ಮಂಜುನಾಥ ಗದಗಿನ
ಹುಬ್ಬಳ್ಳಿ ಇತಿಹಾಸದ ಮಜಲೂಗಳನ್ನು ಕೆದಕಿದಷ್ಟು ಗತ ಇತಿಹಾಸದೊಂದಿಗೆ ಇಲ್ಲಿನ ಕಲಾ ಸಿರಿವಂತಿಕೆ ಬಿಚ್ಚುತ್ತಾ ಸಾಗುತ್ತಿವೆ. ಆದರೆ ಇವುಗಳ ಸೂಕ್ತ ನಿರ್ವಹಣೆ ಹಾಗೂ ಪ್ರಚಾರದ ಕೊರತೆಯಿಂದ ಅವಸಾನದತ್ತ ಸಾಗುತ್ತಿರುವುದು ಕೆದಕರ ಸಂಗತಿ.
ಬಾದಾಮಿ ಚಾಲುಕ್ಯರ ಕಾಲದ 11ನೇ ಶತಮಾನದ ದೇವಾಲವೊಂದು ಹುಬ್ಬಳ್ಳಿಯಿಂದ 8 ಕಿ.ಮಿ ದೂರದ ಅಮರಗೋಳದಲ್ಲಿದೆ. ಅಮರಗೋಳ ಬಸ್ಟಾಫ್‌ಯಿಂದ ಸ್ಟೇಶನ್ ರೋಡ ಮಾರ್ಗವಾಗಿ ದಾಟಿ, ದುಂಡಿ ಬಸವೇಶ್ವರ ಗುಡಿಯ ಬಲಕ್ಕೆ ಹೋದರೆ ಮಾರುತಿ ದೇವಸ್ಥಾನ ಸಿಗುತ್ತದೆ ಇದನ್ನು ಸಾಗಿ ಮುಂದೆ ಬಂದರೆ ಮರಿಗೌಡರ ಓಣಿಯ ವಿಶಾಲ ಅಂಗಳದಲ್ಲಿ ಕಾಣ ಸಿಗುವುದೇ ಶಿಥಿಲಾವಸ್ಥೆ ತಲುಪಿರುವ ಐತಿಹಾಸಿಕ ಕಲಾ ಶ್ರೀಮಂತಿಕೆಯಿಂದ ಕೂಡಿರುವ ಬನಶಂಕರಿ ದೇವಾಲಯ.ಅನಾಧರ, ಅನಾಥ..!
ಈ ದೇವಾಲಯ ಭಾರತೀಯ ಪುರಾತತ್ವ ಇಲಾಖೆಯ ಅಧಿನಕ್ಕೆ ಒಳಪಟ್ಟಿದೆ. ಆದರೆ ಇಲಾಖೆಯ ಅನಾಧರ ವರ್ತನೆಯಿಂದ ದೇವಸ್ಥಾನ ಅನಾಥವಾಗಿರುವುದು ಆರಂಭದಲ್ಲೇ ಗೊತ್ತಾಗುತ್ತದೆ. ಐತಿಹಾಸಿಕ ದೇವಾಲಯ ಇದೇ ಎಂಬ ಒಂದೇ ಒಂದು ಮಾರ್ಗಸೂಚಿಯಾಗಲಿ, ಫಲಕವಾಗಲಿ ಕಾಣಸಿಗುವುದಿಲ್ಲ. ಹುಬ್ಬಳ್ಳಿ-ಧಾರವಾಡ ಹೆದ್ದಾರಿಗೆ ಹೊಂದಿಕೊಂಡಿರುವ ರಸ್ತೆ ದಾಟಿಯೇ ಈ ದೇವಾಲಯಕ್ಕೆ ಸಾಗಬೇಕು. ಇಲ್ಲಿ ಒಂದು ಐತಿಹಾಸಿಕ ದೇವಾಲಯ ಇದೆ ಎಂದು ಫಲಕ ಹಾಕಿದ್ದರೆ, ದಿನ ನಿತ್ಯ ಓಡಾಡುವ ಲಕ್ಷ್ಯಾಂತರ ಪ್ರಯಾಣಿಕರಿಗೆ ದೇವಾಲಯ ಇರುವಿಕೆ ಗೊತ್ತಾಗುತ್ತಿತ್ತು. ಇದರಿಂದ ದೇವಾಲಯ ಪ್ರೇಕ್ಷಣಿಯ ಸ್ಥಳವಾಗುತ್ತಿತ್ತು ಎಂಬ ಮಾತಿನಲ್ಲಿ ಅನುಮಾನವಿಲ್ಲ. ಆದರೆ ಭಾರತೀಯ ಪ್ರಾಚ್ಯ ವಸ್ತು ಇಲಾಖೆಯ ನಿರ್ಲಕ್ಷದಿಂದ ಈ ದೇವಾಲಯ ಅನಾಥವಾಗಿದೆ.
ಕಣ್ಣು ಕೊರೈಸುವ ವಾಸ್ತು ಶೈಲಿ.
ದಕ್ಷಿಣಾಭಿಮುಖವಾಗಿರುವ ಗರ್ಭಗುಡಿಯ ಮೇಲೂ ಸೂಕ್ಷ್ಮ ಕೆತ್ತನ ಕಲಾ ಕುಸುರಿಯನ್ನು ಕಾಣಬಹುದು. ಇನ್ನು ಈ ದೇವಾಲಯದ ವಿಶೇಷವೆಂದರೆ ಇದರ ನವರಂಗ ಮಂಟಪ. ಇಲ್ಲಿ ನಾಲ್ಕು ಕಂಬಗಳಿದ್ದು. ಈ ಕಂಬಗಳ ಮೇಲೆ ವಿಷ್ಣು,ನಟರಾಜ, ಗಣಪತಿ, ಭೈರವ,ಭೈರವಿ, ಶಿವ, ವರಹಾ, ಉಗ್ರನರಸಿಂಹ, ಚಂದ್ರ, ವೀರಭ್ರದ, ಮೊದಲಾದ ದೇವಾನುದೇವತೆಗಳ ಅದ್ಭುತ್ ಕೆತ್ತನೆಗಳನ್ನು ಕಾಣಬಹುದು. ನವರಂಗದ ಕಂಬಗಳ ಮೇಲೆ ಕೆತ್ತಿದ ದೇವಾಯಲಗಳು ಕಾಣ ಸಿಗುವುದು ಅಪರೂಪ.ಇನ್ನೂ ದೇವಾಲಯದ ಹೊರಭಿತ್ತಿಯು ಗೋಡೆಕಂಬ,ಅರ್ಧಕಂಬ, ಮತ್ತು ದೇವಕೊಷ್ಟಕಗಳ ಅಲಂಕಾರದಿಂದ ಕೂಡಿದೆ. ನಕ್ಷತ್ರಾಕಾರದ ತಲವಿನ್ಯಾಸವನ್ನು ಹೊಂದಿದೆ.
ದೇವಸ್ಥಾನದ ಸುತ್ತಲೂ ಬೇಲಿ ಹಾಕಲಾಗಿದೇ, ಆ ಬೇಲಿಯನ್ನು ಈಗಾಗಳೆ ಬೇಧಿಸಲಾಗಿದೆ. ಇನ್ನೂ ದೇವಸ್ಥಾನದ ಒಳಗೆ ಯಾರು ಬೇಕಾದರೂ ರಾಜಾರೋಷವಾಗಿ ಪ್ರವೇಶಿಸಬಹುದು. ಇನ್ನೂ ದೇವಸ್ಥಾನದ ಸುತ್ತಲೂ ಒತ್ತುವರಿ ಆಗಿರುವುದು ಮೇಲ್ನೋಟಕ್ಕೆ ಕಾಣಿಸುತ್ತಿದೆ. ಹೀಗಾಗಿ ಜೀರ್ಣೋದ್ಧಾರ ಸಮಯದಲ್ಲಿ ತೆಗೆದ ಕಲ್ಲುಗಳಿಗೆ ಹಾಗೂ ದೇವಸ್ಥಾನಕ್ಕೆ ಯಾವುದೇ ರಕ್ಷಣೆ ಇಲ್ಲ. ಅಷ್ಟೇ ಅಲ್ಲದೇ ಇಲ್ಲಿ ಯಾವುದೇ ಮೂಲ ಸೌಕರ್ಯಗಳು ಇಲ್ಲ. ಇದಕ್ಕೆ ಅರ್ಚಕರು ಸಹಿತ ಇಲ್ಲ. ಓಣಿಯ ಮಹಿಳೆಯರೆ ಈ ದೇವಸ್ಥಾನದ ಪೂಜೆ ಮಾಡುತ್ತಿದ್ದಾರೆ. ದೇವಸ್ಥಾನದ ಮೇಲೂಸ್ತುವಾರಗೆ ಸರಕಾರ ಒಬ್ಬ ನೌಕರರನ್ನು ಹಾಗೂ ಒಬ್ಬ ಕಾವಲುಗಾರರನ್ನು ನೇಮಕ ಮಾಡಲಾಗಿದೆ. ಆದರೆ ಸರಕಾರಿ ನೌಕರ ಧಾರವಾಡದಲ್ಲಿ ಇರುವುದರಿಂದ ಈ ದೇವಾಲಯ ರಕ್ಷಣೆಯ ಹೊಣೆ ಅಲಿಯ್ಲ ಕಾವಲುಗಾರನ್ನದೆ. ಅವನು ಇಲ್ಲದೇ ಇದ್ದಾಗ ಇದಕ್ಕೆ ರಕ್ಷಣೆ ನೀಡುವವರು ಯಾರು? ಎಂಬುದು ಸಾರ್ವಜನಿಕರ ಪ್ರಶ್ನೆಯಾಗಿದೆ.