ಮಂಜುನಾಥ ನಾ ಗದಗಿನ
ಯುಗಾದಿ ಆರಂಭದಿಂದಲೇ ಪ್ರಕೃತಿಯಲ್ಲಿ ಹೊಸ ಬದಲಾವಣೆ ಪ್ರಾರಂಭವಾಗುತ್ತದೆ. ಹೊಸ ಚಿಗುರು,
ಹೊಸ ವಿಕಾಸಗಳಾಗಿ ಈ ಜಗತ್ತಿಗೆ ನವ್ಯ ಶೋಭೆಯನ್ನು ತಂದು ಮನಸ್ಸಿಗೆ ಮುದ ನೀಡುತ್ತದೆ. ಅದೇ ರೀತಿ ನಮ್ಮ
ಕ್ಯಾಂಪಸನ ಸಸ್ಯಶಾಮಲೆ ಕೂಡಾ ಫುಲ್ ಶೈನಿಂಗ್ ಆಗಿ ವಿದ್ಯಾರ್ಥಿಗಳ ಮುದ್ದಾದ ಮನಸ್ಸುಗಳಿಗೆ ಮುದ್ದು
ಮಾಡುತ್ತಾ ಮುದ ನೀಡುತ್ತಿದ್ದಾಳೆ.
ಮಲೆನಾಡಿನ ಮಗುವಿನಂತಿರುವ ಧಾರವಾಡಕ್ಕೆ ಶಿಕ್ಷಣಕಾಶಿ, ನಿವೃತ್ತರ ಸ್ವರ್ಗ ಎಂಬಿತ್ಯಾದಿ ಹೆಸರುಗಳಿಂದ
ಕರೆಯಲಾಗುತ್ತದೆ. ಯಾಕೆಂದ್ರ ಇಲ್ಲಿನ ವಾತಾವರಣ ಎಲ್ಲರಿಗೂ ಒಗ್ಗುವತಂದ್ದು. ಬಿರು ಬೇಸಿಗೆಯನ್ನು ಬೆಂಡಾಗಿಸಿ
ತಂಪನೆರೆಯುವ ತಾಕತ್ತು ಇಲ್ಲಿನ ವಾತಾವರಣಕ್ಕಿದೆ.
ಇನ್ನೂ ಕವಿವಿ ಪ್ರಕೃತಿಗೆ ಈಗ ಹಬ್ಬದ ಸಂಭ್ರಮ. ಎಲ್ಲಿ ನೋಡಿದರು
ಹೊಸ ಚಿಗುರಿನಿಂದ ಕಂಗೊಳಿಸು ಮರಗಳು, ಚಿತ್ತಾಕರ್ಷಕದೊಂದಿಗೆ ಅರಳಿನಿಂತ ಹೂಗಳು, ಮೈ ಮರೆತು ಮನತುಂಬಿ
ಕೂಗುವ ಕೋಗಿಲೆಗಳು, ಬಿಂಕ-ಬಿನ್ನಾಣಗಳಿಂದ ಮುತ್ತನಿಕ್ಕುವ ಚಿಟ್ಟೆಗಳು. ಇದೆಲ್ಲದಕ್ಕೂ ಸಾಕ್ಷಿಯಾಗಿ
ಬಿಸುವ ತಂಗಾಳಿ, ಎಸ್ ! ನಿಜಕ್ಕೂ ಬಣ್ಣಿಸಲಾದಗ ಪ್ರಕೃತಿಯ ಒಯ್ಯಾರ ಕಣ್ಣಿಗೆ ಕಟ್ಟುತ್ತಿದೆ.
ಮಾನವನಲ್ಲಿ ಹುಟ್ಟು ಪ್ರಶ್ನೆಯಾದರೆ, ಸಾವು ಉತ್ತರವಾಗಿ ನಿಲ್ಲುತ್ತದೆ. ಆದರೆ ಪ್ರಕೃತ್ತಿಯದ್ದು
ಹುಟ್ಟು, ಸಾವಿನದಾಚೆಗಿನ ಬದುಕು. ಅದಕ್ಕೆ ಪ್ರಕೃತಿಯನ್ನು ಮಾಯೆ ಎಂದು ಕರೆಯುತ್ತಾರೆ. ಆ ಮಾಯೆಯ ಮಾಟಕ್ಕೆ
ಕವಿವಿ ವಿದ್ಯಾರ್ಥಿಗಳು ಮಾತ್ರ ಮಂತ್ರಮುಗ್ಧರಾಗಿದ್ದಾರೆ.
ಯುಗಾದಿಯ ಆರಂಭಕ್ಕೂ ಮುನ್ನ ಕಣ್ಣು ಹಾಯಿಸಿದ್ದಷ್ಟು ಕಣ್ಣಿಗೆ ಕಾಣುತ್ತಿದದ್ದು, ಸೆಟ್ಟುದುನಿಂತ
ಒಣ ಮರ-ಗಿಡಗಳು. ಇದ್ದರೂ ಇಲ್ಲದವರಂತೆ ನಿಶಬ್ಧವಾದ ತನ್ನ ಇರುವಿಕೆಯನ್ನೆ ಕಳೆದುಕೊಂಡಂತೆ, ಮೌನಕ್ಕೆ
ಜಾರಿದ್ದ ಸಸ್ಯಶಾಮಲೆ. ಆದರೆ ಈಗಿನ ವಾತಾವರಣ ನೋಡಿದರೆ ಇವಳೇ ನಾ! ಕಳೆದು ಹೋದ ಸಸ್ಯಶಾಮಲೆ ಎಂದು ಮೂಗಿನ
ಮೇಲೆ ಬೆರಳಿಟ್ಟು ನೋಡುವ ಹಾಗೆ ದಟ್ಟಡವಿಯನ್ನು ಮೀರಿಸುವಂತೆ ಮೀರ-ಮೀರ ಮಿನುಗುತ್ತಿದ್ದಾಳೆ. ನಮ್ಮ
ವನಶ್ರೀ.
ಅದರಲ್ಲೂ ಕ್ಯಾಂಪಸ್‌ನ ಹಸಿರಿಗೆ ಅದೇನೋ! ಗತ್ತು, ಗಮ್ಮತ್ತಿದೆ. ಚೈತ್ರದ ಚಿಗುರಿಗೆ
ಚಿಗುರು ಮಿಸೆಯ ಹುಡುಗರನ್ನು ಮಗುವಾಗಿಸಿ, ತಣಿಸಿ, ಕುಣಿಸುವ, ತಳಮಳಗೊಳಿಸಿ, ಎಲ್ಲೆಲ್ಲಿಗೋ ಕೊಂಡಯ್ಯುವ,
ಬಿರು ಬೇಸಿಗೆಗೆ ಬಳಲಿ ಮರೆತು ಹೋದ ನೆನೆಪುಗಳಿಗೆ ಮರುಜೀವ ತುಂಬುವ, ಅಗಾಧ ಶಕ್ತಿ ಈ ಚೈತ್ರದ ಚಿಗುರಿಗಿದೆ.
ಇದು ಮಳೆಗಾಲವಲ್ಲ. ಆದರೂ ಅಕಾಲಿಕವಾಗಿ ಸುರಿಯುವ ಮಳೆಗೆ, ಹುಡಿ ಏಳುವ ಮಣ್ಣಿನ ಸುವಾಸನೆಯೇ
ಬೇರೆ. ಅದರಲ್ಲೂ ಗಿಡ-ಮರಗಳ ಮೇಲೆ ಬಿದ್ದ ಮಳೆಯ ಹನಿಗಳು , ಎಲೆಗಳಿಗೆ ಮುತ್ತಿಟ್ಟು ಜಾರಿ ಭೂತಾಯಿ
ಒಡಲು ಸೇರಿ ಮಾಯವಾಗುವ ದೃಶ್ಯವಂತು ಪ್ರಕೃತಿಯ ವಿಸ್ಮಯದ ಹಾಗೆ ಕಾಣುತ್ತದೆ. ಈಗ ಪರೀಕ್ಷಾ ಸಮಯ ಬೇರೆ,
ಆದರೆ ನಮ್ಮ ವಿ.ವಿ ವಿದ್ಯಾರ್ಥಿಗಳು ಈ ಪ್ರಕೃತಿಯ ಸೊಬಗನ್ನು ಸವಿಯುತ್ತಾ ಒತ್ತಡ ನಿವಾರಣೆ ಮಾಡಿಕೊಳ್ಳುತ್ತಾ,
ಬಿ ಹ್ಯಾಪಿ ನೋ ಬಿಪಿ, ಎಂದು ಫುಲ್ ರಿಲ್ಯಾಕ್ಸ ಮೂಡಲ್ಲಿ. ಪರೀಕ್ಷೆಯ ಯುದ್ದಕ್ಕೆ ಸನ್ನದ್ದರಾಗುತ್ತಿದ್ದಾರೆ.
ಅವರೆಲ್ಲರಿಗೂ ಸಸ್ಯಶಾಮಲೆ ಕೂಡಾ ಆಲ್ ದ ಬೆಸ್ಟ ಎಂಬ ಸಂದೇಶ ನೀಡುತ್ತಿದ್ದಾಳೆ.
No comments:
Post a Comment