ಯಾವುದೇ ಫಲಾಪೇಕ್ಷೆಗಳು ಇಲ್ಲದೇ, ಪರಿಸರ ಸಂರಕ್ಷಣೆಯಲ್ಲಿ ತೊಡಗಿಸಿಕೊಳ್ಳುವುದರ ಮೂಲಕ ಜನತರಲ್ಲೂ ಪರಿಸರದ ಬಗ್ಗೆ ಜಾಗೃತಿ ಮೂಡಿಸಲು ಹೊರಟ್ಟಿದ್ದಾರೆ ಗ್ರಾಮೀಣ ಪ್ರದೇಶದ ಯುವ ಪರಿಸರ ಪ್ರೇಮಿ ಲಿಂಗರಾಜ ನಿಡುವಣಿ.
ಮೂಲತಃ ಶೇರವಾಡ ಗ್ರಾಮದವರಾದ ಲಿಂಗರಾಜ ಕೃಷಿ ಕುಟುಂಬದಿಂದ ಬಂದವರು. ಇವರ ಅಜ್ಜನವರು ಗಿಡ ಮೂಲಿಕೆಗಳಿಂದ ಔಷದಿ ತಯಾರಿಸಿ ಜನರಿಗೆ ನೀಡುತ್ತಿದ್ದರು. ಔಷಧಿಗಾಗಿ ಮನೆಯಲ್ಲಿ ನಾನಾ ನಮೂನೆಯ ಗಿಡಗಳನ್ನು ಬೆಳೆಸುತ್ತಿದ್ದರು. ಈ ಗಿಡಗಳ ರಕ್ಷಣೆಯ ಹೊಣೆಯನ್ನು ಲಿಂಗರಾಜರವರಿಗೆ ವಹಿಸುತ್ತಿದ್ದರು. ಇದೇ ಕಾರಣಕ್ಕೆ ನಿಂಗರಾಜರವರಲ್ಲೂ ಪರಿಸರ ಬಗ್ಗೆ ಆಸಕ್ತಿ ಹುಟ್ಟಿತು. ಈ ಹವ್ಯಾಸವನ್ನು ಮುಂದುವರೆಸಿಕೊಂಡು ಹೊರಟ್ಟಿದ್ದಾರೆ.
ಸಂಘ-ಸಂಸ್ಥೆಗಳ ಸ್ಥಾಪನೆ.
ಇಷ್ಟು ಚಿಕ್ಕ ವಯಸ್ಸಿನಲ್ಲೇ ಅನೇಕ ಅಂದೋಲನಗಳನು ಸಂಘಟಿಸುವದರ ಮೂಲಕ ರಾಜ್ಯ ಹಾಗೂ ಅಂತರಾಷ್ಟ್ರೀಯ ಮಟ್ಟದಲ್ಲೂ ಗುರುತಿಸಿಕೊಂಡಿದ್ದಾರೆ. ಪರಿಸರ ಹಾಗೂ ಸಮಾಜಮುಖಿ ಪರಿವರ್ತನೆಗಾಗಿ, ವಿನೂತನ, ಮಾರುತಿ ಯುವಕ ಮಂಡಳ ಹಾಗೂ ಪರಿವರ್ತನ ಯುವಕ ಮಂಡಳ ಎಂಬ ಎರಡು ಸಂಸ್ಥೆಗಳನ್ನು ಹುಟ್ಟು ಹಾಕಿ, ಇವುಗಳ ಮೂಲಕ ಪರಿಸರ ಜಾಗೃತಿಗಳನ್ನು ಮೂಡಿಸುತ್ತಿದ್ದಾರೆ. ಈ ಸಂಸ್ಥೆಗಳನ್ನು ನಡೆಸಲು ಯಾರ ಸಹಾಯ, ಸಹಕಾರವನ್ನು ಪಡೆಯದೇ ತಮ್ಮ ಸ್ವಂತ ಹಣದಿಂದಲ್ಲೇ ನಡೆಸುತ್ತಿದ್ದಾರೆ. ಈ ಸಂಸ್ಥೆಗಳ ಮೂಲಕ ಚಿಕ್ಕ ಮಕ್ಕಳಿಗೆ ಪರಿಸರದ ಬಗ್ಗೆ ಭಾಷಣ, ಚಿತ್ರಕಲೆ, ಕ್ವಿಜ್, ಹಾಗೂ ಸಾಕ್ಷ್ಯಚಿತ್ರಗಳನ್ನು ತೊರಿಸುವದರ ಮೂಲಕ ಅವರಲ್ಲಿ ಜಾಗೃತಿ ಮೂಡಿಸುತ್ತಿದ್ದಾರೆ. ಇವರ ಪ್ರತಿಯೊಂದು ಆಂದೋಲನಗಳ ಹಿಂದೆ ಈ ಯುವಕ ಮಂಡಳಗಳ ಸಹಾಯ ಇದ್ದೆ ಇರುತ್ತದೆ.

ಪವಿತ್ರ ಪಂಚವಟಿ ಆಂದೋಲನ(ಬೇವು, ಬನ್ನಿ, ಅರಳಿ, ಹತ್ತಿ, ಪತ್ರಿ ಪ್ರಾಣವಾಯು ವೃದ್ದಿಸುವ ಗಿಡಗಳು), ಉಣಕಲ್ ಕೆರೆ ಸ್ವಚ್ಚತಾ ಅಭಿಯಾನ, ಕಸ, ಪ್ಲಾಸಿಕ ಮತ್ತು ಹಂದಿಗಳ ಮುಕ್ತ ಆಂದೋಲನ( ಸಹಿ ಸಂಗ್ರಹಿಸಿ ಜಿಲ್ಲಾಧಿಕಾರಿ, ಮುಖ್ಯಮಂತ್ರಿ ಹಾಗೂ ಪ್ರಧಾನ ಮಂತ್ರಿಗಳಿಗೆ ಕಳುಹಿಸಿದ್ದಾರೆ), ಪರಿಸರ ಸ್ನೇಹಿ ಆಂದೋಲನ, ಶೌಚಾಲಯ ಸಮರ, ಸಸ್ಯಗಳ ದಾಖಲಿಕರಣ, ಗಿಡಗಳಿಗೆ ರಾಖಿ ಕಟ್ಟುವುದರ ಮೂಲಕ, ವಿಶಿಷ್ಟವಾಗಿ ರಕ್ಷಾಬಂಧನವನ್ನು ಆಚರಿಸಿದರು ಹಾಗೂ ಧಾರವಾಡದ ಶೇರೆವಾಶಡದ ಸರಕಾರಿ ಹಿರಿಯ ಕನ್ನಡ ಪ್ರಾಥಮಿಕ ಶಾಲೆಯ ಸಹಯೋಗದೊಂದಿಗೆ, ಶಾಲೆಯ ಆವರಣದಲ್ಲಿ 125 ಕ್ಕೂ ಹೆಚ್ಚಿನ ಜಾತಿಯ ಗಿಡಗಳನ್ನು ನೆಟ್ಟು, ಆ ಗಿಡಗಳ ಪ್ರಯೋಜನದ ಬಗ್ಗೆ ಜನರಿಗೆ ತಿಳಿಹೇಳುತ್ತಿದ್ದಾರೆ. ಈ ಕಾರ್ಯಕ್ರಮದಕ್ಕೆ ಮಾಜಿ ಸಚಿವ ಬಸವರಾಜ ಹೊರಟ್ಟಿಯವರು ಸ್ವಪ್ರೇರಣೆಯಿಂದ ಬಂದು ಗಿಡ ನಟ್ಟಿದ್ದರು.

ನಿಂಗರಾಜ ನಿಡುವಣಿ ಪರಿಸರ ಪ್ರೇಮಿ ಅಷ್ಟೇ ಅಲ್ಲದೇ , ಒಬ್ಬ ಸಮಾಜಿಕ ಕಾರ್ಯಕರ್ತರಾಗಿ ದುಡಿಯುತ್ತಾ ನೊಂದವರ ಬಾಳಿಗೆ ಬೆಳಕಾಗಿದ್ದಾರೆ. ಜನಸಂಖ್ಯೆ ಬಗ್ಗೆ ತಿಳುವಳಿಕೆ ನೀಡಲು ಜನಸಂಖ್ಯಾ ಆಂದೋಲನ, ಮತಧಾನದ ಜಾಗೃತಿ, ಮಕ್ಕಳ ಆರೋಗ್ಯ ತಪಾಸಣಾ ಶಿಬಿರ, ರಕ್ತದಾನ ಶಿಬಿರ, ಗ್ರಾಮೀಣ ಕ್ರೀಡಾಕೂಟಗಳ ಆಯೋಜನೆ ಹಾಗೂ ಗರ್ಭೀನಿಯರಿಗೆ ಉಡಿತುಂಬುವ ಕಾರ್ಯಕ್ರಮದ ಮೂಲಕ, ಗರ್ಭೀನಿಯರಲ್ಲಿ ಆರೋಗ್ಯದ ಬಗ್ಗೆ ಜಾಗೃತಿ ಮೂಡಿಸಿದ್ದಾರೆ. ಮತ್ತು ಗ್ಲೋಬಲ್ ಹ್ಯಾಂಡವಾಷ ಡೇ ದಿನದಂದು, ಶಾಲಾ ಮಕ್ಕಳಿಗೆ ಸ್ವಚ್ಚತೆಯ ಬಗ್ಗೆ ಆಂದೋಲನ ಹಮ್ಮಿಕೊಂಡಿದ್ದರು. ಈ ಆಂದೋಲನವನ್ನು ಗಮನಿಸಿದ ಯುನೆಸೆಫ ಇವರ ಈ ಆಂದೋಲನಕ್ಕೆ ಮೆಚ್ಚುಗೆ ವ್ಯಕ್ತ ಪಡಿಸಿ, 25 ಸಾವಿರ ಹ್ಯಾಂಡಗ್ಲೋಸ್‌ಗಳನ್ನು ನೀಡಿದೆ.
ಇವೇಲ್ಲದರ ಜೊತೆಗೆ ಪ್ಯಾಮಿಲಿ ಪ್ಲಾನಿಂಗ್ ಅಸೋಶಿಯಸ್‌ನ ಧಾರವಾಡದ ಕಾರ್ಯಕಾರಣಿ ಸಮಿತಿಯ ಏಕೈಕ ಯುವ ಸದಸ್ಯರಾಗಿ, ಭಾರತ ನೆಹರೂ ಯುವ ಕೇಂದ್ರದ ರಾಷ್ಟ್ರೀಯ ಯುವದಳದ ಸ್ವಯಂ ಸೇವಕರಾಗಿ ಪರಿಸರ ಹಾಗೂ ಸಮಾಜಿಕ ಕಾರ್ಯಕ್ರಗಳಲ್ಲಿ ಸಕ್ರಿಯವಾಗಿ ಪಾಲ್ಗೋಂಡಿದ್ದಾರೆ.
ಇವರ ಈ ಸಾಧನೆಗಳನ್ನು ಗಮನಿಸಿದ ನಾಡಿನ ಪ್ರತಿಷ್ಠಿತ ಪ್ರತಿಕೆಯೊಂದು ಇವರನ್ನು ಪರಿಸರ ರಾಯಭಾರಿಯನ್ನಾಗಿ ಆಯ್ಕೆ ಮಾಡಿಕೊಂಡಿದೆ. ಅಷ್ಟೇ ಅಲ್ಲದೇ ಆಕಾಶವಾಣಿಯಲ್ಲಿ ಪರಿಸರ ಬಗ್ಗೆ ಹಲವಾರು ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಪರಿಸರ ಜಾಗೃತಿ ಮೂಡಿಸಿದ್ದಾರೆ. ಇನ್ನೂ ಸಾಲುಮರದ ತಿಮಕ್ಕ ಲಿಂಗರಾಜರವರ ಪರಿಸರ ಪ್ರೀತಿಗೆ ಬೇಷ್ ಎಂದಿದ್ದಾರೆ.
ನಿಂಗರಾಜ ನಿಡುವಣಿ ಅನಿಸಿಕೆ:-
ನಾವು ಪರಿವರ್ತನೆ ಬಯಸುವುದಾರೆ, ಅದು ನಮ್ಮಿಂದಲೇ, ಪ್ರಾರಂಭವಾಗಬೇಕು, ಅಂದಾಗ ಮಾತ್ರ ನಮ್ಮ ಸುತ್ತ-ಮುತ್ತಲಿನ ಪರಿಸರ ಉಳಿಯಲು ಸಾಧ್ಯ ಯುವಕರು ಹೆಚ್ಚು ಹೆಚ್ಚಾಗಿ ಪರಿಸರ ರಕ್ಷಣೆಯಲ್ಲಿ ತೊಡಗಬೇಕು.
No comments:
Post a Comment