ಮಂಜುನಾಥ ಗದಗಿನ
ಇವರು ಕೊಳಲು ವಾದನದಲ್ಲಿ ಎತ್ತಿದ ಕೈ. ಆದರೆ, ಎಲ್ಲರಂತೆ ಇವರು ಬಾಯಿಯಲ್ಲಿ ಕೊಳಲು ನುಡಿಸಿ ಸೈ ಅನಿಸಿಕೊಂಡವರಲ್ಲ. ಬದಲಾಗಿ ಮೂಗಿನಿಂದ ಕೊಳಲು ನುಡಿಸಿ ಎಲ್ಲರಿಂದಲೂ ಭೇಷ್ ಅನಿಸಿಕೊಂಡವರು.
ಹೌದು! ಅವರೇ ಬೆಳಗಾವಿ ಜಿಲ್ಲೆ ಹುಕ್ಕೇರಿ ತಾಲೂಕಿನ ಬೆಳವಿ ಗ್ರಾಮದ ನಿವಾಸಿ, ಸದ್ಯ ಸಂಕೇಶ್ವರ ಕೆಎಸ್‌ಆರ್‌ಟಿಸಿಯಲ್ಲಿ ಕಂಡಕ್ಷರ್ ಆಗಿ ಕಾರ್ಯ ನಿರ್ವಹಿ
ಸುತ್ತಿರುವ ಡಿ.ಆರ. ನದಾಫ್. ವೃತ್ತಿಯಲ್ಲಿ ಕಂಡಕ್ಷರ್ ಆದರೂ ನಾಸಿಕ ಕೊಳಲು ವಾದನ ಮೂಲಕ ಇದೀಗ ನಾಡಿನ ಮನೆ, ಮನದ ಮಾತಾಗಿದ್ದಾರೆ.
೩ನೇ ವಯಸಲ್ಲೆ ಆಸಕ್ತಿ:
ಅದೊಂದು ದಿನ ಮನೆಗೆ ಇವರ ಅಣ್ಣ ಕೊಳಲು ತಂದು ಕೊಳಲು ಕಲಿಯಲು ಪ್ರಯತ್ನ ಪಟ್ಟರು. ಆದರೆ, ಅದರಲ್ಲಿ ಅವರು ವಿಫಲರಾದರೂ, ಆದರೆ, ದಸ್ತಗಿರಿ ಅವರು ದನ, ಕುರಿ ಕಾಯುತ್ತಲೆ ಅದೇ ಕೊಳಲಿನಿಂದ ಪ್ರತಿದಿನ ಆಟವಾಡುತ್ತಾ, ಕೊಳಲು ನುಡಿಸುವುದನ್ನು ಕಲಿತುಕೊಂಡರು. ಆಗ ಅವರಿಗೆ ಕೇವಲ ಮೂರು ವರ್ಷ. ನಂತರ ದಿನಗಳಲ್ಲಿ ಕೊಳಲಿನಲ್ಲಿ ಪಾರಂಗತರಾಗಿ ಕೊಳಲು ವಾದನದಲ್ಲಿ ಮಿಂಚುತ್ತಿದ್ದಾರೆ. ಆದರೆ, ಕಳೆದ ೧೫ ವರ್ಷಗಳಿಂದ ಮೂಗಿನಿಂದ ಅದ್ಭುತ್ ನಾದ ಮೊಳಗಿಸುವ ಮೂಲಕ ಕಂಡಕ್ಟರ್‌ಕ್ಕೂ ಸೈ, ಕೊಳಲು ನುಡಿಸಲು ಜೈ ಅನ್ನುತ್ತಾರೆ, ಸಾಧನೆಯ ಶಿಖರ ಹತ್ತಿದ್ದಾರೆ.
ಚಿತ್ರಿಗೀತೆಗಳ ನಾದ:
ಈಗ ಮೂಗಿನಿಂದ ಚಿತ್ರಗೀತೆ, ಭಕ್ತಿ, ಜನಪದ, ತತ್ವ್ವಪದಗಳನ್ನು ನುಡಿಸುವುದೆಂದರೆ ಅತೀ ಸಲಿಸು. ಅಷ್ಟರ ಮಟ್ಟಿಗೆ ನೆರೆದ ಜನತೆರನ್ನು ನಾದಲೋಕಕ್ಕೆ ಕೊಂಡೈಯುವ ಶಕ್ತಿ ಇವರ ನಾಸಿಕ ಕೊಳಲು ನಾದಕ್ಕೆ ಇದೆ. ಇದೇ ಕಾರಣಕ್ಕೆ ಇವರು ನಾಡಿನ ಹಲವು ಕಡೆಗಳಲ್ಲಿ ಹೋಗಿ ನಾಸಿಕ ಕೊಳಲು ನಾದ ಪ್ರದರ್ಶನ ನೀಡಿ ಶಬ್ಬಾಷ ಅನಿಸಿಕೊಂಡಿದ್ದಾರೆ.
ಮೂಗಿನ ಒಂದು ಹೊಳ್ಳೆ ಮುಚ್ಚಿ, ಇನ್ನೊಂದು ಹೊಳ್ಳೆಯಿಂದ ನಾದ ಹೊರಡಿಸುವುದು ಎಂದರೆ ಸಾಮಾನ್ಯದ ಮಾತಾಲ್ಲ. ಆದರೆ, ದಸ್ತಗಿರಿ ಅವರಿಗೆ ಅದು ಕರಗತವಾಗಿದೆ. ಹೀಗಾಗಿಯೇ ಅವರು ಸಲಿಸಾಗಿ ಡಾ. ರಾಜಕುಮಾರ ಅವರ ಆಡಿಸಿ, ನೋಡು, ಬೀಳಿಸಿ ನೋಡು, ಹುಟ್ಟಿದರೆ ಕನ್ನಡ ನಾಡಲ್ಲಿ, ನಾನಿರುವುದು ನಿಮಗಾಗಿ ಇತ್ಯಾದಿ ಜನಪ್ರಿಯ ಚಲನಚಿತ್ರ ಗೀತೆಯ ಸಾಲುಗಳಾದ ಕಾಣದಂತೆ ಮಾಯವಾದನೋ, ನಮ್ಮ ಶಿವಾ, ನಾನಿರುವುದೇ ನಿಮಗಾಗಿ ಹೀಗೆ ರಾಜಕುಮಾರರ ಬಹುತೇಕ ಚಿತ್ರಗೀತೆಗಳನ್ನು ಕೊಳಲನ್ನು ನಾಸಿಕದ ಮೂಲಕ ನುಡಿಸುತ್ತಾರೆ.
ಭಕ್ತಿ, ದೇಶಪ್ರೇಮ ನಾದ:
ಸಂತ ಶಿಶುನಾಳ ಶರೀಫ ತತ್ವ ಪದಗಳನ್ನು ಅತೀ ಮಾರ್ಮಿಕವಾಗಿ ಭಕ್ತಿಯ ಅಲೆಯಲ್ಲಿ ತೇಲುವ ಹಾಗೇ ನುಡಿಸುತ್ತಾರೆ ಕಂಡಕ್ಟರ್ ನದಾಫ್ ಸರ್. ಅಷ್ಟೇ ಅಲ್ಲದೇ ನಂಬಿದೆ ನಿನ್ನಾ ನಾಗಾಭರಣ, ಕಾಯೋ ಹರಣ, ಗುಡಿಯ ನೋಡಿರಣ್ಣ, ದೇಹದ ಗುಡಿಯ ನೋಡಿರಣ್ಣ ಎಂಬಿತ್ಯಾದಿ ಭಕ್ತಿಗೀತೆ, ಹಾವು ತುಳಿದೀನಿ, ಬಿದ್ದಿಯಬ್ಬೇ ಮುದುಕಿ, ಹಾವು..ತರವಲ್ಲ ತಗಿ ನಿನ್ನ ತಂಬೂರಿ ಎಂಬ ಇತ್ಯಾದಿ ಇತ್ಯಾದಿ ಜನಪ್ರಿಯ ಗೀತೆಗಳು ಇವರು ನಾಸಿಕದ ಧ್ವನಿಯಲ್ಲಿ ಕೇಳುಗಳು ಕರ್ಣಗಳು ಪಾವನಗೊಳ್ಳುತ್ತವೆ. ನಾಡಗೀತೆ, ದೇಶಭಕ್ತಿ ಹಾಗೂ ರಾಷ್ಟ್ರಗೀತೆಗಳನ್ನು ಸಹಿತ ಇವರು ಕೊಳಲನ್ನು ನಾಸಿಕದ ಮೂಲಕ ನುಡಿಸಿ ನೆರೆದ ಜನರಲ್ಲಿ ದೇಶ ಪ್ರೇಮ ಉಕ್ಕಿಸುವ ಕೆಲವನ್ನು ಇವರು ಮಾಡುತ್ತಿದ್ದಾರೆ.
ಕನ್ನಡದೊಟ್ಟಿಗೆ ಹಿಂದಿ ಚಲನಚಿತ್ರ ಗೀತೆಗಳಾದ ಮನ್ ಡೋಲಿರೆ, ಆನೆ ಸೇ ಉಸ್ಕೆ ಆಯೆ ಬರ್ಹಾ, ತೆರೆ, ಮೇರೆ ಬೀಚ್ ಮೇ ಕೈಸಾ ಹೈ ಬಂಧನ್ ಸೇರಿದಂತೆ ಇತರೆ ಹಿಂದಿ ಚಿತ್ರಗೀತೆಗಳನ್ನು ನುಡಿಸುತ್ತಾರೆ.
ಎಲ್ಲೆಲ್ಲಿ ಪ್ರದರ್ಶನ:
ಇವರ ನಾಸಿಕ ಕೊಳಲು ವಾದನ ಸದ್ದು ನಾಡು, ಹೊರ ರಾಜ್ಯದ ವಿವಿಧೆಡೆ ಪಸರಿಸಿದೆ. ಬೆಳಗಾವಿ, ರಾಯಚೂರು, ಬೆಂಗಳೂರು, ಕಲಬುರ್ಗಿ, ವಿಜಯಪುರ, ಬಾಗಲಕೋಟೆ, ಗೋವಾ, ಮಹಾರಾಷ್ಟ್ರ, ಆಂದ್ರಪ್ರದೇಶ ಹೀಗೆ ಹಲವು ಕಡೆಗಳಲ್ಲಿ ಪ್ರದರ್ಶನ ನೀಡಿ ಎಲ್ಲರ ಮನ ಗೆದ್ದಿದ್ದಾರೆ. ಅಷ್ಟೇ ಅಲ್ಲದೇ ಮೈಸೂರು ದಸರಾ, ಕನ್ನಡ ಸಾಹಿತ್ಯ ಸಮ್ಮೇಳನ, ಕಿತ್ತೂರ ಉತ್ಸವ, ಧಾರವಾಡದ ಕೃಷಿ ವಿವಿಯ ಕೃಷಿ ಮೇಳ ಇದೀಗ ಧಾರವಾಡದಲ್ಲಿ ನಡೆಯುತ್ತಿರುವ ೮೪ನೇ ಅಖಿಲ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಪಾಲ್ಗೊಂಡು ಅಲ್ಲಿಯು ನಮ್ಮ ನಾಸಿಕ ಕೊಳಲು ನಾದದ ನಿನಾದವರನ್ನು ಹರಡಲು ಸನ್ನದ್ಧರಾಗಿದ್ದಾರೆ.
ನಾಸಿಕ ನಾದಕ್ಕೆ ಬಂದ ಪ್ರಶಸ್ತಿಗಳು:
ಚಿಕ್ಕೋಡಿ ತಾಲೂಕಿನ ದುಳಗನವಾಡಿಯ ರಂಗದರ್ಶನ ಗ್ರಾಮೀಣ ವಿಕಾಸ ಸಂಘ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದ ಕೊಳಲು ಕಿಶೋರ ಪ್ರಶಸ್ತಿ ಹಾಗೂ ಬೆಂಗಳೂರಿನ ಕರ್ನಾಟಕ ಸಾಂಸ್ಕೃತಿಕ ಅಕಾಡೆಮಿಯು ಕರ್ನಾಟಕ ರತ್ನಶ್ರೀ ಪ್ರಶಸ್ತಿಗಳು ಇವರ ನಾದಕ್ಕೆ ಮನಸೋತು ಬಂದಿವೆ. ಹೀಗೆ ಇವರ ನಾದ ಅರಸಿ ಮತ್ತಷ್ಟು ಪ್ರಶಸ್ತಿಗಳು ಬರಲಿ ಎಂಬುವುದು ಎಲ್ಲರ ಆಶಯ. ಇವರ ಈ ಕಲೆಗೆ ಸಾರಿಗೆ ಇಲಾಖೆ ಕೂಡಾ ಸಾಥ್ ನೀಡುತ್ತಿದ್ದು, ಬೇಕೆಂದಾಗ ರಜೆ ನೀಡಿ ಕಳುಹಿಸುತ್ತಾರೆ, ಕಲೆಗೆ ಪ್ರೋತ್ಸಾಹ ತುಂಬುತ್ತಿದೆ. ಕಂಡಕ್ಟರ್ ವೃತ್ತಿ ಒತ್ತಡದ ವೃತ್ತಿ. ಈ ಒತ್ತಡ ವೃತ್ತಿಯ ಮಧ್ಯೆಯೂ ಒಂದು ವಿಶಿಷ್ಟ ಕಲೆಯ ಮೂಲಕ ನಾಡಿನಲ್ಲಿ ಮಾತಾಗಿರುವುದು ವಿಶಿಷ್ಟವೇ ಸರಿ.

No comments:
Post a Comment