ಕನಸುಗಳೇ ಹಾಗೆ! ಕಾಡುತ್ತವೆ. ಕೆರಳುತ್ತವೆ. ಕೆಣಕುತ್ತವೆ.. ಕೊನೆಗೆ ಸಾಕಾರಗೊಂಡೋ..ಸಾಕಾರಗೊಳ್ಳದೇನೋ..ಮನಸ್ಸಿನಾಳದಿಂದ ಸರಿದು ಮಾಯವಾಗುತ್ತವೆ.ಹ್ಞೂ! ನನಗೂ ಸಾವಿರ ಕನಸುಗಳ ಮಧ್ಯ ಒಂದು ಚಿಕ್ಕ ಕನಸು ಮೂಡಿತ್ತು. ಆ ಕನಸು ಈಡೇರಿಕೆಗೆ ನಾನಾ ಕಸರತ್ತುಗಳು. ಇವುಗಳೊಂದಿಗೆ ಅನೇಕ ಸವಾಲುಗಳನ್ನು ದಾಟಿ ಕನಸಾಗಿ ಕಾಡಿದ್ದ ಪತ್ರಿಕೋದ್ಯಮ ಅಣಿ ಇಟ್ಟೆ.
ಸಮಾಜ ಅಂಕುಡೊಂಕುಗಳನ್ನು ತಿದ್ದಿ ತಿಡುವ ಗುತರುತರ ಜವಾದ್ದಾರಿ ಪತ್ರಿಕೋದ್ಯಮದ್ದು. ಒಳ್ಳೆ ಕಾರ್ಯ ಮಾಡಿದಾಗ ಶಬ್ಬಾಶಗಿರಿ ನೀಡುತ್ತಾ, ತಪ್ಪು ಮಾಡಿದಾಗ ಚಾಟಿ ಏಟು ನೀಡುತ್ತಾ ಯಾರ ಅಚಿಜು ಅಳುಕು ಇಲ್ಲದೇ,ತನ್ನದೇ ಹಮ್ಮು ಬಿಮ್ಮಿನಲ್ಲಿ ಪ್ರಜಾಪ್ರಭುತ್ವದ ನಾಲ್ಕನೇಯ ಅಂಗವಾಗಿ ಕಾರ್ಯನಿರ್ವಹಿಸುತ್ತಿವೆ. ಬದುಕು ಎಂಬುದು ಅಮೂಲ್ಯವಾದದ್ದು, ಬದುಕಬೇಕಾದರೆ ಕನಸುಗಳು ಅಷ್ಟೇ ಮುಖ್ಯ. ಕನಸುಗಳು ಬದುಕನ್ನು ರೂಪಿಸುತ್ತವೆ ಹಾಗೇ ನಾ ಕಂಡ ಪತ್ರಿಕೋದ್ಯಮದ ಕನಸು ಮುಂದಿನ ನನ್ನ ಬದುಕಾಗಿರುವುದು ಈಗ ಇತಿಹಾಸ.
ಪತ್ರಿಕೋದ್ಯಮ ಒಂದು ಗ್ಲಾಮರ್ ಲೋಕ ಎನ್ನುವುದು ಒಂದು ಮಾತಾದಾರೆ, ಅದರ ಒಳಗಿರುವ ಲೋಕ ನಮ್ಮನ್ನು ದಂಕು ಬಡಿಸುತ್ತವೆ. ಕ್ಷಣ ಕ್ಷಣಕ್ಕೂ ಹೊಸ ವಿಷಗಳು, ಹೊಸ ಮಾಹಿತಿಗಳನ್ನು ಹೆಕ್ಕಿ ತಗೆಯುವ ಕಸರತ್ತು ಅಲ್ಲಿ ಸದ್ದಿಲ್ಲದೇ ನಡೆಯುತ್ತಿರುತ್ತದೆ. ಆದರೆ ನಿಂತು ಓದುವವರಿಗೆ, ಕುಳಿತು ನೋಡುವವರಿಗೆ ಇದರ ಬಗ್ಗೆ ಕಿಂಚಿತ್ತು ಮಾಹಿತಿ ಇರುವುದಿಲ್ಲ.ಆದರೆ ಅದರ ಸುಳಿಗೆ .ಸಿಲುಕಿದಾಗಲೇ ಅದರ ಅರಿವು ಗೊತ್ತಾಗುವುದು. ಪತ್ರಿಕೋದ್ಯಮದಲ್ಲಿ ಸಾವಿರಾರು ಕನಸುಗಳನ್ನು ಕಂಡು ಅದೇಷ್ಟೋ ಜನ ಸಾಗಿದ್ದಾರೆ, ಸಾಧಿಸಿದ್ದಾರೆ, ಸಾಧಿಸಲಾಗದೇ ಸೋತು ಅದರ ಸಹವಾಸದಿಂದ ದೂರ ಸರಿದವರು ಇದ್ದಾರೆ.
ಸುದ್ದಿಮನೆಯಲ್ಲಿ ಸದ್ದು ಮಾಡಬೇಕು, ಸಾವಿರ ಸಾವಿರ ಸಮಸ್ಯೆಗಳನ್ನು ಹೆಕ್ಕಿ ಸಮಾಜ ಸುಧಾರಿಸಬೇಕು ಎಂಬ ಕನಸು ನನ್ನದಾಗಿತ್ತು. ಒಬ್ಬ ವ್ಯಕ್ತಿ ಪತ್ರಕರ್ತನಾಗಲು ಓದು ಬರಹವಷ್ಟೇ ಇದ್ದರೆ ಸಾಲದು ಜನರ ಪ್ರತಿಧ್ವನಿಯಾಗಿ, ಸತ್ಯವನ್ನು ಹೇಳುವ, ಅನ್ಯಾಯದ ಪರ ನಿಲ್ಲುವ ಗಟ್ಟಿತನ ಬೇಕು ಹಾಗೇ ಕ್ರೀಯಾಶೀಲತೆಯು ಇರಬೇಕು. ಪತ್ರಿಕೋದ್ಯಮ ಸೇರಿದ ಕೆಲವೇ ದಿನಗಳನ್ನಿ ಈ ಸತ್ಯ ಅರಿವಾಯಿತು.
ಪತ್ರಿಕೋದ್ಯಮದಲ್ಲಿ ಕ್ಷಣ ಕ್ಷಣಕ್ಕೂ ಎದುರಾಗುವ ಅಪಾಗಳು, ಸಮಸ್ಯಗಳನ್ನು ಕಂಡು ಈ ವೃತ್ತಿಯೇ ಬೇಡ ಎಚಿದು ತೀರ್ಮಾನಿಸಿದ್ದು ಇದೆ. ಆದರೆ, ನನ್ನ ಕನಸು ಇಲ್ಲಿ ನಿಲ್ಲ ಬಾರದು, ಅದು ಕೂಡಾ ಪತ್ರಿಕೋದ್ಯಮದ ನೀರಿನೊಂದಿಗೆ ಹರಿಯಬೇಕು ಎಂದುಕೊಂಡು ಅದರ ಆಳ, ಅಗಲಗಳನ್ನು ತಿಳಿದುಕೊಳ್ಳಲು ಮುಂದಡಿ ಇಟ್ಟೆ.
ನಾವು ವಿದ್ಯಾರ್ಥಿಗಳಾಗಿದ್ದರು ಸಹ ನಮ್ಮ ಗುರುಗಳ ಹಲವು ವರ್ಷದ ಅನುಭವಗಳು ನಮ್ಮ ಬದುಕಿನ ಅನುಭವಗಳಿಗೆ ಸೇರುತ್ತವೆ. ಅವರು ಎದುರಿಸಿದ ಸಮಸ್ಯೆಗಳು ಕಂಡುಕೊಂಡ ಪರಿಹಾರಗಳು ನಮ್ಮ ಮುಂದಿನ ಬದುಕಿಗೆ ದಾರಿದೀಪವಾಗುತ್ತವೆ ನಮ್ಮ ಕನಸುಗಳಿಗೆ ನೀರೆರೆಯುತ್ತವೆ.
ಮತ್ತೊಬ್ಬರ ಭುಜದ ಮೇಲೆ ಬಂದುಕಿಟ್ಟು ಗುಂಡು ಹೊಡೆಯುವುದು ತುಂಬಾಜಾಣತನದ ಕೆಲಸ. ಇದು ಕಷ್ಟದ ಕೆಲಸ ಎಂದುಕೊಳ್ಳುವವರ ಮುಂದೆ ನಾವು ಎಲ್ಲರಂತೆ ಎಂತಹ ಕಷ್ಟವಿದ್ದರು ಎದುರಿಸುವ ಶಕ್ತಿ ಮತ್ತು ಅಗತ್ಯವಾದ ಯುಕ್ತಿ ನಮ್ಮಲ್ಲೂ ಇದೆ ಎಂದು ತಿಳಿಸುವ ಕನಸು ನನ್ನದು.ಈ ಕನಸು ಹೊತ್ತ ಕಂಗಳು ಪತ್ರಿಕೊದ್ಯಮದಲ್ಲಿ ಬದುಕನ್ನು ರೂಪಿಸುತ್ತಿವೆ. ಕನಸಿಗೂ ಬದುಕಿಗೂ ಹಗಲು-ರಾತ್ರಿಯ ವ್ಯತ್ಯಾಸ ಬಿಟ್ಟರೆ ಎರಡು ಒಂದೇ. ಬದುಕು ಹಗಲು ಗನಸಾದರೆ, ಕನಸು ರಾತ್ರಿಯ ಬದುಕು. ಒಬ್ಬ ಒಳ್ಳೆಯ ಪತ್ರಕರ್ತೆಯಾಗಬೇಕು ಎಂಬುದು ನನ್ನ ಬದುಕಿನ ದೊಡ್ಡಕನಸು. ಕನಸಾಗಿ ಕಾಡಿದ ಕನಸು ಕಂಡ ಕನಸು ಸಾಕಾರಕ್ಕಾಗಿ ಶ್ರಮದಿಂದ ಕಲಿಯುತ್ತಿದ್ದೇನೆ.
manjunath gadgin
No comments:
Post a Comment