ಮಂಜುನಾಥ ಗದಗಿನ ಜೀವನದಲ್ಲಿ ಮೂರ್ಖ ಆಗೋದು ಎಷ್ಟೋಂದು ಸುಲಭ ಅಲ್ವಾ! ಸಮಯ ಸಂದರ್ಭಗಳು ನಮ್ಮನ್ನು ಮೂರ್ಖರನ್ನಾಗಿಸಿದ್ರೆ, ಮತ್ತೊಂದಿಷ್ಟು ಸಾರಿ ನಮ್ಮ ಮಹಾನ ಬುದ್ದಿಮತ್ತೆಯಿಂದ ಮಹಾನ ಮೂರ್ಖರಾಗಿರುತ್ತೇವೆ. ಅದರಲ್ಲೂ ಮೂರ್ಖರಲ್ಲಿ ನಾನಾ ಮೂರ್ಖರಿದ್ದಾರೆ. ಮೂರ್ಖ, ಶತಮೂರ್ಖ, ಅಡ್ಡ್ನಾಡಿಮೂರ್ಖ, ಹೀಗೆ ಮೂರ್ಖತನದ ಆಳವನ್ನು ಬಗೆದಷ್ಟು ನಾವೇ ಮೂರ್ಖರಾಗುತ್ತೇವೆ. ನಮ್ಮ ಮೂರ್ಖತನವನ್ನು ನೆನೆಸಿಕೊಳ್ಳಲೆಂದೆ ಏ.1 ನ್ನು ಮೂರ್ಖರ ದಿನವನ್ನಾಗಿ ಆಚರಿಸುತ್ತಿದ್ದಾರೆ. ಈ ಸಂದರ್ಭದಲ್ಲಿ ಬಿಳಿ ಆನೆಯ ಮೂರ್ಖತನ ನೆನಪಿಗೆ ಬಂದು ಮುಖದಲ್ಲಿ ಕಿರು ನಗೆಯನ್ನ ಹೊಮ್ಮಿಸುತ್ತಿದೆ.

ಹ್ಞೂ! ಅವರ ಹೇಳೋದು, ಕೇಳಿ ನಮಗೆ ಕುತೂಹಲ ತಡೆಯಲು ಆಗಲಿಲ್ಲಾ. ಅಷ್ಟಕ್ಕೂ ಆ ವಯಸ್ಸಿಗೆ ಬಿಳಿ
ಆನೆಗಳು ಇರೋದಿಲ್ಲ ಎಂಬ ವಿಚಾರವು ನಮಗಿರಲಿಲ್ಲ. ಮನೆಗೆ ಹೋದಾವ್ರ, ಪಾಟಿಚೀಲಾ, ಇಟ್ಟು ಬಜಾರ ಕಡೆ
ಓಡಿದ್ವಿ..ಓಡಿದ್ವಿ..ಓಡಿ ಬಜಾರನ ಸಂಧಿ ಗೊಂದಿಗಳೆಲ್ಲಾ ತೀರವಿಹಾಕಿ, ಬಿಳಿ ಆನೆ ಹುಡುಕಿದ್ವಿ. ಆದ್ರ
ಬಿಳಿ ಆನೆ ಸುಳಿವೇ ಸಿಗಲಿಲ್ಲಾ. ಮನೆಗೆ ಬಂದು ನಮ್ಮ ಅಪ್ಪಾನ ಮುಂದೆ ನಡೆದ ವಿಷಯವನ್ನ ಹೇಳಿದಾಗ, ಅಪ್ಪ
ಸಹಿತ ನಗೋದಕ್ಕೆ ಶುರು ಮಾಡಿದಾ. ಯಾಕೆ ಅಂತ ಕೇಳಿದಕ್ಕೆ, ನಿಮ್ಮ ಟೀಚರ್ ಚಲೋ ಸಾಲಿ ಕಲ್ಸಿದ್ದಾರ ಬೀಡು
ಎಂದು ಹೊರಟು ಹೋದಾ.
ಬಿಳಿ ಆನೆಯ ಇದೇ, ಎಂದು ಹೇಳಿದ ಆ ಅಣ್ಣ ಮತ್ತೆ ಸಿಕ್ಕ, ಆವಾಗ ಅವ್ನ ಕೇಳಿದ್ವಿ. ಅಣ್ಣಾ ನಾವ್ ಹೋಗಿದ್ವಿ ಅಲ್ಲಿ ಎಲ್ಲೂ ಬಿಳಿ ಆನೆ ಕಾಣಿಸ್ಲೆ
ಇಲ್ಲಾ ಎಂದು ಒಟ್ಟಾಗಿ ಹೇಳಿದ್ವಿ. ಅದಕ್ಕ ಅವನು ಏಪ್ರಿಲ್ ಫೂಲ್! ಏಪ್ರಿಲ್ ಫೂಲ್ ಎಂದನು. ನಮಗೆ ಆಗ
ಏಪ್ರಿಲ್ ಫಸ್ಟ್ ಏಪ್ರಿಲ್ ಫೂಲ್ ದಿನಾಚರಣೆ ಅಂತಾ ಗೊತ್ತೆ ಇರಲಿಲ್ಲಾ. ಆ ಅಣ್ಣಯ್ಯಾ, ತಿಳಿಸಿದ ಮೇಲೆ
ನಮ್ಗೆ ಗೊತ್ತಾಗಿದ್ದು. ಹಿಂಗು ತಿಂದ ಮಂಗನ ಹಾಗೆ ಅಲ್ಲಿಂದ ಹೊರಟು ಬಂದ್ವಿ. ನಂತರ ನಾವು ಕೂಡಾ ಸಿಕ್ಕವರ‌್ನ
ಏಪ್ರಿಲ್ ಫೂಲ್ ಮಾಡಲು ಶುರು ಮಾಡಿದ್ವಿ.
ಏಪ್ರಿಲ್ ಫಸ್ಟ್ ಬಂತು ಅಂದ್ರೆ ನನ್ಗೆ ಬಿಳಿ ಆನೆ ಹಾಗೂ ನಮ್ಮ ಓಣಿಯ ಅಣ್ಣ ನೆನಪಿಗೆ ಬರುತ್ತಾರೆ.
ನನ್ನ ಮೂರ್ಖತನಕ್ಕೆ ಒಂದು ಸುಂದರ ನೆನಪನ್ನ ಒದಗಿಸಿದ ನನ್ನ ಓಣಿಯ ಅಣ್ಣಿಗೆ ನಾನು ಏಫ್ರಿಲ್ ಫೂಲ್
ಮಾಡಲು ಕಾತುರನಾಗಿದ್ದೇನೆ. ನೀವು ಕೂಡಾ ನಿಮ್ಮ ನೆಚ್ಚಿನವರನ್ನು ಯಾವ ರೀತಿಯಾಗಿ ಮೂರ್ಖರನ್ನಾಗಿಸ್ಬೇಕು
ಎಂಬುದನ್ನ ಈಗಲೇ ಪ್ಲಾನ ಮಾಡಿ.
8050753148