ಮಂಜುನಾಥ ಗದಗಿನ
ನಾನು ಆರನೇ ವಯಸ್ಸಿನವನಿದ್ದಾಗ ಅಪಘಾತವಾಗಿ ಬಲಗೈ ಕಳೆಕೊಂಡೆ. ನನಗಾಗ ಅಷ್ಟೊಂದು ತಿಳಿವಳಿಕೆ ಇರಲಿಲ್ಲ. ಆದರೆ, ನನ್ನ ತಂದೆ-ತಾಯಿ ದೃತಿಗೆಡದೆ ನನ್ನ ಆರೈಕೆ ಮಾಡಿದರು. ಆರಂಭದಲ್ಲಿ ನನ್ನ ಎಲ್ಲ ಕೆಲಸಗಳನ್ನು ಅವರೇ ಮಾಡಿದರೂ, ನಂತರ ನಾನೇ ಒಂದೊಂದಾಗಿ ನನ್ನ ಕೆಲಸಗಳನ್ನು ಒಂಟಿಗೈಯಲ್ಲಿ ಮಾಡಲು ಪ್ರಯತ್ನಿಸಿ, ಅದರಲ್ಲಿ ಯಶಸ್ಸು ಸಾಧಿಸಿ ಸ್ವಾವಲಂಬಿಯಾದೆ. ಆದರೆ, ಒಂದು ಕಡೆ ಮಾತ್ರ ಭವಿಷ್ಯತನ್ನು ನೆನೆಸಿಕೊಂಡು, ನನ್ನ ಕಣ್ಣೆದುರು, ನನ್ನ ವಾರಿಗೆಯ ಹುಡುಗರು ಆಡುತ್ತಿದ್ದನ್ನು ಕಂಡು ಜೀವನದ ಮೇಲೆ ಜಿಗುಪ್ಸೆ ಹುಟ್ಟಿಕೊಂಡು, ಊಟ ತಿಂಡಿ, ಆಟ ಪಾಠಗಳಲ್ಲಿ ನಿರಾಸಕ್ತನಾಗಿ ನನ್ನೊಳಗೆ ನಾನೇ ಕಳೆದು ಹೋಗುತ್ತಿದೆ. ಆದರೆ, ಅಪ್ಪ-ಅವ್ವನಿಗೆ ನನ್ನದೆ ಚಿಂತೆ. ಇದರೊಟ್ಟಿಗೆ ಮೂವರು ಅಕ್ಕಂದಿರ ಹೊಣೆಗಾರಿಕೆ ಬೇರೆ.

ನಾವು ಮೂಲತಃ ಬೈಲಹೊಂಗಲ ತಾಲೂಕಿನ ಹಣ್ಣೀಕೇರಿ ಗ್ರಾಮದವರು. ತುತ್ತು ಅನ್ನ ಅರಸಿ ಅಪ್ಪ ಬೆಳಗಾವಿಗೆ ಬಂದರು. ಸದ್ಯ ಉದ್ಯಮ ಭಾಗದ ಒಂದು ಕಾರ್ಖಾನೆಯಲ್ಲಿ ಕಾರ್ಮಿಕರಾಗಿ ಕೆಲಸ ಮಾಡುತ್ತಿದ್ದಾರೆ ಅಪ್ಪ. ಅವ್ವ ಕೂಡಾ ಅವರಿವರ ಮನೆಗೆಲಸ ಮಾಡಿಕೊಂಡು ಅಪ್ಪನಿಗೆ ನೆರವಾಗಿದ್ದಾಳೆ. ಇಬ್ಬರೂ ಸೇರಿ ದುಡಿದರೂ ತಿಂಗಳಿಗೆ 10 ಸಾವಿರ ಸಂಪಾದನೆ. ಈ ಹಣದಲ್ಲೇ ಸಂಸಾರ ನಡೆಸುವ ಸಾಹಸ ಈ ನಮ್ಮದು. ಆದರೆ, ಇಲ್ಲಿವರೆಗೂ ನನ್ನ ಆಸೆ, ಆಕಾಂಕ್ಷೆಗಳಿಗೆ ಕಾವಲಾಗಿ ನಿಂತು ಉತ್ಸಾಹಕ್ಕೆ ಪ್ರೋತ್ಸಾಹ ತುಂಬುತ್ತಿದ್ದಾರೆ.
ಆರ್ಥಿಕ ಸಹಾಯ:
ನನಗೆ 2012 ರಿಂದ 2017ರವಗೆಗೂ ಬೆಳಗಾವಿ ಉದ್ಯಮ ಭಾಗ ಪೋಲಿಯೊ ಹೈಡಾನ್ ಕಂಪನಿ ಆರ್ಥಿಕ ಸಹಾಯ ನೀಡುತ್ತಾ ಬಂದಿತ್ತು. ಆದರೆ, ನನ್ನ ಪ್ರತಿಭೆ ಗುರುತಿಸಿ ಕಳೆದ ಒಂದು ವರ್ಷದಿಂದ ಬೆಂಗಳೂರಿನ ಗೋ ಸ್ಪೋರ್ಟ್ಸ್ ಪೌಂಡೇಶನ್ 2017ರಿಂದ ಕ್ರೀಡಾ ವೆಚ್ಚ ಭರಿಸುತ್ತಿದೆ. ವರ್ಷಕ್ಕೆ 3 ಲಕ್ಷದವರೆಗೂ ನೀಡಿ ಪ್ರೋತ್ಸಾಹಿಸುತ್ತಿದೆ. ಸದ್ಯ ನಾನು ಬೆಳಗಾವಿ ಲಿಂಗರಾಜ ಕಾಲೇಜಿನಲ್ಲಿ ಕಾಮರ್ಸನಲ್ಲಿ ವ್ಯಾಸಾಂಗ ಮಾಡುತ್ತಿದ್ದೇನೆ. ತರಬೇತುದಾರರಾದ ರಾಘವೇಂದ್ರ ಅನ್ವೇಕರ, ರಾಜೇಶ ಶಿಂಧೆ, ಪ್ರಸಾರ ತೆಂಡೂರ್ಲ್ಕ ಇವರ ಸಹಾಯ ಇಲ್ಲದೇ ಹೋಗಿದ್ದರೆ, ನಾ ಯಾರೆಂದು ಯಾರಿಗೂ ಗೊತ್ತಾಗುತ್ತಿರಲಿಲ್ಲ. ಇವರ ಸಹಾಯ ಎಂದಿಗೂ ಮರೆಯಲಾರದ್ದು.ವಿಶ್ವ ಪ್ಯಾರಾ ಈಜುನಲ್ಲಿ ಭಾಗಿ:
ಜೂ. 7 ರಿಂದ 10ರವರೆಗೂ ಜರ್ಮನ ದೇಶದ ಬರ್ಲಿನ್‌ನಲ್ಲಿ ನಡೆದ ವಿಶ್ವ ಪ್ಯಾರಾ ಈಜು ಸ್ಪಧೆಯಲ್ಲಿ ಭಾಗವಹಿಸಿ 100 ಮೀರ್ಟ್ ಪ್ರೀ ಸ್ಟೈಲ್‌ನಲ್ಲಿ 1 ನಿಮಿಷ 10 ಸೆಕೆಂಡ್‌ನಲ್ಲಿ ಗುರಿ ಮುಟ್ಟಿ 11ನೇ ಸ್ಥಾನ ಪಡೆದು ಕೊಂಡೆ, ಅದು ಒಂದೇ ಸೆಕೆಂಡನಲ್ಲಿ ಎರಡು ಸ್ಥಾನ ಕೈತಪ್ಪಿತು. ಬರ್ಟ ಪ್ಲೈನಲ್ಲಿ 1.16 ಸೆಕೆಂಡ್‌ನಲ್ಲಿ ಗುರಿ ಮುಟ್ಟಿ 5ನೇ ಸ್ಥಾನ ಪಡೆದುಕೊಂಡು ಏಶಿಯನ್ ಗೇಮ್ಸ್‌ಗೆ ಕ್ವಾಲಿಪೈ ಆಗಿದ್ದೇನೆ. ಈ ಸ್ಪರ್ಧೆಯಲ್ಲಿ 34 ದೇಶಗಳ 30ಕ್ಕೂ ಹೆಚ್ಚು ಸ್ಪರ್ಧಾಳುಗಳು ಪಾಲ್ಗೊಂಡಿದ್ದರು. ಇವರೆಲ್ಲೂರಿಗೂ ಕಠಿಣ ಸವಾಲೊಡ್ಡಿದ ಹೆಮ್ಮೆ ನನಗಿದೆ.
ಅದ್ಭುತ್ ಸಾಧನೆ:
ನಾನು ಮೊದಲ ಬಾರಿಗೆ 2012ರಲ್ಲಿ ಚನೈನಲ್ಲಿ ನಡೆದ 12ನೇ ಪ್ಯಾರಾ ಓಲಂಪಿಕ್ ಈಜು ಹಾಗೂ ವಾರ್ಟ ಪೋಲೋ ಸ್ಪರ್ಧೆ ಮಾಡಿದೆ. ಇಲ್ಲಿ ಅಮೋಘ ಪ್ರದರ್ಶನ ನೀಡಿ 2 ಚಿನ್ನ, 1 ಬೆಳ್ಳಿ, 1 ಕಂಚಿನ ಪದಕ ಪಡೆಯುವ ಮೂಲಕ ಕ್ರೀಡಾ ಕ್ಷೇತ್ರದಲ್ಲಿ ನನ್ನನ್ನು ನಾನು ಗುರುತಿಸಿಕೊಂಡರ. ನಂತರ 2013ರಲ್ಲಿ ಬೆಂಗಳೂರಿನಲ್ಲಿ ನಡೆದ 13ನೇ ಪ್ಯಾರಾ ಓಲಂಪಿಕ್ ಕ್ರೀಡಾಕೂಟದಲ್ಲಿ ಭಾಗವಹಿಸಿ ಈಜು ಹಾಗೂ ವಾರ್ಟ ಪೋಲೋದಲ್ಲಿ 4 ಬೆಳ್ಳಿ ಪದಕ ಸಂಪಾದಿಸಿದೆ.. ಇನ್ನೂ ಮಧ್ಯಪ್ರದೇಶದ ಇಂದೋರದಲ್ಲಿ ನಡೆದ 14ನೇ ಅಂಗವಿಕಲ ರಾಷ್ಟ್ರೀಯ ಈಜು ಚಾಂಪಿಯನ್‌ಶಿಪ್‌ನಲ್ಲಿ 4 ಚಿನ್ನ, 1 ಕಂಚು, 2017ರಲ್ಲಿ ಉದಯಪುರಲ್ಲಿ ನಡೆದ 17ನೇ ರಾಷ್ಟ್ರೀಯ ಪ್ಯಾರಾ ಈಜು ಸ್ಪರ್ಧೆಯಲ್ಲಿ 5 ಚಿನ್ನ ನನ್ನದಾಯಿತು. 2017ರಲ್ಲಿ ದುಬೈನಲ್ಲಿ ನಡೆದ ಏಶಿಯನ್ ಯುಥ್ ಪ್ಯಾರಾ ಗೇಮ್ಸ್‌ನಲ್ಲಿ 1 ಬೆಳ್ಳಿ, 2 ಕಂಚಿಗೆ ಕೊರಳೊಡ್ಡಿದೆ. ಇದೆಲ್ಲವನ್ನು ನೋಡಿ ಅನೇಕ ಸಂಘ, ಸಂಸ್ಥೆಗಳು ಸನ್ಮಾನಿಸಿ ಪುರಸ್ಕರಿಸಿವೆ. ಮತ್ತಷ್ಟು ಸಾಧನೆ ಮಾಡಲು ಹುಮ್ಮಸ್ಸು ತುಂಬಿವೆ.ಸಾಧನೆಗೆ ಅಂಗವೈಖಲ್ಯ ಅಡ್ಡಿಯಲ್ಲ. ನಾನು ಕೂಡಾ ಅಂಗವೈಖಲ್ಯ ಇದೇ
No comments:
Post a Comment