ಮಂಜುನಾಥ ಗದಗಿನ
ಕರ್ನಾಟಕ ಏಕೀಕರಣದಲ್ಲಿ ನಾಡಿನ ಅನೇಕ ನೇತಾರರು,
ಸಾಹಿತಿಗಳು, ಕನ್ನಡಾಭಿಮಾನಿಗಳು ತಮ್ಮ ತನು, ಮನಗಳನ್ನು ಅರ್ಪಿಸಿದ್ದಾರೆ. ಇವುಗಳೊಟ್ಟಿಗೆ ನಾಡಿನ
ಮಠಗಳು ಏಕೀಕರಣದಲ್ಲಿ ತಮ್ಮ ಅನನ್ಯ ಸೇವೆಯನ್ನು ಸಲ್ಲಿಸಿವೆ. ಅವುಗಳಲ್ಲಿ ಬೆಳಗಾವಿಯ ನಾಗನೂರ ಮಠ ಹಾಗೂ
ಕಾರಂಜಿ ಮಠಗಳು ಪ್ರಮುಖವಾದವುಗಳು.
ನಾಗನೂರು ಮಠದ ಡಾ. ಶಿವಬಸವ ಸ್ವಾಮೀಜಿ ಕನ್ನಡ ಹಾಗೂ
ಕರ್ನಾಟಕಕ್ಕೆ ಸಲ್ಲಿಸಿದ ಸೇವೆ ಅನನ್ಯ. ಕರ್ನಾಟಕ ಏಕೀಕರಣ ಸಂದರ್ಭದಲ್ಲಿ ಕನ್ನಡಪರ ಚಟುವಟಿಕೆಗಳನ್ನು
ತೀವ್ರಗೊಳಿಸಿ, ಕನ್ನಡದ ಕಿಚ್ಚನ್ನು ಹೆಚ್ಚಿಸಿದ ಶ್ರೇಯಸ್ಸು ಶ್ರೀಗಳಿಗೆ ಸಲ್ಲುತ್ತದೆ.
ಕನ್ನಡ ಏಕೀಕರಣ ಹೋರಾಟದ ಸಂದರ್ಭದಲ್ಲಿ ಶ್ರೀಗಳು
ಹೋರಾಟಗಾರರಿಗೆ ಶ್ರೀಮಠದಲ್ಲಿ ಆಶ್ರಯ ನೀಡಿ, ಅವರಿಗೆ ತುತ್ತು ಅನ್ನ ಹಾಕಿ ಹೋರಾಟಕ್ಕೆ ಅಣಿಗೊಳಿಸುತ್ತಿದ್ದರು.
ಎಷ್ಟೋ ಬಾರಿ ತಮ್ಮ ಜೋಳಿಗೆಯ ಮೂಲ ಭಿಕ್ಷೆ ಬೇಡಿ ಹೋರಾಟಗಾರರಿಗೆ ಉಣಬಡಿಸಿದ್ದಾರೆ.
ಅದು ೧೯೪೭ರ ಸಮಯ ಬ್ರಿಟಿಷ್ ಸರ್ಕಾರ ಭಾರತಕ್ಕೆ
ಸ್ವಾತಂತ್ರ್ಯ ಕೊಟ್ಟು ಹೋಗಿತ್ತು. ಅದಾಗಲೇ ಎಲ್ಲೆಡೆ ಭಾಷಾವಾರು ಪ್ರಾಂತ್ಯಗಳ ರಚನೆಯ ಕೂಗು ಎಲ್ಲೆಡೆ
ಹರಡಿತ್ತು. ಈ ಸಂದರ್ಭದಲ್ಲಿ ಗಡಿನಾಡಿನಲ್ಲಿ ಕನ್ನಡದ ಬಗ್ಗೆ ಜಾಗೃತಿ ಮೂಡಿಸಿದರು. ನಾಡಿನ ಹೆಸರಾಂತ
ವಿದ್ವಾಂಸರನ್ನು, ಸಾಹಿತಿಗಳನ್ನು, ಕಲಾವಿದರನ್ನು ಬೆಳಗಾವಿಗೆ ಬರಮಾಡಿಕೊಂಡು ಅವರ ಮೂಲಕ ಬೆಳಗಾವಿ
ಮತ್ತು ಹೊಂದಿಕೊಂಡ ಗಡಿಭಾಗಗಳ ಕನ್ನಡಿಗರಲ್ಲಿ ನಾಡು, ನುಡಿಯ ಬಗ್ಗೆ ಪ್ರೀತಿ ಉಕ್ಕುವಂತೆ ಮಾಡಿದರು.
ಏಕೀಕರಣ ಸಂದರ್ಭದಲ್ಲಿ ತಲೆ ಎತ್ತಿದ ಭಾಷಾ ವಿವಾದದ
ಫಲವಾಗಿ ‘ಮಹಾರಾಷ್ಟ್ರ ಏಕೀಕರಣ ಸಮಿತಿ’ ಅಸ್ತಿತ್ವಕ್ಕೆ ಬಂದಿತು. ಇದರಿಂದ ಗಾಬರಿಗೊಂಡ ಈ ಭಾಗದ ಕನ್ನಡಿಗರು
ಕನ್ನಡ ಕಟ್ಟುವ ಕಾರ್ಯ ಅಣಿಯಾದರು. ಭಾಷಾವಾರು ಪ್ರಾಂತ್ಯ ರಚನೆಯ ಹಿನ್ನೆಲೆಯಲ್ಲಿ ಫಜಲ್ ಅಲಿ ಆಯೋಗ
ಮಾಹಿತಿ ಮತ್ತು ಮನವಿ ಸಂಗ್ರಹಣೆಗಾಗಿ ಬೆಳಗಾವಿಗೆ ಬಂದಾಗ ಕನ್ನಡ ಸಂಘ, ಸಂಸ್ಥೆಗಳು ಮನವಿ ಸಲ್ಲಿಸಿದವು.
ಮರಾಠಿ ಸಂಘ, ಸಂಸ್ಥೆಗಳು ಹಿಂದುಳಿಯಲ್ಲಿಲ್ಲ. ಬೆಳಗಾವಿ ಜಿಲ್ಲೆಯು ಸಮಗ್ರವಾಗಿ ಕರ್ನಾಟಕದಲ್ಲೇ ಉಳಿಯಬೇಕೆಂಬ
ದೃಢ ನಿರ್ಧಾರ ಕನ್ನಡ ಸಂಘ, ಸಂಸ್ಥೆಗಳದಾಗಿತ್ತು. ಶಿವಬಸವ ಸ್ವಾಮೀಜಿ ಸಲ್ಲಸಿದ ಮನವಿ ಅತ್ಯಂತ ಪ್ರಭಾವಶಾಲಿಯಾಗಿತ್ತು.
ಬೆಳಗಾವಿ ಯಾವಾಗಲೂ ಕನ್ನಡಿಗರದ್ದೆ. ಹಿಂದು ಮತ್ತು
ಮುಸ್ಲಿಂ ಅರಸರ ಆಳ್ವಿಕೆಯಲೂ ಇದು ಕನ್ನಡ ನಾಡಿನ ಹಿಂದು ಮತ್ತು ಅರಸರ ಆಳ್ವಿಕೆಯಲ್ಲಿ ಇದು ಕನ್ನಡ
ನಾಡು ಒಂದು ಪಟ್ಟಣವಾಗಿತ್ತು. ಮರಾಠಿಗಳು, ಪೇಶ್ವೆಯವರು ಕನ್ನಡನಾಡಿನ ಕೆಲವು ಭಾಗಗಳನ್ನು ಆಳುವಾಗ
ಕೂಡ ಇದು ಈ ಭಾಗದ ಆಡಳಿತ ಕೇಂದ್ರವಾಗಿತ್ತು. ಇಲ್ಲಿಯ ಮೂಲ ವ್ಯಾಪಾರಿಗಳು, ಉದ್ಯೋಗಿಗಳು ಮನೆತನಗಳು
ಕನ್ನಡಿಗರದ್ದಾಗಿವೆ. ಈ ವ್ಯಾಪಾರ ಕೇಂದ್ರಕ್ಕೆ ಬರುವ ಮಾಲು ಕರ್ನಾಟಕದ ಜಿಲ್ಲೆಗಳಿಂದ ಮತ್ತು ಇದೇ
ಜಿಲ್ಲೆಯ ತಾಲೂಕು, ಹಳ್ಳಿಗಳಿಂದ. ಈಗ ಸಾಕ್ಷಿ ಹೇಳಲು ಬರುತ್ತಿರುವ ಮಾರಾಠಿ ಮುಖಂಡರು ಇತ್ತೀಚಿಗೆ
ಬಂದು ನೆಲೆಸಿದವರು. ಎಂದು ಪ್ರತಿಪಾದಿಸಿದರು. ಇದನ್ನು
ಸ್ವಾತಂತ್ರ್ಯ ಹೋರಾಟಗಾರ ರಂಗನಾಥ ದಿವಾಕರ,
ಸ್ವಾತಂತ್ರ್ಯ ಯೋಧ ಹಾಗೂ ಕರ್ನಾಟಕ ಏಕೀಕರಣ ಹೋರಾಟದಲ್ಲಿ ಮುಂಚೂಣಿಯಲ್ಲಿದ್ದ ಗ್ಲುೆಪ್ಪ ಹಳ್ಳಿಕೇರಿ
ಅವರು ಶ್ರೀಗಳ ವಾದವನ್ನು ಇಂಗ್ಲಿಷ್‌ಗೆ ಭಾಷಾಂತರಿಸಿ ಹೇಳಿದರು.
ಶ್ರೀಗಳ ವಾದವನ್ನು ಆಯೋಗ ಆಸಕ್ತಿಯಿಂದ ಆಲಿಸಿತು
ಮತ್ತು ಅವರನ್ನು ತುಂಬು ಗೌರವದಿಂದ ಕಂಡಿತು. ಇದರಿಂದ ೧೯೫೬ ನವೆಂಬರ್ ೧ ರಂದು ಕರ್ನಾಟಕ ರಾಜ್ಯ ಉದಯವಾಯಿತು.
ನಂತರ ಬೆಳಗಾವಿ ಒಂದು ಜಿಲ್ಲಾ ಕೇಂದ್ರವಾಯಿತ. ಕನ್ನಡ
ವಿರೋಧಿಗಳು ಕರಾಳ ದಿನ ಆಚರಿಸಿದರ. ಮರಾಠಿ ಪರ ಜನರು ಅಂಗಡಿ, ಮುಂಗಟ್ಟುಗಳಿಗೆ ಬೆಂಕಿ ಹಚ್ಚಿ, ಧಾಂದಲೆ
ಎಬ್ಬಿಸಿದರು. ಕಂಡಲ್ಲಿ ಗುಂಡಿಕ್ಕುವ ಆಜ್ಞೆ ಹೊರ
ಬಿತ್ತು. ಸಮಯದಲ್ಲಿ ಶ್ರೀಗಳ ಕನ್ನಡಪರ ಕಳಕಳಿ ಇದ್ದ ಶ್ರೀಗಳ ಪ್ರಾಣಕ್ಕೆ ಆಪತ್ತು ಎದುರಾತು. ಪುಂಡರ
ಕಣ್ಣು ಶ್ರೀಮಠದ ಪ್ರಸಾದ ನಿಲಯದ ಮೇಲೂ ಬಿದ್ದು, ಈ ಸಮಯದಲ್ಲಿ ಪೊಲೀಸರು ಶ್ರೀಗಳಿಗೆ ರಕ್ಷಣೆ ನೀಡಿದರು.
ಭಕ್ತ ಒತ್ತಾಯದ ಮೇರೆಗೆ ಶ್ರೀಗಳು ಕೆಲವು ದಿನಗಳ ಕಾಲ ಹುಬ್ಬಳ್ಳಿ ಮತ್ತು ಹಿರೇ ಬಾಗೇವಾಡಿಯಲ್ಲಿ ತಮ್ಮ
ಭಕ್ತರ ಮನೆಯಲ್ಲಿ ಆಶ್ರಯ ಪಡೆದರು.
ಕೆಲವು ದಿನಗಳ ನಂತರ ಇದು ತನ್ನಗಾಯಿತು. ಆ ಮೇಲೆ
ಕರ್ನಾಟಕ-ಮಹಾರಾಷ್ಟ್ರ ಗಡಿ ಸಮಸ್ಯೆಗೆ ಸಂಬಂಧಿಸಿದಂತೆ ಭಾರತ ಪ್ರಧಾನ ನ್ಯಾಯಾಧೀಶರಾಗಿದ್ದ ಮೆಹರಚಂದ
ಮಹಾಜನ್ ಅವರ ನೇತೃತ್ವದಲ್ಲಿ ಆಯೋಗ ನೇಮಕಗೊಂಡಾಗ ಶ್ರೀಗಳು ಸ್ಪಷ್ಟ ಮಾತುಗಳಿಗಳಲ್ಲಿ ‘ಬೆಳಗಾವಿ ಎಂದೆಂದೂ
ಕರ್ನಾಟಕದ್ದು, ಗಡಿ ವಿವಾದ ಮುಗಿದು ಹೋದ ಅಧ್ಯಾಯ ಅದನ್ನು ಮತ್ತೆ ಕೆದಕಬಾರದು ಎಂದು ಹೇಳಿದರು. ಇದಾದ
ನಂತರ ಬೆಳಗಾವಿ ಕರ್ನಾಟಕದಲ್ಲೇ ಉಳಿಯಿತು. ಈ ಶ್ರೇಯಸ್ಸು ನಾಗನೂರು ಮಠಕ್ಕೆ ಸಂಧಿತು.
ನಾಡಿನ ಜನತೆ ಶ್ರೀಗಳನ್ನು ತುಂಬು ಮನದಿಂದ ಅಭಿನಂದಿಸಿದರು.
ಇದಾಗಿ ೫೦ ವರ್ಷಗಳ ನಂತರ ಸುವರ್ಣ ಕರ್ನಾಟಕ ವರ್ಷಾಚರಣೆ ಸಂಭ್ರಮದಲ್ಲಿ ಸರ್ಕಾರ ಶ್ರೀಮಠಕ್ಕೆ ‘ಏಕೀಕರಣ
ಪ್ರಶಸ್ತಿ ನೀಡಿ ಗೌರವಿಸಿತು.
ಈಗಲೂ ಕೂಡಾ ನಾಗನೂರ ಮಠ ಹಲವಾರು ಕನ್ನಡ ಶಾಲೆಗಳನ್ನು
ಸ್ಥಾಪಿಸಿ, ಈ ಮೂಲಕ ಕನ್ನಡ ಕಟ್ಟುವ ಕಾರ್ಯದಲ್ಲಿ ತೊಡಗಿಕೊಂಡಿದೆ. ಅಷ್ಟೇ ಅಲ್ಲದೇ ಕರ್ನಾಟಕ, ಮಹಾರಾಷ್ಟ್ರ
ನಡುವೆ ಸಾಂಸ್ಕೃತಿಕ ರಾಯಭಾರಿಯಾಗಿ ಕೆಲಸ ಮಾಡುತ್ತಿದೆ. ಈಗ ಸಿದ್ಧರಾಮ ಶ್ರೀ ಮಠವನ್ನು ಮುನ್ನಡೆಸುತ್ತಿದ್ದಾರೆ.