Wednesday, 11 January 2017

ಥಂಡಿಗೆ ಥರಗುಟ್ಟುವ ಕವಿವಿ ಕ್ಯಾಂಪಸ್


  ವರ್ಷದ ಹನ್ನೇರಡು ತಿಂಗಳು ಹಚ್ಚ ಹಸಿರನ್ನು ಹೊದ್ದು ಬೆಚ್ಚಗೆ ಮಲಗಿರುವ ಕರ್ನಾಟಕ ಸಸ್ಯ ಶಾಮಲೆ. ಚಳಿಗಾಲದಲ್ಲಿ ಮೈಕೊಡವಿ ಎದ್ದು ಇಡೀ ಕ್ಯಾಂಪಸ್‌ನ್ನು ಥರಗುಟ್ಟುವಂತೆ ಮಾಡುತ್ತಾಳೆ.
   ನವ್ಹೆಂಬ, ಡಿಸೆಂಬರ್ ತಿಂಗಳಲ್ಲಿ ಚಳಿಯದ್ದೇ ಆರ್ಭಟ. ಬಡವ, ಶ್ರೀಮಂತರೆಂಬ ಭೇದಭಾವ ಇಲ್ಲದೇ ಎಲ್ಲರಿಗೂ ಚಳಿ, ಚಳಿ ಏಟು ನೀಡುತ್ತದೆ. ಆದರೆ ಈ ಬಾರಿ  ಚಳಿ ತುಸು ಜಾಸ್ತಿನೇ ಇದೆ. ಇದಕ್ಕೆ ಧಾರವಾಡ ಕೂಡ ಹೊರತಾಗಿಲ್ಲ. ಅದರಲೂ, ಕರ್ನಾಟಕ ವಿಶ್ವವಿದ್ಯಾಲಯದ ಕ್ಯಾಂಪಸ್‌ನಲ್ಲಿ ಚಳಿ ಹೆಚ್ಚಾಗಿಯೇ ಇದೆ. ವಿದ್ಯಾರ್ಥಿಗಳ ಅನುಭವಿಸುವ ಪಾಡು ಆ ದೇವರಿಗೆ ಪ್ರೀತಿ.
 ದೇಶ, ರಾಜ್ಯದ  ನಾನಾ ಹಾಗೂ ವಿದೇಶದ  ಸಾವಿರಾರು ವಿದ್ಯಾರ್ಥಿಗಳು ಅಭ್ಯಸಿಸುತ್ತಿದ್ದಾರೆ. ಆರಂಭದಲ್ಲಿ ಉತ್ಸಾಹದಿಂದಲೇ ಆಟ-ಪಾಠದೊಂದಿಗೆ ಓಡಾಡಿಕೊಂಡಿರುತ್ತಾರೆ. ಅಕ್ಟೋಬರ್ ಕಳೆಯುತ್ತ ನವೆಂಬರ್ ಆರಂಭವಾಗುತ್ತಿದ್ದಂತೆ ಗಂಟು ಮೂಟೆಯಲ್ಲಿದ್ದ ಸ್ವೆಟರ್, ಸಾಕ್ಸ್, ಹ್ಯಾಂಡಗ್ಲೋಸ್, ಜರ್ಕೀನ, ಕುಲಾವಿ, ಶಾಲು, ಮಾಪ್ಲರ ಮೊದಲಾದ ಹೊದಿಕೆಗಳು ಹೊರಬಂದು ವಿದ್ಯಾರ್ಥಿಗಳ ಮುನಿದ ಮೈಗೆ ಬೆಚ್ಚಗಿನ ಅನುಭವ ನೀಡುತ್ತಿವೆ.
ಈ ಮಧ್ಯೆ ಬೀಸುವ ಶುಷ್ಕ ವಾತಾವರಣ, ಶೀತಗಾಳಿಗೆ ವಿದ್ಯಾರ್ಥಿಗಳ ಆಸಕ್ತಿ ಕಡಿಮೆ ಆಗುತ್ತದೆ. ತಮ್ಮ ಪ್ರದೇಶದ ಚಳಿಗೂ, ಕ್ಯಾಂಪಸ ಚಳಿಗೂ ಹೊಂದಾಣಿಕೆ ಆಗದೇ, ಅನಾರೋಗ್ಯಕ್ಕೆ ತುತ್ತಾಗುತ್ತಾರೆ. ಪ್ರಸಕ್ತ ವರ್ಷದ ಚಳಿ ತುಂಬಾನೆ ಹೆಚ್ಚಾಗಿರುವದರಿಂದ ವಿದ್ಯಾರ್ಥಿಗಳ ಪಾಡು ಹೇಳತಿರದಾಗಿದೆ. ಇದೇ ಕಾರಣಕ್ಕೆ ವಿದ್ಯಾರ್ಥಿಗಳು ಕ್ಲಾಸ್‌ಗಳಿಗೆ ಲೇಟಾಗಿ ಬರುತ್ತಿರುವದು ಸರ್ವೇಸಾಮಾನ್ಯವಾಗಿದೆ.
     ಈ ಸಮಯದಲ್ಲಿ ಹುಡುಗಿಯರಿಗೆ ತಮ್ಮ ಸೌಂದರ್ಯ, ತ್ವಚೆಯದೇ ಚಿಂತೆ. ಚಳಿಗಾಲದಲ್ಲಿ ತ್ವಚ್ಛೆ ರಕ್ಷಿಸಲು ಹರಸಾಹಸ ಮಾಡುತ್ತಿರುವುದು ಕಂಡುಬರುತ್ತದೆ. ಅಂದದ ಮುಖಕ್ಕೆ ಚಂದದ ಬಣ್ಣ ಹಚ್ಚಿಕೊಂಡು ಬರುತ್ತಿದ್ದ ಹುಡುಗಿಯರು, ಈ ಸಾರಿ ಅವೆಲ್ಲಕ್ಕೂ ತಾತ್ಕಾಲಿಕವಾಗಿ ಬಾಯ್ ಬಾಯ್ ಹೇಳಿದ್ದಾರೆ.
  ರಾತ್ರಿ ಒಂದು ಗಂಟೆಯವರೆಗೂ ಓದುತ್ತಿದ್ದ ವಿದ್ಯಾರ್ಥಿಗಳು, ಚಳಿಗಾಲದಲ್ಲಿ ಏಳಕ್ಕೆ ಬೆಚ್ಚಗಿನ ರಗು ಹೊದ್ದು ಮಲಗಿದರೆ ಮಾರನೇ ದಿನ ಎಂಟಕ್ಕೆ ಏಳುತ್ತಿದ್ದಾರೆ. ಅದು ಏಕ್ಸಾಂ ಇವೆ ಎಂಬ ಪರಿವೇ ಇಲ್ಲದೆ. ಅಲ್ಲಿ-ಇಲ್ಲಿ ರೂಮ್ ಮಾಡಿದವರ ಕಥೆಯೇ ಹೀಗಾದ್ರೇ. ಅಲ್ಲೇ ಇರುವ ಶಾಲ್ಮಲಾ, ನ್ಯೂ ಪಿಜಿ. ಭೀಮಾ ಹಾಸ್ಟಲ್ ವಿಧ್ಯಾರ್ಥಿಗಳು ಅನುಭವ ಜಮ್ಮು-ಕಾಶ್ಮೀರ ನಿವಾಸಿಗಳಂತಾಗಿದೆ.
ಚಳಿ, ಚಳಿ ತಾಳೆನು ಈ ಚಳಿಯಾ! ಎಂಬ ಹಾಡನ್ನು ಗುನುಗುತ್ತಾ, ಚಳಿಯಿಂದ ರಕ್ಷಣೆ ಪಡೆಯಲೂ ಎಲ್ಲಿದ ಕಸರತ್ತು ಮಾಡುತ್ತಿದ್ದಾರೆ. ಮಂಜು ಹೋಟೆಲ್, ಮಿಲ್ಕ ಪಾರ್ಲರಗಳತ್ತ ವಿದ್ಯಾರ್ಥಿಗಳ ದಂಡೆ ಹೋಗುತ್ತಿದೆ. ಹಿಂದಿನ ವರ್ಷಕ್ಕಿಂತ ಈ ಸಲದ ಥಂಡಿಗೆ ಕ್ಯಾಂಪಸ್ ಮಾತ್ರ ಥರಗುಟ್ಟುತ್ತಿದೆ ಎಂದು ಸೀನಿಯರ್‌ಗಳ ಅನುಭವದ ಮಾತು.

   ಮಂಜುನಾಥ ಗದಗಿನ

No comments:

Post a Comment

ಆರು ಸರ್ಕಾರಿ ನೌಕ್ರಿ ಪಡೆದ ವಿಕಲಚೇತನ ಸಾಧಕಿ

  ಮಂಜುನಾಥ ಗದಗಿನ -- ಇಂದಿನ ಸ್ಪರ್ಧಾ ತ್ಮಕ ಯುಗದಲ್ಲಿ ಸರ್ಕಾರಿ ನೌಕರಿ ಪಡೆದುಕೊಳ್ಳುವುದು ಎಲ್ಲರ ಕನಸು ಹಾಗೂ ಗುರಿ ಹೌದು. ಆದರೆ, ಸರ್ಕಾರಿ ನೌಕರಿ ಪಡೆಯಬೇಕು...