ಮಂಜುನಾಥ ಗದಗಿನ
ಕ್ಯಾಂಪಸ್ ಬಣ್ಣದ ಬದುಕಿನ ಚಿನ್ನದ ದಿನಗಳಿಗೆ ಕಾರಣವಾಗುವ ಕಲರ್ ಕಲರ್ ಲೋಕ. ಇಲ್ಲಿ ಹುಟ್ಟುವ ಅದೇಷ್ಟೋ ಆಸೆ, ಆಕಾಂಕ್ಷೆಗಳು ಬದುಕಿನ ಕೊನೆ ದಿನಗಳವರೆಗೂ ಜೊತೆಯಾಗಿಯೇ ಇರುತ್ತವೆ. ಇಂತಹ ಕ್ಯಾಂಪಸ್ ಎಂಬ ಬಣ್ಣದ ಲೋಕಕ್ಕೆ ಕಾಲಿಟ್ಟ ಮೇಲೆ ಜಾಗ್ರತರಾಗಿರುವುದು ಮುಖ್ಯ. ಓದು ಬಿಟ್ಟು ಇತರೆ ಖಯಾಲಿಗಳಿಗೆ ಅಂಟಿಕೊಂಡೆ ಬದುಕು ಜಾರಿ ಬಿದ್ದಿತು ಜೋಕೆ..!
ಕ್ಯಾಂಪಸ್ ಹದಿಹರೆಯದ ಯುವಕ, ಯುವತಿಯರ ಕನಸುಗಳ ಲೋಕ. ಹಳ್ಳಿ ಹುಂಬ ಕೂಡಾ ಇಲ್ಲಿಯ ಮಾಯಗೆ ಜೋತು ಬಿದ್ದು, ರಜನಿಕಾಂತನನ್ನೇ ಮಿರಿಸುವ ಸ್ಟೈಲ್‌ಕಿಂಗ್ ಆಗಿ ಬದಲಾಗತಾನೆ. ಪುಟ್ಟ ಗೌರಿ ತರಹ ಗರ್ತಿ ಗೌರಮ್ಮನ ಹಾಗೆ ಲಂಗಾ ದಾವಣಿ ಹಾಕ್ಕೊಂಡು ಹಳ್ಳಿಯಲ್ಲಿ ಹವಾ ಮೆಂಟೇನ್ ಮಾಡೋ ಹುಡುಗಿಯೂ ಇಲ್ಲಿ ಬಂದು ಜೀನ್ಸ, ಟೀಶರ್ಟ ಹಾಕ್ಕೊಂಡು ರ‌್ಯಾಂಪ್ ಮೇಲೆ ಬಂದು ವಾಕ್ ಮಾಡತಾಳೆ. ಹೌದು! ಕ್ಯಾಂಪಸ್ ಮಹಿಮೆಯ ಅಂತಹದ್ದು, ಎಲ್ಲರನ್ನು ಒಗ್ಗಿ, ತಗ್ಗಿ, ಬಗ್ಗಿಸಿ ತನ್ನ ದಾಸರನ್ನಾಗಿಸಿಕೊಳ್ಳುತ್ತದೆ. ಹೀಗಂತ ನಾವು ಮೈ ಮರೆತು ಕ್ಯಾಂಪಸ್‌ಗೆ ಮೈಕೊಟ್ಟರೆ ಬದುಕು ಗೋವಿಂದ..ಗೋವಿಂದ.
ಹರೆಯದ ವಯಸ್ಸು ನೂರಾರು ಕನಸು ಎಂಬಂತೆ ಈ ನೂರಾರು ಕನಸುಗಳು ಬಹುತೇಕ ಹುಟ್ಟಿಕೊಳ್ಳುವುದು ಈ ಕ್ಯಾಂಪಸ್ ಎಂಬ ಅಖಾಡದಲ್ಲಿಯೇ. ಈ ಆಸೆಗಳ ಈಡೇರಿಕೆಗೆ ಯುವಕ, ಯುವತಿಯರು ಪಡುವ ಪಾಡು ಆ ದೇವರಿಗೆ ಪ್ರೀತಿ. ಸುಳ್ಳು, ಮೋಸ, ಕಾಮ, ಕ್ರೋದ, ಮದ, ಮತ್ಸರಗಳೆ ಆ ಆಸೆಗಳಿಗೆ ಬೆನ್ನೇಲುಬಾಗಿ ನಿಂತಿರುತ್ತವೆ. ನಾವೇಷ್ಟೇ ಪ್ರಾಮಾಣಿಕವಾಗಿ ಇರಬೇಕೆಂದು ಕೊಂಡರು ಕ್ಯಾಂಪಸನ್ ಕೆಲವೊಂದು ವಿಕೃತ ಮನಸ್ಸುಗಳು ಸುಮ್ಮನೆ ಬಿಡುವುದಿಲ್ಲ. ಕೆರಳಿಸಿ, ಕಾಡಿಸುತ್ತಲೇ ಇರುತ್ತವೆ. ಆದರೆ, ಅದನ್ನು ಮೀರಿ ನಮ್ಮ ಸುಂದರ ಬದುಕು ಕಟ್ಟಿಕೊಳ್ಳುವುದು ಇಲ್ಲಿ ಮುಖ್ಯವಾಗಿದೆ.
ನನಗೂ ಒಬ್ಬ ಗೆಳೆಯಬೇಕು ಎಂಬ ಸಾಲುಗಳು ಕ್ಯಾಂಪಸ್ ಮೆಟ್ಟಿಲು ಹತ್ತಿದ ಪ್ರತಿಯೊಬ್ಬ ಹುಡಗಿಯ ರಾಷ್ಟ್ರಗೀತೆಯಾಗಿ ಮನಸ್ಸಿನಾಳದಲ್ಲಿ ಪ್ರತಿದಿನ ಪ್ರತಿಧ್ವನಿಸುತ್ತಲೇ ಇರುತ್ತದೆ. ಕ್ಯಾಂಪಸ್‌ನ ಪ್ರತಿಯೊಂದು ಸಂದಿಗೊಂದಿಗಳು ಕೂಡಾ ಪ್ರೇಮಿಗಳ ಫೇವರೇಟ್ ಅಡ್ಡಾಗಳಾಗಿರುತ್ತವೆ. ಹೀಗೆ ಕ್ಯಾಂಪಸನ್ ಕಾರಿಡಾರ್‌ಗಳಲ್ಲಿ ಪ್ರೇಮಿಗಳು ಕೈ ಕೈ ಹಿಡಿಕೊಂಡು, ಹಣೆಗೆ ಮುತ್ತಿಕ್ಕೂತ್ತಾ ಸರಸ ತಲ್ಲಾಪಗಳಲ್ಲಿ ತಲ್ಲೀನರಾಗಿರುತ್ತಾರೆ. ಇಂತಹ ಸಮಯದಲ್ಲಿ ಹುಡುಗಿಯೊಬ್ಬಳು ತನಗೂ ಸುತ್ತಾಡಲೂ, ಹಣೆ ಮುತ್ತಿಕ್ಕೂವ ಗೆಳೆಯಬೇಕು ಎಂದು ಹಂಬಲಿಸದೇ ಇರಳು. ಇದೇ ಆಸೆಗೆ ಬಿದ್ದು ಅವಳು ಕೂಡಾ ಪ್ರೀತಿ, ಪ್ರೇಮ ಎಂಬ ಮೋಸದಾಟಕ್ಕೆ ಬಿದ್ದು, ಒದ್ದಾಡಲು ಶುರು ಮಾಡುತ್ತಾಳೆ. ಓದು, ಬರಹ ಬಿಟ್ಟು ಡೇಟಿಂಗ್, ಚಾಟಿಂಗ್ ಅಂತ ಸಿನಿಮಾ, ಗಾರ್ಡನ್ ಸುತ್ತಾಡಿ, ಹೆತ್ತವರ ಕಷ್ಟಗಳಿಗೆ ಬೆಲೆ ಇಲ್ಲದಂತೆ ಮಾಡುತ್ತಾರೆ. ಆದರೆ, ಈ ಪ್ರೀತಿ ಪ್ರೇಮ, ಕಾಮಕ್ಕೆ ಅಷ್ಟೇ ಸಿಮೀತವೋ..ಮದುವೆವರೆಗೂ ಮುಂದುವರೆಯುತ್ತದೇಯೋ ಆ ದೇವರೆ ಬಲ್ಲ. ಆದರೆ, ಹೆತ್ತ ತಂದೆ ತಾಯಿ ತಮ್ಮ ಮಕ್ಕಳು ಕಲಿತು ದೊಡ್ಡ ಹುದ್ದೆ ಅಲಂಕರಿಸಲಿ ಎಂದು ಕೂಲಿನಾಲಿ ಮಾಡಿ, ಓದಿಸುತ್ತಿರುತ್ತಾರೆ, ಆದರೆ, ಮಕ್ಕಳ ಮಾಡುವ ಗಂಧಾರಿ ಕೆಲಸವೇ ಬೇರೆಯಾರುತ್ತದೆ. ಅಲ್ಲಿ ತಂದೆ-ತಾಯಿಯ ಬೇವರ ಹನಿ ಇಲ್ಲಿ ಮಕ್ಕಳ ಕೈಯಲ್ಲಿ ಬೀರಾಗಿ ಪರಿವರ್ತನೆ ಹೊಂದಿರುತ್ತವೆ. ಕೆಟ್ಟ ಗೆಳೆಯರ ಸಹವಾಸ ಮಾಡಿ ದುಷ್ಟಟಗಳ ಅಡ್ಡಾಗಳಿಗೆ ಜೋತು ಬಿದ್ದು ಇಡೀ ಬದುಕನ್ನೇ ನಾಶ ಮಾಡಿಕೊಳ್ಳುವವರು ಇಲ್ಲಿದ್ದಾರೆ. ಕ್ಯಾಂಪಸ್ ಒಂದು ಬಿಳಿ ಹಾಳೆ ಇದ್ದ ಹಾಗೆ ಇಲ್ಲಿ ನಾವು ಏನನ್ನು ಬರೆಯುತ್ತೇವೆಯೂ ಹಾಗೆ ಬದುಕು ರೂಪಗೊಳ್ಳುತ್ತದೆ. ಅದಕ್ಕೆ ಇಲ್ಲಿ ಪ್ರೀತಿ, ಪ್ರೇಮ, ಕಾಮಗಳಿಗೆ ಫುಲ್‌ಸ್ಟಾಪ್ ಇಟ್ಟು, ಓದುಗೆ ನಾನ್‌ಸ್ಟಾಫ್ ಇಡಬೇಕು. ಅಂದಾಗ ಸುಂದರ ಬದುಕಿಗೆ ಮುನ್ನುಡಿ ಬರೆಯಲೂ ಸಾಧ್ಯ. ಕ್ಯಾಂಪಸ್ ಎಂದರೆ ಕೆಲವ ವಿಶಾಲವಾದ ಜಾಗೆಯಲ್ಲ. ಅದು ಮುಗ್ಧ ಮನಸ್ಸುಗಳ, ತಲೆ ಹರಟೆಗಳ, ಕಾಡಿಸಿ, ಕೆರಳಿಸುವವರ, ನಗು-ಅಳವಿಗೆ ಜೊತೆಯಾಗುವ, ಸ್ನೇಹಕ್ಕೆ ಸಿದ್ಧ ಸಮರಕ್ಕೂ ಬದ್ಧ ಎನ್ನುವ, ಹುಚ್ಚು ಕನಸುಗಳಿಗೆ ಬಣ್ಣ ತುಂಬಿ ತೇಲಾಡಿಸುವ ಬದುಕಿನ ಅವಿಭಾಜ್ಯ ಅಂಗ. ಇಲ್ಲಿ ಇಂದು ಸಾರಿ ಜಾರಿ ಬಿದ್ದರೆ, ಏಳುವುದು ಕಷ್ಟ, ಎದ್ದು ನಡೆದರೆ, ತಡೆಯುವುದು ಕಷ್ಟ. ಆಯ್ಕೆ ನಿಮ್ಮದು. ಬಿಳದೇ ಎದ್ದು ನಡೆಯಲು ಪ್ರಯತ್ನಿ ಅಷ್ಟೇ..

No comments:
Post a Comment