನಜಂಗುಳಿಯನ್ನು ಕಾಣಬಹುದು. ಗೋಕಾಕ ಬಂದರೆ ಗೋಕಾಕ ಕರದಂಟ್ ತೆಗೆದುಕೊಂಡು ಹೋಗುವುದುನ್ನು ಮರೆಯಬೇಡಿ.
ಐತಿಹಾಸಿಕ ಹಳಸಿ:
 ಹಲ್ಶಿ ಎಂದೂ ಕರೆಯಲ್ಪಡುವ ಈ ಪುಟ್ಟ ಪಟ್ಟಣವು ಬೆಳಗಾವಿ ಜಿಲ್ಲೆಯ ಖಾನಾಪುರ ತಾಲೂಕಿನಲ್ಲಿದೆ. ಈ ಪಟ್ಟಣವು ಒಂದೊಮ್ಮೆ ಕದಂಬರ ರಾಜಧಾನಿಯಾಗಿ ಮೆರೆದಿದ್ದು, ತನ್ನಲ್ಲಿರುವ ಅದ್ಭುತ ವಾಸ್ತು ಶಿಲ್ಪದ ಭೂವರಾಹ ಲಕ್ಷ್ಮಿ ನರಸಿಂಹ ದೇವಾಲಯದಿಂದಾಗಿ ಹೆಸರುವಾಸಿಯಾಗಿದೆ. ಈ ದೇವಾಲಯದಲ್ಲಿ ಒಂದಕ್ಕೊಂದು ಎದುರಾಭಿಮುಖವಾಗಿರುವ ಎರಡು ಗರ್ಭಗುಡಿಗಳಿವೆ. ಬಲಬದಿಯ ಗರ್ಭ ದೇಗುಲದಲ್ಲಿ 4 ಅಡಿ ಎತ್ತರದ ಕುಳಿತಿರುವ ವಿಷ್ಣುವಿನ ವಿಗ್ರಹವಿದ್ದು, ಅದರ ಹಿಂದೆಯೆ ಲಕ್ಷ್ಮಿ ಹಾಗೂ ಸೂರ್ಯನಾರಾಯಣ ವಿಗ್ರಹಗಳಿವೆ. ಇನ್ನು ಎಡಬದಿಯ ಗರ್ಭ ಗುಡಿಯಲ್ಲಿ ಭೂದೇವಿ (ಪೃಥ್ವಿ) ಯನ್ನು ಬಾಯಿಯಲ್ಲಿ ಹಿಡಿದಿರುವ 5 ಅಡಿ ಎತ್ತರದ ವರಾಹ ಸ್ವಾಮಿಯ ವಿಗ್ರಹವಿದೆ. ಇಲ್ಲಿನ ಅರ್ಚಕರ ಪ್ರಕಾರ, 2 ಅಡಿ ಎತ್ತರದ ನರಸಿಂಹನ ಸ್ವಯಂಭು ವಿಗ್ರಹವೊಂದು ಮುಖ್ಯ ವಿಷ್ಣುವಿನ ವಿಗ್ರಹದ ಪಕ್ಕದಲ್ಲಿದೆ. ಸುತ್ತಮುತ್ತಲು ಅದ್ಭುತವಾದ ಹಸಿರುಮಯ ಪರಿಸರವನ್ನು ಹೊಂದಿರುವ ಈ ತಾಣಕ್ಕೆ ಬೆಳಗಾವಿ ನಗರದಿಂದ ಖಾನಾಪುರ ಮಾರ್ಗವಾಗಿ ಸುಲಭವಾಗಿ ತಲುಪಬಹುದು.  
---
ಹೂಲಿ:
 ಬೆಳಗಾವಿಯ ಶ್ರೀಕ್ಷೇತ್ರ ಸವದತ್ತಿಯಿಂದ ಕೇವಲ 9 ಕಿ.ಮೀಗಳ ಅಂತರದಲ್ಲಿದೆ ಈ ಸ್ಥಳ. ಬೆಳಗಾವಿಯ ಪುರಾತನ ಹಳ್ಳಿಗಳಲ್ಲಿ ಒಂದಾಗಿರುವ ಹೂಲಿ ಹಳ್ಳಿಯು ತನ್ನಲ್ಲಿರುವ ಪಂಚಲಿಂಗೇಶ್ವರ ದೇವಾಲಯದಿಂದ ಪ್ರಸಿದ್ಧವಾಗಿದೆ. ಆಕರ್ಷಕ ವಾಸ್ತುಶಿಲ್ಪವನ್ನು ಹೊಂದಿರುವ ಈ ದೇವಾಲಯವನ್ನು ನೋಡುವುದೇ ಒಂದು ಚೆಂದದ ಅನುಭವ. ಕಲ್ಲಿನಿಂದಲೆ ಮಾಡಲ್ಪಟ್ಟಿರುವುದರಿಂದ ಬಿಸಿಲಿನಲ್ಲೂ ತಂಪಾದ ನೆರಳಿನ ಅನುಭವ ನೀಡುತ್ತದೆ. ಈ ತಂಪಿನಲ್ಲಿ ಸಮಯ ಕಳೆಯಲೆಂದು ಜನ ಇಲ್ಲಿಗೆ ಬರುವುದುಂಟು. ಭಾರತೀಯ ಪುರಾತತ್ವ ಇಲಾಖೆಗೆ ಒಳಪಡುವ ಈ ದೇವಾಲಯವನ್ನು ರಕ್ಷಿತ ಸ್ಮಾರಕಗಳಲ್ಲಿ ಪರಿಗಣಿಸಲಾಗಿದೆ.  
--
ಧಾರ್ಮಿಕ ಸ್ಥಳ ಸವದತ್ತಿ:
 ಸವದತ್ತಿಯು ಒಂದು ಯಾತ್ರಾ ಕ್ಷೇತ್ರವಾಗಿದೆ. ಬೆಳಗಾವಿಯಿಂದ ಸುಮಾರು 90 ಕಿ.ಮೀಗಳ ದೂರವಿದೆ. ಸುಗಂದವರ್ತಿ, ಸೌಗಂದಿಪುರ ಎಂದೂ ಕರೆಯಲ್ಪಡಿತ್ತಿದ್ದ ಇದು ರಟ್ಟ ವಂಶದ (875-1230) ರಾಜಧಾನಿಯಾಗಿತ್ತು. ಶಕ್ತಿ ದೇವಿಯ ಆರಾಧಕರಿಗೆ ಪವಿತ್ರವಾಗಿರುವ ಶ್ರೀ ರೇಣುಕಾ ದೇವಿ ದೇವಾಲಯ ಇಲ್ಲಿರುವ ಪ್ರಮುಖ ಪ್ರವಾಸಿ ತಾಣ. ಎಲ್ಲಮ್ಮಗುಡ್ಡ ಎಂದೂ ಕರೆಯಲ್ಪಡುವ ಈ ತಾಣಕ್ಕೆ ತೆರಳಲು ಬೆಳಗಾವಿಯಿಂದ ನಿರಂತರವಾಗಿ ಬಸ್ ಸೌಲಭ್ಯವಿದೆ. ಬನದ ಹುಣ್ಣಿಮೆ ಹಾಗು ಭಾರತಿ ಹುಣ್ಣಿಮೆ ದಿನಗಳಂದು ಲಕ್ಷ ಲಕ್ಷ ಸಂಖ್ಯೆಯಲ್ಲಿ ಜನ ಇಲ್ಲಿಗೆ ಭೇಟಿ ನೀಡುತ್ತಾರೆ.
---
ನವೀಲುತೀರ್ಥ ಡ್ಯಾಂ:
ಬೆಳಗಾವಿಯಿಂದ 100 ಕಿ.ಮೀಗಳ ಅಂತರದಲ್ಲಿ ನವೀಲುತೀರ್ಥ ಸ್ಥಳವನ್ನು ಕಾಣ ಬಹುದು. ಇದು ಒಂದು ಪಿಕ್ನಿಕ್‌ಗೆ ಹೇಳಿ ಮಾಡಿಸಿದ ಸ್ಥಳವಾಗಿದೆ. ಸವದತ್ತಿಗೆ ಅತಿ ಹತ್ತಿರದಲ್ಲಿರುವ ಈ ತಾಣವನ್ನು ಬೆಳಗಾವಿಯಿಂದ ಸವದತ್ತಿಗೆ ತೆರಳಿ ಸುಲಭವಾಗಿ ಅಲ್ಲಿಂದ ತಲುಪಬಹುದು. 1932 ರಲ್ಲಿ ಗುರುದೇವ ಮಹಾತಪಸ್ವಿ ಶ್ರೀ ಕುಮಾರಸ್ವಾಮಿಜಿಯವರು ಈ ತಾಣದಲ್ಲಿ ಧ್ಯಾನಿಸಿದ್ದರು ಎಂದು ಹೇಳಲಾಗಿದೆ.
--
ಸೋಗಲ್:
ಬೆಳಗಾವಿ ಜಿಲ್ಲೆಯ ನವೀಲುತೀರ್ಥದಿಂದ ಕೇವಲ 24 ಕಿ.ಮೀ ಪ್ರಯಾಣಿಸಿದಾಗ ಸಿಗುವ ಮತ್ತೊಂದು ಪ್ರವಾಸಿ ತಾಣವೆ ಸೋಗಲ್. ತನ್ನಲ್ಲಿರುವ ಜಲಪಾತದಿಂದಾಗಿ ಪ್ರಸಿದ್ಧವಾಗಿರುವ ಈ ತಾಣ ದಂತಕಥೆಯ ಪ್ರಕಾರ, ಶಿವಪಾರ್ವತಿಯರು ವಿವಾಹವಾಗಿದ್ದರೆನ್ನಲಾದ ಕಲ್ಯಾಣ ಮಂಟಪವನ್ನು ಹೊಂದಿದೆ.
--
ಅಂಬೋಲಿ ಘಾಟ್:
 ಮಹಾರಾಷ್ಟ್ರದ ಸಿಂಧುದುರ್ಗ ಜಿಲ್ಲೆಯಲ್ಲಿರುವ ಈ ಪ್ರಸಿದ್ಧ ಘಟ್ಟ ಪ್ರದೇಶವು ಬೆಳಗಾವಿಯ ವಾಯವ್ಯ ದಿಕ್ಕಿನಲ್ಲಿ ಸುಮಾರು 68 ಕಿ.ಮೀ ಗಳ ದೂರದಲ್ಲಿ ನೆಲೆಸಿದ್ದು ಸಾವಂತವಾಡಿ ರಸ್ತೆಯ ಮೂಲಕ ಸುಲಭವಾಗಿ ತೆರಳಬಹುದು. ಸಹ್ಯಾದ್ರಿ ಪರ್ವತ ಶ್ರೇಣಿಗಳಲ್ಲಿ ಬರುವ ಈ ಪ್ರದೇಶವು ಒಂದು ಪ್ರಕೃತಿಸಹಜ ಸುಂದರ ತಾಣವಾಗಿದೆ. ಒಂದು ಬದಿ ಆಳವಾದ ಕಣಿವೆ ಇನ್ನೊಂದು ಬದಿ ಎತ್ತರಕ್ಕೆ ಚಾಚಿರುವ ಬೆಟ್ಟ ಅಲ್ಲಲ್ಲಿ ಕವಲೊಡೆದ ಪುಟ್ಟ ಪುಟ್ಟ ಜಲಪಾತಗಳು, ಮಳೆಗಾಲದಲ್ಲಿ ಇಲ್ಲಿನ ಸಹಜ ಹಾಗೂ ಮನಮೋಹಕ ಆಕರ್ಷಣೆಗಳು.

ಶಬರಿಕೊಳ್ಳ:
ಬೆಳಗಾವಿ ಜಿಲ್ಲೆಯ ರಾಮದುರ್ಗ ತಾಲೂಕಿನ ಸುರೇಬಾನ ಗ್ರಾಮ ಧಾರ್ಮಿಕ, ಆಧ್ಯಾತ್ಮಿಕ ಹಾಗೂ ಪೌರಾಣಿಕ, ಐತಿಹಾಸಿಕ ಕ್ಷೇತ್ರಗಳಲ್ಲಿ ಒಂದಾಗಿದೆ. ಶ್ರೀರಾಮನಿಗೊಸ್ಕರ ಶಬರಿ ಕಾಯ್ದಳು ಎಂದು ಎಲ್ಲರೂ ಗೊತ್ತಿದೆ. ಆದರೆ, ಅಲ್ಲಿ ಕಾಯ್ದಳು ಎಂಬುವುದು ಯಾರಿಗೂ ಗೊತ್ತಿಲ್ಲ. ಆದರೆ, ಇತಿಹಾಸ ಪುಟಗಳನ್ನು ತೀರವಿ ಹಾಕಿದಾಗ ಶಬರಿ ಕಾಯ್ದದ್ದು ಸುರೇಬಾನ ಸಮೀಪದ ಶಬರಿಕೊಳ್ಳ ಎಂಬ ಸ್ಥಳದಲ್ಲಿ ಎಂಬುದು ತಿಳಿದು ಬರುತ್ತದೆ.
ಸುರೇಬಾನ ಗ್ರಾಮದ ಗ್ರಾಮದೇವತೆಯಾಗಿ ಅಲ್ಲದೆ ಸುತ್ತ ಮುತ್ತಲಿನ ಗ್ರಾಮಗಳ ಆರಾಧ್ಯ ದೇವತೆ ಶ್ರೀ ಶಬರಿ ಪೂಜಿಸಲ್ಪಡುತ್ತಾಳೆ. ಶಬರಿ ದೇವಿ ಸುರೇಬಾನ ಗ್ರಾಮದ ಪಶ್ಚಿಮಕ್ಕೆ ಇರುವ ಎರಡು ಬೆಟ್ಟಗಳ ಸಂಧಿಸುವ ಕಣಿವೆ ಪ್ರದೇಶದಲ್ಲಿ ಇರುವ ಸುಂದರ ಪ್ರಾಕೃತಿಕ ತಾಣದಲ್ಲಿ ಶಬರಿದೇವಿ ನೆಲೆಸಿದ್ದಾಳೆ. ಕಣಿವೆಯಲ್ಲಿ ವಿವಿಧ ಜಾತಿ ಗಿಡಗಳು, ಇದರೊಟ್ಟಿಗೆ ಹಕ್ಕಿಗಳ ಚಿಲಿಪಿಲಿ ಕೇಳಿಸುತ್ತದೆ. ಪ್ರಸಿದ್ಧ ಶಿಲ್ಪಿ ಜಕಣಾಚಾರಿ ಕೆತ್ತನೆಯ ಸುಂದರ ಭವ್ಯವಾದ ಮಂದಿರವಿದೆ. ಎರಡು ಹೊಂಡ (ಪುಷ್ಕರಣಿ)ಗಳು ನೋಡುಗರ ಮನ ಸೆಳೆಯು
ತ್ತವೆ. 200 ಅಡಿಗಳ ಅಂತರದಿಂದ ಧುಮ್ಮಿಕ್ಕುವ ಅಂತರಗಂಗೆ ಎಂಬ ಕಿರು ಜಲಧಾರೆ ಇಲ್ಲಿ ಎಲ್ಲರನ್ನು ತನ್ನತ್ತ ಸೆಳೆದು ಮಂತ್ರ ಮುಗ್ದರನ್ನಾಗಿಸುತ್ತದೆ. ಸುಮಾರು 120 ಅಡಿಗಳಷ್ಟು ಎತ್ತರದ ಗುಹೆಯಲ್ಲಿ ಆಕಳ ಮೊಲೆಯಂತೆಯೇ ನೈಸರ್ಗಿಕವಾಗಿ ಕಲ್ಲಿನಲ್ಲಿ ಮೂಡಿದ ಆಕಳಮೊಲೆ, ಇದರಲ್ಲಿ ಜಿಣುಗುವ ನೀರಿನ ಹನಿಗಳನ್ನು


ಪ್ರವಾಸಿಗರಿಗೆ ಪ್ರೇಕ್ಷಣೀಯ ಸ್ಥಳ:

No comments:

Post a Comment

ಆರು ಸರ್ಕಾರಿ ನೌಕ್ರಿ ಪಡೆದ ವಿಕಲಚೇತನ ಸಾಧಕಿ

  ಮಂಜುನಾಥ ಗದಗಿನ -- ಇಂದಿನ ಸ್ಪರ್ಧಾ ತ್ಮಕ ಯುಗದಲ್ಲಿ ಸರ್ಕಾರಿ ನೌಕರಿ ಪಡೆದುಕೊಳ್ಳುವುದು ಎಲ್ಲರ ಕನಸು ಹಾಗೂ ಗುರಿ ಹೌದು. ಆದರೆ, ಸರ್ಕಾರಿ ನೌಕರಿ ಪಡೆಯಬೇಕು...