ಮಂಜುನಾಥ ಗದಗಿನ
ನಾಡಿನ ಹಲವು ಧಾರ್ಮಿಕ ಕ್ಷೇತ್ರಗಳು ತಮ್ಮದೆಯಾದ ವಿಶಿಷ್ಟ, ವಿಭಿನ್ನ ಇತಿಹಾಸ, ಆಚರಣೆಗಳಿಂದ ಎಲ್ಲರ ಮನೆ-ಮನದ ಮಾತಾಗಿವೆ. ಅದೇ ರೀತಿ ಇಲ್ಲೊಂದು ಪುಣ್ಯಕ್ಷೇತ್ರ ಕೂಡಾ 11 ಸ್ವಾಗತ ಕಮಾನುಗಳನ್ನು ಹೊಂದಿದೆ. ಈ ಮೂಲಕ ಉತ್ತರ ಕರ್ನಾಟಕದಲ್ಲಿಯೇ ಅತೀ ಹೆಚ್ಚು ಸ್ವಾಗತ ಕಮಾನು ಹೊಂದಿದ ಹೆಗ್ಗಳಿಕೆ ಪಾತ್ರವಾಗಿದೆ.
ಹೌದು! ಅದುವೇ ಬೆಳಗಾವಿಯಿಂದ 80 ಕಿಮೀ ದೂರದ ಸುಕ್ಷೇತ್ರ ಗೊಡಚಿ ವೀರಭದ್ರೇಶ್ವರ ದೇವಾಲಯ. ನಾಡಿನ ಅನೇಕ ಪುಣ್ಯಕ್ಷೇತ್ರಗಳ ಪೈಕಿ ಈ ಗೊಡಚಿ ಕ್ಷೇತ್ರವು ಒಂದು. ತನ್ನದೇ ಇತಿಹಾಸ, ಪರಂಪರೆಯ ಮೂಲಕ ರಾಜ್ಯಾದ್ಯಂತ ಭಕ್ತವೃಂದವನ್ನು ಹೊಂದಿ ಗಮನ ಸೆಳೆಯುತ್ತಿದೆ. ಕಟಕೋಳ, ರಾಮದುರ್ಗ, ಸುನ್ನಾಳ, ಚಂದರಗಿ, ಮುನವಳ್ಳಿ, ಸವದತ್ತಿ, ಗೊಡಚಿಯಲ್ಲೇ ಮೂರು ಕಮಾನಗಳನ್ನು ಹೊಂದಿದೆ. ಈ ಮೂಲಕ ಉಕದಲ್ಲಿ ಪ್ರಸಿದ್ಧಿ ಪಡೆದುಕೊಂಡಿದೆ.
ವೀರಭದ್ರೇಶ್ವರ ದೇವಸ್ಥಾನದ ಮುಖ್ಯ ದ್ವಾರವು ಪೂರ್ವದಿಕ್ಕಿಗಿದೆ. ಇದರ ಮುಂಭಾಗದಲ್ಲಿ ಹಳ್ಳವೊಂದು ಹರಿದಿದೆ. ವೀರಭದ್ರನ ದೇವಸ್ಥಾನದ ಮುಂದೆ ವಿಶಾಲವಾದ ಮೈದಾನವಿದೆ. ಈ ಮೈದಾನಕ್ಕೆ ಲಿರಣಬಾಜಿಳಿ ಪ್ರದೇಶವೆಂದು ಹಳ್ಳಕ್ಕೆ ಲಿಹಿರೇಹಳ್ಳವೆಂದು ಕರೆಯುತ್ತಾರೆ. ಈ ಪ್ರದೇಶದಲ್ಲಿ ಶರಣರು ಯುದ್ಧ ಸಮಯದಲ್ಲಿ ವಿಜಯಶಾಲಿಗಳಗಿದ್ದರಿಂದ ಈ ಹಳ್ಳದಲ್ಲಿ ವಿಜಯಿಯಾದ ಶರಣರ ಪಾದದೂಳಿಯಿಂದ ಹರಿದು ಬಂದ ಜಲ ಪವಿತ್ರ ಪಾದೋದಕದ ಮಹಿಮೆಯನ್ನು ಹೊಂದಿದೆ ಎಂಬುವುದು ಭಕ್ತರ ನಂಬಿಕೆ. ಕಾರಣ ಈ ಕ್ಷೇತ್ರಕ್ಕೆ ಬಂದ ಭಕ್ತರೆಲ್ಲ ಈ ಜಲದಲ್ಲಿ ಮಿಂದ ಬಳಿಕವೆ ವೀರಭದ್ರನ ದರ್ಶನಕ್ಕೆ ಹೋಗುವುದು ವಾಡಿಕೆ ಇತ್ತು ಆದರೆ, ಇಂದು ಈ ಹಳ್ಳದಲ್ಲಿ ನೀರು ಇಲ್ಲದ ಕಾರಣ ದೇವಸ್ಥಾನದ ಆವರಣದಲ್ಲಿ ನಿರ್ಮಿಸಿರುವ ನಲ್ಲಿಗಳಲ್ಲಿ ಅಥವಾ ಸ್ನಾನ ಗೃಹಗಳಲ್ಲಿ ಮಿಂದೆದ್ದು ದೇವರ ದರ್ಶನ ಪಡೆದು ಪುನೀತರಾಗುತ್ತಿದ್ದಾರೆ. ವೀರಭದ್ರನ ದೇವಸ್ಥಾನದ ಹಿಂದೆ ಮಡಿವಾಳ ಮಾಚಿದೇವ(ಮುದೀವೀರಣ್ಣ)ನ ದೇವಸ್ಥಾನ, ಎಡಗಡೆ ಭದ್ರಕಾಳಿ ದೇವಸ್ಥಾನ ಇರುವುದರಿಂದ ಕ್ಷೇತ್ರಕ್ಕೆ ಮತ್ತಷ್ಟು ಮೆರಗು ಬಂದಿದೆ.
ಆಗ ಶಿಕರವೀರಷಿರ:
ಗೊಡಚಿ ಕ್ಷೇತ್ರವು ಬಾದಾಮಿ ಚಾಲುಕ್ಯರ ಕೀರ್ತಿವರ್ಮನಿಂದ ಹಿಡಿದು ಕೊಲ್ಹಾಪೂರ ಸಂಸ್ಥಾನದ ಭಾಗಕ್ಕೆ ಶಿಕರವೀರಷಿರ ನಾಡೆಂದು ಹೆಸರು ಬಂದಿದೆ ಎಂದು ಗೊಡಚಿ ಗ್ರಾಮದಲ್ಲಿ ದೊರೆತ ತಾಮ್ರಪಟದಲ್ಲಿ ಶಿಕೆತ್ತಿಅರಸಷಿ ಎಂಬುವುದರಿಂದ ತಿಳಿದು ಬಂದಿದೆ ಎಂಬುದು ಇತಿಹಾಸಕಾರರ ಅನಿಸಿಕೆ. ಕೊಲ್ಹಾಪೂರ ಸಂಸ್ಥಾನದ ಆಡಳಿತಕ್ಕೆ ಒಳಪಟ್ಟಿದ್ದ ಈ ಕ್ಷೇತ್ರದಲ್ಲಿ ಕಲ್ಯಾಣದ ಕ್ರಾಂತಿಯು ನಿರಂತರವಾಗಿ ನಡೆದ ಶರಣರು ಉಳವಿ ಕ್ಷೇತರಕ್ಕೆ ತೆರಳುತ್ತಿದ್ದ ಸಂದರ್ಭದಲ್ಲಿ ಬಿಜ್ಜಳನ ಸೈನ್ಯ ಶರಣರನ್ನು ಪುನಃ ಬೆನ್ನಟ್ಟಿದ ಸಮಯದಲ್ಲಿ ಶರಣರು ಕತ್ತಿಹಿಡಿದು ಹೋರಾಟ ಮಾಡಿ ಬಿಜ್ಜಳನ ಸೈನ್ಯವನ್ನು ಎದುರಿಸಿದ ಸ್ಥಳ ಈ ಕ್ಷೇತ್ರದಲ್ಲಿ, ಶರಣರಿಗೆ ವಿಜಯಲಭಿಸಿದ್ದರಿಂದ ಇದನ್ನು ಶಿಕರವೀರಷಿರ ನಾಡೆಂದು ಕರೆಯಲಾಗುತ್ತಿದೆ ಎಂಬುವುದನ್ನು ಇತಿಹಾಸ ಸಾರಿ ಹೇಳುತ್ತಿದೆ.
ಗೊಡಚಿ ಹೆಸರು ಹೇಗೆ ಬಂತು:
ಗೊಡಚಿ ಕ್ಷೇತ್ರದಲ್ಲಿ ನೆಲೆಸಿರುವ ಶ್ರೀವೀರಭದ್ರನ ದೇವಸ್ಥಾನವು ಅಂದು ಗಿಡಕಂಟೆಗಳಿಂದ ತುಂಬಿಕೊಂಡಿತ್ತು. ಅದರಲ್ಲಿಯೂ ವಿಶೇಷವಾಗಿ ಕೊಡಚಿಕಂಟೆಗಳಿಂದ ತುಂಬಿಕೊಂಡಿತ್ತು. ಅದಕ್ಕೆ ಇದು ಮೊದಲು ಕೊಡಚಿಕ್ಷೇತ್ರವೆಂದಾಯಿತು. ಕೊಡಚಿಯೇ ಇಂದು ರೂಢಿಯಲ್ಲಿ ಲಿಕಳಿಕಾರ ಮಾಯವಾಗಿ ಲಿಗಳಿಕಾರ ಆಗಮನದಿಂದಾಗಿ ಗೊಡಚಿ ಕ್ಷೇತ್ರವಾಗಿ ಮಾರ್ಪಟ್ಟಿದೆ. ಗೊಡಚಿಯ ವೀರಭದ್ರನ ಕ್ಷೇತ್ರವು ವಿಶೇಷವಾಗಿ ಉತ್ತರ ಕರ್ನಾಟಕದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿರುವ ವೀರಶೈವರ ಪುಣ್ಯಕ್ಷೇತ್ರವಾಗಿ ಮಾರ್ಪಟ್ಟಿದೆ. ಅಲ್ಲದೆ ಬಹುಜನರಿಗೆ ವೀರಭದ್ರನು ಮನೆದೇವರು, ಕುಲದೇವರು ಅಲ್ಲದೆ ಆರಾಧ್ಯ ದೇವರಾಗಿ ವೀರಭದ್ರನಿದ್ದಾನೆ. ಉತ್ತರಕರ್ನಾಟಕದ ವಿವಿಧ ಭಾಗಗಳಿಂದ ಲಕ್ಷಾಂತರ ಭಕ್ತರು ಇಲ್ಲಿ ದರ್ಶನಕ್ಕೆ ಬಂದು ಹೋಗುತ್ತಾರೆ.
ಕಟ್ಟಡದ ವೈಶಿಷ್ಟ್ಯ:
ವೀರಭದ್ರೇಶ್ವರ ದೇವಸ್ಥಾನದ ಕಟ್ಟಡವು ದ್ರಾವಿಡ ಮಾದರಿ ಹೋಲುತ್ತಿದ್ದು, ಚಾಲುಕ್ಯರ ಮಾದರಿಯ ಶಿಲ್ಪವನ್ನು ಕಾಣಬಹುದಾಗಿದೆ. ಅಲ್ಲದೆ ದೇವಸ್ಥಾನಕ್ಕೆ ಆಕರ್ಷಕ ಕಳಸವನ್ನು ಮಾಡಲಾಗಿದೆ. ಅಲ್ಲದೆ ದೇವಸ್ಥಾನದ ಒಳಾಂಗಣದಲ್ಲಿ ಕಲ್ಲಿನಿಂದ ನಿರ್ಮಾಣ ಮಾಡಿರುವ ಎತ್ತರವಾದ ದೀಪಸ್ತಂಭವನ್ನು ನೋಡಬಹುದು. ಇದೆಲ್ಲವನ್ನು ಗಮನಿಸಿದಾಗ ಈ ಕಟ್ಟಡ 17ನೇ ಶತಮಾನದಲ್ಲಿ ಕಟ್ಟಿದ ದೇವಸ್ಥಾನವೆಂದು ಪ್ರಾಚ್ಯವಸ್ತು ಸಂಶೋಧಕರ ಅಭಿಪ್ರಾಯ.
---
22 ರಿಂದು ಜಾತ್ರೆ:
ಹೊಸ್ತಲ ಹುಣ್ಣಿಮೆಯ ದಿನವಾದ ಡಿ.22ರಿಂದ ಐದು ದಿನಗಳ ಕಾಲ ಗೊಡಚಿ ವೀರಭದ್ರ ದೇವರ ಜಾತ್ರೆ ವಿಜೃಂಭನೆಯಿಂದ ನಡೆಯಲಿದೆ. ಉತ್ತರ ಕರ್ನಾಟಕದ ವಿವಿಧ ಭಾಗಗಳಿಂದ ಲಕ್ಷಾಂತರ ಭಕ್ತಾಧಿಗಳು ಜಾತ್ರೆಗೆ ಆಗಮಿಸಿ ಪುನೀತರಾಗುತ್ತಾರೆ. ಜಾತ್ರೆಯ ವಿಶೇಷವೆಂದರೆ ಬೆಳವಲು(ಬಳೂಲ)ಕಾಯಿ, ಬೋರೆ (ಬಾರಿ) ಹಾಗೂ ಬಾಳೆಹಣ್ಣುಗಳ ಮಾರಾಟ ಈ ಜಾತ್ರೆಯ ವಿಶೇಷವಾಗಿದೆ. ಈ ಜಾತ್ರೆಯಲ್ಲಿ ಮಾರುವಷ್ಟು ದೊಡ್ಡ ಪ್ರಮಾಣದಲ್ಲಿ ಯಾವ ಜಾತ್ರೆಯಲ್ಲಿಯೂ ಈ ಹಣ್ಣುಗಳು ಮಾರಾಟವಾಗುವದಿಲ್ಲ. ಹಣ್ಣುಗಳಲ್ಲದೆ ಅಷ್ಟೇ ದೊಡ್ಡ ಪ್ರಮಾಣದಲ್ಲಿ ವಿಭೂತಿ, ರುದ್ರಾಕ್ಷಿ ಹಾಗೂ ಕುಂಕುಮದ ಮಾರಾಟ ಕೂಡಾ ಆಗುತ್ತದೆ.

No comments:
Post a Comment