ಕಲೆ ಕಲಾವಿದನ ಸ್ವತ್ತು. ಇದು ಎಲ್ಲರಿಗೂ ಸಿದ್ದಿಸುವಂತಹದ್ದು ಅಲ್ಲ. ಕಲೆ ಒಲಿಯಬೇಕಾದರೆ ಶ್ರದ್ಧೆ,
ಏಕಾಗ್ರತೆ ಅವಶ್ಯಕ. ಇಂತಹ ಚಿತ್ರಕಲೆಯನ್ನು ಗುರುವಿಲ್ಲದೇ ಶ್ರದ್ಧೆ ಮೂಲಕ ಒಳವಡಿಸಿಕೊಂಡಿದ್ದಾರೆ
ಪ್ರಭಾಕರ ಗೌಡ.
ಹೌದು! ಕಲೆ ಕಲಿಯಬೇಕಾದರೆ ಗುರು ಬೇಕಂತಿಲ್ಲ. ಶ್ರದ್ಧೆ, ಆಸಕ್ತಿ ಇದ್ದರೆ ಸಾಕು. ಪ್ರಭಾಕರ ಗೌಡ
ಅವರು ಅಷ್ಟೇ ಚಿಕ್ಕ ವಯಸ್ಸಿನಲ್ಲಿ ಪುಸ್ತಕಗಳಲ್ಲಿ ಇರುತ್ತಿದ್ದ ಚಿತ್ರಗಳನ್ನು ನೋಡಿಕೊಂಡು ಅವುಗಳ
ತರಹ ಬಿಡಿಸಿಯೇ ಇಂದು ನಾಲ್ಕು ಜನ ಮೆಚ್ಚುವ ಒಳ್ಳೆಯ ಪೆನ್ಸಿಲ್ ಕಲಾವಿದರಾಗಿದ್ದಾರೆ. ಇವರು ಚಿತ್ರಿಸುವ
ಚಿತ್ರಗಳು ನೋಡುಗರನ್ನು ಮಂತ್ರ ಮುಗ್ಧರನ್ನಾಗಿಸುವುದರಲ್ಲಿ ಎರಡು ಮಾತಿಲ್ಲ.


ಬಾಹುಚಿತ್ರ ಬಿಡುಗಡೆ ಸಂದರ್ಭದಲ್ಲಿ ಇವರು ಚಿತ್ರಿಸಿದ ಅನುಷ್ಕಾ ಹಾಗೂ ಪ್ರಭಾಸ ಅವರ ರೋಮ್ಯಾಂಟಿಕ್
ಚಿತ್ರವನ್ನು ಪ್ರಭಾಸ ಅವರೇ ತಮ್ಮ ಫೆಸ್ಬುಕ್‌ನಲ್ಲಿ ಅಪಲೋಡ ಮಾಡಿದ್ದಾರೆ. ಇವರ ಕಲೆ ಮೆಚ್ಚಿ ಹವಾರು
ಅಭಿಮಾನಿಗಳು ಇವರಿಗೆ ಭೇಷ್ ಎಂದಿದ್ದಾರೆ. ಮುಂದಿನ ದಿನಗಳಲ್ಲಿ ಪೆಂಟ್ ಆರ್ಟ್ ಮಾಡಬೇಕು ಎಂಬುವುದು
ಪ್ರಭಾಕರ ಅವರ ಆಸೆಂವಾಗಿದೆ. ಇವರು ಒಬ್ಬ ವ್ಯಕ್ತಿಯನ್ನು ಆ ವ್ಯಕ್ತಿ ಇದ್ದ ಹಾಗೇ ಚಿತ್ರಿಸುತ್ತಾರೆ.
ಇದು ಅವರಿಗೆ ಒಲಿದ ಅದ್ಭುತ್ ಶಕ್ತಿ ಎಂದರೆ ತಪ್ಪಾಗಲಾರದು. ಅಷ್ಟೇ ಅಲ್ಲದೇ ಮುಂದಿನ ದಿನಗಳಲಿ ಅವಕಾಶ
ಸಿಕ್ಕರೆ ಚಿತ್ರಕಲಾ ಪ್ರದರ್ಶನ ಏರ್ಪಡಿಸುವ ಇರಾದೆಯನ್ನು ಪ್ರಭಾಕರ ಗೌಡ ಹೊಂದಿದ್ದಾರೆ. ಅವರ ಈ ಪೆನ್ಸಿಲ್
ಸ್ಕೆಚ್‌ಗೆ ಇನ್ನೂ ಹೆಚ್ಚು ಅಭಿವೃದ್ಧಿ ಹೊಂದಲಿ. ಅವರಿಗೆ ಅವರ ಕಲೆ ಪ್ರದರ್ಶನಕ್ಕೆ ಸೂಕ್ತ ವೇದಿಕೆ
ಒದಗಲಿ ಎಂಬುವುದು ಕಲಾ ಅಭಿಮಾನಿಗಳ ಆಶಯ.
No comments:
Post a Comment