ಮಂಜುನಾಥ ಗದಗಿನ

ಸ್ಸು ಹಳಹಳ ಏನಿಸುತ್ತಿದೆ. ಮುಗ್ದ ಮನಸ್ಸುಗಳಿಗೆ ಮೋಸ ಮಾಡುತ್ತಿದ್ದೇನಾ? ಎಂಬ ಕೊರಗು ದಿನೇ ದಿನೇ ಹೆಮ್ಮರವಾಗಿ ಬೆಳೆಯುತ್ತಿದೆ. ಆದರೆ, ಮನಸ್ಸಿನ ಮೊಲೆಯಲ್ಲೆಲ್ಲೋ ಇದು ವಾಸ್ತವ ಪರಸ್ಥಿಗೆ ಸರಿಯಾಗಿದೆ ಎಂದು ಮಾರ್ಧನಿಸುತ್ತಿದೆ.
ಕಲಿಬೇಕು ಎಂಬ ಹಂಬಲ, ಸಾಧಿಸಬೇಕು ಎಂಬ ಛಲದೊಂದಿಗೆ ವೃದ್ಧ
ತಂದೆ-ತಾಯಿಗಳನ್ನು ಬಿಟ್ಟು ಬಂದು ಅರ್ಧ ದಶಕಗಳೇ ಕಳೆದು ಹೋಗಿವೆ. ಆದ್ರೆ ನಾನು ಸಾಧಿಸಿದ್ದೇಷ್ಟು
ಎಂಬ ಯಕ್ಷ ಪ್ರಶ್ನೆ ಮಾತ್ರ ನನ್ನನ್ನೆ ಪ್ರಶ್ನಿಸುತ್ತಿದೆ. ಆದರೆ ಊರಲ್ಲಿ ಅವ್ವ ಮಾತ್ರ ನನ್ನ ಮಗಾ
ದೊಡ್ಡ ಸಾಲಿನ್ಯಾಗ, ದೊಡ್ಡ ವಿಷಯ ಕಲಿತಾನ ಎಂದು ಊರಿನ ಹತ್ತಾರು ಮಂದಿಗೆ ಹೆಮ್ಮೆಯಿಂದ ತುಸು ಜಂಭದಿಂದ
ಹೇಳಿಕೊಳ್ಳುತ್ತಿದ್ದಾಳೆ.
ಇಂತಹ ಅಮಾಯಕ ಮುಗ್ದ ಮನಸ್ಸಿನ ಮೌನ ಭಾವನೆಗಳಿಗೆ ಮೋಸದ
ಮುಳ್ಳು ಚುಚ್ಚುತ್ತಿದ್ದೇನಾ? ಎಂಬ ಗೊಂದಲ ಮನಸ್ಸಿನ
ಅಂತರಾಳದಲ್ಲಿ ಕೊರೆಯುತ್ತಿದೆ. ಊರು ಬಿಟ್ಟ ಪ್ರಾರಂಭದಲ್ಲಿ ತಂದೆ-ತಾಯಿಗಳಿಗೆ ಹೊರೆಯಾಗಬಾರದೆಂದು
ನಾನಾ ಕಡೆ ಕೆಲ್ಸ ಮಾಡಿ ಶಿಕ್ಷಣ ಹಾಗೂ ನನ್ನ ದೈನಂದಿನ ಖರ್ಚುವೆಚ್ಚಗಳನ್ನು ನಿಭಾಯಿಸುತ್ತಿದ್ದೆ. ಆದ್ರೆ ಯಾವಾಗ ಪದವಿ ಹಂತ ಮುಗಿದು ಸ್ನಾತಕೋತ್ತರ ಹಂತಕ್ಕೆ
ಮುನ್ನುಡಿ ಇಟ್ಟಿನೋ! ಆವಾಗಿನಿಂದ ಅವ್ವನ ಹತ್ರ ದುಡ್ಡಿಗಾಗಿ ಕೈ ಚಾಚಲು ಶುರುಮಾಡಿದೆ. ಅಪ್ಪ ಪಾರ್ಶ್ವವಾಯುಗೆ
ಒಳಗಾಗಿ ಹಾಸಿಗೆ ಹಿಡಿದು ದಶಕಗಳೇ ಕಳೆದು ಹೋಗಿದ್ದರ ಪರಿಣಾಮವಾಗಿ ಮನೆಯ ನೊಗವನ್ನು ಅವ್ವನೇ ಹೊತ್ತು
ನಿಭಾಯಿಸುತ್ತಿದ್ದಾಳೆ.
ಹೊಟ್ಟೆ, ಬಟ್ಟೆ, ಕಟ್ಟಿಕೊಂಡು ಸ್ಪಲ್ಪ ದುಡ್ಡು ಮಿಕ್ಕಿಸಿ
ಮಗನಿಗೆ ಕೊಡ್ಬೇಕೆಂದು ಸಕ್ಕರೆ ಡಬ್ಬದಲ್ಲಿ ಕೂಡಿಹಾಕುತ್ತಿರುತ್ತಾಳೆ. ನಾನು ಊರಿಗೆ ಹೋದಾಗ ಆ ದುಡ್ಡನ್ನು
ನನ್ನ ಕೈಗಿಟ್ಟು ಮಗಾ!! ಚನ್ನಾಗಿ ಸಾಲಿ ಕಲ್ತ ದೊಡ್ಡ
ನೌಕರಿ ಮಾಡ, ನಮ್ಮ ಕಡೆಯೇನ, ಚಿಂತಿ ಮಾಡ್ಬ್ಯಾಡ ಎಂದು ಹೇಳಿ ಕಳುಹಿಸುತ್ತಾಳೆ.
ಆದರೆ ಅವ್ವ ಕೊಡುವ ಆ ದುಡ್ಡು ಯಾವುದಕ್ಕೂ ಸಾಲುವುದಿಲ್ಲ.
ಶಹದ ಆಗು-ಹೋಗುಗಳು ಅವಳಿಗೇನು? ಗೊತ್ತು ಪಾಪಾ! ಒಂದು ಟೀ ಕುಡಿದ್ರೆ ಹತ್ತು ರೂಪಾಯಿ ಕೈ ಬಿಟ್ಟು ಹೋಗುವ
ಇಂದಿನ ದುನಿಯಾದಲ್ಲಿ ಅವ್ವನ ಆ ದುಡ್ಡು ನನಗೆ ಸಾಲುತ್ತಿರಲಿಲ್ಲ. ಆದ್ರೆ ಜಾಸ್ತಿ ದುಡ್ಡು ಕೇಳುವ
ಹುಂಬು ಧೈರ್ಯ ನನಗಿರಲಿಲ್ಲ. ಅವರ ಜೀವನವೇ ಸರಕಾರ ಕೊಡೋ, ವೃದ್ಧಾಪ್ಯ ವೇತನ ಹಾಗೂ ಅಂಗವಿಕಲ ವೇತನದಿಂದ
ನಡೆಯುತ್ತಿದ್ದೆ. ಇಂತಹ ಸಮದಲ್ಲಿ ದುಡ್ಡು ಕೇಳಿದ್ರೆ ಅವರಾದ್ರು ಎಲ್ಲಿಂದ ಕೊಟ್ಟಾರು?
ಅವ್ವ ಕೊಟ್ಟ ಆ ಕಾಸು ಖಾಲಿಯಾಗುತ್ತಿದ್ದಂತೆ, ಅಕ್ಕನ ಹತ್ರವೋ,
ಮಾವನ ಹತ್ರವೋ ಕೈ ಚಾಚ ಬೇಕಾಗಿತ್ತು. ಆದ್ರೆ ಈಗಾಗಲೇ ನಾ ಅವರಿಗೆ ಹೊರೆಯಾಗಿದ್ದೇನೆ. ಇಂತಹದ್ರಲ್ಲಿ
ಅವರ ಹತ್ರ ದುಡ್ಡು ಕೇಳುವುದು ನನ್ಗೆ ಮುಜುಗರ ಉಂಟು ಮಾಡುತ್ತಿತ್ತು. ಈ ಮುಜಗರದಿಂದ ಪಾರಾಗ್ಬೇಕೆಂದು
ಕೊಂಡು ಈ ಸಾರಿ ಊರಿಗೆ ಹೋದೆ. ಬ್ಯಾಂಕೊಂದರಲ್ಲಿ ಅವ್ವನ ಹೆಸರಿನಲ್ಲಿ ಒಂದಿಷ್ಟು ಹಣ ಇಡಲಾಗಿದೆ. ಈ
ಹಣವೇ ನಮ್ಮೆಲ್ಲರ ಪಾಲಿನ ದೊಡ್ಡ ಆಸ್ತಿ, ಈ ದುಡ್ಡನ್ನು ಯಾವುದೇ ಕಾರಣಕ್ಕೂ ತೆಗೆದುಕೊಳ್ಳಬಾರದು ಎಂದು
ಅವ್ವ ಆಗಾಗಾ ಹೇಳ್ತಾನೆ ಇದ್ಲು. ಅದು ನನ್ನ ಮದುವೆಗೆ
ತೆಗೆದಿಟ್ಟ ದುಡ್ಡೆಂದು ಪದೇ ಪದೇ ಹೇಳುತ್ತಿದ್ದಳು. ಆದ್ರೆ ನನ್ನ ಕಷ್ಟ ಪರಿಹರಿಸಲು ಆ ದುಡ್ಡಿನಿಂದ
ಮಾತ್ರ ಸಾಧ್ಯವೆಂದು, ನಾನು ಆ ದುಡ್ಡಿಗೆ ಒಂದು ಎಟಿಎಂ ಕಾರ್ಡ ಮಾಡಿಸಲು ಬ್ಯಾಂಕಿನಿಂದ ಎಟಿಎಮ್ ಪಾರ್ಮ
ತೆಗೆದುಕೊಂಡು ಹೋಗಿ ಅವ್ವನ ಮುಂದೆ ಬೇ ಯವ್ವಾ, ಬ್ಯಾಂಕನವರು
ಅದೇನೋ, ಸಹಿ ಕೇಳಾಕತ್ತಾರ, ಸಹಿ ಮಾಡ್ದೇ ಹೋದ್ರ ಪಾಸ್ಬುಕ್ ಬಂದ್ ಆಗತೈತಿ ಅಂತ ಹೇಳಿ ಅವಳಿಂದ ಹೆಬ್ಬಟ್ಟು
ಒತ್ತಿಸಿಕೊಂಡು ಬಂದೆ. ಅವಳು ಎರಡು ಮಾತನಾಡದೇ ಸಹಿ ಮಾಡಿದ್ಳು, ಯಾಕೆ? ಗೊತ್ತಾ ಮಗನ ಮೇಲಿನ ಅಪಾರ
ನಂಬಿಕೆಯಿಂದ.
ಅಪ್ಲಿಕೇಷನ ಕೊಟ್ಟ ಎರಡು ದಿನಗಳಲ್ಲಿ ಎಟಿಎಂ ಬಂದಿತು.
ನಾನು ಎಟಿಎಂ ತೆಗೆದುಕೊಂಡು ಬರ‌್ಬೇಕಾದ್ರೆ ಅದೇ ಮುಗ್ದ ಅವ್ವ ಸಕ್ಕರೆ ಡಬ್ಬದಿಂದ ನೂರರ ಎರಡು ಗರಿಗರಿ
ನೋಟುಗಳನ್ನು ತೆಗೆದು ನನ್ನ ಕೈಗೆ ಇಟ್ಟಳು. ನಾನು ಯಾವುದೇ ಮುಜುಗರ ಇಲ್ಲದೇ ಆ ದುಡ್ಡನ್ನು ತೆಗೆದುಕೊಂಡು
ಬಂದು ಬಿಟ್ಟೆ.
ಆದ್ರೆ ಆ ಎಟಿಎಂ ನಿಂದ ಹಣವನ್ನು ಡ್ರಾ ಮಾಡಿಕೊಳ್ಳಬೇಕಾದ್ರೆ
ಯಾಕೋ, ಮನಸ್ಸು ಹಿಂದೆಟ್ಟು ಹಾಕುತ್ತದೆ. ಇದಕ್ಕೆ ಕಾರಣ ನಾನು ಅವ್ವನ ನಂಬಿಕೆಗೆ ಮಾಡಿದ ಮೋಸ, ಅವಳು
ನನ್ನ ಮೇಲೆ ಇಟ್ಟ ಭರವಸೆಯ ಮೋಸ. ಆದ್ರೆ ಹೀಗೆ ಮಾಡದೇ ಬೇರೆ ವಿಧಿ ಇಲ್ಲ ಎಂದು ಮತ್ತೊಂದು ಮನಸ್ಸು
ಹೇಳುತ್ತದೆ. ಆದ್ರೆ ಇದು ನಾ ಅವ್ವನಿಗೆ ಮಾಡಿದ ಮೋಸವಲ್ಲ, ಇದು ನನ್ಗೆ ನಾನೇ ಮಾಡಿಕೊಂಡ ಮೋಸ ಯಾಕೆಂದ್ರೆ
ಅವ್ವನಿಗೊಸ್ಕರ ನನ್ನ ಅಂತರಾಳದಲ್ಲಿ ಒಂದು ಗುಡಿಕೊಟ್ಟಿ ಪೂಜಿಸುತ್ತಾ ಇದ್ದೇನೆ. ಆದ್ರು ನನ್ನ ಮೋಸಕ್ಕೆ
ಒಂದು ಕ್ಷಮೇ ಇರಲಿ ಅವ್ವ.
No comments:
Post a Comment