Sunday, 7 February 2016

ಅನಿವಾರ್ಯತೆ ಕಲಿಸಿದ ಪಾಠ!

  ಅನಿವಾರ್ಯತೆಗಳು ಮನುಷ್ಯನ ಜೀವನವನ್ನು ಏಷ್ಟೊಂದು ಬದಲಾಯಿಸುತ್ತವೆ ಅಲ್ವಾ? ಈ ಶಿಕ್ಷಣವೆಂಬ ಅನಿವಾರ್ಯತೆಗೆ ಕಟ್ಟು ಬಿದ್ದು, ತಿಂದುಂಡು, ಆಡಿ ಬೆಳೆದ ಮನೆ, ಪಾರ್ಶ್ವವಾಯು ಪೀಡಿತ ಅಪ್ಪ, ಕಷ್ಟಗಳಲ್ಲೇ ಕೈತೊಳೆಯುತ್ತಿರುವ ಅವ್ವ, ನನ್ನ ಕಷ್ಟಕ್ಕೆ ಹೆಗಲೊಡ್ಡಿ ಸಾಂತ್ವಾನ ಹೇಳುತ್ತಿದ್ದ ಗೆಳೆಯರು, ಅಕ್ಕರೇಯ ಪ್ರೀತಿ ತೋರಿದ ಚಿಗವ್ವ, ಕಾಕಾನನ್ನು ಬಿಟ್ಟು  ಶಹರದಲ್ಲಿ ಎಲ್ಲವೂ ಇದ್ದು ಏನು ಇಲ್ಲ ಎಂಬಂತೆ ಬದುಕಿದ್ದೇನೆ.
   ನೂರಾರು ಆಸೆ, ಆಕಾಂಕ್ಷೆಗಳನ್ನು ಬೆನ್ನಿಗೆ ಕಟ್ಟಿಕೊಂಡು ಪ್ಯಾಟೆ ಎಂಬ ಪರದೇಶಕ್ಕೆ ಪ್ರವೇಶಿಸಿದೆ. ಶಹರ ಜೀವನ ಬಡವರಿಗಲ್ಲ, ಅದು ದುಡ್ಡಿದ್ದವರ ದುನಿಯಾ ಎಂಬ ಮಾತು ನಮ್ಮ ಹಳ್ಳಿಯಲ್ಲಿ ಪದೇ ಪದೇ ಕೇಳಿ ಬರುತ್ತಿತ್ತು. ಆದರೆ ಆ ಮಾತುಗಳಿಗೆ ಜೀವ ಬಂದದ್ದು, ಶಹರದ ಆರಂಭದ ದಿನಗಳಲ್ಲೆ. ಹಳ್ಳಿಯಲ್ಲಿ ಒಂದು ರೂಪಾಯಿ ಕೊಟ್ಟು ಟೀ ಕೂಡಿಯುತ್ತಿದ್ದ ನಾನು ಶಹರದಲ್ಲಿ ಐದು ರೂಪಾಯಿ ಕೊಟ್ಟು ಟೀ ಕುಡಿಯಲು ಪ್ರಾರಂಭಿಸಿದೆ. ಇನ್ನೂ ಒಂದೊತ್ತಿನ ನಾಸ್ಟಾ, ಊಟಗಳಗಳ ಬೆಲೆ ನಮ್ಮೂರಿನ ಒಂದು ವಾರದ ಸಂತೆಯ ಖರ್ಚಿಗೆ ಸಮವಾಗಿತ್ತು. ಆದರೂ ಒಂದು ಇದ್ದೋ, ಇನ್ನೊಂದು ಇಲ್ಲದೇಯೇ ಶಹರ ಜೀವನಕ್ಕೆ ಒಗ್ಗಿಕೊಂಡೆ. ಯಾಕಂದ್ರೆ ಇದು ಬದುಕಿನ ಅನಿವಾರ್ಯತೆ.
   ಇನ್ನೂ ದಿನ ಬೆಳಗಾದ್ರೆ ಸಾಕು, ಕಾಲೇಜು, ಪ್ರಯಾಣ, ಆ ದೂರದ ದಾರಿ, ಲೆಕ್ಚರ ಹೇಳುವ ಕ್ಲಾಸುಗಳಲ್ಲಿ ಏನಿಲ್ಲವೆಂದರೂ ಹಾಜರಾತಿಗಾಗಿ ಕುಳಿತು ಕೇಳಬೇಕಾದ ಪರಸ್ಥಿತಿ. ಕಾಡು ದೇವರ ಕಾಟ ಕಳೆಯುವ ಹಾಗೆ ಮಾಡುವ ಸಮೀನಾರಗಳು. ಆಟಕ್ಕುಂಟು ಲೆಕ್ಕಕ್ಕಿಲ್ಲ ಎಂಬಂತೆ ಬರೆಯುವ ಟೆಸ್ಟಗಳು, ಕಾರಣಗಳೇ ಇಲ್ಲದೇ ಗೆಳೆಯರೊಂದಿಗೆ ಮಾಡುವ ತರ‌್ಲೆಗಳು, ವಿನಾಃ ಕಾರಣ ಕಾಲು ಕೆದರಿ ಜಗಳಕ್ಕೆ ನಿಲ್ಲುವ ಪರಸ್ಥಿತಿಗಳು, ಗೊತ್ತಿದ್ದೋ..ಗೋತ್ತಿಲ್ಲದೇಯೋ.. ಹುಡ್ಗಿಯನ್ನು ಹಿಂಬಾಲಿಸುವ ಮನಸ್ಸು, ಪ್ರತಿದಿನ ಕಣ್ಣಂಚಲಿ ಮೂಡುವ ಅವ್ವ ನೆನಪುಗಳು ನನ್ನ ಬದುಕು ಸೃಷ್ಠಿಸಿರುವ ಅನಿವಾರ್ಯತೆಗಳು.
  ರಜೆಗೆಂದು ಊರಿಗೆ ಹೋದಾ, ಇನ್ನೂ ನಿಂದು ಸಾಲಿ ಕಲಿಯೋದು ಮುಗಿದಿಲ್ಲ, ಏನ್. ಹಂಗ್ ಎಷ್ಟ ವರಷ ಸಾಲಿ ಕಲ್ತಿ. ಪಾಪಾ ನಿಮ್ಮ ಅವ್ವ ಹಂಗ್ ಎಷ್ಟ ವರುಷ ನಿಮ್ಮಪ್ಪ ಚಾಕರಿ ಮಾಡ್ಕೊಂತ ಇರ‌್ಬೇಕು. ಪಾಪಾ ಆ ಜೀವಕ್ಕ ಸುಖ ಅನ್ನೋದೆ ಇಲ್ಲ. ನಿಮ್ಮಪ್ಪ ನೋಡಿದ್ರ ದಿನ ಬೆಳಗಾದ್ರ ಸಾಕ, ಅವಳ್ನ ಕಾಡ್ತಾಯಿರ‌್ತಾನ. ಇನ್ನ ನಿಮ್ಮವ್ವ ಅತ್ತಗ ನಿಮ್ಮಪ್ಪನ ಚಾಕರಿನು ಮಾಡ್ಬೇಕು. ಇತ್ತಾಗ ದುಡಕಿನು ಮಾಡ್ಬೇಕು. ಎಂದು ಜನರ ಹೇಳಿದಾಗ ಕಣ್ಣುಗಳು ಒದ್ದೆಯಾಗುತ್ತವೆ. ಅವರ ಪ್ರಶ್ನೆಗಳಿಗೆ ಉತ್ತರಿಸದೇ ಸುಮ್ಮನಾಗುತ್ತೇನೆ ಯಾಕಂದ್ರೆ ಇದು ನನ್ಗೆ ನಾನೇ ತಂದುಕೊಂಡ ಅನಿವಾರ್ಯತೆ.
  ಇನ್ನೂ ಕೆಲವೇ ದಿನಗಳಲ್ಲಿ ವಿದ್ಯಾರ್ಥಿ ಜೀವನ ಕೊನೆಯಾಗುತ್ತಿದೆ. ಇನ್ನೇನಿದ್ದರೂ ಬದುಕು ಕಲಿಸುವ ಪಾಠ ಕಲಿಯಲು ಸಿದ್ಧವಾಗಬೇಕಾಗಿದೆ. ಅಷ್ಟೇ ಅಲ್ಲದೇ ಭವಿಷ್ಯದ ಬಗೆಗಿನ ಸಾವಿರಾರು ಆಸೆಗಳು, ಆಕಾಂಕ್ಷೆಗಳು ಕೈಗೂಡುವ ಸಮಯ. ಆದರೆ ಈಗ ನನ್ನ ಬದುಕಿಗೆ ಅನಿವಾರ್ಯವಾದದ್ದು ಒಂದು ಉತ್ತಮ ಕೆಲಸ ಅದು ಸುದ್ದಿ ಮನೆಯಲ್ಲಿ ಸದ್ದು ಮಾಡುವ ಕೆಲಸ.ಈ  ಕೆಲಸಕ್ಕಾಗಿ ಎಂತಹ ಅನಿವಾರ್ಯತೆಗಳನ್ನು ಸೃಷ್ಠಿಸಲು ಸಿದ್ಧ, ಎದುರಿಸಲು ಸಿದ್ಧ ಯಾಕಂದ್ರೆ ಅನಿವಾರ್ಯತೆಗಳು ನನ್ನನ್ನು ಗಟ್ಟಿಯಾಗಿಸಿವೆ.
ಮಂಜುನಾಥ ಗದಗಿನ
8050753148





No comments:

Post a Comment

ಆರು ಸರ್ಕಾರಿ ನೌಕ್ರಿ ಪಡೆದ ವಿಕಲಚೇತನ ಸಾಧಕಿ

  ಮಂಜುನಾಥ ಗದಗಿನ -- ಇಂದಿನ ಸ್ಪರ್ಧಾ ತ್ಮಕ ಯುಗದಲ್ಲಿ ಸರ್ಕಾರಿ ನೌಕರಿ ಪಡೆದುಕೊಳ್ಳುವುದು ಎಲ್ಲರ ಕನಸು ಹಾಗೂ ಗುರಿ ಹೌದು. ಆದರೆ, ಸರ್ಕಾರಿ ನೌಕರಿ ಪಡೆಯಬೇಕು...