ನಮ್ಮದು ಚಿಕ್ಕ ಹಳ್ಳಿ, ಜೀವನ ಶೈಲಿಯಲ್ಲಿ ಆಡಂಬರವಿಲ್ಲ, ಇದದ್ದರಲ್ಲೆರ ಎಲ್ಲವನ್ನೂ ನಿಭಾಯಿಸಿಕೊಂಡು
ತೃಪ್ತಿಕರ ಜೀವನ ನಡೆಸುತ್ತಿರುವ ಬಡ ಜೀವಗಳು. ಕಾಯಕವೇ ಕೈಲಾಸ ಎಂದು ದುಡಿಯುವ ದೇಹಗಳು. ಬೆಳ್ಳಿಗೆ ಆಯ್ತೆಂದರೆ, ಏ ಮಲ್ಲವ್ವ, ಏ ಕಲ್ಲವ್ವ ಬೇಗ ಬೇಗ ಬರ‌್ರೆ, ಬಂಡಿ ಹೊಂಡೈಯಿತಿ. ದಗುಡ ಬರದ ಹೋದರ ಬಿಟ್ಟ ಹೋಗತ್ತಿವ ನೋ! ಹೇ ತಡಿರ ಯಕ್ಕಾ ಅಷ್ಟೊಂದು ಅವಸರಾ ಯಾಕ ಮಾಡಾಕತ್ತಿ? ಬುತ್ತಿ ಕಟ್ಟಕೊಳ್ಳಾಕತ್ತಿನಿ ನಿಂದ್ರ, ಎನ್ನುವ ಮಲ್ಲವ. ಆತವಾ ಲಗುನ ಬಾ! ಮುಂಜಾನೆ ಇಂತಹ ಮಾತುಗಳು ಹಳ್ಳಿಗಳಲ್ಲಿ ಸರ್ವೆಸಾಮಾನ್ಯವಾಗಿ ಕೇಳುತ್ತಿದೆ.
ಮುಂಜಾನೆಯಿಂದ ಸಾಯಂಕಾಲದವರೆಗೆ ದುಡಿದು, ನಗು ಮೊಗದಿ ಬರುವ ಅವರ ಮುಖ ಹುಣ್ಣಿಮೆಯ ಚಂದ್ರನಂತೆ ಲಕಾ,ಲಕಾ ಹೊಳಿಯುತ್ತಿದ್ದವು. ಬಂದ ತಕ್ಷಣ ಗಂಡನ ಬೇಕು ಬೇಡಗಳನ್ನು ಆಲಿಸಿಕೊಂಡು, ಸ್ಪಂದಿಸುವ ಹೃದಗಳು ಅಲ್ಲಿದ್ದವು. ಪ್ರತಿದಿನ ರಾತ್ರಿ ಹುಣ್ಣಿಮೆ ಚಂದ್ರ ಬರುತ್ತಿದ್ದ. ಈ ಸಮಯದಲ್ಲಿ ದುಡಿದು ಬೆಸತ್ ಜೀವಗಳು ಪಕ್ಕದ ಮನೆಗೆ ಹೋಗಿ ತಮ್ಮ ಸುಖ, ದುಖಃ ಹಂಚಿಕೊಳ್ಳುತ್ತಿದ್ದವು. ಅಲ್ಲಿ ದುಖ:. ದುಮ್ಮಾನ, ಹಾಸ್ಯ ಎಲ್ಲವೂ ತುಂಬಿಕೊಂಡಿರುತ್ತಿತ್ತು. ಗಂಡಸರು, ಬಜಾರ, ಗುಡಿ ಕಟ್ಟೆಗಳಲ್ಲಿ ಕುಳಿತುಕೊಂಡು ಹರಟೆ ಹೊಡೆಯುತ್ತಾರೆ.
ಇನ್ನೂ ಯಾರಿಗಾದರೂ, ತೊಂದರೆಯಾದರೆ ಮಮಲ ಮರಗುವ ಜನ. ನೆರೆ-ಹೊರೆಯವರಂತು ಬಂಧುಬಳಗಗಿಂತ ಹೆಚ್ಚಾಗಿ ಪ್ರೀತಿ, ವಾತ್ಸಲ್ಯ ತೋರಿಸುತ್ತಾರೆ. ಇವು ನಾನು ಕಂಡು ನೋಡಿದ ಹಳ್ಳಿ ಜೀವನ.
ಹೆಚ್ಚಿನ ವ್ಯಾಸಂಗಕ್ಕಾಗಿ ಧಾರವಾಡಕ್ಕೆ ಬಂದೆ. ನಗರ ಜೀವನ ಕಂಡಿರದ ನಾನು, ಹೇಗಪ್ಪಾ ಎಲ್ಲಿ ಇರುವದು? ಎಂದುಕೊಂಡೆ. ಇಲ್ಲಿನ ವಾತಾವರಣ, ಊಟ ನನಗೆ ಹೊಂದಾಣಿಕೆ ಆಗಲಿಲ್ಲ. ಆದರೂ ಇರಲೇ ಬೇಕಾದ ಅನಿವಾರ್ಯತೆ.
ನಮ್ಮ ಭಾಷೆಗೂ, ಇಲ್ಲಿಯ ಭಾಷೆಗೂ ಸ್ವಲ್ಪ ವ್ಯತ್ಯಾಸ ಇದದ್ದು ಕಂಡುಕೊಂಡೆ. ಇನ್ನೂ ವೇಷ ಭೂಷಣ ಅಯೋ ದೇವರೆ! ಎಂದುಕೊಂಡೆ. ನಮ್ಮಲ್ಲಿ ಗಂಡಸರು ಪಂಚೆ, ಹೆಂಗಸರು ಇರಕಲ್ ಸೀರೆ ಉಟ್ಟಕೊಂಡ ಬರತ್ತಾ ಇದ್ದರ ಶಿವ-ಪಾರ್ವತಿ ನೋಡಿದ ಅನುಭವ. ಇಲ್ಲೂ ಶಿವ, ಶಿವಾ! ಒಂದು ದಿನಾ ನಾಲ್ಕೈದು ಹುಡುಗಿಯರು ಅರ್ಧಮರ್ಧ ಬಟ್ಟೆ ಹಾಕೊಂಡು ಬರ್ತಾಯಿದ್ದರೂ, ಅದನ್ನು ನೋಡಿದ ನಾನು ಅಯ್ಯೋ! ಪಾಪ ಅವರ ಮನೆಯಲ್ಲಿ ಹಾಕೊಳ್ಳಾಕ ಬಟ್ಟೆ ಕೊಡಿಸಿಲ್ಲಾ ಎಂದು ನನ್ನ ಗೆಳೆಯನಿಗೆ ಹೇಳಿದೆ. ಅವನು ಹಾಗಲ್ಲಾ ಲೇ ಅದು ಈಗಿನ ಪ್ಯಾಶನ್ ಎಂದ. ಇರಬಹುದು ಎಂದು ತಲೆ ಅಲ್ಲಾಡಿಸಿದೆ.
ಇನ್ನೂ ಬೆಳ್ಳಿಗೆ ಆಫೀಸಿಗೆ ಹೋಗುವ, ಅಂಕಲ್-ಆಂಟಿ ರೋ! ದೇವದೇವಾ! ಅವಸರದಲ್ಲೇ ಹುಟ್ಟಿದ್ದಾರೆನೋ ಎಂಬಂಹ ಅವಸರ. ತಾವು ರೆಡಿ ಆಗುವ ಸಂಭ್ರಮದಲ್ಲಿ ಮಗು ಅಳತ್ತಾ, ಇದ್ದರು ಸಹ ಚಿನ್ನು, ಪಪ್ಪಿ, ಪಿಂಕಿ, ಮುದ್ದು ಸುಮ್ಮನಿರು, ನನಗೆ ಆಪೀಸಗೆ ಲೆಟ್ ಆಗಿದೆ. ನೀ ಬೇರೆ ಅಳತ್ತಾ ಇದ್ದಿಯಾ, ಸುಮ್ಮನಾಗು ಎಂದು ಗೊಣಗುತ್ತಾ, ಬಾಯ್ ಬಾಯ್ ಎಂದು ಹೊರಟೆ ಹೋಗುತ್ತಾರೆ. ಆ ಮಗು ಮಮ್ಮಿ, ಡ್ಯಾಡಿ ಎಂದೇ ಅಳತ್ತಾ ಇರುತ್ತೆ. ಆಪೀಸನ ಕೆಲಸ ಮುಗಿಸಿ ಮನೆಗೆ ಹೋಗುವಾಗ ಅವರ ಮುಖ ಸುಟ್ಟ ಬದನೆಕಾಯಿ ಆಗಿರುತ್ತೆ. ಮನೆಗೆ ಬಂದವರೇ, ಬಾಗಿಲು ಹಾಕಿಕೊಂಡು ಒಳಗೆ ಕುಳಿತ್ತರೆ ಮುಗಿದೆ ಹೊಯ್ತಿ, ಮತ್ತೆ ಹೊರಗೆ ಬರುವುದು ಮರುದಿನ ಅದೇ ಗಡಿಬಿಡಿಯಲ್ಲೇ.
ರಾತ್ರ ಆಯ್ತಿ ಎಂದರೆ ದೇವಲೋಕವೇ ಧರೆಗಿಳಿದ ಅನುಭವ. ಜಗಮಗಿಸುವ ಕಟ್ಟಡಗಳು, ಗೀಜುಗೂಡುವ ರಸ್ತೆಗಳು, ಎಲ್ಲಿ ನೋಡಿದರು ಗೋಬಿ , ನ್ಯೂಡಲ್ಸ, ಪಾನಿಪುರಿ ಅಂಗಡಿಗಳ ಸಾಲು. ಇವುಗಳನ್ನು ತಿಂದು ಬಾಯಿ ಚಪ್ಪರಿಸುವ ಜನ. ನಿಜಕ್ಕೂ ಸ್ವರ್ಗಕ್ಕೆ ಕಿಚ್ಚು ಹಚ್ಚುವ ವಾತಾವರಣ.
No comments:
Post a Comment