Monday, 2 January 2017

ಕರ್ನಾಟಕ ಏಕೀಕರಣದಲ್ಲಿ ನಾಗನೂರ ಮಠ

ಮಂಜುನಾಥ ಗದಗಿನ
ಕರ್ನಾಟಕ ಏಕೀಕರಣದಲ್ಲಿ ನಾಡಿನ ಅನೇಕ ನೇತಾರರು, ಸಾಹಿತಿಗಳು, ಕನ್ನಡಾಭಿಮಾನಿಗಳು ತಮ್ಮ ತನು, ಮನಗಳನ್ನು ಅರ್ಪಿಸಿದ್ದಾರೆ. ಇವುಗಳೊಟ್ಟಿಗೆ ನಾಡಿನ ಮಠಗಳು ಏಕೀಕರಣದಲ್ಲಿ ತಮ್ಮ ಅನನ್ಯ ಸೇವೆಯನ್ನು ಸಲ್ಲಿಸಿವೆ. ಅವುಗಳಲ್ಲಿ ಬೆಳಗಾವಿಯ  ನಾಗನೂರ ಮಠ ಹಾಗೂ ಕಾರಂಜಿ ಮಠಗಳು ಪ್ರಮುಖವಾದವುಗಳು.

ನಾಗನೂರು ಮಠದ ಡಾ. ಶಿವಬಸವ ಸ್ವಾಮೀಜಿ ಕನ್ನಡ ಹಾಗೂ ಕರ್ನಾಟಕಕ್ಕೆ ಸಲ್ಲಿಸಿದ ಸೇವೆ ಅನನ್ಯ. ಕರ್ನಾಟಕ ಏಕೀಕರಣ ಸಂದರ್ಭದಲ್ಲಿ ಕನ್ನಡಪರ ಚಟುವಟಿಕೆಗಳನ್ನು ತೀವ್ರಗೊಳಿಸಿ, ಕನ್ನಡದ ಕಿಚ್ಚನ್ನು ಹೆಚ್ಚಿಸಿದ ಶ್ರೇಯಸ್ಸು ಶ್ರೀಗಳಿಗೆ ಸಲ್ಲುತ್ತದೆ.
ಕನ್ನಡ ಏಕೀಕರಣ ಹೋರಾಟದ ಸಂದರ್ಭದಲ್ಲಿ ಶ್ರೀಗಳು ಹೋರಾಟಗಾರರಿಗೆ ಶ್ರೀಮಠದಲ್ಲಿ ಆಶ್ರಯ ನೀಡಿ, ಅವರಿಗೆ ತುತ್ತು ಅನ್ನ ಹಾಕಿ ಹೋರಾಟಕ್ಕೆ ಅಣಿಗೊಳಿಸುತ್ತಿದ್ದರು. ಎಷ್ಟೋ ಬಾರಿ ತಮ್ಮ ಜೋಳಿಗೆಯ ಮೂಲ ಭಿಕ್ಷೆ ಬೇಡಿ ಹೋರಾಟಗಾರರಿಗೆ ಉಣಬಡಿಸಿದ್ದಾರೆ.
ಅದು ೧೯೪೭ರ ಸಮಯ ಬ್ರಿಟಿಷ್ ಸರ್ಕಾರ ಭಾರತಕ್ಕೆ ಸ್ವಾತಂತ್ರ್ಯ ಕೊಟ್ಟು ಹೋಗಿತ್ತು. ಅದಾಗಲೇ ಎಲ್ಲೆಡೆ ಭಾಷಾವಾರು ಪ್ರಾಂತ್ಯಗಳ ರಚನೆಯ ಕೂಗು ಎಲ್ಲೆಡೆ ಹರಡಿತ್ತು. ಈ ಸಂದರ್ಭದಲ್ಲಿ ಗಡಿನಾಡಿನಲ್ಲಿ ಕನ್ನಡದ ಬಗ್ಗೆ ಜಾಗೃತಿ ಮೂಡಿಸಿದರು. ನಾಡಿನ ಹೆಸರಾಂತ ವಿದ್ವಾಂಸರನ್ನು, ಸಾಹಿತಿಗಳನ್ನು, ಕಲಾವಿದರನ್ನು ಬೆಳಗಾವಿಗೆ ಬರಮಾಡಿಕೊಂಡು ಅವರ ಮೂಲಕ ಬೆಳಗಾವಿ ಮತ್ತು ಹೊಂದಿಕೊಂಡ ಗಡಿಭಾಗಗಳ ಕನ್ನಡಿಗರಲ್ಲಿ ನಾಡು, ನುಡಿಯ ಬಗ್ಗೆ ಪ್ರೀತಿ ಉಕ್ಕುವಂತೆ ಮಾಡಿದರು.
ಏಕೀಕರಣ ಸಂದರ್ಭದಲ್ಲಿ ತಲೆ ಎತ್ತಿದ ಭಾಷಾ ವಿವಾದದ ಫಲವಾಗಿ ‘ಮಹಾರಾಷ್ಟ್ರ ಏಕೀಕರಣ ಸಮಿತಿ’ ಅಸ್ತಿತ್ವಕ್ಕೆ ಬಂದಿತು. ಇದರಿಂದ ಗಾಬರಿಗೊಂಡ ಈ ಭಾಗದ ಕನ್ನಡಿಗರು ಕನ್ನಡ ಕಟ್ಟುವ ಕಾರ್ಯ ಅಣಿಯಾದರು. ಭಾಷಾವಾರು ಪ್ರಾಂತ್ಯ ರಚನೆಯ ಹಿನ್ನೆಲೆಯಲ್ಲಿ ಫಜಲ್ ಅಲಿ ಆಯೋಗ ಮಾಹಿತಿ ಮತ್ತು ಮನವಿ ಸಂಗ್ರಹಣೆಗಾಗಿ ಬೆಳಗಾವಿಗೆ ಬಂದಾಗ ಕನ್ನಡ ಸಂಘ, ಸಂಸ್ಥೆಗಳು ಮನವಿ ಸಲ್ಲಿಸಿದವು. ಮರಾಠಿ ಸಂಘ, ಸಂಸ್ಥೆಗಳು ಹಿಂದುಳಿಯಲ್ಲಿಲ್ಲ. ಬೆಳಗಾವಿ ಜಿಲ್ಲೆಯು ಸಮಗ್ರವಾಗಿ ಕರ್ನಾಟಕದಲ್ಲೇ ಉಳಿಯಬೇಕೆಂಬ ದೃಢ ನಿರ್ಧಾರ ಕನ್ನಡ ಸಂಘ, ಸಂಸ್ಥೆಗಳದಾಗಿತ್ತು. ಶಿವಬಸವ ಸ್ವಾಮೀಜಿ ಸಲ್ಲಸಿದ ಮನವಿ ಅತ್ಯಂತ ಪ್ರಭಾವಶಾಲಿಯಾಗಿತ್ತು.
ಬೆಳಗಾವಿ ಯಾವಾಗಲೂ ಕನ್ನಡಿಗರದ್ದೆ. ಹಿಂದು ಮತ್ತು ಮುಸ್ಲಿಂ ಅರಸರ ಆಳ್ವಿಕೆಯಲೂ ಇದು ಕನ್ನಡ ನಾಡಿನ ಹಿಂದು ಮತ್ತು ಅರಸರ ಆಳ್ವಿಕೆಯಲ್ಲಿ ಇದು ಕನ್ನಡ ನಾಡು ಒಂದು ಪಟ್ಟಣವಾಗಿತ್ತು. ಮರಾಠಿಗಳು, ಪೇಶ್ವೆಯವರು ಕನ್ನಡನಾಡಿನ ಕೆಲವು ಭಾಗಗಳನ್ನು ಆಳುವಾಗ ಕೂಡ ಇದು ಈ ಭಾಗದ ಆಡಳಿತ ಕೇಂದ್ರವಾಗಿತ್ತು. ಇಲ್ಲಿಯ ಮೂಲ ವ್ಯಾಪಾರಿಗಳು, ಉದ್ಯೋಗಿಗಳು ಮನೆತನಗಳು ಕನ್ನಡಿಗರದ್ದಾಗಿವೆ. ಈ ವ್ಯಾಪಾರ ಕೇಂದ್ರಕ್ಕೆ ಬರುವ ಮಾಲು ಕರ್ನಾಟಕದ ಜಿಲ್ಲೆಗಳಿಂದ ಮತ್ತು ಇದೇ ಜಿಲ್ಲೆಯ ತಾಲೂಕು, ಹಳ್ಳಿಗಳಿಂದ. ಈಗ ಸಾಕ್ಷಿ ಹೇಳಲು ಬರುತ್ತಿರುವ ಮಾರಾಠಿ ಮುಖಂಡರು ಇತ್ತೀಚಿಗೆ ಬಂದು ನೆಲೆಸಿದವರು. ಎಂದು ಪ್ರತಿಪಾದಿಸಿದರು. ಇದನ್ನು  ಸ್ವಾತಂತ್ರ್ಯ ಹೋರಾಟಗಾರ ರಂಗನಾಥ ದಿವಾಕರ,  ಸ್ವಾತಂತ್ರ್ಯ ಯೋಧ ಹಾಗೂ ಕರ್ನಾಟಕ ಏಕೀಕರಣ ಹೋರಾಟದಲ್ಲಿ ಮುಂಚೂಣಿಯಲ್ಲಿದ್ದ ಗ್ಲುೆಪ್ಪ ಹಳ್ಳಿಕೇರಿ ಅವರು ಶ್ರೀಗಳ ವಾದವನ್ನು ಇಂಗ್ಲಿಷ್‌ಗೆ ಭಾಷಾಂತರಿಸಿ ಹೇಳಿದರು.
ಶ್ರೀಗಳ ವಾದವನ್ನು ಆಯೋಗ ಆಸಕ್ತಿಯಿಂದ ಆಲಿಸಿತು ಮತ್ತು ಅವರನ್ನು ತುಂಬು ಗೌರವದಿಂದ ಕಂಡಿತು. ಇದರಿಂದ ೧೯೫೬ ನವೆಂಬರ್ ೧ ರಂದು ಕರ್ನಾಟಕ ರಾಜ್ಯ ಉದಯವಾಯಿತು.
ನಂತರ ಬೆಳಗಾವಿ ಒಂದು ಜಿಲ್ಲಾ ಕೇಂದ್ರವಾಯಿತ. ಕನ್ನಡ ವಿರೋಧಿಗಳು ಕರಾಳ ದಿನ ಆಚರಿಸಿದರ. ಮರಾಠಿ ಪರ ಜನರು ಅಂಗಡಿ, ಮುಂಗಟ್ಟುಗಳಿಗೆ ಬೆಂಕಿ ಹಚ್ಚಿ, ಧಾಂದಲೆ ಎಬ್ಬಿಸಿದರು. ಕಂಡಲ್ಲಿ ಗುಂಡಿಕ್ಕುವ ಆಜ್ಞೆ  ಹೊರ ಬಿತ್ತು. ಸಮಯದಲ್ಲಿ ಶ್ರೀಗಳ ಕನ್ನಡಪರ ಕಳಕಳಿ ಇದ್ದ ಶ್ರೀಗಳ ಪ್ರಾಣಕ್ಕೆ ಆಪತ್ತು ಎದುರಾತು. ಪುಂಡರ ಕಣ್ಣು ಶ್ರೀಮಠದ ಪ್ರಸಾದ ನಿಲಯದ ಮೇಲೂ ಬಿದ್ದು, ಈ ಸಮಯದಲ್ಲಿ ಪೊಲೀಸರು ಶ್ರೀಗಳಿಗೆ ರಕ್ಷಣೆ ನೀಡಿದರು. ಭಕ್ತ ಒತ್ತಾಯದ ಮೇರೆಗೆ ಶ್ರೀಗಳು ಕೆಲವು ದಿನಗಳ ಕಾಲ ಹುಬ್ಬಳ್ಳಿ ಮತ್ತು ಹಿರೇ ಬಾಗೇವಾಡಿಯಲ್ಲಿ ತಮ್ಮ ಭಕ್ತರ ಮನೆಯಲ್ಲಿ ಆಶ್ರಯ ಪಡೆದರು.
ಕೆಲವು ದಿನಗಳ ನಂತರ ಇದು ತನ್ನಗಾಯಿತು. ಆ ಮೇಲೆ ಕರ್ನಾಟಕ-ಮಹಾರಾಷ್ಟ್ರ ಗಡಿ ಸಮಸ್ಯೆಗೆ ಸಂಬಂಧಿಸಿದಂತೆ ಭಾರತ ಪ್ರಧಾನ ನ್ಯಾಯಾಧೀಶರಾಗಿದ್ದ ಮೆಹರಚಂದ ಮಹಾಜನ್ ಅವರ ನೇತೃತ್ವದಲ್ಲಿ ಆಯೋಗ ನೇಮಕಗೊಂಡಾಗ ಶ್ರೀಗಳು ಸ್ಪಷ್ಟ ಮಾತುಗಳಿಗಳಲ್ಲಿ ‘ಬೆಳಗಾವಿ ಎಂದೆಂದೂ ಕರ್ನಾಟಕದ್ದು, ಗಡಿ ವಿವಾದ ಮುಗಿದು ಹೋದ ಅಧ್ಯಾಯ ಅದನ್ನು ಮತ್ತೆ ಕೆದಕಬಾರದು ಎಂದು ಹೇಳಿದರು. ಇದಾದ ನಂತರ ಬೆಳಗಾವಿ ಕರ್ನಾಟಕದಲ್ಲೇ ಉಳಿಯಿತು. ಈ ಶ್ರೇಯಸ್ಸು ನಾಗನೂರು ಮಠಕ್ಕೆ ಸಂಧಿತು.
ನಾಡಿನ ಜನತೆ ಶ್ರೀಗಳನ್ನು ತುಂಬು ಮನದಿಂದ ಅಭಿನಂದಿಸಿದರು. ಇದಾಗಿ ೫೦ ವರ್ಷಗಳ ನಂತರ ಸುವರ್ಣ ಕರ್ನಾಟಕ ವರ್ಷಾಚರಣೆ ಸಂಭ್ರಮದಲ್ಲಿ ಸರ್ಕಾರ ಶ್ರೀಮಠಕ್ಕೆ ‘ಏಕೀಕರಣ ಪ್ರಶಸ್ತಿ ನೀಡಿ ಗೌರವಿಸಿತು.
ಈಗಲೂ ಕೂಡಾ ನಾಗನೂರ ಮಠ ಹಲವಾರು ಕನ್ನಡ ಶಾಲೆಗಳನ್ನು ಸ್ಥಾಪಿಸಿ, ಈ ಮೂಲಕ ಕನ್ನಡ ಕಟ್ಟುವ ಕಾರ್ಯದಲ್ಲಿ ತೊಡಗಿಕೊಂಡಿದೆ. ಅಷ್ಟೇ ಅಲ್ಲದೇ ಕರ್ನಾಟಕ, ಮಹಾರಾಷ್ಟ್ರ ನಡುವೆ ಸಾಂಸ್ಕೃತಿಕ ರಾಯಭಾರಿಯಾಗಿ ಕೆಲಸ ಮಾಡುತ್ತಿದೆ. ಈಗ ಸಿದ್ಧರಾಮ ಶ್ರೀ ಮಠವನ್ನು ಮುನ್ನಡೆಸುತ್ತಿದ್ದಾರೆ.





Tuesday, 15 November 2016

ವಾರೇ ಕಣ್ಣ ಹುಡ್ಗಿ, ಬಾರೇ ನನ್ನ ಬೆಡಗಿ...!!


ಮೌನ ಎಂಬ ಮಾಯಾಂಗನಿಯನ್ನು ಬೆನ್ನರಿ ಹೊರಟಿದ್ದಾಗ, ಇಳಿ ಸಂಜೆ ಎಂಬ ಕೆಂಪು ಹಾಸು ನಿಧಾನವಾಗಿ ಇಣುಕುತ್ತಿದ್ದ ಆ ಹೊತ್ತಲ್ಲಿ ಮನಸ್ಸಿನ ಮೌನಕ್ಕೆ ಮೂಲಾಮು ಹಚ್ಚಿದ ಆ ನಿನ್ನ ಕುಡಿನೋಟ ಇಂದೆಕೋ! ನನ್ನದೆಯ ಅಂರಂಗದಲ್ಲಿ ವಿರಹ ಗೀತೆಯೊಂದನನ್ನು ಹುಟ್ಟು ಹಾಕಿ ಗುನುಗುತ್ತಿದೆ.
ಆಗತಾನೆ, ಕ್ಲಾಸುಗಳನ್ನು ಮುಗಿಸಿ ಹೊರಗಡೆ ಹೆಜ್ಜೆ ಇಟ್ಟಾಗ ಕತ್ತಲೆಯು ಬೆಳಕನ್ನು ಅಟ್ಟಿಸಿಕೊಂಡು ಹೋಗುತ್ತಿತ್ತು. ಇದರ ಮಧ್ಯ ಗೆಳೆಯರ ಮಾತಿನ ಕಾದಾಟಾ, ಕಾಲು ಎಳೆದಾಟಗಳನ್ನು ಮಾಡುತ್ತಾ ಕಾಡು ಹರಟೆ ಹೋಡೆಯುತ್ತಾ ಲೋಕಾಭಿರಾಮವಾಗಿ ಬರುತ್ತಿದ್ದರು. ನಾನು ಮಾತ್ರ ಅವರ ಗೋಜಿಗೆ ಹೋಗದೆ, ನನ್ನದೆಯಾದ ಪ್ರಪಂಚದಲ್ಲಿ, ಯೋಚಿಸುತ್ತಾ ಬರುತ್ತಿದ್ದೆ.
ನಮ್ಮ ವಿಭಾಗವು ಕ್ಯಾಂಪಸ ಎಂಬ ಜಗತ್ತಿನಿಂದ, ಸಂಬಂಧ ಕಳೆಜಿಕೊಂಡ ಪುಟ್ಟ ರಾಷ್ಟ್ರದಂತಿರುವ ವಿಭಾಗ. ಇಲ್ಲಿಂದ ಕ್ಯಾಂಪಸ ಕಡೆಗೆ ಹೋಗ್ಬೇಕಾದ್ರೆ, ಅದೋನೋ, ಖುಷಿ, ಸುತ್ತಲ್ಲೂ ಹಚ್ಚ ಹಸಿರು, ಅದರ ಮಧ್ಯ ನಮ್ಮ ಪ್ರಯಣ ಎಷ್ಟು ಚಂದ ಅಲ್ವಾ. ಹ್ಞೂ..ಅವತ್ತು ಕೂಡಾ ಅದೇ ಆಹ್ಲಾದಕ ವಾತಾವರಣದ ಮಧ್ಯ ಪುಟ್ಟ ಹೆಜ್ಜೆಗಳನ್ನು ಹಾಕುತ್ತಾ ಬರುತ್ತಿದ್ದೆ. ಆ ಕಾಡ ಹಾದಿಯಲ್ಲಿ ಅಂದು ಕಂಡಳೇ ನೀನು. ಆಗತಾನೆ ಕವಿವಿಯ ಪ್ರಕೃತಿ ಮೈಗೊಡವಿ ಎದ್ದು, ಹೊಸತನದಿಂದ ಶೋಭಿಸುತ್ತಿದ್ದಳು. ಆ ಕ್ಷಣಕ್ಕೆ ಕಂಡ ನಿನ್ನ ಮುಖ ಕೂಡಾ, ಮರ್ಕ್ಯೂರಿ ಬಲ್ಪನ ಹೊಳಪಿನಂತೆ ಕಂಡಿತು.
ನಾಲ್ಕಾರು ನಿಮ್ಮ ಗೆಳತಿಯರ ಜೊತೆ ತಳಕುತ್ತಾ..ಬಳಕುತ್ತಾ..ಬರುತ್ತಿದ್ದ ನಿನ್ನನ್ನು ನೋಡಿದೆ. ಅದೋನೋ! ಪರವಸೆನಾದೇನು, ನೀ ನೋಡು ಮುನ್ನವೆ ಎಂಬ ಯೋಗರಾಜ ಭಟ್ಟರ ಹಾಡು ಎದೆಯಲಿ ಸದ್ದು ಮಾಡಲು ಶುರುಮಾಡಿತು. ನೀನು ಗೆಳತಿಯರ ಜೊತೆ ಮಾತನಾಡುತ್ತಿದ್ದಾಗ ನೀನು ಮಾಡುತ್ತಿದ್ದ ಹಾವ-ಭಾವಗಳು, ಆ ನಿನ್ನ ಮಾತುಗಾರಿಕೆ ನನ್ನರ್ಧ ಕೊಂದು ಹಾಕಿದವು. ಕಾರಣವೇ ಇಲ್ಲದೇ ಗೋಳ್ ಎಂದು ನಗುತ್ತಿದ್ದ, ನಿನ್ನ ಆ ನಗುವಿನ ಸದ್ದು, ಪದೇ ಪದೇ ಜಾರಿ ಬಿಳುತ್ತಿದ್ದ ನಿನ್ನ ಮುಂಗುರಳುಗಳು ಇಂದು ಕನಸಿನಲ್ಲೂ ಕಾಡುತ್ತಿವೆ.
ಕ್ಯಾಂಪಸ ಎಂದ ಜಗತ್ತು ಬಂದಾಕ್ಷಣ ನಿನ್ನ ಸಂಗಡಿಗರು ತಮ್ಮ ದಾರಿಗಳ ಕಡೆಗೆ ಹೋದಾಗ. ನೀನೊಬ್ಬಳೆ ಕಪ್ಪು ಹಾಸಿಗೆ ಮಧ್ಯ ಯುವ ರಾಣಿಯ ಹಾಗೆ ನಡೆದುಕೊಂಡು ಹೋಗುತ್ತಾ ಇದ್ದೆ. ನಾನು ಕೂಡಾ ನಿನ್ನನ್ನೆ ಅನುಸರಿಸುತ್ತಾ ಬಂದು ಬಸ್ಟಾಫನಲ್ಲಿ ನಿಂತುಕೊಂಡು, ನಿನ್ನ ಒಂದು ನೋಡಕ್ಕಾಗಿ ಹಪಹಪಿಸುತ್ತಿದ್ದೆ. ಎಷ್ಟೋ ಹೊತ್ತಾದ್ರು, ನೀ ನನ್ನನ್ನು ನೋಡದೇ ಇದ್ದಾಗ ಆ ದೇವರಿಗೆ ಅಫ್ಲೀಕೇಶನ್ ಹಾಕಿ  ದೇವರೆ ಇವಳು ನನ್ನ ನೋಡೋ ಹಾಗೆ ಮಾಡಪ್ಪಾ ಎಂದು ಕೇಳಿಕೊಂಡೆ. ಅದೇನೋ! ನನ್ನ ಪ್ರಾರ್ಥನೆ ಆ ದೇವರಿಗೆ ಕೇಳಿಸಿರ‌್ಬೇಕು. ಅವಳು ಸಡನಾಗಿ ನನ್ನ ಕಡೆ ವಾರೆಗಣ್ಣಿನಿಂದ ನೋಡಿಯೇ ಬಿಟ್ಟಳು. ಹೀಗೆ ಅವಳು ಪದೇ ಪದೇ ನನ್ನು ವಾರೆಗಣ್ಣಿನಿಂದ ನೋಡುತ್ತಾ ನಿಂತುಕೊಂಡಳು. ಅಷ್ಟೋತ್ತಿಗಾಗಲೆ ಬಸ್ ಬಂದೇ ಬಿಟ್ಟಿತು. ಅವ್ಳ ಬಸ್ ಹತ್ತ ಬೇಕಾದ್ರೆ ಪೂರ್ಣ ತಲೆಯತ್ತಿ , ಒಂದು ಕಣ್ಣ ಸನ್ನೆ ಮಾಡಿ ನನ್ನನ್ನು ಬಿಳ್ಕೋಡಬೇಕ್ರಾದೆ, ಅದು ನನಗೆ ಜಗತ್ತಿನ ಎಂಟನೇ ಅದ್ಭುತದ ಹಾಗೆ ಕಾಣಿಸಿತು. ಅಂದು ಬೇಟಿಯಾದ್ಳು ಇನ್ನೂವರೆಗೂ ಮೀಟ್ ಆಗಿಯೇ. ಇಲ್ಲಾ! ನಿನ್ನ ನೋಡುವಿಕೆಗಾಗಿ ನನ್ನ ಮನ ಅಂಕೆ ಇಲ್ಲದ, ಮಂಗನ ತರ ಜಿಗಿದಾಡುತ್ತಿದೆ. ಬೇಗ ಮೀಟ್ ಆಗಿ ಅದಕ್ಕೋಂದು ಅಂಕೆ ಹಾಕುಬಾ...!!!!!!
ಮಂಜುನಾಥ ಗದಗಿನ
8050753148

Friday, 21 October 2016

ಇವರು ಮಾಡಿದ ತಪ್ಪಾದರೂ ಏನು?



   ಬದುಕು ಎಷ್ಟೋಂದು ಸೂಚಿಗ ನೋಡಿ, ತುತ್ತು ಅನ್ನಕ್ಕಾಗಿ, ಮೈ ಮುಚ್ಚೋ ಬಟ್ಟೆಗಾಗಿ, ಸಾವಧಾನವೇ ಇಲ್ಲದೆ ಹಗಲಿರುಳು ದುಡ್ಡಿಗಾಗಿ ಧನ ದುಡಿದ ಹಾಗೆ ಇದ್ದ ಬದ್ದ ಒತ್ತಡವನ್ನು ಮೈ ಮೇಲೆ ಹಾಕಿಕೊಂಡು ದುಡಿಯುತ್ತಿವೆ. ಇದೇಲ್ಲಾ ಯಾರಿಗೊಸ್ಕರ ಅಂತ ಹಾಗೆ ದುಡಿಯುವವರನ್ನ ಒಂದು ಮಾತು ಕೇಳಿ ಅವರು ನೀಡುವ ಉತ್ತರ ಒಂದೇ  ಈನ್ಯಾರಿಗೆ ನಮ್ಮ ವೃದ್ದಾಫ್ಯದಲ್ಲಿ ನಮ್ಮನ್ನ ನೋಡಿಕೊಳ್ಳೊ ಮಕ್ಕಳಿಗೆ  ಎಂಬ ಉತ್ತರ ನೀಡುವದು ಗ್ಯಾರಂಟಿ. ಆದರೆ ಆ ಮಕ್ಕಳು ದೊಡ್ಡವರಾದ ಮೇಲೆ, ತಂದೆ-ತಾಯಂದಿರನ್ನ ಎಷ್ಟರ ಮಟ್ಟಿಗೆ ಚನ್ನಾಗಿ ನೋಡ್ಕೋಳ್ತಾರೋ! ಆ ದೇವರಿಗೆ ಗೊತ್ತು. ಆದರೆ ಕೆಲವೊಂದಿಷ್ಟು ಮಕ್ಕಳು ತಮ್ಮ ಸಾಕಿದ ತಂದೆ-ತಾಯಿಗಳನ್ನು  ಕಾಲ ಕಸವನ್ನಾಗಿಸಿ ಮನೆ ಬಿಟ್ಟು ಹಾಕುತ್ತಾರೆ. ಪಾಪಾ ಆ ಮುಗ್ದ ಜೀವಗಳು ವಿಧಿಯಿಲದ್ಲೆ ಶಹರಗಳ ಕಡೆ ಮುಖ ಮಾಡಿ ಈ ರೀತಿ ಜೀವನ ಸಾಗಿಸುತ್ತಿರುವದು ಕೆದರಕ.
  ಹೌದು! ಇಂತಹ ಜನರು ಎಲ್ಲೆಂದರಲ್ಲಿ ಕಾಣಸಿಗುತ್ತಾರೆ. ಆದರೆ ಇವರು ಯಾರು? ಎಲ್ಲಿಂದ ಬಂದವರು ಎಂಬುವುದು ಯಕ್ಷ ಪ್ರಶ್ನೆಯಾಗಿದೆ. ಹೀಗೆ ಮಹಾನಗರಗಳಿಗೆ ಬರುವವರು ವೃದ್ದರೇ ಹೆಚ್ಚಾಗಿದ್ದಾರೆ. ಆದರೆ ಜನರನ್ನು ಕಾಡುವ ಪ್ರಶ್ನೆಗಳು ಎರಡು. ಇವರನ್ನು ಇಲ್ಲಿ ತಂದು ಬಿಡುತ್ತಿರುವವರು ಯಾರು? ಅದರಲ್ಲೂ ವೃದ್ದರನ್ನು ತಂದು ಬಿಡುತ್ತಿರುವುದು ಯಾಕೆ? ಇಂತಹ ಪ್ರಶ್ನೆಗಳು ನಾಗರಿಕ ಸಮಾಜದಲ್ಲಿ ಪ್ರಶ್ನೆಗಳು ಪ್ರಶ್ನೆಗಳೇ ಆಗಿ ಉಳಿದಿವೆ.
   ಆದರೆ ವೃದ್ದರನ್ನು ತಂದು ಬಿಡುತ್ತಿರುವುದಕ್ಕೆ ಕಾರಣಗಳು ಹಲವು ಇರಬಹುದು. ಆದರೆ ವಯಸ್ಸಾದವರ ಜೊತೆ ಎಲ್ಲಿ ಇರುವದು, ಅವರ ಕಾಟ ಹೇಗೆ ಸಹಿಸಿಕೊಳ್ಳುವುದು ಎಂದು ಹೆತ್ತ ಮಕ್ಕಳು ಅಥವಾ ಸಂಬಂಧಿಕರೆ ತಂದು ಬಿಡುತ್ತಿದ್ದಾರೆ ಎಂಬ ವಾದ ಒಂದು ಕಡೆ ಕೇಳಿ ಬರುತ್ತಿರುವುದು ಮಾತ್ರ ನಿಜ. ಮಕ್ಕಳನ್ನು ಹೆತ್ತು-ಹೊತ್ತು, ಸಾಕಿ, ಸಲುಹಿ, ಅವರು ಮಾಡಿದ ಅದೆಷ್ಟೋ ತಪ್ಪುಗಳನ್ನು ಮನ್ನಿಸಿ, ಅವರಿಗೊಂದು ಉಜ್ವಲವಾದ ಭವಿಷ್ಯ ನಿರ್ಮಾಣ ಮಾಡಿರುತ್ತಾರೆ. ಅದೇ ಮಕ್ಕಳು ದೊಡ್ಡವರಾದ ಮೇಲೆ ತಂದೆ-ತಾಯಿ ತಮಗೊಸ್ಕರ ಮಾಡಿದ ತ್ಯಾಗ ಮರೆತು, ಅವರು ಮಾಡಿದ ಸಣ್ಣ-ಪುಟ್ಟ ತಪ್ಪುಗಳಿಗೂ ಬೈದು,ಹಿಯಾಳಿಸಿ, ಮನೆ ಬಿಟ್ಟು ಹೊರಹಾಕುತ್ತಿದ್ದಾರೆ. ಇದು ನಾಗರಿಕ ಸಮಾಜ ತಲೆ ತಗ್ಗಿಸುವ ಕೆಲಸ. ಇಂತಹವುಗಳಿಗೆ ಜ್ವಲಂತ ಸಾಕ್ಷಿ ಎಂಬಂತೆ ನಗರದ ಪ್ರತಿಯೊಂದು ಗಲ್ಲಿ,ಗಲ್ಲಿಗಳಲೂ ಇಂತಹ ವೃದ್ದರು ಕಾಣಸಿಗುತ್ತಾರೆ.
 ವೃದ್ದರನ್ನು ಮಹಾನಗರಗಳಲ್ಲಿ ಬಿಟ್ಟು ಹೋದ ಸಂಬಂಧಿಕರು ಅಥವಾ ಮಕ್ಕಳು ಆ ಮೇಲೆ ಅವರು ಏನಾದರೂ ಎಂದು ತಲೆಹಾಕಿಕೂಡ ನೋಡುವುದಿಲ್ಲ. ಆದರೆ ಗೊತ್ತು-ಗುರಿಯಿಲ್ಲದ ಊರಿಗೆ ಬಂದ ವೃದ್ದರೂ ಏನು ಮಾಡಬೇಕೆಂದು ತಿಳಿಯದೆ, ಮಾನಸಿಕವಾಗಿ ಕುಗ್ಗಿ ಮಾನಸಿಕ ರೋಗಿಗಳಾಗಿ, ಜಗತ್ತಿನ ಸಂಪರ್ಕ ಕಳೆದುಕೊಂಡು ನಮ್ಮದೇ ಲೋಕದಲ್ಲಿ ಇದ್ದು ಬಿಡುತ್ತಿದ್ದಾರೆ.
  ಇವರ ಈ ಸ್ಥಿತಿ ನೋಡಿ ಜನರು ಅಯ್ಯೋ ಪಾಪವೆಂದು 1 ರೂ ಅಥವಾ 2 ರೂ, ಹಾಕಿ ಹೋಗುತ್ತಾರೆ, ಇನ್ನೂ ಕೆಲವರು ಇವರ ಮುಂದೆ ಹಾದು ಹೋಗಬೇಕಾದರೆ ಮೂಗು ಮುಚ್ಚಿಕೊಂಡು ಹೋಗುತ್ತಾರೆ. ತಾಸು ಗಂಟಲೇ ಹೋಟೆಲ್ ಮುಂದೆ ನಿಂತರೆ, ಅವರು ನೀಡುವ ಹಳಸಿದ ಊಟವೇ ಇವರಿಗೆ ಮೃಷ್ಟಾನ್ನವಾಗಿರುತ್ತದೆ. ಇವರಿಗೆಂದು ಒಂದು ಸೂರು ಇಲ್ಲ. ಎಲ್ಲೆಂದರಲ್ಲಿ ಮಲಗಿ ಏಳುತ್ತಾರೆ. ಇನ್ನೂ ಮೈತುಂಬ ಗಾಯಗಳಾಗಿದ್ದರು, ಅದೇ ಸ್ಥಿತಿಯಲ್ಲೇ ಜೀವನ ಸಾಗಿಸುತ್ತಿದ್ದಾರೆ.
   ಇಂತಹ ಜನರ ಸ್ಥಿತಿ ನೋಡಿ, ಎಂತವರ ಹೃದಯ ಕೂಡಾ ಮರುಗದೇ ಇರದು, ಆದರೇ ಪ್ರಜ್ಞಾವಂತ ಜನರ ಪ್ರಶ್ನೆ ಇವರು ಮಾಡಿದ ತಪ್ಪಾದರೂ ಏನು? ಎಂಬುದು.
 ಮಂಜುನಾಥ ಗದಗಿನ
8050753148

 

Tuesday, 11 October 2016

ಮತ್ತೆ ಹುಟ್ಟಿ ಬಾ ನನ್ನಪ್ಪ ..


ಅವು ಬಾಲ್ಯದ ದಿನಗಳು. ಅಪ್ಪ ಅಂದ್ರೆ ಸಾಕು ಅದೇಲ್ಲಿಂದಲ್ಲೋ! ಪ್ರತ್ಯೇಕ್ಷವಾಗಿ ಬೀಡುತ್ತಿದ್ದ. ನಾನು ರಚ್ಚೆ ಹಿಡಿದು ಅಳಲು ಪ್ರಾರಂಭಿಸಿದ್ರೆ ಅಪ್ಪ ತನ್ನ ಕಚ್ಚೆ ಸರಿ ಮಾಡಿಕೊಂಡು ಊರು ತುಂಬಾ ಹೆಗಲ ಮೇಲೆ ಕುಳರಿಸಿ, ಆನೆ ಅಂಬಾರಿಯ ಹಾಗೆ ಹೊತ್ತು ತಿರುಗುತ್ತಿದ್ದ. ಆದರೆ, ಈಗ ಅಪ್ಪ ನನ್ನೊಟ್ಟಿಗಿಲ್ಲ. ಆದರೆ, ಅಪ್ಪ ಕೊಟ್ಟು ಹೋದ ನೆನಪುಗಳು ಮಾತ್ರ ಎಡಬಿಡದೇ ಕಾಡುತ್ತಿವೆ.
ಅಪ್ಪನದು ಊರಿನಲ್ಲಿ ದೊಡ್ಡ ಹೆಸರು. ಶುಭ ಕಾರ‌್ಯಗಳಿಂದ ಹಿಡಿದು ಅಶುಭಕಾರ‌್ಯಗಳೇಲ್ಲವು ಅಪ್ಪ ನೇತೃತ್ವದಲ್ಲೇ ನಡೆಯುತ್ತಿದ್ದವು. ಅಪ್ಪ ನೇಕಾರಿಕೆ, ಅಡುಗೆ, ಗುಡಿಗಳ ಪೂಜಾರಿಕೆ ಹೀಗೆ ಎಲ್ಲದರಲ್ಲೂ ಪಾರಂಗತನಾಗಿದ್ದ. ಆದರೆ ಅಪ್ಪನಿಗೆ ಹಣದ ವ್ಯಾಮೋಹ ಸ್ಪಲ್ಪ ಹೆಚ್ಚಾಗಿಯೇ ಇತ್ತು. ಇದೇ ಕಾರಣಕ್ಕೆ ಪಾರ್ಶ್ವವಾಯು ಹೊಡು ಮೂಲೆ ಗುಂಪಾಗಿ ಹೋದದ್ದು ಈಗ ಇತಿಹಾಸ ಮಾತ್ರ. ಪಾಶ್ವವಾಯು ತಗುಲಿ ಬರೋಬ್ಬರಿ 12 ವರ್ಷ ನನ್ನಪ್ಪ ನನ್ನೊಟ್ಟಿಗೆ ಇದ್ದದ್ದು ಮಾತ್ರ ವಿಸ್ಮಯ. ಹೌದು! ನಮ್ಮ ಊರಲ್ಲೇ ಪಾರ್ಶ್ವವಾಯು ತಗುಲಿ 12 ವರ್ಷ ಜೀವಿಸಿದ್ದ ಒಂದೇ ಒಂದು ಕುರುಹುಗಳು ಸಿಗುವುದಿಲ್ಲ. ಹೀಗಂತ ಊರಿನವರೇ ಮಾತನಾಡಿಕೊಳ್ಳುತ್ತಿದ್ದರು. ಅಪ್ಪನ ನಂತರ ನಾಲ್ಕೈದು ಜನರಿಗೆ ಪಾರ್ಶ್ವವಾಯು ಹೊಡೆಯಿತು. ಅವರ‌್ಯಾರು ಬಹುದಿನ ಬದುಕದೇ ಶಿವನ ಪಾದ ಸೇರಿಕೊಂಡರು. ಆದರೆ, ಅಪ್ಪನದ್ದು ಗಟ್ಟಿ ಜೀವ.
ಅಪ್ಪ ಅಂದ್ರೆ, ಆಕಾಶ ನೋಡಿದಷ್ಟು,  ಹೇಳಿದಷ್ಟು ವಿಸ್ತಾರವಾಗುತ್ತಾ ಹೋಗುತ್ತಾನೆ. ಅಪ್ಪ ಅಂದ್ರೆ ಗುರು, ಮಾರ್ಗದರ್ಶಿ, ಹಿತೈಸಿ, ಎಲ್ಲದಕ್ಕಿಂತ ಹೆಚ್ಚಾಗಿ ಉತ್ತಮ ಗೆಳೆಯ. ಹೌದು! ನನ್ನಪ್ಪ ಕೂಡಾ ನನ್ಗೆ ಎಲ್ಲವೂ ಆಗಿದ್ದ. ನನ್ನ ಸುಖ, ದುಃಖಕ್ಕೆ ಹೇಗಲಾಗಿ, ಬಾಲ್ಯದ ಪ್ರತಿಯೊಂದು ಪ್ರತಿಯೊಂದು ಕ್ಷಣಗಳಿಗೂ ಜೀವ ತುಂಬುತ್ತಾ, ನನ್ನ ಜೀವನಕ್ಕೆ ಭದ್ರ ಬುನಾದಿ ಹಾಕಿದ್ದ ನನ್ನಪ್ಪ. ಇಂದು ನನ್ನನ್ನ ಯಾರಾದ್ರು, ಗುರುತಿಸುತ್ತಾರೆ, ಒಳ್ಳೆ ಹುಡುಗ, ವಿನಯವಂತ ಅಂತಾ ಕರೆಯುತ್ತಾರೆ ಎಂದ್ರೆ ಅದಕ್ಕೆ ಕಾರಣ ನನ್ನಪ್ಪ.
 ಪ್ರಾರಂಭದಲ್ಲೇ ನನ್ಗೆ ಒಳ್ಳೆಯ ವಿದ್ಯಾಭ್ಯಾಸ ನೀಡಿದ, ಒಳ್ಳೆಯ ಸಂಸ್ಕಾರ ತುಂಬಿದ, ಯಾರ ಜೊತೆ ಹೇಗೆ ಮಾತನಾಡಬೇಕು ಎಂದು ತಿಳಿಸಿದ. ಇದೇ ಕಾರಣಕ್ಕೆ ಇಂದು ನಾನೊಂದು ಸುಂದರ ಮೂರ್ತಿಯಾಗಿ ಜಗತ್ತಿಗೆ ತೆರೆದಿಕೊಂಡಿದ್ದೇನೆ. ಈಗ ಊರಿಗೆ ಹೋದರೆ, ಹಸನ್ಮುಖಿಯಾಗಿ ಕುರ್ಚಿ ಮೇಲೆ ಕುಳಿತು ಸ್ವಾಗತಿಸಲು ನನ್ನಪ್ಪ ನನ್ನೊಟ್ಟಿಗಿಲ್ಲ. ಅಪ್ಪ ಇಲ್ಲದ ಬದುಕು ಇಂದೇಕೋ ಬರಿದಾಗಿ ಕಾಣಿಸುತ್ತಿದೆ. ಅಪ್ಪನ ನೆನೆಪುಗಳು ಮೈಯಲ್ಲ ಅಪ್ಪಿಕೊಂಡು ಕಾಡಿ, ಅರೆಬರೆ ನೆನೆಪುಗಳನ್ನು ಕೆಣಕುತ್ತಿವೆ. ಏನೇ ಆಗಲಿ ಮತ್ತೆ ಅಪ್ಪ ಮತ್ತೆ ಹುಟ್ಟಿ ಬಾ..
ಮಂಜುನಾಥ ಗದಗಿನ
8050753148 

Sunday, 4 September 2016

ಒಂದಕ್ಷರ ಕಲಿಸಿದಾತ ಗುರುವೇ..!!

ಒಂದು ಗುರಿ, ಆ ಗುರಿ ಹಿಂದೆ ಒಬ್ಬ ಗುರು ಇದ್ದರೆ ಎಂತಹ ಕಷ್ಟಗಳಿಗೂ ಸೆಡ್ಡು ಹೊಡೆದು ಮುನ್ನುಗ್ಗಿ ಸಾಧನೆ ಶಿಖರಕ್ಕೆ ಮುತ್ತಿಕ್ಕ ಬಹುದು. ಆದರೆ ಗುರಿ, ಗುರು ಇಲ್ಲದ ಜೀವನ ದೋಣಿಯಿಲ್ಲದ ನಾವಿಕನಂತೆ. ಕೊನೆಯಿಲ್ಲದ ಅಲೆದಾಟ, ಪರದಾಟ. ಹಾಗೆ ನನ್ನ ಜೀವನವು ದೋಣಿಯಿಲ್ಲದ ನಾವಿಕನಂತೆ ದಿಕ್ಕು ತೋಚಿದೇ, ಮುಳುಗಿ ಹೋಗುತ್ತಿತ್ತು. ಈ ಸಮಯದಲ್ಲಿ ಕೈ ಹಿಡಿದು ಕರೆ ತಂದು ಗುರಿ ಹಾಗು ಗುರುವಾಗಿ ಮಾರ್ಗದರ್ಶನ ತೋರಿಸಿ,ಬದುಕಿಗೆ ಬೆಳಕಾದವರು ನನ್ನ ಗುರು.
ಬದುಕಿನ ಬಡತನ ಎಂಬ ಕತ್ತಲೆಯ ಕೆಳಗೆ ಕೊಳೆತು ಹೋಗುತ್ತಿದ್ದ ಬದುಕು. ಕಲಿಬೇಕು, ಸಾಧಿಸಬೇಕು ಎಂಬ ಹುಚ್ಚು ಹಂಬಲಗಳು ಮನದಲ್ಲಿ ಮನೆ ಮಾಡಿದ್ದವು. ಆದರೆ ಆ ಹಂಬಲಕ್ಕೆ ಬೆಂಬಲವಿಲ್ಲದೇ, ಕನಸುಗಳು ಸೊರಗಿ ಹೋಗುತ್ತಿದವು. ಇದೇ ಸಮಯಕ್ಕೆ ಕನಸುಗಳಿಗೆ ಬಣ್ಣ ತುಂಬಿ, ರಂಗು ರಂಗಾಗಿಸಿ ರೆಕ್ಕೆ ಬಲಿತ ಹಕ್ಕಿಯಂತಾಗಿಸಿದ್ದು ಇದೇ ನನ್ನ ಗುರು.
ಇದು ಐದು ವರ್ಷಗಳ ಹಿಂದಿನ ಮಾತು. ನಾನು ಪಿಯುಸಿ ಓದುತ್ತಿದ್ದ ಸಮಯ. ಮನೆಯಲ್ಲಿ ಬಡತನ ಕಾಲು ಮುರಿದುಕೊಂಡು ಬಿದ್ದಿದ್ದರು ಸಹ ಕಲಿಬೇಕು ಎಂಬ ಅಧಮ್ಯ ಆಸೆ. ಈ ಆಸೆಯಿಂದಲೇ ಪ್ರತಿದಿನ ಕೂಲಿ ಮಾಡಿ ಕಾಲೇಜಿಗೆ ಹೋಗುತ್ತಿದೆ. ಒಂದು ಚಿಕ್ಕ ಆಸೆ ಎಂತಹ ಕಾರ್ಯಕ್ಕೂ ಪ್ರೇರೆಪಿಸುತ್ತದೆ ಅಲ್ವಾ! ಹೌದು! ನನ್ನ ಕಲಿಬೇಕು ಎಂಬ ಆಸೆ ನನ್ನ ಎಲ್ಲ ಕಷ್ಟಗಳಿಗೂ ಕಾವಲಾಗಿತ್ತು. ಇದೇ ಧೈರ್ಯದಿಂದ ಚನ್ನಾಗಿ ಓದಿ ಕ್ಲಾಸ್‌ಗೆ ಪ್ರಥಮ ಸ್ಥಾನ ಪಡೆದುಕೊಂಡೆ. ಆದರೆ ಮುಂದೆ ಕಲಿಬೇಕು ಎಂಬ ಬಯಕೆ ಇದ್ದರೂ ಸಹ ಆರ್ಥಿಕ ತೊಂದರೆಯಿಂದ ಕಲಿಯಲಾಗದ ಪರಸ್ಥಿತಿ. ಇಲ್ಲಿಗೆ ನನ್ನ ಕನಸಿನ ರೆಕ್ಕೆಗಳು ಕತ್ತರಿಸಿ ಬೀಳುತ್ತವೆ. ಎಂದು ಜೀವನದ ಮೇಲೆ ಜಿಗುಪ್ಸೆ ಹುಟ್ಟಿತ್ತು.
ಇದೇ ಸಮಯಕ್ಕೆ ಗುರು,ಮಾರ್ಗದರ್ಶಕ,ಪೋಷಕ ಎಲ್ಲದಕ್ಕಿಂತ ಹೆಚ್ಚಾಗಿ ಒಬ್ಬ ಸ್ನೇಹಿತನಂತೆ ನನ್ನ ಕನಸಿಗೆ, ಬದುಕಿಗೆ ಹೇಗಲಾಗಿ, ನಿಂತು. ಪ್ರತಿದಿನ ಕೈತುತ್ತು ಹಾಕಿದ್ದು ನನ್ನ ಮಾವ. ಒಂದು ಚಿಕ್ಕ ಹಳ್ಳಿಯಲ್ಲಿ, ಬಾವಿಯೊಳಗಿನ ಕಪ್ಪೆಯಂತಿದ್ದ ನನ್ನನ್ನು ತನ್ನ ಕಡೆ ಕರೆಸಿಕೊಂಡು, ವಿಧ್ಯೆ,ಬುದ್ದಿ,ಬಟ್ಟೆ, ಊಟ ತನ್ನೊಟ್ಟಿಗೆ ಇರಲು ಆಶ್ರಯ ಕೊಟ್ಟು ನನ್ನ ಬಾಳಿನಲ್ಲಿ ಬೆಳಕಾಗಿ ಜೀವನಕ್ಕೆ ಗುರುವಾಗಿ, ಮಾರ್ಗದರ್ಶನ ನೀಡುತ್ತಿದ್ದಾರೆ ಈ ನನ್ನ ಮಾವ.
ಗುರು ಎಂದರೆ, ಕೇವಲ ಶಾಲೆಯಲ್ಲಿ ಹೇಳಿಕೊಡುವ ಶಿಕ್ಷಕ ಅಷ್ಟೇ ಅಲ್ಲ. ಮನೆಯಲ್ಲಿಯ ತಂದೆ-ತಾಯಿ, ಅಜ್ಜ-ಅಜ್ಜಿ,  ಬಂಧು-ಬಳಗ, ಸ್ನೇಹಿತ, ದಿನಾಲೂ ನಾವು ನೋಡುವ, ಮಾತನಾಡುವ ಜನರನ್ನೂ, ಸಮಾಜದಲ್ಲಿ ಎತ್ತರಕ್ಕೆರಿದ ಮಹನೀಯರನ್ನು ಗುರುಗನ್ನಾಗಿ ಭಾವಿಸಿದರೆ, ಎತ್ತರಕ್ಕೆ ಬೆಳೆಯಲು ಸಾಧ್ಯ. ಗುರುವಿನ ಗುಲಾಮನಾಗದೇ, ದೊರೆಯದೇನ್ನ ಮಕುತಿ ಎಂಬ ಹಿರಿಯ ದಾರ್ಶನಿಕರ ಮಾತಿನಂತೆ ಜೀವನದ ಮೌಲ್ಯಗಳು, ಜೀವನದ ಅರ್ಥ, ಗುರಿ, ಆ ಗುರಿ ಸಾಧನೆಗೆ ಗುರುವಿನ ಮಾರ್ಗದರ್ಶನ ಅವಶ್ಯಕ ಎಂದು ಹೇಳಿದ್ದಾರೆ. ಅದೇ ರೀತಿ ನನ್ನ ಜೀವನದಲ್ಲಿ ಎಲ್ಲವನ್ನು ತಿಳಿಸಿಕೊಟ್ಟಿದ್ದು ಇದೇ ನನ್ನ ಮಾವ.ಇಂದು ಒಂದಿಷ್ಟು ತಿಳುವಳಿಕೆ, ಜ್ಞಾನ ಸಂಪಾದಿಸಿ ಸಮಾಜವನ್ನು ಎದುರಿಸಲು ಕಲಿತ್ತಿದ್ದೇನೆ ಎಂದರೆ ಅದಕ್ಕೆ ಇವರೇ ಕಾರಣ.
ಸಮಾಜದಲ್ಲಿ ಯಾವ ರೀತಿಯಾಗಿ ನಡೆದುಕೊಳ್ಳಬೇಕು, ಯಾವ ರೀತಿಯಾಗಿ ಮಾತನಾಡಬೇಕು ಎಂದು ತಿಳಿದ ನನಗೆ ಎಲ್ಲವನ್ನು ತಿಳಿಸಿ ಮಾರ್ಗದರ್ಶನ ತೋರಿಸಿದ್ದಾರೆ. ಅಷ್ಟೇ ಅಲ್ಲದೇ ನನ್ನ ಶಿಕ್ಷಣದ ಖರ್ಚು ವೆಚ್ಚ, ನನ್ನ ದಿನದ ಖರ್ಚಿಗೆ ದುಡ್ಡು ಕೊಟ್ಟು ತಂದೆ-ತಾಯಿಗಿಂತಲೂ ಚನ್ನಾಗಿ ನೋಡಿಕೊಂಡು, ಉತ್ತಮ ಶಿಕ್ಷಣ ಕೊಡಿಸಿದ್ದಾರೆ. ಇವರ ಈ ಸಹಾಯ, ಪ್ರೀತಿ, ವಿಶ್ವಾಸಗಳನ್ನು ಈ ಜನ್ಮದಲ್ಲಿ ತೀರಿಸಿಲು ನನ್ನಿಂದಾಗದು. ಆದರೆ ಸೂಕ್ತ ಸಮಯದಲ್ಲಿ ಗುರುವಾಗಿ ಸಿಕ್ಕು, ಗುರಿ ತೋರಿ ಸಾಧನಗೆ ದಾರಿ ತೋರಿದ ಈ ನನ್ನ ಜೀವನದ ಗಾಡ್ ಪಾರ್ಧರ್‌ಗೆ ನನ್ನದೊಂದು ಸಲಾಂ.
ಮಂಜುನಾಥ ಗದಗಿನ
8050753148

Wednesday, 6 July 2016

ಭಾವಾಂತರಂಗವ ಬೀಡದ ಅಂತರಂಗ..!


  ಮಂಜುನಾಥ ಗದಗಿನ


ಮನಸ್ಸಿನಲ್ಲಿ ಅದೋನೋ! ಪುಳಕ್,
ಭಾವನೆಗಳಿಲ್ಲಿ ಅದೇನೋ ತಳುಕ,
ಹೃದಯದಲ್ಲಿ ಅದೇನೋ ನಡುಕ,
ಕೊನೆಗೆ ಸುರಿದದ್ದು ಕಣ್ಣಿರ ಜಳಕ.
                                                                                         ಎಂಜಿ..   
ಸಂಪ್ರದಾಯಗಳು ಕೂಡಾ ಕೇಲವೊಂದು ಸಾರಿ ಮನಸ್ಸಿಗೆ ನೋವು-ನಲಿವನ್ನು ನೀಡುತ್ತವೆ ಅಲ್ವಾ! ಈ ಸಂಪ್ರದಾಯಗಳು ಇರದೇ ಹೋಗಿದ್ದರೆ ಇಂದು ನಾವೇಲ್ಲರೂ ಒಟ್ಟಿಗೆ ಕೂಡುತ್ತಿರಲಿಲ್ಲ, ಭಾವಾಂತರಂಗದಲ್ಲಿ ತೇಲಿ ಸುಂದರ ಕ್ಷಣಗಳನ್ನು ಸೃಷ್ಠಿಸಿ ಇತಿಹಾಸದ ಪುಟಗಳಲ್ಲಿ ತೇಲಿಬಿಡುತ್ತಿರಲಿಲ್ಲ. ಮೋಜು-ಮಸ್ತಿಯೊಂದಿಗೆ ಬೇರೆಯುತ್ತಿರಲಿಲ್ಲ. ಕೊನೆಗೆ ಪ್ರೀತಿ ಅಪ್ಪುಗೆಯೊಂದಿಗೆ ಮರಳುತ್ತಿರಲಿಲ್ಲ.
     ಹೌದು! ಅದು ಒಂದು ಅದ್ಭುತ್ ಸುಂದರ ಬಿಳ್ಕೋಡುಗೆಯ ಸಂಪ್ರದಾಯ ಕಾರ್ಯಕ್ರಮ. ಹೊಸತನ ಸ್ವಾಗತಿಸುವದು. ಹಳೇಯದನ್ನ ಬಿಳ್ಕೋಡುವದು ನಮ್ಮ ಸಂಪ್ರದಾಯ.  ಆ ಸಭಾಂಗಣದ ತುಂಬೇಲ್ಲಾ ಬಣ್ಣ-ಬಣ್ಣದ ಬಲೂನ್‌ಗಳು, ಅಲ್ಲಲ್ಲಿ ಮಿನುಗುತ್ತಿದ್ದ ನಕ್ಷತ್ರಗಳು, ಮಧ್ಯ ಮಧ್ಯ ಸದ್ದು ಮಾಡುತ್ತಿದ್ದ ಡಿಜೆಗಳು ಇಡೀ ವಾತಾವರಣಕ್ಕೆ ರಂಗು ತಂದಿದ್ದವು. ಇನ್ನೂ ಹುಡುಗಿಯರು ಕಲರ್ ಕಲರ್ ಡ್ರೆಸ್ ಹಾಕ್ಕೊಂಡು ಹುಡುಗರ ಎದೆಯಲ್ಲಿ ಜಗಮಗಿಸುತ್ತಿದ್ದರು.
    ಕಾರ್ಯಕ್ರಮ ಯಾವ ರೀತಿಯಾಗಿ ನಡೆಯುತ್ತದೆ, ಯಾರು? ಹೇಗೆ ಮಾತನಾಡುತ್ತಾರೆ. ಏನೆಲ್ಲ ಅಡುಗೆ ಮಾಡಿಸಿದ್ದಾರೆ ಎಂಬ ಪುಳಕ್‌ದೊಂದಿಗೆ ಆರಂಭವಾದ ನಮ್ಮ ಕಾರ್ಯಕ್ರಮ ಅಧ್ಯಕ್ಷರ ಹಾಗೂ ಅತಿಥಿಗಳ ಭಾಷಣದೊಂದಿಗೆ ಸಂಪ್ರದಾಯಿಕವಾಗಿ ಮುಗಿಯಿತು. ಅನಂತರ ಊಟದ ವ್ಯವಸ್ಥೆಯನ್ನು ಮಾಡಲಾಗಿತ್ತು. ಅಬ್ಬಾ..! ಅಬ್ಬಾ..!  ಊಟ ಮಾತ್ರ ಯಾವ ಫೈ ಸ್ಟಾರ್ ಹೋಟೆಲ್‌ನ ಊಟಕ್ಕೂ ಕಡಿಮೆ ಇರಲಿಲ್ಲ. ಹುರಕ್ಕಿ ಹೋಳಗಿ, ಪರೋಟಾ, ಎರಡು ತರಹದ ಪಲ್ಯ, ಹಪ್ಪಳ, ಮೊಸರ ಅನ್ನ, ಗೀ ರೈಸ್ ಹಾ..ಹಾ.. ನೆನಸಿಕೊಂಡರೆ ಹೊಟ್ಟೆ ತಾಳ ಹಾಕಲು ಪ್ರಾರಂಭಿಸುತ್ತದೆ.
    ಇದಾದ ನಂತರ ನಡೆದದ್ದು ಮನರಂಜನಾ ಕಾರ್ಯಕ್ರಮ, ಒಂದು ಕಾರ್ಯಕ್ರಮ ನೆನಪಿನಲ್ಲಿ ಉಳಿಯ ಬೇಕಾದರೆ ಅಲ್ಲಿ ಮೋಜು-ಮಸ್ತಿ ಇರಲೇ ಬೇಕು. ಅದೇ ರೀತಿ ನಮ್ಮ ಜೂನಿಯರ‌್ಸಗಳು ನಮಗೆ ನಾನಾ ವಿಧದ ಮನರಂಜನಾ ಕಾರ್ಯಕ್ರಮಗಳನ್ನು ಆಯೋಜಿಸಿದ್ದರು. ಕೆಲವೊಂದು  ಚೀಟಿಯಲ್ಲಿ ಆಟಗಳ ಹೆಸರಗಳನ್ನು ಬರೆದು ಇಟ್ಟಿದ್ದರು. ಸ್ಪರ್ಧೆ ಪ್ರಾರಂಭವಾದ ನಂತರ ಮೊದಲ ಸಾಲಿನಲ್ಲಿ ಕುಳಿತಿದ್ದ ನಮ್ಮ ಆರು ಜನ ಸಹಪಾಠಿಗಳನ್ನು ಕರೆದು ಚೀಟಿ ತೆಗೆಯಲು ಹೇಳಿದರು. ಅವರಿಗೆ ಬಂದ ವಿಷಯ ಮೇಕಫ್ ಮಾಡುವದು. ಹೌದು! ಆರು ಜನರಲ್ಲಿ ಮೂರು ಜನ ಕುಳಿತುಕೊಳ್ಳಬೇಕು, ಮೂರು ಜನ ಮೇಕಫ್ ಮಾಡಬೇಕು. ಇಲ್ಲೇ ಬಂದದ್ದು ನೋಡಿ ಅವರಿಗೆ ತಳುಕ. ಎಲ್ಲರೂ ಮೇಕಫ್ ಮಾಡ್ತಿನಿ ಅನ್ನೋರೆ ಆಗಿದ್ದರು. ಮೇಕಫ್ ಮಾಡಿಸಿಕೊಳ್ಳಲು ಯಾರು ಸಿದ್ಧರಿರಲಿಲ್ಲ. ಕೊನೆಗೆ ಅವರ ನಡುವೆ ಹೊಂದಾಣಿಕೆಯಾಗಿ ಮೇಕಫ್ ಮಾಡಿದ್ರು ನೋಡಿ ಏನ್! ಅದ್ಭುತ್ ಅಂತೀರಾ! ನೋಡೋಕೆ ಎರಡು ಕಣ್ಣು ಸಾಲದಾಗಿದ್ದು. ಹೀಗೆ ವಿಭಿನ್ನ ವಿಶಿಷ್ಟ ಕಾರ್ಯಕ್ರಮಗಳನ್ನು ನಡೆಸಿಕೊಟ್ಟು ನಮಗೆ ಮನರಂಜನೆ ಒದಗಿಸಿದರು. ಆದರೆ ಇಷ್ಟೋತ್ತಿಗಾಗಲೇ ಭಾವನೆಗಳ ಕಟ್ಟೆ ಒಡೆದು ಕೆಲವರ ಕಣ್ಣುಗಳು ಜಳಕ ಮಾಡಲು ಶುರುವಿಟ್ಟಿಕೊಂಡವು. ಆದರೆ ಕೆಲವೊಂದಿಷ್ಟು ಜನರು ಏನು ಮಾಡಬೇಕು ಎಂದು ತಿಳಿಯದೇ ಭಾವಾಂತರಂಗದಲ್ಲಿ ಅಲ್ಲೋಲ್ ಕಲ್ಲೋಲಕ್ಕೆ ಒಳಗಾಗಿದ್ದರು.
    ನೀವು ಕೊಟ್ಟ ಆ ಪುಟ್ಟ ಪೋಟೋ. ಮನಸ್ಸಿನ ಪುಟಗಳಿಲ್ಲಿ ಸದಾ ನಲಿದಾಡುತ್ತಿರುತ್ತದೆ. ಆ ಪುಸ್ತಕ್ ನಿಮ್ಮನ್ನು ಸಾದಾ ನೆನಪಿಸುತ್ತಿರುತ್ತದೆ. ಕೊನೆಗೆ ಅದೇ ನೆನಪಿನ ಭಾರದಲ್ಲಿ ಕೊನೆಯಾಗುತ್ತದೆ. ಸೋ..ಥ್ಯಾಂಕ್ಸ ಟು ಆಲ್ ಜೂನಿಯರ‌್ಸ.


Monday, 27 June 2016

ಕಾಗದ ದೋಣಿಯ ಮಾಸದ ನೆನಪು..!

ಮಂಜುನಾಥ ಗದಗಿನ

 
 ಕಡುಕಪ್ಪು ಆಕಾಶದಲ್ಲಿ ಮಿಂಚೂಂದು ಮೂಡಿದಾಗ ಎದೆಯಲ್ಲಿ, ಅದೇನೋ! ಸಂಚಲನ. ಮಾಸಿದ ನೆನಪುಗಳು ಬೇಡವೆಂದರು ತುಂಟ ಮಳೆ ಬೀಡಬೇಕಲ್ಲಾ, ಬಂದು ಮನಸ್ಸಿನಾಳದಲ್ಲಿ ನೆನಪಿನ ತುಂತುರು ಹನಿಗಳನ್ನು ಸುರಿಸಿಯೇ ಹೋಗುತ್ತದೆ. ಹಾಗೆಯೇ ಚಂದದ ಚಿತ್ರವೊಂದನ್ನು ಕಣ್ಮುಂದೆ ತಂದು ನಿಲ್ಲಿಸುತ್ತದೆ. ಮನಸ್ಸು ಕೂಡಾ ತನಗರಿವಿಲ್ಲದೇ ಆ ನೆನಪಿನ ಮಳೆಯಲ್ಲಿ ಜಾರಿ ಹೋಗುತ್ತದೆ.
 ಈಗತಾನೆ ಮಳೆಗಾಲ ಆರಂಭವಾಗಿದೆ. ಬಿಸಿಲಿಗೆ ಬಾಯಿತೆರೆದಿದ್ದ ಭೂತಾಯ ಒಡಲ ಹೊಕ್ಕ ಮಳೆಯ ಹನಿಗಳು ಗಮ್ ಎಂದು ಮಣ್ಣಿನ ಸುವಾಸೆಯನ್ನು ಎಲ್ಲೆಡೆ ಹರಡಿಕೊಂಡಿದೆ. ಇದರೊಟ್ಟಿಗೆ ಬಾಲ್ಯದ ಆ ದಿನಗಳು ಕೂಡಾ ಹೂಡಿ ಎದ್ದು ಮನಸ್ಸಿನಾಳದಲ್ಲಿ ಹೊಸ ಮನ್ಮಂತರನ್ನು ಸೃಷ್ಠಿಸಿ ತೇಲಾಡುತ್ತಿವೆ. ಅದು ಕೂಡಾ ಕಾಗದ ದೋಣಿಯ ನೆನಪಿನೊಂದಿಗೆ.
 ದಟ್ಟ ಕಾರ್ಮೋಡಗಳು ಆಗಸದ ತುಂಬೇಲ್ಲಾ ಹರಡಿಕೊಂಡು ಒಂದಕ್ಕೊಂದು ಜಿದ್ದಿಗೆ ಬಿದ್ದವರ ಹಾಗೆ ತೇಲುತ್ತಿದ್ದರೆ.  ಮಳೆ ಬರುವ ಮುನ್ಸೂಚನೆ ಎಂದು ತಿಳಿದುಕೊಂಡು ಮನೆ ಸೇರುತ್ತಿದ್ದೇವು. ಮಳೆಯ ಹನಿಗಳು ಭೂಮಿಯನ್ನು ತಾಕೀದಾಗ, ಸೂಸುತ್ತಿದ್ದ ಆ ತಣ್ಣನೆಯ ತಂಗಾಳಿಗೆ ಮೈಮನಗಳು ಜಲ್ ಎಂದು ಅವ್ವನ ಸೆರಗಿನ ಹಿಂದೆ ಬೆಚ್ಚಗೆ ಅವಿತುಕೊಳ್ಳುವ ಹಾಗೆ ಮಾಡುತ್ತಿತ್ತು.
  ಹೊರಗಡೆ ಮಳೆಯ ಆರ್ಭಟ ಹೆಚ್ಚಾದಂತೆ, ನಮ್ಮ ಕಾಗದ ದೋಣಿಯ ಆಸೆಗಳು ಗರಿಗೆದರುತ್ತಿದ್ದವು. ನಾನು ನಮ್ಮಕ್ಕ ಪುಸ್ತಕದ ಹಾಳೆಗಳನ್ನು ಕಿತ್ತುಕೊಂಡು, ಕಾಗದ ದೋಣಿಗಳನ್ನು ತಯಾರಿಸಿ ನಾನು ಅವ್ವನ ಮಗನಾಗಿದ್ದರಿಂದ ನಾನು ಅವ್ವ ಹೆಸರು ಬರೆದು ,ಅಕ್ಕ ಅಪ್ಪನ ಹೆಸರು ಬರೆದು ಮನೆಯ ಮುಂದೆ ನಿಂತು ತೇಲಿಬಿಡುತ್ತಿದ್ದೇವು. ಅವುಗಳು ಸಾಗಿದಂತೆ ಅವುಗಳ ಹಿಂದೆ ನಮ್ಮ ಪಯಣವು ಸಾಗುತ್ತಿತ್ತು. ಕಾಗದ ದೋಣಿಗಳು ನಾ ಮುಂದು ತಾ ಮುಂದು ಎಂಬಂತೆ ಸಾಗುತ್ತಿದ್ದರೆ, ನಾವುಗಳು ನನ್ನ ದೋಣಿ ಮುಂದೆ ಸಾಗಲಿ ಎಂದು ಅದರ ಹಿಂದೆ ನೀರು ಚಿಮ್ಮುತ್ತಾ ದೋಣಿಗೆ ವೇಗತುಂಬುತ್ತಿದ್ದೇವು.
 ದೋಣಿಗಳು ಸಾಗಿದಂತೆ ನಮ್ಮ ಹಾರಾಟ ಚಿರಾಟವು ಸಾಗುತ್ತಿತ್ತು. ದೋಣಿಗಳು ಸಾಗಿದಂತೆ ಮುಂದೆ ಇರುತ್ತಿದ್ದ ಕಡ್ಡಿ ಕಸರನ್ನು ಸ್ವಚ್ಚ ಮಾಡುತ್ತಾ, ದೋಣಿಗಳು ಸುಗಮವಾಗಿ ಸಾಗುವಂತೆ ನೋಡಿಕೊಳ್ಳುತ್ತಿದ್ದೇವು. ಅವುಗಳು ನಮ್ಮ ಮನೆಯಿಂದ ಸ್ವಲ್ಪ ದೂರವಿರುವ ಕೆರೆಯನ್ನು ತಲುಪೂರೆಗು ಮಳೆಯನ್ನು ಲೆಕ್ಕಿಸದೇ ಅವುಗಳ ಜೊತೆ ಆಟ ಆಡುತ್ತಾ, ಹೋಗುತ್ತಿದ್ದೇವು. ಒಂದು ವೇಳೆ ಯಾವುದೇ ದೋಣಿ ಮುಗುಚಿದರು ಮತ್ತೊಂದು ದೋಣಿಗೆ ಸಾಥ ನೀಡುತ್ತಿದ್ದೇವು.
 ಇನ್ನೂ ಶಾಲೆಗೆ ಹೋದ ಸಂದರ್ಭದಲ್ಲಿ ಮಳೆ ಬಂದ್ರೆ ಮುಗಿದೆ ಹೋಯಿತು. ನಮ್ಮ ಗೆಳೆಯರೆಲ್ಲರೂ ಗಂಡು ಕಾಗದ ದೋಣಿಗಳನ್ನು ಮಾಡಿ ಬೀಡುತ್ತಿದ್ದರು. ಹೌದು! ದೋಣಿಗಳಲ್ಲಿ ಗಂಡು ಮತ್ತು ಹೆಣ್ಣು ದೋಣಿಗಳಿವೆ. ದೋಣಿಯ ಕೆಳಗೆ ಒಂದು ಮಡಚಿದ ತುದಿ ಬಂದರೆ ಅದು ಗಂಡು ದೋಣಿ, ಇಲ್ಲಾ ಅಂದ್ರೆ ಅದು ಹೆಣ್ಣು ದೋಣಿ. ಹೀಗೆ ಶಾಲೆಯಿಂದ ಬರ‌್ಬೇಕಾದ್ರೆ ದೋಣಿಗಳನ್ನು ರಸ್ತೆ ಪಕ್ಕದ ಚರಂಡಿಯಲ್ಲಿ ಬೀಡುತ್ತಿದ್ದೇವು. ಕೆಲವೊಂದಿಷ್ಟು ಹುಡ್ಗರು ನಿಂತ ನೀರಿನಲ್ಲಿ ಕಲ್ಲಿನ ಕಪ್ಪೆ ಜಿಗಿಸುತ್ತಾ ತಲೆಯ ಮೇಲೆ ಪಾಠಿ ಚೀಲವನ್ನು ಹೊದ್ದುಕೊಂಡು ಮನೆಗೆ ಸಾಗುತ್ತಿದ್ದೇವು. ಆ ಕ್ಷಣಗಳನ್ನು ನೆನೆದ್ರೆ ಮೈ ಮನಸ್ಸುಗಳು ಅರೇ ಕ್ಷಣ ಕಾಗದ ದೋಣಿಯಲ್ಲಿ ಪ್ರಯಾಣಿಸುತ್ತದೆ, ಮನಸ್ಸು ಕಪ್ಪೆಯ ಹಾಗೆ ಜಿಗಿದಾಡುತ್ತದೆ.
    ಮಳೆ ಕೇವಲ ಮಳೆ ಅಲ್ಲ, ಅದು ಬಾನು ಕೂಡಿಟ್ಟ ಭಾವನೆಗಳ ಸೆಲೆ. ಈ ಸೆಲೆಯಲ್ಲೆ ನಮ್ಮಲ್ಲೆರ ಭಾವನೆಗಳು ಆ ಮಳೆಯೊಂದಿಗೆ ಚಲ್ಲಾಟ ಆಡುತ್ತವೆ. ಅಂತಹ ಚಲ್ಲಾಟದ ಒಂದು ಸುಂದರ ನೆನಪೆ ಈ ಕಾಗದ ದೋಣಿಯ ಮಾಸದ ನೆನಪು.


ಆರು ಸರ್ಕಾರಿ ನೌಕ್ರಿ ಪಡೆದ ವಿಕಲಚೇತನ ಸಾಧಕಿ

  ಮಂಜುನಾಥ ಗದಗಿನ -- ಇಂದಿನ ಸ್ಪರ್ಧಾ ತ್ಮಕ ಯುಗದಲ್ಲಿ ಸರ್ಕಾರಿ ನೌಕರಿ ಪಡೆದುಕೊಳ್ಳುವುದು ಎಲ್ಲರ ಕನಸು ಹಾಗೂ ಗುರಿ ಹೌದು. ಆದರೆ, ಸರ್ಕಾರಿ ನೌಕರಿ ಪಡೆಯಬೇಕು...