ಮಂಜುನಾಥ ಗದಗಿನ
ಯಾವುದೇ ದೊಡ್ಡ ಮಟ್ಟದ ವೇದಿಕೆ ಅಲಂಕರಿಸದೇ ಘಟಾನುಘಟಿ ಸ್ಪರ್ಧಾಳುಗಳ ಮಧ್ಯೆ ಹಾಡಿ ವಿಜೇತರಾಗುವುದು ಸಾಮಾನ್ಯದ ಮಾತಲ್ಲ. ಆದರೆ, ಶ್ರದ್ಧೆ ಮತ್ತು ಗೆಲ್ಲಬೇಕು ಎಂಬ ಹಂಬಲ ಇದ್ದರೆ ಯಾವುದು ಅಸಾಧ್ಯವಲ್ಲ ಎಂದು ಸರಿಗಮಪ ಲಿಟಲ್ ಚಾಂಪ್ಸ್ ಸೀಸನ್-೧೬ರನ್ನು ಗೆದ್ದು ಸಾಧಿಸಿ ತೋರಿಸಿದ್ದಾನೆ ಈ ಬಾಲಕ.
ಹೌದು! ಆತ ಗೋಕಾಕದ, ಸರಿಗಮಪ ಲಿಟಲ್ ಚಾಂಪ್ಸ್ ಸೀಸನ್-೧೬ರ ವಿಜೇತ ಓಂಕಾರ ಪತ್ತಾರ. ಮನೆಯಲ್ಲಿ ಯಾರಿಗೂ ಸಂಗೀತದ ಗಂಧ ಗಾಳಿಯು ಗೊತ್ತಿಲ್ಲ. ಆದರೆ, ಈತ ಮಾತ್ರ ಸಂಗೀತ ದಿಗಜ್ಜರನ್ನು ಮೆಚ್ಚಿಸಿ ಚಾಂಪಿಯನ್ ಆಗಿ ಹೊರಹೊಮ್ಮಿದ್ದು ಮಾತ್ರ ಆಶ್ಚರ್ಯವೇ ಸರಿ.
ಶಿಕ್ಷಕರೇ ಕಾರಣ:

ಸಿದ್ಧಾರೂಡರ ಕೃಪೆ:
ಓಂಕಾರ ತಾಯಿ ಊರು ಹುಬ್ಬಳ್ಳಿ. ಸಿದ್ಧಾರೂಡ ಮಠದ ಹಿಂದೆ ಇವರ ಮನೆ ಇದ್ದ ಕಾರಣ ಓಂಕಾರ ಹುಬ್ಬಳ್ಳಿಗೆ ಭೇಟಿ ನೀಡಿದಾಗೊಮ್ಮೆ ಸಿದ್ಧಾರೂಢರ ಮಠಕ್ಕೆ ಭೇಟಿ ನೀಡುತ್ತಿದ್ದ. ಈ ವೇಳೆ ಅಲ್ಲಿಯೇ ಕೆಲವು ಗಂಟೆಗಳ ಕಾಲ ಇರುತ್ತದ್ದ. ಈ ವೇಳೆ ಅಲ್ಲಿ ನಡೆಯುವ ಸಂಗೀತ ಕಾರ್ಯಕ್ರಮ ಹಾಗೂ ಪ್ರವಚನಗಳನ್ನು ಆಲಿಸುತ್ತಾ ಸಂಗೀತದಲ್ಲಿ ಆಸಕ್ತಿ ಬೆಳೆಸಿಕೊಂಡ. ಹೀಗಾಗಿ ಶಾಲೆಯಲ್ಲಿ ಅತ್ಯುತ್ತಮವಾಗಿ ಹಾಡಲು ಆರಂಭಿಸಿ ಪ್ರಥಮ ಸ್ಥಾನ ಪಡೆದುಕೊಳ್ಳುತ್ತಿದ್ದ.
ದೊಡ್ಡ ವೇದಿಕೆ ಇಲ್ಲ:
ಓಂಕಾರ ಒಬ್ಬ ಉತ್ತಮ ಹಾಡುಗಾರ ಎಂದು ಎಲ್ಲರಿಗೂ ತಿಳಿದಿತ್ತು. ಹೀಗಾಗಿ ಗೋಕಾಕ ಸುತ್ತಲ ಕಾರ್ಯಕ್ರಮಗಳು ನಡೆದರೆ ಓಂಕಾರನನ್ನು ಹಾಡುಗಾರನನ್ನಾಗಿ ಕರೆಸುತ್ತಿದ್ದರು. ಆದರೆ, ಈತ ಪಾಲ್ಗೊಳ್ಳುತ್ತಿದ್ದದ್ದು ಜಾತ್ರಾ ಮಹೋತ್ಸವ, ಬೀಳ್ಕೊಡುಗೆ ಸಮಾರಂಭಗಲ್ಲಿ ಮಾತ್ರ ಹಾಡುತ್ತಿದ್ದ. ಅತೀ ದೊಡ್ಡ ವೇದಿಕೆ ಎಂದರೆ ಪ್ರತಿ ವರ್ಷ ನಡೆಯುವ ಸತೀಶ ಶುಗರ್ಸ್ ಅವಾರ್ಡ್. ಈ ಕಾರ್ಯಕ್ರಮದಲ್ಲಿ ಹಲವು ಬಾರಿ ವಿಜೇತ ಕೂಡಾ ಆಗಿದ್ದಾರೆ.
ದೊಡ್ಡ ಗೆಲವು:
ಗೋಕಾಕನಲ್ಲಿ ನಡೆದ ಆಡಿಷನ್‌ನಲ್ಲಿ ಓಂಕಾರ ಪಾಲ್ಗೊಂಡಾಗ ಅವನಿಗೆ ಗೊತ್ತಿರಲಿಲ್ಲ. ನಾನು ಸೆಲೆಕ್ಷನ್ ಆಗುತ್ತೇನೆ ಎಂದು. ಆದರೆ, ಎರಡು ಸುತ್ತಗಳನ್ನು ಯಶಸ್ವಿಯಾಗಿ ಪೂರೈಸಿ ಕೊನೆಗೆ ಸರಿಗಮಪಕ್ಕೆ ಆಯ್ಕೆಯಾದ. ನಂತರ ಸರಿಗಮಪದಲ್ಲಿ ಪ್ರತಿಸಾರಿಯೂ ಗೊಲ್ಡನ್ ಬಜರ್ ಪಡೆದುಕೊಳ್ಳಲು ಪ್ರಾರಂಭಿಸಿದ. ಅಲ್ಲಿ ಎಲ್ಲರೂ ದೊಡ್ಡ ದೊಡ್ಡ ಸಂಗೀತ ಗುರುಗಳಿಂದ ಕಲಿತವರೇ ಇದ್ದರೂ, ನಾನು ಮಾತ್ರ ಅಷ್ಟೊಂದು ಸಂಗೀತ ಕಲಿತಿರಲ್ಲಿ. ಆದರೆ, ನನ್ನಲ್ಲಿ ಕಲಿಬೇಕು ಎಂಬ ಛಲ ಇತ್ತು. ಹೀಗಾಗಿ ನಾನು ದಿನನಿತ್ಯ ಸರಿಗಮಪ ವೇದಿಕೆಯಲ್ಲೇ ಅಭ್ಯಾಸ ಮಾಡಿ ವೇದಿಕೆ ಮೇಲೆ ದೃಢವಾಗಿ ಹಾಡುತ್ತಿದ್ದೇ ಹೀಗಾಗಿ ಈ ಸಾರಿಯ ಚಾಂಪಿಯನ್ ಆಗಲು ಕಾರಣವಾಯಿತು ಎಂದು ಹೇಳುತ್ತಾನೆ ಓಂಕಾರ.
ಪೈನಲನಲ್ಲಿ ತೀವ್ರವಾದ ಪೈಪೋಟಿ ಇತ್ತು. ಆದರೆ, ಕರುನಾಡಿನ ಜನರ ಓಂಕಾರ ಕೈ ಹಿಡಿದಿದ್ದರಿಂದ ಪೈನಲ್‌ನಲ್ಲಿ ವಿಜೇತದ ಮಾಲೆ ಧರಿಸಿ ₹೩೦ ಲಕ್ಷ ಬೆಲೆ ಬಾಳುವ ಸೈಟ್ ತನ್ನದಾಗಿಸಿಕೊಂಡ. ಗುರು ಕಿರಣ್ ಎರಡನೇ ಸ್ಥಾನ ಪಡೆದುಕೊಂಡ.ಸುನಾದ್ ಮೂರನೇ ಸ್ಥಾನ ಪಡೆದುಕೊಂಡ. ಒಟ್ಟಿನಲ್ಲಿ ತಂದರೆ ಪತ್ತಾರಿಕೆ, ತಾಯಿ ಗೃಹಣಿ ಇದ್ದರೂ, ಓಂಕಾರ ಪಾತ್ರ ಸಂಗೀತದಲ್ಲಿ ಚಾಂಪಿಯನ್ ಆಗಿದ್ದು ಮಾತ್ರ. ಇತರೆ ಬಾಲಕರಿಗೆ ಸ್ಫೂರ್ತಿಯಾಗಿದೆ. ಓಂಕಾರನ ಸಂಗೀತನ ನಿನಾನ ಇನ್ನಷ್ಟು ಹೊರ ಹೊಮ್ಮಲಿ ಎಂಬ ಆಶಯ ಎಲ್ಲರದ್ದು.
No comments:
Post a Comment