ಕರ ಹೆಚ್ಚಳ ವಿರೋಧಿಸಿ ಹೋರಾಟ | ಜೈಲು ಸುಟ್ಟು, ಎಂಟು ಪೊಲೀಸರ ಹತ್ಯೆ| ಸ್ವಾತಂತ್ರ್ಯ ಹೋರಾಟಕ್ಕೆ ಸ್ಫೂರ್ತಿ ನೀಡಿದ ಬಂಡಾಯ
-ಮಂಜುನಾಥ ಗದಗಿನ
ಜೈಲು ಧ್ವಂಸ ಮಾಡಿ, ಎಂಟು ಜನ ಪೊಲೀಸರನ್ನು ಕೊಚ್ಚಿಕೊಂದರು. ನಂತರ ಪೊಲೀಸರ ಗೋಲಿಬಾರ್‌ಗೆ ನಾಲ್ಕು ಜನ ಹೋರಾಟಗಾರರು ಪ್ರಾಣ ತ್ಯಾಗ ಮಾಡಿ ಆಗ ನಡೆಯುತ್ತಿದ್ದ ಸ್ವಾತಂತ್ರ್ಯ ಹೋರಾಟಕ್ಕೆ, ಚಳವಳಿಗಾರರಿಗೆ ಹುಮ್ಮಸ್ಸು, ಕಿಚ್ಚು ತುಂಬಿದ್ದು ರಾಮದುರ್ಗ ಸಂಸ್ಥಾನದ ಬಂಡಾಯ. ಈ ಬಂಡಾಯ ನಡೆದದ್ದು ಪ್ರಜಾಸಂಘದ ನೇತೃತ್ವದಲ್ಲಿ ಎನ್ನುವುದು ಸ್ವಾರಸ್ಯಕರ.
ದೇಶದಲ್ಲಿ ಬ್ರಿಟಿಷರು ವಿಧಿಸಿದ ಕರ ನಿರಾಕಣೆ ಸತ್ಯಾಗ್ರಹ ನಂತರ ಸಂಸ್ಥಾನವೊಂದರ ಕರನಿರಾಕಣೆ ಬಂಡಾಯ ಸ್ವಾತಂತ್ರ್ಯ ಹೋರಾಟದ ಕಾವಿಗೆ ಮತ್ತಷ್ಟು ಇಂಬು ನೀಡಿತ್ತು. ಅದು ೧೯೩೭ರ ಸಮಯ. ದೇಶದಲ್ಲಿ ಕಾನೂನು ಭಂಗ ಚಳವಳಿ ನಡೆಯುತ್ತಿತ್ತು. ಈ ವೇಳೆ ರಾಮದುರ್ಗ ಸಂಸ್ಥಾನದ ಆಳ್ವಿಕೆ ಮಾಡುತ್ತಿದ್ದ ರಾಜಾಸಾಹೇಬರು ದೇಶದಲ್ಲಿದ್ದ ತೆರಿಗೆಗಿಂತ ಹೆಚ್ಚಿನ ತೆರಿಗೆಯನ್ನು ಸಂಸ್ಥಾನದ ಜನರ ಮೇಲೆ ಹೇರಿದ್ದರು. ಆಗ ಬರಗಾಲ ಎದುರಾಗಿತ್ತು. ಹೀಗಾಗಿ ಜನರು ತೆರಿಗೆ ಕಡಿತಗೊಳಿಸಿ ಎಂದು ರಾಜಾಸಾಹೇಬರ ಹತ್ತಿರ ವಿನಂತಿಸಿಕೊಂಡರು. ಇದಕ್ಕೆ ರಾಜಾಸಾಹೇಬರು ಸೊಪ್ಪು ಹಾಕಲಿಲ್ಲ. ಹೀಗಾಗಿ ರಾಮದುರ್ಗ ಸಂಸ್ಥಾನದಲ್ಲಿ ಕರನಿರಾಕರಣೆ ಸತ್ಯಾಗ್ರಹ ಆರಂಭಗೊಂಡಿತು. ಈ ವೇಳೆ ಪ್ರಜಾಸಂಘ ಹುಟ್ಟಿಕೊಂಡಿತು. ಇದರ ಅಧ್ಯಕ್ಷರಾಗಿ ವಕೀಲ ಬಿ.ಎನ್.ಮುನವಳ್ಳಿಯವರು ಆಯ್ಕೆಯಾದರು.
ಪ್ರಜಾಸಂಘ ಸ್ಥಾಪನೆಯಾದ ನಂತರ ರಾಮದುರ್ಗ ಗ್ರೂಪ್, ಸುರೇಬಾನ ಗ್ರೂಪ್, ಮೆಣಸಗಿ ಗ್ರೂಪ್ ಎಂದು ಮೂರು ಸ್ವಯಂ ಸೇವಕರ ಸಂಘಟನೆಗಳನ್ನು ಮಾಡಿಕೊಂಡು ಒಂದೊಂದು ಸಂಘಟನೆ ವಸ್ತ್ರಸಂಹಿತೆ ಮಾಡಿಕೊಂಡು ಹಳ್ಳಿಹಳ್ಳಿಗಳಲ್ಲಿ ತಿರುಗಾಡಿ ಪೊಲೀಸರು ಊರೊಳಗೆ ಹೋಗದಂತೆ ಬಹಿಷ್ಕಾರ ಹಾಕಿದರು. ಪೊಲೀಸರು ಊರಲ್ಲಿ ಬಂದರೆ ಚಹ ಸಹ ನೀಡದಂತೆ ತಿಳಿಸಿ ತಡೆದು ಬಂದರು. ಹಳ್ಳಿಗಳಲ್ಲಿಯ ಸಮಸ್ಯೆಗಳನ್ನು ಪ್ರಜಾಸಂಘದ ಸ್ವಯಂ ಸೇವಕರೇ ಪರಿಹರಿಸುತ್ತಿದ್ದರು. ಕಾನೂನುಗಳನ್ನು ಉಲ್ಲಂಘಿಸಿದವರಿಗೆ ಶಿಕ್ಷೆ ಕೂಡ ನೀಡುತ್ತಿದ್ದರು. ಈ ಹೋರಾಟ ಸ್ವಾತಂತ್ರ್ಯ ಚಳವಳಿಗೆ ಸ್ಫೂರ್ತಿ ನೀಡಿತು. ನಾ.ಸು.ಹರ್ಡಿಕರ, ಗಂಗಾಧರರಾವ್ ದೇಶಪಾಂಡೆ ಅವರು ಇಲ್ಲಿಗೆ ಬಂದು ಅವಲೋಕನ ಮಾಡುತ್ತಿದ್ದರು. ಅಷ್ಟೇ ಅಲ್ಲದೇ ತಮ್ಮ ಸ್ವಾತಂತ್ರ್ಯ ಹೋರಾಟದಲ್ಲಿಯೂ ಇದನ್ನು ಅನುಸರಿಸುತ್ತಿದ್ದರು.
ಸಂಸ್ಥಾನವೂ ಹೋರಾಟಗಾರರ ಬೇಡಿಕೆಗಳಿಗೆ ಸ್ಪಂದಿಸದಿದ್ದಾಗ ಪ್ರಜಾಸಂಘ ಉಗ್ರ ಹೋರಾಟಕ್ಕೆ ಅಣಿಯಾಯಿತು. ಈ ವೇಳೆ ಕೆಲವು ಬೇಡಿಕೆಗಳನ್ನು ಮುಂದಿಟ್ಟಿತು. ಭೂ ಕಂದಾಯವನ್ನು ಅರ್ಧದಷ್ಟು ಹಿಂದಕ್ಕೆ ಪಡೆಯಬೇಕು. ಆಡಳಿತದಲ್ಲಿ ಕನ್ನಡ ಭಾಷೆ ಬಳಸಬೇಕು. ಕನ್ನಡ ಬಾರದ ಅಧಿಕಾರಿಗಳನ್ನು ಕಿತ್ತುಹಾಕಬೇಕು. ವರಮಾನ ತೆರಿಗೆ ತಗ್ಗಿಸಬೇಕು. ಅನವಶ್ಯಕ ತೆರಿಗೆ ಹಿಂಪಡೆಯಬೇಕೆಂದು ಷರತ್ತು ಹಾಕಿತು. ಇದಕ್ಕೆ ಸಂಸ್ಥಾನಿಕರು ಒಪ್ಪಲಿಲ್ಲ. ಸಂಸ್ಥಾನದಲ್ಲಿ ೧೪೪ ಸೆಕ್ಷನ್ ಜಾರಿ ಮಾಡಿದರು. ಇದನ್ನು ಉಲ್ಲಂಘಿಸಿ ಪ್ರಜಾಸಂಘದವರು ಜೈಲು ಸೇರಿದರು.
ಅದೊಂದು ದಿನ ಪ್ರಜಾಸಂಘದ ಅಧ್ಯಕ್ಷ ಬಿ.ಎನ್.ಮುನವಳ್ಳಿ ಅವರನ್ನು ಪೊಲೀಸರು ಬಂಧಿಸಿದರು. ಅವರನ್ನು ಬಿಡುಗಡೆ ಮಾಡಬೇಕು ಎಂದು ಹೋರಾಟಗಾರರು ಜೈಲಿಗೆ ಮುತ್ತಿಗೆ ಹಾಕಿದರು. ಆದರೆ, ಪೊಲೀಸರು ಮಾತ್ರ ಮುನವಳ್ಳಿ ಅವರನ್ನು ನೋಡುವುದಕ್ಕೂ ಅವಕಾಶ ಕೊಡಲಿಲ್ಲ. ಇದರಿಂದ ರೊಚ್ಚಿಗೆದ್ದ ಹೋರಾಟಗಾರರು ಜೈಲಿಗೆ ಬೆಂಕಿ ಇಟ್ಟು, ಅಲ್ಲಿದ್ದ ಎಂಟು ಜನ ಪೊಲೀಸ್ ಅಧಿಕಾರಿಗಳನ್ನು ಹತ್ಯೆ ಮಾಡಿದರು. ಇದರಿಂದ ರೊಚ್ಚಿಗೆದ್ದ ಪೊಲೀಸರು ಗೋಲಿಬಾರ್ ಮಾಡಿದರು. ಈ ವೇಳೆ ನಾಲ್ಕು ಜನ ಹೋರಾಟಗಾರರು ಅಸುನೀಗಿದರು. ಆನಂತರ ಈ ಸಂಬಂಧ ವಿಚಾರಣೆ ನಡೆಯಲ್ಪಟ್ಟು ಎಂಟು ಜನಕ್ಕೆ ಫಾಶಿ (ಗಲ್ಲು) ಶಿಕ್ಷೆಯಾಗಿ, ಅನೇಕರಿಗೆ ಜೀವಾವಧಿ ಶಿಕ್ಷೆ ವಿಧಿಸಲಾಯಿತು. ಇನ್ನೂ ಕೆಲವರು ಜೈಲಿನಲ್ಲೇ ಸಾವನ್ನಪ್ಪಿದರು.
ದೇಶದ ಸ್ವಾತಂತ್ರ್ಯದ ಹೋರಾಟಕ್ಕೆ ಸ್ಫೂರ್ತಿ ತುಂಬಿದ ಪ್ರಜಾಸಂಘದ ಹೋರಾಟದಲ್ಲಿ ಮಹಾದೇವಪ್ಪ ಪಟ್ಟಣ, ಲಿಂಗನಗೌಡ ಪಾಟೀಲ, ಮರುಳಾರಾಧ್ಯ ಶಾಸ್ತ್ರಿಗಳು, ಮಹಾದೇವಪ್ಪ ಬಡಕಲಿ, ಗಿರಿಧರಲಾಲ ಲಾಠಿ, ಸಿದ್ಧಪ್ಪ ಮೇಟಿ, ರಾಮಪ್ಪ ಶಾಡ್ಲಗೇರಿ, ಈರಪ್ಪ ಡೋಣಿ, ನಿಂಗಪ್ಪ ಮೇಟಿ, ಮರಿಯಪ್ಪ ಪೂಜಾರಿ, ಟೀಕಪ್ಪ ಜಾಲೋಜಿ, ಫಕೀರಸಾಬ ಅಗಸರ, ಮಾನಪ್ಪ ಕೊಳ್ಳಿ, ಲಕ್ಕಪ್ಪ ಮುರುಡಿ, ಮಲ್ಲಪ್ಪ ಕುಂಬಾರ, ಮಹಾಲಿಂಗಯ್ಯ ಹಿರೇಮಠ ಹೀಗೆ ಅನೇಕ ಜನರು ಪಾಲ್ಗೊಂಡು ಸಂಸ್ಥಾನ ನಡುಗಿಸಿದ್ದು ಅಲ್ಲದೇ ಸ್ವಾತಂತ್ರ್ಯ ಹೋರಾಟಗಾರರಿಗೆ ಧೈಯ, ಸ್ಥೈರ್ಯ, ಕಿಚ್ಚು ತುಂಬಿದರು. ಇವರೆಲ್ಲರ ಸ್ಮರಣೆ ನಿಮಿತ್ತವಾಗಿ ಪ್ರಜಾಸಂಘದ ಅಧ್ಯಕ್ಷ ಬಿ.ಎನ್.ಮುನವಳ್ಳಿ ಅವರ ಪುತ್ಥಳಿಯನ್ನು ರಾಮದುರ್ಗದ ತೇರು ಬಜಾರ್‌ನಲ್ಲಿ ಪುತ್ಥಳಿಯನ್ನು ನಿರ್ಮಿಸಲಾಗಿದೆ.
---
ಹೋಗುವುದು ಹೇಗೆ?
ಬೆಳಗಾವಿಯಿಂದ ರಾಮದುರ್ಗ ೧೧೦ ಕಿಮೀ ಇದೆ. ಬೆಳಗಾವಿಯಿಂದ ನೇರವಾಗಿ ರಾಮದುರ್ಗಕ್ಕೆ ಬಸ್ ಸೌಲಭ್ಯವಿದೆ. ರಾಮದುರ್ಗ ಬಸ್ ನಿಲ್ದಾಣದಿಂದ ೨ ಕಿಮೀ ದೂರದಲ್ಲಿ ಈ ಪುತ್ಥಳಿ ಇದೆ.

No comments:
Post a Comment