ಹುಚ್ಚು ಮನಸ್ಸಿನ, ಮೌನದ ಮಾತು

Tuesday, 29 October 2019

ಸರಿಗಮಪದಲ್ಲಿ "'ಓಂಕಾರ''



ಮಂಜುನಾಥ ಗದಗಿನ
ಯಾವುದೇ ದೊಡ್ಡ ಮಟ್ಟದ ವೇದಿಕೆ ಅಲಂಕರಿಸದೇ ಘಟಾನುಘಟಿ ಸ್ಪರ್ಧಾಳುಗಳ ಮಧ್ಯೆ ಹಾಡಿ ವಿಜೇತರಾಗುವುದು ಸಾಮಾನ್ಯದ ಮಾತಲ್ಲ. ಆದರೆ, ಶ್ರದ್ಧೆ ಮತ್ತು ಗೆಲ್ಲಬೇಕು ಎಂಬ ಹಂಬಲ ಇದ್ದರೆ ಯಾವುದು ಅಸಾಧ್ಯವಲ್ಲ ಎಂದು ಸರಿಗಮಪ ಲಿಟಲ್ ಚಾಂಪ್ಸ್ ಸೀಸನ್-೧೬ರನ್ನು ಗೆದ್ದು ಸಾಧಿಸಿ ತೋರಿಸಿದ್ದಾನೆ ಈ ಬಾಲಕ.
ಹೌದು! ಆತ ಗೋಕಾಕದ, ಸರಿಗಮಪ ಲಿಟಲ್ ಚಾಂಪ್ಸ್ ಸೀಸನ್-೧೬ರ ವಿಜೇತ ಓಂಕಾರ ಪತ್ತಾರ. ಮನೆಯಲ್ಲಿ ಯಾರಿಗೂ ಸಂಗೀತದ ಗಂಧ ಗಾಳಿಯು ಗೊತ್ತಿಲ್ಲ. ಆದರೆ, ಈತ ಮಾತ್ರ ಸಂಗೀತ ದಿಗಜ್ಜರನ್ನು ಮೆಚ್ಚಿಸಿ ಚಾಂಪಿಯನ್ ಆಗಿ ಹೊರಹೊಮ್ಮಿದ್ದು ಮಾತ್ರ ಆಶ್ಚರ್ಯವೇ ಸರಿ.
ಶಿಕ್ಷಕರೇ ಕಾರಣ:
ಓಂಕಾರ ಪತ್ತಾರ ಮೂರನೇ ತರಗತಿಯಲ್ಲಿ ಓದುತ್ತಿರಬೇಕಾದರ, ಅದೇ ಶಾಲೆ ಶಶಿಕಲಾ ಎಂಬ ಶಿಕ್ಷಕರು ಓಂಕಾರ ಅವರಲ್ಲಿರುವ ಸಂಗೀತ ಪ್ರತಿಭೆಯನ್ನು ಮೊಟ್ಟಮೊದಲ ಬಾರಿ ಗುರುತಿಸಿದರು. ಅದು ಓಂಕಾರ ಅದೊಂದು ಕಾರ್ಯಕ್ರಮದಲ್ಲಿ ಅಮೋಘವಾಗಿ ಹಾಡಿ ಎಲ್ಲರಿಂದಲೂ ಸೈ ಅನಿಸಿಕೊಂಡಿದ್ದನು. ಶಶಿಕಲಾ ಮೇಡಂ ಓಂಕಾರನಲ್ಲಿ ಏನೊಂದು ವಿಶೇಷವಾದ ಪ್ರತಿಭೆಯಿದೆ. ಅದನ್ನು ಸೂಕ್ತವಾಗಿ ಗುರುತಿಸಬೇಕು ಎಂದುಕೊಂಡು ಈ ವಿಷಯವನ್ನು ಓಂಕಾರ ಪಾಲಕರಿಗೆ ತಿಳಿಸಿದರು. ಆದರೆ, ಓಂಕಾರ ಪಾಲಕರು ಇದನ್ನು ಅಷ್ಟೊಂದು ತಲೆಗೆ ಹಾಕಿಕೊಳ್ಳದೇ ಅಸಡ್ಡೆ ತೋರಿದರು. ಆದರೆ, ಶಶಿಕಲಾ ಮೇಡಂ ಮಾತ್ರ ಓಂಕಾರನಲ್ಲಿ ಇರುವ ಪ್ರತ್ರಿಭೆಯನ್ನು ಗಮನಿಸುತ್ತಾ ಅವನ ಪಾಲಕೆ ಮೇಲೆ ಒತ್ತಡ ಹಾಕಿದರು. ಇದರಿಂದ ಓಂಕಾರ ಪಾಲಕರು ಸಂಗೀತ ಶಾಲೆಗೆ ಸೇರಿಸಿದರು. ಆವಾಗಿನಿಂದ ಓಂಕಾರ ಶಿಸ್ತು ಬದ್ಧ ಸಂಗೀತ ಮಾಡಲು ಪ್ರಾರಂಭಿಸಿದ. ಹೀಗಾಗಿ ಗೋಕಾಕ ಸುತ್ತಲ ಅನೇಕ ಕಡೆಗಳಲ್ಲಿ ಸಣ್ಣಪುಟ್ಟ ಕಾರ್ಯಕ್ರಮಗಳನ್ನು ನೀಡುತ್ತಾ ಸಾಗಿದ.
ಸಿದ್ಧಾರೂಡರ ಕೃಪೆ:
ಓಂಕಾರ ತಾಯಿ ಊರು ಹುಬ್ಬಳ್ಳಿ. ಸಿದ್ಧಾರೂಡ ಮಠದ ಹಿಂದೆ ಇವರ ಮನೆ ಇದ್ದ ಕಾರಣ ಓಂಕಾರ ಹುಬ್ಬಳ್ಳಿಗೆ ಭೇಟಿ ನೀಡಿದಾಗೊಮ್ಮೆ ಸಿದ್ಧಾರೂಢರ ಮಠಕ್ಕೆ ಭೇಟಿ ನೀಡುತ್ತಿದ್ದ. ಈ ವೇಳೆ ಅಲ್ಲಿಯೇ ಕೆಲವು ಗಂಟೆಗಳ ಕಾಲ ಇರುತ್ತದ್ದ. ಈ ವೇಳೆ ಅಲ್ಲಿ ನಡೆಯುವ ಸಂಗೀತ ಕಾರ್ಯಕ್ರಮ ಹಾಗೂ ಪ್ರವಚನಗಳನ್ನು ಆಲಿಸುತ್ತಾ ಸಂಗೀತದಲ್ಲಿ ಆಸಕ್ತಿ ಬೆಳೆಸಿಕೊಂಡ. ಹೀಗಾಗಿ ಶಾಲೆಯಲ್ಲಿ ಅತ್ಯುತ್ತಮವಾಗಿ ಹಾಡಲು ಆರಂಭಿಸಿ ಪ್ರಥಮ ಸ್ಥಾನ ಪಡೆದುಕೊಳ್ಳುತ್ತಿದ್ದ.
ದೊಡ್ಡ ವೇದಿಕೆ ಇಲ್ಲ:
ಓಂಕಾರ ಒಬ್ಬ ಉತ್ತಮ ಹಾಡುಗಾರ ಎಂದು ಎಲ್ಲರಿಗೂ ತಿಳಿದಿತ್ತು. ಹೀಗಾಗಿ ಗೋಕಾಕ ಸುತ್ತಲ ಕಾರ್ಯಕ್ರಮಗಳು ನಡೆದರೆ ಓಂಕಾರನನ್ನು ಹಾಡುಗಾರನನ್ನಾಗಿ ಕರೆಸುತ್ತಿದ್ದರು. ಆದರೆ, ಈತ ಪಾಲ್ಗೊಳ್ಳುತ್ತಿದ್ದದ್ದು ಜಾತ್ರಾ ಮಹೋತ್ಸವ, ಬೀಳ್ಕೊಡುಗೆ ಸಮಾರಂಭಗಲ್ಲಿ ಮಾತ್ರ ಹಾಡುತ್ತಿದ್ದ. ಅತೀ ದೊಡ್ಡ ವೇದಿಕೆ ಎಂದರೆ ಪ್ರತಿ ವರ್ಷ ನಡೆಯುವ ಸತೀಶ ಶುಗರ್ಸ್‌ ಅವಾರ್ಡ್. ಈ ಕಾರ್ಯಕ್ರಮದಲ್ಲಿ ಹಲವು ಬಾರಿ ವಿಜೇತ ಕೂಡಾ ಆಗಿದ್ದಾರೆ.
ದೊಡ್ಡ ಗೆಲವು:
ಗೋಕಾಕನಲ್ಲಿ ನಡೆದ ಆಡಿಷನ್‌ನಲ್ಲಿ ಓಂಕಾರ ಪಾಲ್ಗೊಂಡಾಗ ಅವನಿಗೆ ಗೊತ್ತಿರಲಿಲ್ಲ. ನಾನು ಸೆಲೆಕ್ಷನ್ ಆಗುತ್ತೇನೆ ಎಂದು. ಆದರೆ, ಎರಡು ಸುತ್ತಗಳನ್ನು ಯಶಸ್ವಿಯಾಗಿ ಪೂರೈಸಿ ಕೊನೆಗೆ ಸರಿಗಮಪಕ್ಕೆ ಆಯ್ಕೆಯಾದ. ನಂತರ ಸರಿಗಮಪದಲ್ಲಿ ಪ್ರತಿಸಾರಿಯೂ ಗೊಲ್ಡನ್ ಬಜರ್ ಪಡೆದುಕೊಳ್ಳಲು ಪ್ರಾರಂಭಿಸಿದ. ಅಲ್ಲಿ ಎಲ್ಲರೂ ದೊಡ್ಡ ದೊಡ್ಡ ಸಂಗೀತ ಗುರುಗಳಿಂದ ಕಲಿತವರೇ ಇದ್ದರೂ, ನಾನು ಮಾತ್ರ ಅಷ್ಟೊಂದು ಸಂಗೀತ ಕಲಿತಿರಲ್ಲಿ. ಆದರೆ, ನನ್ನಲ್ಲಿ ಕಲಿಬೇಕು ಎಂಬ ಛಲ ಇತ್ತು. ಹೀಗಾಗಿ ನಾನು ದಿನನಿತ್ಯ ಸರಿಗಮಪ ವೇದಿಕೆಯಲ್ಲೇ ಅಭ್ಯಾಸ ಮಾಡಿ ವೇದಿಕೆ ಮೇಲೆ ದೃಢವಾಗಿ ಹಾಡುತ್ತಿದ್ದೇ ಹೀಗಾಗಿ ಈ ಸಾರಿಯ ಚಾಂಪಿಯನ್ ಆಗಲು ಕಾರಣವಾಯಿತು ಎಂದು ಹೇಳುತ್ತಾನೆ ಓಂಕಾರ.
ಪೈನಲನಲ್ಲಿ ತೀವ್ರವಾದ ಪೈಪೋಟಿ ಇತ್ತು. ಆದರೆ, ಕರುನಾಡಿನ ಜನರ ಓಂಕಾರ ಕೈ ಹಿಡಿದಿದ್ದರಿಂದ ಪೈನಲ್‌ನಲ್ಲಿ ವಿಜೇತದ ಮಾಲೆ ಧರಿಸಿ ₹೩೦ ಲಕ್ಷ ಬೆಲೆ ಬಾಳುವ ಸೈಟ್ ತನ್ನದಾಗಿಸಿಕೊಂಡ. ಗುರು ಕಿರಣ್ ಎರಡನೇ ಸ್ಥಾನ ಪಡೆದುಕೊಂಡ.ಸುನಾದ್ ಮೂರನೇ ಸ್ಥಾನ ಪಡೆದುಕೊಂಡ. ಒಟ್ಟಿನಲ್ಲಿ ತಂದರೆ ಪತ್ತಾರಿಕೆ, ತಾಯಿ ಗೃಹಣಿ ಇದ್ದರೂ, ಓಂಕಾರ ಪಾತ್ರ ಸಂಗೀತದಲ್ಲಿ ಚಾಂಪಿಯನ್ ಆಗಿದ್ದು ಮಾತ್ರ. ಇತರೆ ಬಾಲಕರಿಗೆ ಸ್ಫೂರ್ತಿಯಾಗಿದೆ. ಓಂಕಾರನ ಸಂಗೀತನ ನಿನಾನ ಇನ್ನಷ್ಟು ಹೊರ ಹೊಮ್ಮಲಿ ಎಂಬ ಆಶಯ ಎಲ್ಲರದ್ದು.

- October 29, 2019 No comments:
Email ThisBlogThis!Share to XShare to FacebookShare to Pinterest

Saturday, 26 October 2019

ನೋಡ ಬನ್ನಿ ಬೆಳಗಾವಿ ರಾಜ್ಯೋತ್ಸವ!


ಮಂಜುನಾಥ ಗದಗಿನ
ರಾಜಕೀಯ ಶಕ್ತಿ ಎಂದೇ ಬಿಂಬಿತವಾಗಿರುವ ಬೆಳಗಾವಿ ಭಾಷೆ ಹಾಗೂ ಗಡಿ ವಿವಾದಿಂದ ಒಂದಿಲ್ಲವೊಂದು ರೀತಿಯಲ್ಲಿ ರಾಜ್ಯದಲ್ಲಿ ಸದ್ದು ಮಾಡುತ್ತಲೇ ಇರುತ್ತದೆ. ಆದರೆ, ನವೆಂಬರ್ ೧ ಬಂತೆಂದರೆ ಸಾಕು ರಾಜ್ಯದ ಮನೆ, ಮನದ ಮಾತಾಗಿ ಬಿಡುತ್ತದೆ ಕುಂದಾನಗರಿ ಬೆಳಗಾವಿ. ಇದಕ್ಕೆ ಕಾರಣ ಅದ್ಧೂರಿ ರಾಜ್ಯೋತ್ಸವ.
ಹೌದು! ಇಡೀ ರಾಜ್ಯದಲ್ಲೇ ಕನ್ನಡ ರಾಜ್ಯೋತ್ಸವವನ್ನು ಒಂದು ದೊಡ್ಡ ಹಬ್ಬ ಎಂಬಂತೆ ಆಚರಿಸುವುದು ಅದು ಬೆಳಗಾವಿಯಲ್ಲಿ ಮಾತ್ರ. ಪ್ರತಿ ವರ್ಷ ಬರುವ ಹಬ್ಬಗಳನ್ನು ಕೂಡಿ ಆಚರಿಸುತ್ತಾರೋ ಇಲ್ಲ, ಆದ್ರೆ ರಾಜ್ಯೋತ್ಸವ ಬಂತು ಎಂದರೆ ಸಾಕು ಜಿಲ್ಲೆಯಲ್ಲಿ ಕನ್ನಡ. ಕನ್ನಡ ಎಂಬುವುದು ಘೋಷ ವ್ಯಾಕ್ಯವಾಗಿ ಬಿಡುತ್ತದೆ. ಅಷ್ಟರ ಮಟ್ಟಿಗೆ ಬೆಳಗಾವಿ ರಾಜ್ಯೋತ್ಸವ ಎಲ್ಲರ ಹಬ್ಬವಾಗಿ ಬಿಟ್ಟಿದೆ.
ಯಾಕೆ ಇಷ್ಟೊಂದು ಅದ್ಧೂರಿ?:
ಬೆಳಗಾವಿ ಗಡಿ ಪ್ರದೇಶ. ಇದೇ ಕಾರಣಕ್ಕ ನೆರೆ ಮಹಾರಾಷ್ಟ್ರ ಪದೇಪದೇ ಕಾಲು ಕೆದರಿಕೊಂಡು ಗಡಿ ವಿವಾದ ಹುಟ್ಟು ಹಾಕಿ ತನ್ನ ಅಸ್ತಿತ್ವವನ್ನು ಸಾಬೀತುಪಡಿಸುತ್ತಲೇ ಇರುತ್ತದೆ. ಇನ್ನು ಭಾಷಾವಾರು ರಾಜ್ಯ ರಚನೆ ಮುಂದಾದಾಗ ನಮ್ಮನ್ನು ಕಡೆಗಣಿಸಿ ರಾಜ್ಯ ರಚನೆ ಮಾಡಲಾಗಿದೆ ಎಂದು ಬೆಳಗಾವಿಯ ಮರಾಠಿ ಭಾಷಿಕರು ಎಂಇಎಸ್ (ಮಹಾರಾಷ್ಟ್ರ ಏಕೀಕರಣ ಸಮಿತಿ) ವತಿಯಿಂದ ರಾಜ್ಯೋತ್ಸವ ದಿನದಂದು ಪ್ರತಿವರ್ಷ ಕಪ್ಪು ಪಟ್ಟಿ ಧರಿಸಿಕೊಂಡು ಕರಾಳ ದಿನ ಆಚರಿಸುತ್ತಾ ಬಂದಿದ್ದಾರೆ. ಆದರೆ, ಜಿಲ್ಲಾಡಳಿತ ಮಾತ್ರ ಹಲವು ಕಟ್ಟುನಿಟ್ಟಿನ ಸೂಚನೆ ಮೇರೆ ಅನುಮತಿ ನೀಡುತ್ತಾ ಬಂದಿದೆ. ಆದರೆ, ಎಂಇಎಸ್ ಮಾತ್ರ ಕೆಲವು ಸಾರಿ ಜಿಲ್ಲಾಡಳಿತದ ಷರತ್ತುಗಳನ್ನು ಮುರಿದು ಕನ್ನಡ ವಿರೋಧಿ ಚಟುವಟಿಕೆಗಳನ್ನು ಮಾಡುತ್ತಿದೆ. ಎಂಇಎಸ್ ಹಾಗೂ ಮಹಾರಾಷ್ಟ್ರಕ್ಕೆ ಸೆಡ್ಡು ಹೊಡೆಯಬೇಕೆಂಬ ಕಾರಣ ಬೆಳಗಾವಿಯಲ್ಲಿ ಕನ್ನಡ ರಾಜ್ಯೋತ್ಸವನ್ನು ಅದ್ಧೂರಿಯಾಗಿ ಆಚರಿಸುತ್ತಾ ಬಂದಿವೆ.
ಕನ್ನಡಮಯ:                                                                              
ನವೆಂಬರ್ ೧ ಬೆಳಗಾವಿಗರ ಪಾಲಿಗೆ ಅವಿಸ್ಮರಣೀಯ ದಿನ. ರಾಜ್ಯೋತ್ಸವ ಒಂದು ತಿಂಗಳು ಇರುವಾಗಲೇ ಕನ್ನಡ ರಾಜ್ಯೋತ್ಸವದ ತಯಾರಿಗಳು ಆರಂಭಗೊಂಡಿವೆ. ಹಲವು ಕನ್ನಡಪರ ಸಂಘಟನೆಗಳು ಯೋಜನೆಗಳನ್ನು ಹಾಕಿಕೊಂಡು ಕನ್ನಡಹಬ್ಬಕ್ಕೆ ತಯಾರಿ ನಡೆಸಿವೆ. ಇನ್ನು ನಗರದ ತುಂಬೆಲ್ಲ ಕನ್ನಡದ ಬಾವುಟಗಳು, ಕನ್ನಡಕ್ಕಾಗಿ ದುಡಿದ ಮಹನೀಯರ ಕಟೌಟ್‌ಗಳನ್ನು ಹಾಕಿ ಕನ್ನಡತನ ಮೆರೆಯುತ್ತಾರೆ. ಅದರಲ್ಲೂ ಮುಖ್ಯವಾಗಿ ಬೆಳಗಾವಿ ಹೃದಯ ಭಾಗ ಚೆನ್ನಮ್ಮ ಸರ್ಕಲ್ ರಾಜ್ಯೋತ್ಸವದ ಪ್ರಮುಖ ಕೇಂದ್ರವಾಗಿ ಬಿಟ್ಟಿದೆ.
ರಿಯಾಯಿತಿ, ಕಲಾತಂಡ:
ರಾಜ್ಯದ ಜನತೆಗೆ ದಸರಾ ನಾಡ ಹಬ್ಬವಾದರೆ ಬೆಳಗಾವಿಗರಿಗೆ ರಾಜ್ಯೋತ್ಸವ ನಾಡಹಬ್ಬವಾಗಿ ಮಾರ್ಪಟ್ಟಿದೆ. ಇದೇ ಕಾರಣಕ್ಕೆ ನ.೧ರಂದು ನಗರದ ಬಹುತೇಕ ಅಂಗಡಿ, ಮಾಲಗಳು ರಿಯಾಯಿತಿಗಳನ್ನು ಘೋಷಿಸಿ ಕನ್ನಡ ರಾಜ್ಯೋತ್ಸಕ್ಕೆ ತಮ್ಮ ಕೊಡುಗೆ ನೀಡುತ್ತಿವೆ. ಕಳೆದ ಸಾರಿ ಶೇ.೨೦ರಷ್ಟು ರಿಯಾಯಿತಿ ಘೋಷಿಸುವ ಮೂಲಕ ರಾಜ್ಯೋತ್ಸವಕ್ಕೆ ಇಂಬು ನೀಡಿದ್ದರು. ಇನ್ನೂ ರಾಜ್ಯೋತ್ಸವ ಚೆನಮ್ಮ ಸರ್ಕಲ್‌ನಲ್ಲಿ ಜನಜಾತ್ರೆ ನೆರೆದಿರುತ್ತದೆ. ಎಲ್ಲರ ಬಾಯಲ್ಲೂ ಕನ್ನಡದ ಮಾತು, ಕನ್ನಡದ ಬಾವುಟಗಳು ರಾರಾಜಿಸುತ್ತಿರುವುತ್ತವೆ. ಮತ್ತೊಂದೆಡೆ ಸ್ತಬ್ಧ ಚಿತ್ರಗಳು ಹಾಗೂ ಕಲಾತಂಡಗಳ ಮೆರೆವಣಿಗೆ ರಾಜ್ಯೋತ್ಸವಕ್ಕೆ ಕಳೆ ತಂದಿರುತ್ತದೆ. ಜಿಲ್ಲಾಡಳಿತ ಮುಂಚಿತವಾಗಿವೆ. ತಾಲೂಕುವಾರು ಸ್ತಬ್ಧ ಚಿತ್ರ ಹಾಗೂ ಕಲಾತಂಡಗಳಿಗೆ ಆಹ್ವಾನ ನೀಡಿರುತ್ತದೆ. ಅಂದಾಜು ೫೦ಕ್ಕೂ ಅಧಿಕ ಕಲಾ ತಂಡಗಳು ರಾಜ್ಯೋತ್ಸವದ ಮೆರವಣಿಗೆಯಲ್ಲಿ ಪಾಲ್ಗೊಂಡು ಕನ್ನಡಿಗರ ಮನ ತಣಿಸುತ್ತವೆ. ಮೆರವಣಿಗೆಯಲ್ಲಿ ಪಾಲ್ಗೊಂಡ ಉತ್ತಮ ಸ್ತಬ್ಧ ಚಿತ್ರ ಹಾಗೂ ಕಲಾ ತಂಡಗಳಿಗೆ ಸೂಕ್ತ ಬಹುಮಾನ ಕೂಡ ನೀಡಲಾಗುತ್ತಿದೆ.
ಸಂಗೀತ, ಹೋಳಿಗೆ, ಡ್ರೋಣ:
ಗಣೇಶ ಹಬ್ಬ ಬಿಟ್ಟರೆ ಮತ್ತೆ ಡಿಜೆ ಸದ್ದು ಕೇಳುವುದು ರಾಜ್ಯೋತ್ಸವ ದಿನದಂದು. ನಗರದ ಪ್ರಮುಖ ಓಣಿಯಿಂದ ಡಿಜೆಗಳನ್ನು ಟ್ರ್ಯಾಕ್ಟರ್‌ಗಳಲ್ಲಿ ಹಚ್ಚಿಕೊಂಡು ಬರುತ್ತಾರೆ. ಇದರೊಟ್ಟಿ ಪ್ರತಿಯೊಬ್ಬರ ಕನ್ನಡ ಧ್ವಜ ಹಿಡಿ ಕನ್ನಡ ಹಾಡುಗಳಿಗೆ ಹುಚ್ಚೆದ್ದು ಹೆಜ್ಜೆ ಹಾಕುತ್ತಾ ಕನ್ನಡ ಹಬ್ಬವನ್ನು ಅದ್ಧೂರಿಯಾಗಿ ಆಚರಿಸುತ್ತಾರೆ. ಇದಷ್ಟೇ ಅಲ್ಲದೇ ಹುಕ್ಕೇರಿ ಹಿರೇಮಠದಿಂದ ಪ್ರತಿ ವರ್ಷದ ರಾಜ್ಯೋತ್ಸವದ ದಿನದಂದು ಹೋಳಿಗೆ ಊಟವನ್ನು ಊಣಬಡಿಸಲಾಗುತ್ತಿದೆ. ಇನ್ನೂ ರಾಜ್ಯೋತ್ಸವನ್ನು ಸೆರೆ ಹಿಡಿಯಲೂ ಡ್ರೋಣ ಕ್ಯಾಮೆರ್‌ಗಳು ಹದ್ದಿನಂತೆ ಆಕಾಶದಲ್ಲಿ ತೇಲುತ್ತಿರುತ್ತವೆ.
ಟೀ ಶರ್ಟ್, ಸ್ಲೋಗನ್:
ಬೆಳಗಾವಿ ರಾಜ್ಯೋತ್ಸವ ಸಾಮಾಜಿಕ ಜಲತಾಣದಲ್ಲೂ ಭಾರಿ ಸದ್ದು ಮಾಡುತ್ತಿದೆ. ಕಳೆದ ಸಾರಿ ನಮ್ಮ ಬೆಳಗಾವಿ ಫೇಸ್ಬುಕ್ ಪೇಜ್‌ನಿಂದ ಯಾರಪ್ಪಂದ ಏನೈತಿ ಬೆಳಗಾವಿ ನಮ್ದೈತಿ ಅನ್ನುವ ಟೀಶರ್ಟ್ ಹಾಗೂ ಹಾಡು ಭಾರಿ ಸದ್ದು ಮಾಡುತ್ತಿದೆ. ಅಂದಾಜು ೩ ಸಾವಿರಕ್ಕೂ ಅಧಿಕ ಜನರು ಈ ಟೀ ಶರ್ಟ್ ಖರೀದಿಸಿ ರಾಜ್ಯೋತ್ಸವದಲ್ಲಿ ಪಾಲ್ಗೊಂಡಿದ್ದರು. ಈ ಬಾರಿ ಕೂಡಾ ‘ಏನ್ ಮಾಡ್ಕೋತಿ ಮಾಡ್ಕೋ, ಬೆಳಗಾವಿ ನಮ್ದೈತಿ ಬರ್ಕೋ’ ಎಂಬ ಸ್ಲೋಗನ್ ಸದ್ದು ಮಾಡುತ್ತಿದೆ. ಈಗಾಗಲೇ ಈ ಸ್ಲೋಗನ್ ಟೀಶರ್ಟ್‌ಗಳು ತಯಾರಿದ್ದು ರಾಜ್ಯೋತ್ಸವ ದಿನದಂದು ರಾರಾಜಿಸಲು ಅಣಿಯಾಗಿವೆ.
ರಾಜ್ಯೋತ್ಸವದ ಸವಿ ಸವಿಯ ಬೇಕಾದರೆ ನೀವು ರಾಜ್ಯೋತ್ಸವ ದಿನದಂದು ಬೆಳಗಾವಿಗೆ ಬರಲೇ ಬೇಕು. ಯಾಕಂದ್ರೆ ಇಲ್ಲಿಯ ರಾಜ್ಯೋತ್ಸವ ಸಂಭ್ರಮ ಮತ್ತೇಲ್ಲೂ ಕಾಣ ಸಿಗುವುದಿಲ್ಲ. ಈ ಬಾರೀ ರಾಜ್ಯೋತ್ಸವಕ್ಕೂ ಬೆಳಗಾವಿ ಮಂದಿ ಸನ್ನದ್ಧರಾಗಿ ಕನ್ನಡ ಡಿಂಡಿಂ ಬಾರಿಸಲು ಕಾಯ್ದು ಕುಳಿತಿದ್ದಾರೆ. 
- October 26, 2019 No comments:
Email ThisBlogThis!Share to XShare to FacebookShare to Pinterest

Wednesday, 25 September 2019

"ಪೈಲ್ವಾನ್" ಅಖಾಡದಲ್ಲಿ ರಾಮದುರ್ಗ ನಗೆ ಟಾನಿಕ್


"ಪೈಲ್ವಾನ್" ಕಿಚ್ಚ ಸುದೀಪ ಅಭಿನಯದ ಸದ್ಯದ ಬಾಕ್ಸ್ ಆಫೀಸನಲ್ಲಿ ಧೂಳ್ ಎಬ್ಬಿಸುತ್ತಿರುವ ಚಿತ್ರ. ಇಂತಹ ದೊಡ್ಡ ಚಿತ್ರದಲ್ಲಿ ಹಳ್ಳಿಯಿಂದ ಬಂದ ಪ್ರತಿಭೆಯೊಂದು ಕರುನಾಡಿನ ಜನರನ್ನು ತನ್ನ ಅಮೋಘ ಅಭಿನಯದ ಮೂಲಕ ನಗೆಗಡಲಿ ತೇಲುವಂತೆ ಮಾಡಿದೆ.
ಹೌದು!ಅವರೇ ಬೆಳಗಾವಿ ಜಿಲ್ಲೆಯ ರಾಮದುರ್ಗ ತಾಲೂಕಿನ ಅಪ್ಪಟ ಗ್ರಾಮೀಣ ಪ್ರತಿಭೆ ಅಪ್ಪಣ್ಣ(ಅಪ್ಪು) ರಾಮದುರ್ಗ.
ರಂಗಭೂಮಿಯಿಂದ ಬಂದ ಪ್ರತಿಭೆಯೊಂದು ಕನ್ನಡ ಚಿತ್ರರಂಗದಲ್ಲಿ ತನ್ನ ಅಭಿನಯದ ಮೂಲಕ ಛಾಪು ಮೂಡಿಸುತ್ತಿದೆ ಅಂದ್ರೆ ಸಣ್ಣ ಮಾತಲ್ಲ. ಪೈಲ್ವಾನ್ ಚಿತ್ರದಲ್ಲಿ ಸುದೀಪ ಪ್ರಥಮ ಹಿರೋ ಆಗಿ ನಟಿಸಿದ್ದರೆ, ಅಪ್ಪಣ್ಣ ಆ ಚಿತ್ರದ ಎರಡನೇ ಹಿರೋ ಆಗಿ ಎಲ್ಲರ ಮನಸ್ಸು ಗೆದ್ದು ನಾಡಿನ ಮನೆ ಮನದ ಮಾತಾಗಿದ್ದಾರೆ. "ಪಂಚ ಡೈಲಾಗ್ ಮೂಲಕ ಚಿತ್ರದಲ್ಲಿ ಎಲ್ಲರ ಗಮನ ಸೆಳೆದಿದ್ದಾರೆ. ನಿರ್ದೇಶಕ ಕೃಷ್ಣ ಅವರು ನನಗೆ ಅವಕಾಶ ಕೊಟ್ಟು ಬೆನ್ನು ತಟ್ಟಿದ್ದು, ಸುದೀಪ್ ಸರ್, ಸುನೀಲ್ ಶೆಟ್ಟಿ, ಶರತ್ ಲೋಹಿತಾಶ್ವ ಸೇರಿದಂತೆ ಅನೇಕ ನಟರೊಂದಿಗೆ ನಟಿಸಿದ್ದು ನನ್ನ ಬದುಕಿನ ಸಾರ್ಥಕತೆ ಅಂತಾ ಭಾವಿಸುತ್ತೇನೆ ಎನ್ನು ಇವರ ಮಾತುಗಳೇ ಹೇಳುತ್ತವೆ ಇವರ ಹೃದಯ ವೈಶಾಲತೆ ಹಾಗೂ ಅದ್ಭುತ್ ನಟ ಎಂದು.
ಅಪ್ಪಣ್ಣ ನಾಲ್ಕು ವರ್ಷವರಿದ್ದಾಗ ಅವರ ತಂದೆ ತೀರಿಕೊಂಡರು. ಆವಾಗ ಅಪ್ಪಣ್ಣ ಅವರ ತಾಯಿಗೆ ಪ್ರಪಂಚ ಎಂದರೆ ಏನು ಎಂಬ ಅರಿವೇ ಇರಲಿಲ್ಲ. ಇಂತಹ ಸಮಯದಲ್ಲೂ ಆ ತಾಯಿ ನಾಲ್ಕು ಜನರ ಮನೆಯ ಮುಸುರೆ ತಿಕ್ಕಿ ತನ್ನ ಇಬ್ಬರು ಗಂಡು ಹಾಗೂ ಒಂದು ಹೆಣ್ಣು ಮಗಳನ್ನು ಸಾಕಿ ಸಲುಹಿದರು. ಆದರೆ, ಅಪ್ಪಣ್ಣ ಮಾತ್ರ ತರ‌್ಲೆ ಮಾಡಿಕೊಂಡು, ಅವರಿವರನ್ನು ನಗಿಸುತ್ತಾ ಇದ್ದರು. ಆದರೆ, ಅಪ್ಪಣ್ಣ ಅವರ ತಾಯಿಗೆ ಮಾತ್ರ ಇದು ಇಷ್ಟವಾಗದೇ ಪ್ರತಿದಿನ ಬೈಯುತ್ತಿದ್ದರು. ಆದರೆ, ರಾಮದುರ್ಗ ಕಲಾವಿದರಾದ ಅಂತಾಪುರ ಬಾಬು ಹಾಗೂ ಅಶೋಕ ಗೋನಬಾಳ ಅವರು, ಅಪ್ಪಣ್ಣವರ ಈ ತರ‌್ಲೆ ತುಂಟಾಟದಲ್ಲಿ ಇದ್ದ ಆ ಒಂದು ಹಾಸ್ಯವನ್ನು ಗುರುತಿಸಿ, ಅಪ್ಪಣ್ಣನ ನಿನ್ನಲ್ಲಿ ಒಂದು ಅಗಾಧ ಹಾಸ್ಯ ಕಲೆ ಇದೆ. ಈ ಕಲೆಯನ್ನು ಹಾಳು ಮಾಡಿಕೊಳ್ಳಬೇಡ ಎಂದು ಪ್ರೋತ್ಸಾಹಿಸಿದರು. ಆವಾಗ ಅಪ್ಪಣ್ಣ ಅವರಿಗೆ ಒಳಿತು ಎಂದು ಕಾಣಿಸಿತು. ನಂತರ ಗುರುಗಳಾದ ಅಂತಾಪುರ ಬಾಬು ಅವರ ಸಹಾಯದಿಂದ 2015ರಲ್ಲಿ ನಿನಾಸಂನಲ್ಲಿ ಡಿಪ್ಲೋಮಾ ಇನ್ ಆರ್ಟ್ ತರಬೇತಿಗೆ ಸೇರಿಕೊಂಡರು. ಅಲ್ಲಿ ಉತ್ತಮ ತರಬೇತಿ ಪಡೆದುಕೊಂಡು ಅದ್ಭುತ ಕಲಾವಿದರಾಗಿ ಹೊರಹೊಮ್ಮಿದರು. ನಂತರ ಆಟಮಾಟ ಆಶ್ರಯದಲ್ಲಿ ಅಕ್ರಮ ಸಂತಾನ ಎಂಬ ನಾಟಕ ಪ್ರದರ್ಶನ ಮಾಡಿದರು. ಇದು ಭರ್ಜರಿ ಹಿಟ್ ಆಗಿ ಅಪ್ಪಣ್ಣ ಅವರಿಗೆ ಹೆಸರು ತಂದು ಕೊಟ್ಟಿತು. ಅನಂತರ ಅಪ್ಪು ಅವರ ಹಿಂದೆಯೇ ಅದೃಷ್ಟದ ಬಾಗಿಲು ತೆರೆಯುತ್ತಾ ಬಂದಿತು. ಇದು ಸಾಧ್ಯವಾಗಿದ್ದು ಕಲಾ ದೇವತೆಯಿಂದ ಎನ್ನುತ್ತಾರೆ ಅಪ್ಪು ರಾಮದುರ್ಗ. ಆದರೆ, ಯಾವ ವಿಶ್ವ ವಿದ್ಯಾಲಯವು ಕಲಿಸದ ಪಾಠವನ್ನು ಬಡತನ ಕಲಿಸುತ್ತದೆ ಎಂಬ ಮಾತು ಅಪ್ಪಣ್ಣ ಅವರಿಗೆ ಒಪ್ಪುವಂತಹದ್ದು, ಯಾಕಂದರೆ ಇವರು ಬಡತನದಲ್ಲಿ ಬೆಳೆದ ಪ್ರತಿಭೆ.

ಧಾರಾವಾಹಿ, ಸಿನಿಮಾದಲ್ಲಿ ನಟನೆ:

ತರ‌್ಲೆ ತುಂಟಾಟಗಳಿಂದ ಎಲ್ಲರ ಕಾಲೆಳೆಯುತ್ತಾ, ಎಲ್ಲರಿಂದಲೂ ತಿರಸ್ಕಾರಕ್ಕೊಳಗಾಗಿದ್ದ ಒಬ್ಬ ಯುವಕ ಧಾರವಾಹಿ, ಸಿನಿಮಾದಲ್ಲಿ ನಟನೆ ಮಾಡುವುದು ಎಂದರೆ ಸಾಮಾನ್ಯದ ಮಾತಲ್ಲ. ಆದರೆ, ಅಪ್ಪಣ್ಣ ಮಾತ್ರ ಇದಕ್ಕೆ ವಿರುದ್ಧ. ತನ್ನ ಋಣಾತ್ಮಕ ಶಕ್ತಿಯನ್ನೇ ಧನಾತ್ಮಕ ಶಕ್ತಿಯನ್ನಾಗಿಸಿಕೊಂಡು ಪ್ರಿನ್ಸ್‌ನಂತೆ ಮೇಲೆದ್ದು ಇಂದು ಸಿನಿಮಾ, ಧಾರಾವಾಹಿಗಳಲ್ಲಿ ಮಿಂಚು ಹರಿಸುತ್ತಾ, ಎಲ್ಲರನ್ನು ನಕ್ಕು ನಗಿಸುತ್ತಿದ್ದಾರೆ. ಅಷ್ಟೇ ಅಲ್ಲದೇ ಕಾಮಿಡಿ ಕಿಲಾಡಿಗಳಲ್ಲಿ ರಾಮದುರ್ಗದ ಕೀರ್ತಿ ಪತಾಕೆಯನ್ನು ಬಾನೆತ್ತಕ್ಕೆ ಹಾರಿಸುತ್ತಿದ್ದಾರೆ. ಅಪ್ಪಣ್ಣ ಆಕಾಶದೀಪ, ಮೀನಾಕ್ಷಿ ಮದುವೆ, ಪಾರ್ವತಿ ಪರಮೇಶ್ವರ ಎಂಬ ಸಿರಿಯಲ್‌ಗಳಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದಾರೆ. ಅಷ್ಟೇ ಅಲ್ಲದೇ ಧ್ವಜ, ರವಿಹಿಸ್ಟ್ರಿ ಮತ್ತೊಂದು ಹೆಸರಿಡದ ಸಿನಿಮಾದಲ್ಲಿ ಪ್ರಮುಖ ಪಾತ್ರಗಳಲ್ಲಿ ನಮ್ಮ ಕಲೆಯನ್ನು ಪ್ರದರ್ಶನ ಮಾಡಿದ್ದಾರೆ. ಆದರೆ, ಈ ಮೂರು ಚಿತ್ರಗಳು ಮುಂದಿನ ತಿಂಗಳು ಬಿಡುಗಡೆಯಾಗಲಿವೆ.

ಈಗಲು ತಾಯಿ ಬಾಳೆಹಣ್ಣ ಮಾರಾಟ:

ಅಪ್ಪಣ್ಣ ಅವರ ತಾಯಿ ಖಾಲಿ ಕುಳಿತುಕೊಳ್ಳುವವರು ಅಲ್ಲ. ಸದಾ ಒಂದಿಲ್ಲೊಂದು ಕಾಯಕದಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳುವವರು. ಅಪ್ಪಣ್ಣ ದೊಡ್ಡ ಕಲಾವಿದರಾಗಿದ್ದು ಸಹಿತ ಅವರ ಬಡತನ ಮಾತ್ರ ದೂರವಾಗಿಲ್ಲ. ತಾಯಿ ಮಾತ್ರ ಈಗಲೂ ರಾಮದುರ್ಗದಲ್ಲಿ ಬಾಳೇಹಣ್ಣಿನ ವ್ಯಾಪಾರ ಮಾಡುತ್ತಿದ್ದಾರೆ. ತಮ್ಮ(ಸಹೋದರ) ಗೌಂಡಿ ಕೆಲಸ ಮಾಡುತ್ತಿದ್ದಾರೆ. ಆದರೆ, ಅಪ್ಪಣ್ಣ ಅವರು ಮಾತ್ರ ಕಲಾ ಪೋಷಕರಾಗಿ ಎಲ್ಲರನ್ನು ನಕ್ಕು-ನಗಿಸುತ್ತಾ ಬಣ್ಣದ ಬದುಕಿನಲ್ಲಿ ತಮ್ಮದೇ ಛಾಪು ಮೂಡಿಸಿದ್ದಾರೆ. ಇವರ ಈ ನಟನೆ ಇನ್ನು ಹೆಚ್ಚು ಬೆಳೆಯಲಿ ಕುಂದಾನಗರಿಯ ಹೆಸರು ಪಸರಿಸಲಿ ಎಂಬುವುದು ಕಲಾಪ್ರೇಕ್ಷಕರ ಆಶಯ. ಚಿತ್ರರಂಗದಲ್ಲಿ ಇನ್ನಷ್ಟು ಅವಕಾಶಗಳು ಅಪ್ಪಣ್ಣ ಅಪ್ಪಟ ಪ್ರತಿಭೆಗೆ ಅರಸಿ ಬರಲಿ.
- September 25, 2019 No comments:
Email ThisBlogThis!Share to XShare to FacebookShare to Pinterest

Tuesday, 3 September 2019

ಕಂಡಕ್ಟರ್ ಮೂಗಿನಿಂದ ಕೊಳಲು ನಾದ!!!!

ಮಂಜುನಾಥ ಗದಗಿನ
 ಇವರು ಕೊಳಲು ವಾದನದಲ್ಲಿ ಎತ್ತಿದ ಕೈ. ಆದರೆ, ಎಲ್ಲರಂತೆ ಇವರು ಬಾಯಿಯಲ್ಲಿ ಕೊಳಲು ನುಡಿಸಿ ಸೈ ಅನಿಸಿಕೊಂಡವರಲ್ಲ. ಬದಲಾಗಿ ಮೂಗಿನಿಂದ ಕೊಳಲು ನುಡಿಸಿ ಎಲ್ಲರಿಂದಲೂ ಭೇಷ್ ಅನಿಸಿಕೊಂಡವರು.
ಹೌದು! ಅವರೇ ಬೆಳಗಾವಿ ಜಿಲ್ಲೆ ಹುಕ್ಕೇರಿ ತಾಲೂಕಿನ ಬೆಳವಿ ಗ್ರಾಮದ ನಿವಾಸಿ, ಸದ್ಯ ಸಂಕೇಶ್ವರ ಕೆಎಸ್‌ಆರ್‌ಟಿಸಿಯಲ್ಲಿ ಕಂಡಕ್ಷರ್ ಆಗಿ ಕಾರ್ಯ ನಿರ್ವಹಿ

ಸುತ್ತಿರುವ ಡಿ.ಆರ. ನದಾಫ್. ವೃತ್ತಿಯಲ್ಲಿ ಕಂಡಕ್ಷರ್ ಆದರೂ ನಾಸಿಕ ಕೊಳಲು ವಾದನ ಮೂಲಕ ಇದೀಗ ನಾಡಿನ ಮನೆ, ಮನದ ಮಾತಾಗಿದ್ದಾರೆ.
೩ನೇ ವಯಸಲ್ಲೆ ಆಸಕ್ತಿ:
ಅದೊಂದು ದಿನ ಮನೆಗೆ ಇವರ ಅಣ್ಣ ಕೊಳಲು ತಂದು ಕೊಳಲು ಕಲಿಯಲು ಪ್ರಯತ್ನ ಪಟ್ಟರು. ಆದರೆ, ಅದರಲ್ಲಿ ಅವರು ವಿಫಲರಾದರೂ, ಆದರೆ, ದಸ್ತಗಿರಿ ಅವರು ದನ, ಕುರಿ ಕಾಯುತ್ತಲೆ ಅದೇ ಕೊಳಲಿನಿಂದ ಪ್ರತಿದಿನ ಆಟವಾಡುತ್ತಾ, ಕೊಳಲು ನುಡಿಸುವುದನ್ನು ಕಲಿತುಕೊಂಡರು. ಆಗ ಅವರಿಗೆ ಕೇವಲ ಮೂರು ವರ್ಷ. ನಂತರ ದಿನಗಳಲ್ಲಿ ಕೊಳಲಿನಲ್ಲಿ ಪಾರಂಗತರಾಗಿ ಕೊಳಲು ವಾದನದಲ್ಲಿ ಮಿಂಚುತ್ತಿದ್ದಾರೆ. ಆದರೆ, ಕಳೆದ ೧೫ ವರ್ಷಗಳಿಂದ ಮೂಗಿನಿಂದ ಅದ್ಭುತ್ ನಾದ ಮೊಳಗಿಸುವ ಮೂಲಕ ಕಂಡಕ್ಟರ್‌ಕ್ಕೂ ಸೈ, ಕೊಳಲು ನುಡಿಸಲು ಜೈ ಅನ್ನುತ್ತಾರೆ, ಸಾಧನೆಯ ಶಿಖರ ಹತ್ತಿದ್ದಾರೆ.
ಚಿತ್ರಿಗೀತೆಗಳ ನಾದ:
ಈಗ ಮೂಗಿನಿಂದ ಚಿತ್ರಗೀತೆ, ಭಕ್ತಿ, ಜನಪದ, ತತ್ವ್ವಪದಗಳನ್ನು ನುಡಿಸುವುದೆಂದರೆ ಅತೀ ಸಲಿಸು. ಅಷ್ಟರ ಮಟ್ಟಿಗೆ ನೆರೆದ ಜನತೆರನ್ನು ನಾದಲೋಕಕ್ಕೆ ಕೊಂಡೈಯುವ ಶಕ್ತಿ ಇವರ ನಾಸಿಕ ಕೊಳಲು ನಾದಕ್ಕೆ ಇದೆ. ಇದೇ ಕಾರಣಕ್ಕೆ ಇವರು ನಾಡಿನ ಹಲವು ಕಡೆಗಳಲ್ಲಿ ಹೋಗಿ ನಾಸಿಕ ಕೊಳಲು ನಾದ ಪ್ರದರ್ಶನ ನೀಡಿ ಶಬ್ಬಾಷ ಅನಿಸಿಕೊಂಡಿದ್ದಾರೆ.
ಮೂಗಿನ ಒಂದು ಹೊಳ್ಳೆ ಮುಚ್ಚಿ, ಇನ್ನೊಂದು ಹೊಳ್ಳೆಯಿಂದ ನಾದ ಹೊರಡಿಸುವುದು ಎಂದರೆ ಸಾಮಾನ್ಯದ ಮಾತಾಲ್ಲ. ಆದರೆ, ದಸ್ತಗಿರಿ ಅವರಿಗೆ ಅದು ಕರಗತವಾಗಿದೆ. ಹೀಗಾಗಿಯೇ ಅವರು ಸಲಿಸಾಗಿ ಡಾ. ರಾಜಕುಮಾರ ಅವರ ಆಡಿಸಿ, ನೋಡು, ಬೀಳಿಸಿ ನೋಡು, ಹುಟ್ಟಿದರೆ ಕನ್ನಡ ನಾಡಲ್ಲಿ, ನಾನಿರುವುದು ನಿಮಗಾಗಿ ಇತ್ಯಾದಿ ಜನಪ್ರಿಯ ಚಲನಚಿತ್ರ ಗೀತೆಯ ಸಾಲುಗಳಾದ ಕಾಣದಂತೆ ಮಾಯವಾದನೋ, ನಮ್ಮ ಶಿವಾ, ನಾನಿರುವುದೇ ನಿಮಗಾಗಿ ಹೀಗೆ ರಾಜಕುಮಾರರ ಬಹುತೇಕ ಚಿತ್ರಗೀತೆಗಳನ್ನು ಕೊಳಲನ್ನು ನಾಸಿಕದ ಮೂಲಕ ನುಡಿಸುತ್ತಾರೆ.
ಭಕ್ತಿ, ದೇಶಪ್ರೇಮ ನಾದ:
ಸಂತ ಶಿಶುನಾಳ ಶರೀಫ ತತ್ವ ಪದಗಳನ್ನು ಅತೀ ಮಾರ್ಮಿಕವಾಗಿ ಭಕ್ತಿಯ ಅಲೆಯಲ್ಲಿ ತೇಲುವ ಹಾಗೇ ನುಡಿಸುತ್ತಾರೆ ಕಂಡಕ್ಟರ್ ನದಾಫ್ ಸರ್. ಅಷ್ಟೇ ಅಲ್ಲದೇ ನಂಬಿದೆ ನಿನ್ನಾ ನಾಗಾಭರಣ, ಕಾಯೋ ಹರಣ, ಗುಡಿಯ ನೋಡಿರಣ್ಣ, ದೇಹದ ಗುಡಿಯ ನೋಡಿರಣ್ಣ ಎಂಬಿತ್ಯಾದಿ ಭಕ್ತಿಗೀತೆ, ಹಾವು ತುಳಿದೀನಿ, ಬಿದ್ದಿಯಬ್ಬೇ ಮುದುಕಿ, ಹಾವು..ತರವಲ್ಲ ತಗಿ ನಿನ್ನ ತಂಬೂರಿ ಎಂಬ ಇತ್ಯಾದಿ ಇತ್ಯಾದಿ ಜನಪ್ರಿಯ ಗೀತೆಗಳು ಇವರು ನಾಸಿಕದ ಧ್ವನಿಯಲ್ಲಿ ಕೇಳುಗಳು ಕರ್ಣಗಳು ಪಾವನಗೊಳ್ಳುತ್ತವೆ. ನಾಡಗೀತೆ, ದೇಶಭಕ್ತಿ ಹಾಗೂ ರಾಷ್ಟ್ರಗೀತೆಗಳನ್ನು ಸಹಿತ ಇವರು ಕೊಳಲನ್ನು ನಾಸಿಕದ ಮೂಲಕ ನುಡಿಸಿ ನೆರೆದ ಜನರಲ್ಲಿ ದೇಶ ಪ್ರೇಮ ಉಕ್ಕಿಸುವ ಕೆಲವನ್ನು ಇವರು ಮಾಡುತ್ತಿದ್ದಾರೆ.
ಕನ್ನಡದೊಟ್ಟಿಗೆ ಹಿಂದಿ ಚಲನಚಿತ್ರ ಗೀತೆಗಳಾದ ಮನ್ ಡೋಲಿರೆ, ಆನೆ ಸೇ ಉಸ್ಕೆ ಆಯೆ ಬರ್ಹಾ, ತೆರೆ, ಮೇರೆ ಬೀಚ್ ಮೇ ಕೈಸಾ ಹೈ ಬಂಧನ್ ಸೇರಿದಂತೆ ಇತರೆ ಹಿಂದಿ ಚಿತ್ರಗೀತೆಗಳನ್ನು ನುಡಿಸುತ್ತಾರೆ.
ಎಲ್ಲೆಲ್ಲಿ ಪ್ರದರ್ಶನ:
ಇವರ ನಾಸಿಕ ಕೊಳಲು ವಾದನ ಸದ್ದು ನಾಡು, ಹೊರ ರಾಜ್ಯದ ವಿವಿಧೆಡೆ ಪಸರಿಸಿದೆ. ಬೆಳಗಾವಿ, ರಾಯಚೂರು, ಬೆಂಗಳೂರು, ಕಲಬುರ್ಗಿ, ವಿಜಯಪುರ, ಬಾಗಲಕೋಟೆ, ಗೋವಾ, ಮಹಾರಾಷ್ಟ್ರ, ಆಂದ್ರಪ್ರದೇಶ ಹೀಗೆ ಹಲವು ಕಡೆಗಳಲ್ಲಿ ಪ್ರದರ್ಶನ ನೀಡಿ ಎಲ್ಲರ ಮನ ಗೆದ್ದಿದ್ದಾರೆ. ಅಷ್ಟೇ ಅಲ್ಲದೇ  ಮೈಸೂರು ದಸರಾ, ಕನ್ನಡ ಸಾಹಿತ್ಯ ಸಮ್ಮೇಳನ, ಕಿತ್ತೂರ ಉತ್ಸವ, ಧಾರವಾಡದ ಕೃಷಿ ವಿವಿಯ ಕೃಷಿ ಮೇಳ ಇದೀಗ ಧಾರವಾಡದಲ್ಲಿ ನಡೆಯುತ್ತಿರುವ ೮೪ನೇ ಅಖಿಲ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಪಾಲ್ಗೊಂಡು ಅಲ್ಲಿಯು ನಮ್ಮ ನಾಸಿಕ ಕೊಳಲು ನಾದದ ನಿನಾದವರನ್ನು ಹರಡಲು ಸನ್ನದ್ಧರಾಗಿದ್ದಾರೆ.
ನಾಸಿಕ ನಾದಕ್ಕೆ ಬಂದ ಪ್ರಶಸ್ತಿಗಳು:
ಚಿಕ್ಕೋಡಿ ತಾಲೂಕಿನ ದುಳಗನವಾಡಿಯ ರಂಗದರ್ಶನ ಗ್ರಾಮೀಣ ವಿಕಾಸ ಸಂಘ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದ ಕೊಳಲು ಕಿಶೋರ ಪ್ರಶಸ್ತಿ ಹಾಗೂ ಬೆಂಗಳೂರಿನ ಕರ್ನಾಟಕ ಸಾಂಸ್ಕೃತಿಕ ಅಕಾಡೆಮಿಯು ಕರ್ನಾಟಕ ರತ್ನಶ್ರೀ ಪ್ರಶಸ್ತಿಗಳು ಇವರ ನಾದಕ್ಕೆ ಮನಸೋತು ಬಂದಿವೆ. ಹೀಗೆ ಇವರ ನಾದ ಅರಸಿ ಮತ್ತಷ್ಟು ಪ್ರಶಸ್ತಿಗಳು ಬರಲಿ ಎಂಬುವುದು ಎಲ್ಲರ ಆಶಯ. ಇವರ ಈ ಕಲೆಗೆ ಸಾರಿಗೆ ಇಲಾಖೆ ಕೂಡಾ ಸಾಥ್ ನೀಡುತ್ತಿದ್ದು, ಬೇಕೆಂದಾಗ ರಜೆ ನೀಡಿ ಕಳುಹಿಸುತ್ತಾರೆ, ಕಲೆಗೆ ಪ್ರೋತ್ಸಾಹ ತುಂಬುತ್ತಿದೆ. ಕಂಡಕ್ಟರ್ ವೃತ್ತಿ ಒತ್ತಡದ ವೃತ್ತಿ. ಈ ಒತ್ತಡ ವೃತ್ತಿಯ ಮಧ್ಯೆಯೂ ಒಂದು ವಿಶಿಷ್ಟ ಕಲೆಯ ಮೂಲಕ ನಾಡಿನಲ್ಲಿ ಮಾತಾಗಿರುವುದು ವಿಶಿಷ್ಟವೇ ಸರಿ.

- September 03, 2019 No comments:
Email ThisBlogThis!Share to XShare to FacebookShare to Pinterest

Sunday, 28 July 2019

ಅಂಗವೈಕಲ್ಯತೆ ಶಾಪವಲ್ಲ



ಮಂಜುನಾಥ ಗದಗಿನ
ಅಂಗವೈಕಲ್ಯತೆ ಶಾಪವಲ್ಲ, ಅದು ವರ ಎಂಬ ಮಾತು ಈ ಮಕ್ಕಳಿಗೆ ಅನ್ವಯಿಸುತ್ತದೆ. ಸಾಧಿಸುವ ಆತ್ಮಸ್ಥೈರ್ಯವೊಂದಿದ್ದರೆ ಎಂಬತಹ ಕಷ್ಟಗಳು ತಲೆಬಾಗುತ್ತವೆ. ಈ ಮಾತಿಗೆ ನಿದರ್ಶನ ಎಂಬಂತೆ ಈ ಅಂಧ ಮಕ್ಕಳು ನಮ್ಮ ಕಣ್ಮುಂದೆ ಸಾಧಿಸಿ ನಿಂತಿದ್ದಾರೆ.
ಗದಗ ಜಿಲ್ಲೆಯ ರೋಣ ತಾಲೂಕಿನ ಹೊಳೆ ಆಲೂರಿನ ಜ್ಞಾನ ಸಿಂಧು ಅಂಧ ಮಕ್ಕಳ ಶಾಲೆಯ ವಿದ್ಯಾರ್ಥಿಗಳು ನಾವ್ಯಾರಿಗೂ ಕಮ್ಮಿ ಇಲ್ಲ ಎಂಬಂತಹ ಸಾಧನೆ ಮಾಡಿ ತೋರಿಸಿ ಎಲ್ಲರೂ ಹುಬ್ಬೇರುವಂತೆ ಮಾಡಿದ್ದಾರೆ.
ದೇಶದ ಪ್ರಥಮ ಶಾಲೆ:
ಅದು ೨೦೧೦ನೇ ಇಸ್ವಿ. ಈ ವರ್ಷದಲ್ಲೆ ದೇಶದ ಪ್ರಥಮ ಅಂಧ ಮಕ್ಕಳ ಯೋಗ ಶಾಲೆ ಆರಂಭವಾಯಿತು. ಸ್ಥಳೀಯ ಯಚ್ಚರೇಶ್ವರ ಮಠದ ಸ್ವಾಮೀಜಿ ಪ್ರೇರಣೆ ಹಾಗೂ ಬೆಂಗಳೂರಿನ ನೆಸ್ಟ್ ಸಂಸ್ಥೆಯ ನೆರವಿನಿಂದ ಕೆಲೂರ ಕುಟುಂಬದಿಂದ ಆರಂಭಗೊಂಡಿತು. ಈ ಶಾಲೆ ಆರಂಭಕ್ಕೆ ಯೋಗಪಟು ಶಿವಾನಂದ ಕೆಲೂರ, ಅವರ ತಾಯಿ ತುಳಸಮ್ಮ ಸೇವೆ ಸ್ಮರಣೀಯ. ಶಾಲೆ ಆರಂಭಿಸಿದಾಗ ೫ ವಿದ್ಯಾರ್ಥಿಗಳು ಹಾಗೂ ಇಬ್ಬರು ಸಿಬ್ಬಂದಿ ಇದ್ದರು. ಈಗ ೧೦೦ಕ್ಕೂ ಹೆಚ್ಚು ವಿದ್ಯಾರ್ಥಿಗಳು, ೧೪ ಬೋಧಕ ಸಿಬ್ಬಂದಿ ಇದ್ದಾರೆ. ಎಲ್ಲ ಅಂಧ ಮಕ್ಕಳ ಶಾಲೆಯಲ್ಲಿರುವಂತೆಯೇ ಇಲ್ಲೂ ಮಕ್ಕಳಿಗೆ ಬ್ರೈಲ್ ಆಧಾರಿತ ಓದು-ಬರಹ, ಕಂಪ್ಯೂಟರ್ ತರಬೇತಿ, ಚಲನವಲನ ತರಬೇತಿ, ಕರಕುಶಲ, ಕ್ರೀಡೆ, ಸಂಗೀತ ಶಿಕ್ಷಣದ ಜೊತೆಗೆ ಯೋಗ ಶಿಕ್ಷಣಕ್ಕೆ ಆದ್ಯತೆ ನೀಡುತ್ತಿದ್ದಾರೆ. ೬ರಿಂದ ೧೮ ವರ್ಷ ವಯಸ್ಸಿನ ವಿಕಲಚೇನ ಮಕ್ಕಳು ಈ ಶಾಲೆಯಲ್ಲಿ ಇದ್ದಾರೆ. ೧ರಿಂದ ೯ನೇ ತರಗತಿಗಳು ಇಲ್ಲಿ ನಡೆಯುತ್ತಿವೆ. ಶಾಲೆಯಲ್ಲಿ ಮಕ್ಕಳಿಗೆ ಸ್ಪರ್ಶಾನುಭವದ ಮೂಲಕ ಯೋಗ ಹಾಗೂ ಮಲ್ಲಕಂಬ ತರಬೇತಿ ಕೊಡುತ್ತಿದ್ದಾರೆ.
ಉತ್ತಮ ಸಾಧನೆ:
೨೦೧೦, ೨೦೧೧ ಮತ್ತು ೨೦೧೨ರಲ್ಲಿ ನಿರಂತರವಾಗಿ ಮೂರು ಬಾರಿ ಮೈಸೂರು ದಸರಾದಲ್ಲಿ ಪಾಲ್ಗೊಂಡ ಗರಿಮೆ ಈ ಮಕ್ಕಳದ್ದು,  ೨೦೧೪ ಮತ್ತು ೨೦೧೫ರಲ್ಲಿ ಚಾಲುಕ್ಯ ಉತ್ಸವದಲ್ಲಿ, ೨೦೧೨ರಲ್ಲಿ ರನ್ನ ಉತ್ಸವದಲ್ಲಿ, ೨೦೧೬ರಲ್ಲಿ ಗದಗ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ, ೨೦೧೫ರಲ್ಲಿ ಮತ್ತು ೨೦೧೭ರಲ್ಲಿ ನಡೆದ ಅಖಿಲ ಭಾರತೀಯ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಈ ಸಾಧಕ ವಿದ್ಯಾರ್ಥಿಗಳು ಯೋಗ ಮತ್ತು ಮಲ್ಲಕಂಬ ಪ್ರದರ್ಶನ ನೀಡಿ ಎಲ್ಲರ ಹುಬ್ಬೇರಿಸಿದ್ದರು. ದೆಹಲಿಯಲ್ಲಿ ವಿಶ್ವ ಯೋಗ ದಿನ, ಯೋಗ ಸಪ್ತಾಹ ಮತ್ತು ಅಂತಾರಾಷ್ಟ್ರೀಯ ಯೋಗ ಹಬ್ಬದಲ್ಲಿ ಈ ಶಾಲೆ ಮಕ್ಕಳು ಪ್ರದರ್ಶನ ನೀಡಿದ್ದಾರೆ. ಮುಂಬೈನಲ್ಲಿ ನಡೆದ ಹೊರ ನಾಡು ಕನ್ನಡಿಗರ ಸಮ್ಮೇಳನ, ಯೋಗ ಒಲಿಂಪಿಯಾಡ, ೨೦೧೭ರಲ್ಲಿ ವಿಧಾನಸೌಧದ ಬ್ಯಾಂಕ್ವೆಟ್ ಹಾಲ್‌ನಲ್ಲಿ ಹಾಗೂ ಉದಯ ವಾಹಿನಿಯ ಲಿಟಲ್ ಚಾಂಪ್ಸ್ ವೇದಿಕೆಯಲ್ಲಿ ಶಾಲೆಯ ಮಕ್ಕಳು ಯೋಗ ಮತ್ತು ಮಲ್ಲಕಂಬ ಪ್ರದರ್ಶನ ನೀಡಿದ್ದಾರೆ. ೨೦೧೨ರಲ್ಲಿ ಬೆಂಗಳೂರಿನಲ್ಲಿ ಕೇಂದ್ರ ಸರ್ಕಾರ ಆಯೋಜಿಸಿದ್ದ ಅಂತಾರಾಷ್ಟ್ರೀಯ ಯೋಗ ಸ್ಪರ್ಧೆಯಲ್ಲಿ ಶಾಲೆಯ ಮಕ್ಕಳು ದ್ವಿತೀಯ ಮತ್ತು ತೃತೀಯ ಬಹುಮಾನ ಗಳಿಸಿದ್ದಾರೆ. ಈ ಸ್ಪರ್ಧೆಯಲ್ಲಿ ೪೦ ದೇಶಗಳಿಂದ ಬಂದಿದ್ದ ಸಾಮಾನ್ಯ (ಕಣ್ಣು ಕಾಣುವ) ಸ್ಪರ್ಧಾಳುಗಳುಗಳ ಎದುರು ಜ್ಞಾನಸಿಂಧು ಶಾಲೆಯ ೮ ಅಂಧ ವಿದ್ಯಾರ್ಥಿಗಳು ಈ ಸಾಧನೆ ಮೆಚ್ಚುವಂತಹದ್ದು.
ಪ್ರಶಸ್ತಿಗಳ ಗರಿ:
೨೦೧೦ರಲ್ಲಿ ವಿದ್ಯಾರ್ಥಿಗಳಾದ ಸರಸ್ವತಿ ಕಬಾಡರ, ಭೀಮಸಿ ಕಬಾಡರ, ಅಯ್ಯಪ್ಪ ಅಂತಕನವರಗೆ ಯೋಗ ಸಿರಿ’ ಪ್ರಶಸ್ತಿ ಲಭಿಸಿದೆ. ೨೦೧೧ರಲ್ಲಿ ಶಿರಡಿ ಸಾಯಿಬಾಬಾ ಟ್ರಸ್ಟ್ ರಾಷ್ಟ್ರೀಯ ಪ್ರಶಸ್ತಿ, ಬಾಗಲಕೋಟೆ ಹಬ್ಬ ಉತ್ಸವ ಸಮಿತಿಯಿಂದ ಕಲಾ ಭೂಷಣ ಪ್ರಶಸ್ತಿ ಹಾಗೂ ಬಸವರಾಜ ಹೊರಟ್ಟಿ ಅವರ ಅವ್ವ ಟ್ರಸ್ಟ್ ಪ್ರಶಸ್ತಿಗಳು ಸಂದಿವೆ. ೨೦೧೬ರಲ್ಲಿ ಶಾಲೆಯ ಸಂಚಾಲಕಿ ತುಳಸಮ್ಮ ಕೆಲೂರ ಅವರಿಗೆ ರಾಜ್ಯ ಸರ್ಕಾರ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಿದೆ. ೨೦೧೬ರಲ್ಲಿ ಕಲಬುರ್ಗಿಯ ದಿಗ್ಗಾಂವಿ ಸ್ಮರಣಾರ್ಥ ಟ್ರಸ್ಟ್‌ನ ₹೫ ಲಕ್ಷ ಮೊತ್ತದ ರಾಷ್ಟ್ರೀಯ ಕಾಯಕ ಸಿರಿ ಪ್ರಶಸ್ತಿ. ₹೫೦ ಸಾವಿರ ಮೊತ್ತದ ಕಾಯಕ ಯೋಗಿ ಪ್ರಶಸ್ತಿ ಶಾಲೆಯ ಸಂಚಾಲಕಿ ತುಳಸಮ್ಮ ಅವರಿಗೆ ಲಭಿಸಿದೆ. ವಿದ್ಯಾರ್ಥಿ ಮಣಿಕಂಠನಿಗೆ ೨೦೧೭ರ ಮಕ್ಕಳ ಸಮ್ಮೇಳನದಲ್ಲಿ ಮುಖ್ಯ ಅತಿಥಿ ಸ್ಥಾನ ನೀಡಿ, ಚಿಣ್ಣರ ಚಿನ್ನ ಪ್ರಶಸ್ತಿ, ೨೦೧೭ರ ಜುಲೈನಲ್ಲಿ ಕರ್ನಾಟಕ ಬಾಲ ವಿಕಾಸ ಅಕಾಡೆಮಿ ಪ್ರಶಸ್ತಿ ಮಣಿಕಂಠನಿಗೆ ಒಲಿದಿದೆ. ದೆಹಲಿಯಲ್ಲಿರುವ ಮೊರಾರ್ಜಿ ದೇಸಾಯಿ ರಾಷ್ಟ್ರೀಯ ಯೋಗ ಸಂಸ್ಥೆ ೨೦೧೮ರಲ್ಲಿ ಈ ಶಾಲೆಗೆ ಪ್ರಶಂಸಾ ಪತ್ರ ನೀಡಿದೆ. ಈಚೆಗೆ ಪುಟ್ಟಪತಿ ಶಿರಡಿ ಸಾಯಿ ಬಾಬಾ ಸಂಸ್ಥೆಯಿಂದ ಪ್ರಶಸ್ತಿ ಕೂಡಾ ದೊರೆತಿದೆ.
ಕರೆ ತರುತ್ತಾರೆ:
ಈ ಶಾಲೆ ವತಿಯಿಂದ ಹಳ್ಳಿ ಹಳ್ಳಿಗಳಿಗೆ ಹೋಗಿ ನಿಮ್ಮಲ್ಲಿ ಅಂಧ ಮಕ್ಕಳು ಇದ್ದರೆ ಅವರನ್ನು ನಮ್ಮ ಶಾಲೆಗೆ ಕರೆದುಕೊಂಡು ಬನ್ನಿ ನಾವು ವಿದ್ಯಾಭ್ಯಾಸ ಕೊಡುತ್ತೇವೆ ಎಂದು ಪ್ರಚಾರ ಮಾಡಿ ಮಕ್ಕಳನ್ನು ಕರೆತರುವ ಕೆಲಸವನ್ನು ಈ ಶಾಲೆಯ ಸಿಬ್ಬಂದಿ ಮಾಡುತ್ತಿದೆ. ಅಷ್ಟೇ ಅಲ್ಲದೇ ಜಾತ್ರೆ, ಮತ್ತೀತ್ತರ ಸಭೆ ಸಮಾರಂಭಗಳಲ್ಲೂ ಪ್ರಚಾರ ಮಾಡಿ ಅಂಧ ಮಕ್ಕಳನ್ನು ಕರೆ ತಂದು ಉಚಿತ ಶಿಕ್ಷಣ ನೀಡಿ ಸಾಧಕ ಮಕ್ಕಳನ್ನಾಗಿ ಮಾಡುತ್ತಿದ್ದಾರೆ. ಇಲ್ಲಿ ಕಲಿತ ಅದೇಷ್ಟೋ ಮಕ್ಕಳು ರಾಜ್ಯ, ರಾಷ್ಟ್ರಮಟ್ಟದಲ್ಲಿ ಪ್ರದರ್ಶನ ನೀಡಿ ಸೈ ಅನಿಕೊಂಡಿದ್ದಾರೆ. ಪ್ರತಿಯೊಬ್ಬರಲ್ಲೂ ಒಂದೊಂದು ಕಲೆ ಇರುವುದು ವಿಶೇಷ.
ನಿಮ್ಮ ಕಾರ್ಯಕ್ರಮಗಳಿಗೆ ಸ್ಟಾರ್ ನಟರನ್ನು ಕರೆ ತರುವ ಬದಲು, ಈ ಮಕ್ಕಳನ್ನು ಕರೆಸಿ ಪ್ರದರ್ಶನ ನೀಡಿ, ಆ ಮಕ್ಕಳಿಗೆ ಆರ್ಥಿಕ ಸಹಾಯವೂ ಆಗುತ್ತದೆ. ಮಕ್ಕಳ ಕಲೆ ಪ್ರದರ್ಶನಕ್ಕೆ ಒಂದು ವೇದಿಕೆಯೂ ದೊರೆಯುತ್ತವೆ ಎಂಬ ಮಾತು ಜನ ಸಾಮಾನ್ಯರದ್ದು.
- July 28, 2019 No comments:
Email ThisBlogThis!Share to XShare to FacebookShare to Pinterest

Monday, 22 July 2019

ಕರ್ ನಾಟಕಾ ಡ್ರಾಮಾ

ಸರ್ಕಾರ ಆಡ್ಸೋಣು..ಮೇಲೆ ಕುಂತೋನು..
ನಮ್ಗೆ ನಿಮಗೆ..ಯಾಕೆ ಟೆನ್ಷನ್ನು..
ಸರ್ಕಾರ ಉಳಿಸೋಣು..ಮೇಲೆ ಕುಂತವನು..
ನಮ್ಗೆ ನಿಮಗೆ..ಯಾಕೆ ಟೆನ್ಷನ್ನು...
ಲಗಾಮು ಸ್ಪೀಕರ್ ಕೈಲಿ..ನಾವೇನ ಮಾಡೋಣ..
ಎಲ್ಲಾರು ಕಿವಿ ಮುಚ್ಕೊಂಡ ಟಿವಿ ನೋಡೋಣ...😀

ಸರ್ಕಾರ ಆಡ್ಸೋಣು..ಮೇಲೆ ಕುಂತೋನು..
ನಮ್ಗೆ ನಿಮಗೆ..ಯಾಕೆ ಟೆನ್ಷನ್ನು..

ವಿಪಗೆ ರೂಲಯಾವುದು ಯಾವ್ದು, ಸದನಕ್ಕೆ ಮಿತಿಯಾವ್ದು..
ಆರೋಪದಲ್ಲಿ ನಿಜ ಯಾವ್ದು..ಮಾತಾಡೋದ್ರಲ್ಲಿ ಕರೇ ಯಾವ್ದು..
ಅತೃಪ್ತರು ಮನೆಮಾತು..ವಿಪ್ ಕಾರಾಬಾತು..
ಸದನ ಕುರುಕ್ಷೇತ್ರ ಆಯ್ತು?
ಆರೋಪ ಮಾಡಿದ ಮೇಲೆ ಬಿಪಿ ಬರ್ದೇ ಇರ್ತದ..
ನಮ್ಮ ಶಾಕರು ಹಿಂಗೆ ಅಂತ ಅವ್ನ ಕೈ ಬಿಡೋಕಾಯ್ತದ..
ನಾಲಿಗೆನ ಅವರ ಕೈಲಿಲ್ಲ ನಾವೇನ್ ಮಾಡೋಣ..
ಸ್ಪೀಕರು ಹೇಳಿದಾಕ್ಷಣ ಡ್ರಾಮಾ ಆಡೋರ ಡ್ರಾಮಾ ನೋಡೋಣ....

ಸರ್ಕಾರ ಆಡ್ಸೋಣು..ಮೇಲೆ ಕುಂತೋನು..
ನಮ್ಗೆ ನಿಮಗೆ..ಯಾಕೆ ಟೆನ್ಷನ್ನು..

ಒಂದು ಬಾಯಲ್ಲೂ ನೂರೆಂಟು ಸುಳ್ಲೂ...
ಇಲ್ಲೊಬ್ಬ ಸೂಪರ್ರು, ಅಲ್ಲೊಬ್ಬ ಪಾಪಲ್ರು..
ವಿಧಾನಸೌಧದ ಮೆಟಾಡೋರ್ರು..ಚಾನೆಲೂ ಓಡಿಸುತ್ತಾವ್ರು..ನೋಡಿ ಸುಸ್ತಾಗಿ ಮಲ್ಗವ್ನೆ..
ಯಾರಪ್ಪ ಎಬ್ಸೋರು..?
ಕೆಂಗಲ್ಲ ಹನಮಂತಯ್ಯ ಕಟ್ಸಿದ ಹಳೇ ವಿಧಾನಸೌಧದಲ್ಲೇ ಈ ಕಾರಬಾರು...
ಏನಾರೂ ನೋಡ್ಕೊಂಡ ಹೋಗು ಮತದಾರನೇ..ನಿಲ್ಲ ನಿನೆಲ್ಲೂ..
ಅತೃಪ್ತರು ರಾಜೀನಾಮೆ ಕೊಟ್ರೆ ನಾವೇನ್ ಮಾಡಾಣ..
ಅವರಿಗೂ ಅನರ್ಹತೆ ಬಣ್ಣ ಹಚ್ಚಿ ಆಟಾ ಆಡೋಣ...

ಸರ್ಕಾರ ಆಡ್ಸೋಣು..ಮೇಲೆ ಕುಂತೋನು..
ನಮ್ಗೆ ನಿಮಗೆ..ಯಾಕೆ ಟೆನ್ಷನ್ನು..

ಶಾಸಕ ಸ್ಥಾನಾನೆ ಟೆಂಪರ್ವರಿ ನಾವೇನ ಮಾಡಾಣ..ನಮ್ದೆ ಸರ್ಕಾರ ಉಳಿಯುಗಂಟ..ಡ್ರಾಮಾ ಆಡಾಣ...

*ಮಂಜು ಗದಗಿನ*❤
- July 22, 2019 No comments:
Email ThisBlogThis!Share to XShare to FacebookShare to Pinterest

Sunday, 14 July 2019

ಖಾಸಗಿ ಶಾಲೆ ಮೀರಿಸುವ ಸರ್ಕಾರಿ ಶಾಲೆ!

ಮಂಜನಾಥ ಗದಗಿನ

ಸರ್ಕಾರಿ ಕನ್ನಡ ಶಾಲೆಗಳೋ, ಅಲ್ಲೇನ ಕಲ್ಸ್ತಾರ, ಮಾಸ್ತಗೊಳಗೆ ಏನು ಬರಂಗಿಲ್ಲ, ಇನ್ನ ನಮ್ಮ ಮಕ್ಕಳಿಗೆ ಕಲ್ಸೋದ್ರಾಗ ಅಷ್ಟ ಐತಿ ಎಂದು ಸರ್ಕಾರಿ ಕನ್ನಡ ಶಾಲೆಗಳ ಬಗ್ಗೆ ಮೂಗು ಮುರಿದು ಮಾತನಾಡುವ ಜನರೇ ಹೆಚ್ಚು. ಆದರೆ, ಇಲ್ಲೊಂದು ಶಾಲೆ ಮಾತ್ರ ಖಾಸಗಿ ಶಾಲೆಗಳಿಗೆ ಸೆಡ್ಡು ಹೊಡೆಯುವ ಹಾಗೆ ಸ್ಮಾರ್ಟ್ ಆಗಿ, ರಾಜ್ಯದ ಮನೆ, ಮನದ ಮಾತಾಗಿದೆ.
ಹೌದು! ಅದೇ ರಾಯಬಾಗದ ತಾಲೂಕಿನ ನಿಡಗುಂದಿ ಗ್ರಾಮದ ಸರ್ಕಾರಿ ಕನ್ನಡ ಕಿರಿಯ ಪ್ರಾಥಮಿಕ ಶಾಲೆ. ಈ ಶಾಲೆ ಇಡೀ ರಾಜ್ಯದಲ್ಲೇ ಗಮನ ಸೆಳೆಯುವಂತೆ ಮಾಡಿದ ಕೀತಿ ಸಾಹಿತಿ ಹಾಗೂ ಶಾಲೆಯ ಶಿಕ್ಷಕ ವೀರಣ್ಣ ಮಡಿವಾಳರ ಎಂಬ ಅಸಾಧಾರಣ ವ್ಯಕ್ತಿ ಸಲ್ಲುತ್ತದೆ.
ಶಾಲೆಯೊಂದು ಭಾಷಾ ಪ್ರಯೋಗಾಲಯವಾಗಬೇಕು ಎಂಬ ಅಭಿಲಾಸೆಯಿಂದ ಮಡಿವಾಳ ಅವರು ಹಲವು ವರ್ಷಗಳಿಂದ ಶ್ರಮಿಸುತ್ತಾ ಬಂದಿದ್ದಾರೆ. ಈ ನಿಟ್ಟಿನಲ್ಲಿ ಸರ್ಕಾರಿ ಶಾಲೆಗಳೂ ಖಾಸಗಿ ಪಬ್ಲಿಕ್ ಶಾಲೆಗಳಿಗೆ ಪೈಪೋಟಿ ನೀಡಬೇಕು ಎಂಬ ಮಹತ್ತ ಕನಸನ್ನು ಕಟ್ಟಿಕೊಂಡು ಅದೊಂದು ದಿನ ಸಾಮಾಜಿಕ ಜಾಲತಾಣದಲ್ಲಿ ತಮ್ಮ ಮನದಾಳವನ್ನು ಹಂಚಿಕೊಂಡರು. ಇದನ್ನು ನೋಡಿದ ಸಹೃದಯಿಗಳು ಮಡಿವಾಳರ ಕನಸಿನ ಶಾಲೆಯ ಆರಂಭಕ್ಕೆ ಕೈ ಜೋಡಿಸಿದರು. ನಂತರ ಮಡಿವಾಳ ಅವರಿಂದ ನಡೆದದ್ದು ಸ್ಮಾರ್ಟ್ ಪ್ಲಸ್ ಕ್ಲಾಸ್ ಎಂಬ ಹೊಸ ಕಲ್ಪನೆಯ ಶಾಲೆಯ ಆರಂಭ.

ಏನುದು ಸ್ಮಾರ್ಟ್ ಪ್ಲಸ್ ಕ್ಲಾಸ್:

ನಾವೇಲ್ಲ ಸ್ಮಾರ್ಟ್ ಕ್ಲಾಸ್‌ಗಳ ಬಗ್ಗೆ ಕೇಳಿದ್ದೇವೆ. ಆದರೆ, ಈ ಸ್ಮಾರ್ಟ್ ಪ್ಲಸ್ ಕ್ಲಾಸ್ ಪರಿಕ್ಪನೆ ಮಡಿವಾಳ ಅವರದ್ದು. ಸ್ಮಾರ್ಟ್ ಕ್ಲಾಸ್‌ನಲ್ಲಿ ಮಕ್ಕಳಿಗೆ ಪಿಪಿಟಿ(ಪ್ರಜಂಟೆಶನ್ ಪವರ್ ಪಾಯಿಂಟ್) ಮೂಲಕ ಮಕ್ಕಳಿಗೆ ಪಾಠ ಭೋದನೆ ಮಾಡಲಾಗುತ್ತಿದೆ. ಆದರೆ, ಸ್ಮಾರ್ಟ್ ಪ್ಲಸ್ ಕ್ಲಾಸ್‌ನಲ್ಲಿ ಒಂದು ಟಿವಿ ಹಾಗೂ ವೈರಲೇಸ್ ಇಂಟರ್ನೆಟ್ ಬಳಕೆ ಮಾಡಲಾಗುತ್ತಿದೆ. ಅಂದರೆ, ನಿಡಗುಂದಿ ಗ್ರಾಮ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ೪೦ ಇಂಚಿನ ಟಿವಿಯನ್ನು ಹಾಕಲಾಗಿದೆ. ಇದಕ್ಕೆ ಮೊಬೈಲ್ ಮೂಲಕ ಅಂತರ್ಜಾಲ ಸಂಪರ್ಕ ಕಲ್ಪಿಸಲಾಗಿದೆ. ಈ ಮೂಲಕ ಟಿವಿಯಲ್ಲಿ ಇಂಟರ್ನೆಟ್ ಸಂಪರ್ಕ ಪಡೆದುಕೊಂಡು ಯ್ಯೂಟೂಬ್ ನಲ್ಲಿ ಮಕ್ಕಳಿಗೆ ಬೇಕಾಗ ಪಠ್ಯಗಳನ್ನು ತೋರಿಸಿ ಪಾಠ ಭೋದನೆ ಮಾಡಲಾಗುತ್ತಿದೆ. ಇದು ಪರಿಣಾಮಕಾರಿ ಕೂಡಾ ಆಗಿದೆ. ಇದೇ ಕಾರಣಕ್ಕೆ ಮಕ್ಕಳು ಬೇಸರ, ಆಯಾಸ ಮಾಡಿಕೊಳ್ಳದೇ ಉತ್ಸಾಹದಿಂದ ಕಲಿಯುತ್ತಿದ್ದಾರೆ.


ಗ್ರೀನ್ ಬೋರ್ಡ್:


ಈ ಶಾಲೆಯಲ್ಲಿ ೧ರಿಂದ ೫ನೇ ತರಗತಿ ಇದೆ. ಇಬ್ಬರೇ ಶಿಕ್ಷಕರು ಇದ್ದು, ೧೨೦ ಮಕ್ಕಳು ಕಲಿಯುತ್ತಿದ್ದಾರೆ. ಸ್ಮಾರ್ಟ್ ಪ್ಲಸ್ ಕ್ಲಾಸ್ ಮೂಲಕ ಎಲ್ಲ ಮಕ್ಕಳಿಗೂ ಗ್ರೀನ್ ಬೋರ್ಡ್‌ಗಳನ್ನು ಒದಗಿಸಲಾಗಿದೆ. ಈ ಸ್ಮಾಟ್ ಬೋರ್ಡ್ ಬಳಕೆಯಿಂದ ವಿದ್ಯಾರ್ಥಿಗಳಲ್ಲಿ ಕಲಿಯುವ ಆಸಕ್ತಿ ಹೆಚ್ಚಾಗುತ್ತಿದೆ. ಈ ಶಾಲೆಯ ಮಕ್ಕಳು ಪಾಠಿ, ಪೆನ್ಸಿಲ್ ತರದೇ ಇದ್ದರೂ ನಡೆಯುತ್ತಿದೆ. ಏಕೆಂದರೆ ಗ್ರೀನ್ ಬೋರ್ಡ್ ಬಳಕೆ ಇದೆ.
ಪ್ರತಿ ಮಕ್ಕಳಿಗೂ ಖುರ್ಚಿ:
ಸರ್ಕಾರಿ ಶಾಲೆಗಳು ಯಾವುದೇ ವಿಷಯಗಳಲ್ಲೂ ಹಿಂದೆ ಬಿದ್ದಿಲ್ಲ ಎಂಬುವುದಕ್ಕೆ ಈ ಶಾಲೆ ನಿದರ್ಶನವಾಗಿದೆ. ಕನ್ನಡಾಭಿವೃದ್ಧಿ ಪ್ರಾಧಿಕಾರದವರು ನೀಡಿದ ೧ ಲಕ್ಷ ಹಣದಿಂದ ಈ ಶಾಲೆಯ ಮಕ್ಕಳಿಗೆ ಖುರ್ಚಿ ಹಾಗೂ ರೌಂಡ್ ಟೇಬಲ್‌ಗಳನ್ನು ತರಲಾಗಿದೆ. ಮಕ್ಕಳು ಈ ಖುರ್ಚಿ ಮೇಲೆ ಕುಳಿತು ಆರಾಮಾಗಿ ಪಾಠ ನೋಡಿ ಕಲಿಬಹುದಾಗಿದೆ. ಇದಷ್ಟೇ ಅಲ್ಲದೇ, ಶಾಲೆಯಲ್ಲಿ ಮಕ್ಕಳಿಗೆ ಆಗಾಗ ಚರ್ಚಾ ಸ್ಪರ್ಧೆಗಳನ್ನು ಏರ್ಪಾಡು ಮಾಡಿದಾಗ ಈ ರೌಂಡ್ ಟೇಬಲ್ ಸುತ್ತಲೂ ಖುರ್ಚಿ ಹಾಕಿ ಸುಂದವಾರ ಚರ್ಚೆಗಳು ನಡೆಯುವಂತೆ ನೋಡಿಕೊಳ್ಳಲಾಗುತ್ತಿದೆ. ಇದಷ್ಟೇ ಅಲ್ಲೇ ಈ ಶಾಲೆ ಮುಖ್ಯೋಪಾಧ್ಯಾಯ ಕೊಠಡಿ ಕೂಡಾ ಹೈಟೆಕ್ ಮಾಡಲಾಗಿದೆ.
ಮನರಂಜನೆಯೊಂದಿಗೆ ಭೋದನೆ:
ಸ್ಮಾರ್ಟ್ ಪ್ಲಸ್ ಕ್ಲಾಸ್ ಮೂಲಕ ಈ ಶಾಲೆಯಲ್ಲಿ ಮನರಂಜನೆಗೂ ಅವಕಾಶ ಇದೆ. ಪಾಠ ಬೋಧನೆ ಆರಂಭಕ್ಕೂ ಮುನ್ನ ೧೦ರಿಂದ ೧೫ ನಿಮಿಷಗಳ ಕಾಲ ಮಕ್ಕಳಿಗೆ ಇಷ್ಟವಾದ ಹಾಡುಗಳನ್ನು ಟಿವಿಯಲ್ಲಿ ಹಾಕಿ ಅವರಿಂದ ನೃತ್ಯ ಮತ್ತೀತ್ತರ ಚಟುವಟಿಕೆಗಳನ್ನು ಮಾಡಿಸುವ ಮೂಲಕ ಮಕ್ಕಳ ಮನಸ್ಸನ್ನು ಸಂತಸ ಪಡಿಸುವ ಕಾರ್ಯ ಇಲ್ಲಿ ನಡೆಯುತ್ತಿದೆ. ಈ ಮೂಲಕ ಮಕ್ಕಳು ಕಲಿಕೆಯಲ್ಲಿ ಆಸಕ್ತಿ ಹೊಂದುತ್ತಿದ್ದಾರೆ. ನಂತರ ಕಲಿನಲಿ-ನಲಿಕಲಿ ಯೋಜನೆ ಮೂಲಕ ಮಕ್ಕಳಿಗೆ ಬೋಧನೆ ಮಾಡಲಾಗುತ್ತಿದೆ. ಇನ್ನೂ ತಿಂಗಳಿಗೆ ಮಕ್ಕಳ ಚಿತ್ರಗಳನ್ನು ಇಲ್ಲಿ ತೋರಿಸಲಾಗುತ್ತಿದೆ. ಹೀಗಾಗಿ ಈ ಶಾಲೆಯಲ್ಲಿ ಜಾಗತಿಕ ಮಕ್ಕಳ ಶಿಕ್ಷಣ ನೀಡಲಾಗುತ್ತಿದೆ.ಇದರಿಂದ ಈ ಶಾಲೆ ರಾಜ್ಯದಲ್ಲೇ ಮಾದರಿ ಶಾಲೆಯಾಗಿ ಹೊರ ಹೊಮ್ಮಿದೆ.
ಎರಡನೇ ಯೂನಿಟ್ ಆರಂಭ:
ಸ್ಮಾರ್ಟ್ ಪ್ಲಸ್ ಕ್ಲಾಸ್‌ನಡಿಯಲ್ಲಿ ಎರಡು ಯೂನಿಟ್‌ಗಳನ್ನು ಮಾಡಿಕೊಳ್ಳಲಾಗಿದೆ. ಈಗಾಗಲೇ ಬೆಂಗಳೂರಿನ ಶಶಿಧರ ಟಿ.ಎಂ ಹಾಗೂ ಚನ್ನಪಟ್ಟಣದ ಯತೀಶ ಚಂದ್ರ ಅವರು ಕೊಟ್ಟ ಆರ್ಥಿಕ ನೆರವಿನಿಂದ ಪ್ರಥಮ ಯೂನಿಟ್ ಕ್ಲಾಸ್‌ನಡಿಯಲ್ಲಿ ಡಿಜಿಟಲ್ ಪಾಠ ಬೋಧನೆ ಮಾಡಲಾಗುತ್ತಿದೆ. ಒಂದನೆ ಯೂನಿಟ್‌ನಲ್ಲಿ ೪೦ ಇಂಚಿನ ಟಿವಿ ಹೊಂದಲಾಗಿದ್ದು, ಎರಡನೇ ಯುನಿಟ್‌ನಲ್ಲಿ ೫೦ ಇಂಚಿನ ಟಿವಿ ತರಲಾಗುತ್ತಿದೆ. ಈ ಟಿವಿಯಲ್ಲಿ ಇನ್ನಷ್ಟು ಹೆಚ್ಚಿ ಎಚಡಿ ಹಾಗೂ ಬಹು ಆಯ್ಕೆಗಳು ಇರಲಿದ್ದು, ಮತ್ತಷ್ಟು ಸ್ಮಾರ್ಟ್ ಪ್ಲಸ್ ಕ್ಲಾಸ್ ನಡೆಸಲು ಅನುಕೂಲವಾಗಲಿದೆ ಎನ್ನುತ್ತಾರೆ ವೀರಣ್ಣ ಮಡಿವಾಳ ಅವರು. ಇದಷ್ಟೇ ಅಲ್ಲದೇ ಈ ಶಾಲೆ ಮೂರು ವರ್ಷದಲ್ಲಿ ಅದ್ಭುತ್‌ವಾಗಿ ಬೆಳೆದು ಖಾಸಗಿ ಶಾಲೆಗಳ ಮಕ್ಕಳು ಈ ಶಾಲೆಗೆ ಬರುವಂತಾಗಿದೆ. ವರ್ಷದಿಂದ ವರ್ಷಕ್ಕೆ ಈ ಶಾಲೆಗಳ ಮಕ್ಕಳ ಸಂಖ್ಯೆ ಕೂಡಾ ವೃದ್ಧಿಸುತ್ತಿದೆ. ಇಂತಹ ಶಾಲೆಗಳನ್ನು ರಾಜ್ಯದಲ್ಲೇ ಎಲ್ಲೆಡೆ ನಿರ್ಮಾಣವಾದರೆ, ಸರ್ಕಾರಿ ಶಾಲೆಗಳನ್ನು ಉಳಿಸಿ ಎಂಬ ಮಾತು ತಾನಾಗಿಯೇ ಮಾಯವಾಗಿ, ಸರ್ಕಾರಿ ಶಾಲೆಗಳಿಗೆ ಬೇಡಿಕೆ ಹೆಚ್ಚುವುದು ಎಂಬುವುದು ಶಿಕ್ಷಣ ಪ್ರೇಮಿಗಳ ಆಶಯ.
--

ಸರ್ಕಾರಿ ಶಾಳೆಗಳಲೂ ಕೂಡಾ ಖಾಸಗಿ ಶಾಲೆಗಳನ್ನು ಮೀರಿಸಬೇಕು ಎಂಬ ಕನಸು ನನ್ನದಾಗಿತ್ತು. ಈ ಕನಸಿನಡಿಯಲ್ಲೇ ನಾನು ಸ್ಮಾರ್ಟ್ ಪ್ಲಸ್ ಕ್ಲಾಸ್ ಆರಂಭಿಸಿದ್ದೇನೆ. ನನ್ನ ಈ ಪರಿಕ್ಪನೆ ನೋಡಿ ನಾಲ್ಕು ಸರ್ಕಾರಿ ಶಾಲೆಗಳು ಈ ಸ್ಮಾರ್ಟ್ ಪ್ಲಸ್ ಕ್ಲಾಸ್ ನಿರ್ಮಾಣಕ್ಕೆ ಮುಂದಾಗಿವೆ. ರಾಜ್ಯದಲ್ಲ ಎಲ್ಲ ಶಾಲೆಗಳು ಈ ರೀತಿ ನಿರ್ಮಾಣವಾಗಬೇಕು ಎಂಬ ಆಶಯ ನನ್ನದು.
-ವೀರಣ್ಣ ಮಡಿವಾಳರ, ಶಿಕ್ಷಕ.

- July 14, 2019 No comments:
Email ThisBlogThis!Share to XShare to FacebookShare to Pinterest

Friday, 22 March 2019

ಹೆಣ್ಣಿನ ಪಾತ್ರಗಳಲ್ಲಿ ಸೈ ಅನಿಕೊಂಡ ರಾಘವೇಂದ್ರ


ಮಂಜುನಾಥ ಗದಗಿನ
ಹೆಣ್ಣು ಗಂಡಾಗಿ ನಟಿಸಬಹುದು, ಆದರೆ, ಒಬ್ಬ ಗಂಡು ಹೆಣ್ಣಾಗಿ ನಟನೆ ಮಾಡುವುದು ನಟನೆಗೆ ಸವಾಲೊಡ್ಡುವ ಕೆಲಸ. ಆದರೆ, ಆ ಸವಾಲಯನ್ನು ಸಲಿಸಾಗಿ ನಿಭಾಯಿಸಿ ಹೆಂಗಳೆಯರು ನಾಚುವಂತೆ ನಟನೆ ಮಾಡಿ ಎಲ್ಲರ ಮನೆ-ಮನದ ಮಾತಾಗಿದ್ದಾರೆ. ಈ ನಟ.
ಹೌದು! ಅವರೆ ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಶಿರವಾಳ ಗ್ರಾಮದ ರಾಘವೇಂದ್ರ ಆರ್.ಕೆ. ಹಿಂದಿನ ನಾಟಕ ರಂಗಭೂಮಿಯಲ್ಲಿ ಮಡಿವಂತಿಕೆ ವಿಚಾರವಾಗಿ ಮಹಿಳೆಯರು ನಟನೆ ಮಾಡಲು ಹಿಂಜರಿಯುತ್ತಿದ್ದರು. ಅಂತಹ ಸಮಯದಲ್ಲಿ ಗಂಡಸರೆ ಹೆಣ್ಣಿನ ವೇಷ ಹಾಕಿ ನಟನೆ ಮಾಡುತ್ತಿದ್ದರು. ಅದು ಆಗಿನ ಅನಿವಾರ್ಯ ಕೂಡಾ ಆಗಿತ್ತು. ಏಣಗಿ ಬಾಳಪ್ಪನಂತಹ ಅಪ್ಪಟ ಕಲಾವಿದರು ಹೆಣ್ಣಿನ ವೇಷಗಳನ್ನು ಹಾಕಿ ಜನ ಮಾನಸದಲ್ಲಿ ಅಂದಿನ ಕಾಲದಲ್ಲಿ ಅಚ್ಚಳಿಯದೇ ಉಳಿದಿದ್ದರು. ಇಂಹತ ಪ್ರಯೋಗಗಳ ಮೂಲಕವೇ ರಂಗಭೂಮಿಗೆ ಮಹಿಳೆಯರ ಪ್ರವೇಶವಾಯಿತು. ಅಂದಿನ ಬುನಾದಿಯೇ ಇಂದಿನ ಆಡಂಭರದ ನಟನೆ ಹಾಗೂ ಚಲಚಿತ್ರಗಳಿಗೆ ನಾದಿಯಾಗಿದೆ. 

ಎರಡು ವರ್ಷದ ಹಿಂದೆ ನಟನೆ:

ರಾಘವೇಂದ್ರ ಅವರು ನಟನೆ ಆರಂಭಿಸಿ ಕೇವಲ ಎರಡು ವರ್ಷವಾಯಿತು. ಆರಂಭದಲ್ಲಿ ಇವರು ಡ್ರಾಯಿಂಗ್‌ನಲ್ಲಿ ಸಿದ್ಧ ಹಸ್ತರು. ಇದೇ ಕಾರಣಕ್ಕೆ ಚಿಕ್ಕ ವಯಸ್ಸಿನಲ್ಲೆ ಮನೆಯಲ್ಲೆ ತನ್ನೊರಿಗೆಯ ಹಾಗೂ ಮಕ್ಕಳಿಗೆ ಡ್ರಾಯಿಂಗ್ ಕಲಿಸಿಕೊಡುತ್ತಿದ್ದರು. ಆದರೆ, ಶಾಲೆಯಲ್ಲಿ ನಡೆಯುತ್ತಿದ್ದ ಪ್ರತಿಭಾ ಕಾರಂಜಿಯಂತಹ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುತ್ತಿದ್ದರು. ಈ ಸಮಯದಲ್ಲಿ ಹಲವು ವೇಷ-ಭೂಷಣಗಳನ್ನು ಹಾಕಿಕೊಂಡು ಸಭಿಕರ ಮನ ಗೆದ್ದಿದ್ದರು. ಅಷ್ಟೇ ಅಲ್ಲದೇ ಹಲವು ಬಹುಮಾನಗಳನ್ನು ತನ್ನದಾಗಿಸಿಕೊಂಡಿದ್ದರು. 9ನೇ ವಯಸ್ಸಿನಲ್ಲಿ ಉದಯ ಕಲಾವಿದ ಸಂಘದ ಮೂಲಕ ನಡೆಯುತ್ತಿದ್ದ ಒಂದು ನಾಟಕದಲ್ಲಿ ಇವರಿಗೆ ಭಸ್ಮಾಸುರನ ಪಾತ್ರ ದೊರೆಯಿತು. ಈ ಭಸ್ಮಾಸುರನ ಪಾತ್ರ ನೋಡಿ ನನ್ನ ಒಡನಾಡಿಗಳು ಭೇಷ ಅಂದರು. ನಿನಗೆ ನಟನೆ ಸಿದ್ಧಿಸಿದೆೆ, ಮುಂದೆ ನೀನು ನಟನೆಯಲ್ಲಿ ಮುಂದುವರೆ ಎಂದು ಸಲಹೆ ಕೂಡಾ ನೀಡಿದರು. ಹೀಗಾಗಿ ಡ್ರಾಯಿಂಗ್‌ನೊಂದಿಗೆ ನಟನೆ ಕೂಡಾ ಆರಂಭಿಸಿದೆ ಎಂದು ಹೇಳುತ್ತಾರೆ ರಾಘವೇಂದ್ರ.

ಮೊದಲ ಬಾರಿ ಸೆಲೆಕ್ಷನ್:

ರಾಘವೇಂದ್ರ ಅವರು ಯಾವುದೇ ತರಬೇತಿ ಸಂಸ್ಥೆಯಿಂದ ನಟನೆ ಕಲಿತ್ತಿಲ್ಲ. ಅದರ ಬದಲಾಗಿ ಸಣ್ಣಪುಟ್ಟ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡು ನಟನೆ ಕಲಿತ್ತಿದ್ದಾರೆ. ಆದರೆ, ಘಟಾನುಘಟಿ ನಟರ ಮುಂದೆ ಪ್ರದರ್ಶನ ನೀಡಿ ಸಾಗರದಲ್ಲಿ ನಡೆದ ಮಜಾಭಾರತ ಆಡಿಶನ್‌ನಲ್ಲಿ ಮೊದಲ ಯತ್ನಕ್ಕೆ ಸೆಲೆಕ್ಷನ್ ಆದರು. ಈ ವೇಳೆ ಅವರು ಕಲ್ಪನಾ, ಮಂಜುಳಾ, ಮತ್ತೀತ್ತರ ನಟರ ಮಿಮಿಕ್ರಿಯೆ, ಕುಡುಕನ ಪಾತ್ರ ಮಾಡಿದ್ದರು. ನಂತರ ಮಜಾಭಾರತ ಎಂಬ ಅಖಾಡದಲ್ಲಿ ತಮ್ಮದೇ ನಟನೆ ಮೂಲಕ ನಾಡಿನ ಹೆಂಗಳೆಯರು ನಾಚುವಂತೆ ನಟನೆ ಮಾಡಿ, ರಾಘು ಅಲಿಯಾಸ ರಾಗಿನಿಯಾಗಿ ಮಿಂಚಿದ್ದಾರೆ. ಮಜಾಭಾರತ ಆರಂಭದಲ್ಲಿ ಗಂಡಸರ ಪಾತ್ರಗಳಲ್ಲಿ ನಟನೆ ಮಾಡಿದರು. ಆದರೆ, ಆ ನಟನೆ ಅವರಿಗೆ ಅಷ್ಟೊಂದು ಯಶಸ್ಸು ತಂದು ಕೊಡಲಿಲ್ಲ. ಪಕ್ಕದ ಮನೆ ಪ್ರಸಾದ ಎಂಬ ದೃಶ್ಯದಲ್ಲಿ ಮಹಿಳೆಯ ಪಾತ್ರ ಹಾಕಿ, ಮಹಿಳೆಯರ ತರಹವೇ ಹಾವ-ಭಾವ, ಮಾತುಗಳನ್ನು ಹಾಡಿ, ರಾತ್ರೋ ರಾತ್ರಿ ಫೇಮಸ್ ಆದರು. ಅಂದಿನಿಂದ ಮಜಾಭಾರತ ಉದ್ದಕ್ಕೂ ಇವರು ಹೆಣ್ಣಿನ ಪಾತ್ರಗಳಲ್ಲೇ ನಟನೆ ಮಾಡಿದರು. ಅನಂತರ ಹಲವಾರು ಶೋ, ನಿರೂಪಣೆಗಳನ್ನು ಹೆಣ್ಣಿನ ಪಾತ್ರಗಳಲ್ಲೆ ನಿರ್ವಹಿಸಿ, ಬಹುತೇಕ ಹೆಣ್ಣು ಮಕ್ಕಳು ಮಾಡುವ ಪಾತ್ರಗಳನ್ನು ಕಸಿದುಕೊಂಡದ್ದು ಇವರ ಹೆಗ್ಗಳಿಕೆ. 

ಧಾರವಾಹಿಯಲ್ಲಿ ನಟನೆ:

ರಾಘವೇಂದ್ರ ಅವರ ಹೆಣ್ಣಿನ ಪಾತ್ರ ನೋಡಿದ ಪಾಪ ಪಾಂಡು ಧಾರವಾಹಿಯ ನಿದೇರ್ಶಕರು ಇವರನ್ನು ಕರೆದು ನೀವು ಹೆಣ್ಣಿನ ಪಾತ್ರವನ್ನು ಚನ್ನಾಗಿ ಮಾಡುತ್ತಿರಾ, ನಮ್ಮ ಧಾರವಾಹಿಯಲ್ಲಿಯೂ ಹೆಣ್ಣಿನ ಪಾತ್ರ ಹಾಕಿ ಎಂದು ಕೇಳಿಕೊಂಡರು ಇದಕ್ಕ ಒಪ್ಪಿದ ರಾಘವೇಂದ್ರ ಪ್ರಸಿದ್ಧ ಧಾರಾವಾಹಿಯಲ್ಲಿ ಹೆಣ್ಣಿನ ಪಾತ್ರ ಹಾಕಿ ಸೈ ಅನಿಸಿಕೊಂಡರು. ಇವರ ಹೆಣ್ಣಿನ ಪಾತ್ರಕ್ಕೆ ಎಷ್ಟು ಬೇಡಿಕೆ ಬಂದಿತು ಎಂದರೆ, ಬಾದಾಮಿ ಬನಂಶಕರಿ ಜಾತ್ರೆಗೆ ಇವರನ್ನು ಕರೆಸಿ ಹೆಣ್ಣಿನ ಪಾತ್ರ ನೀಡಲಾಯಿತು. ಅಲ್ಲಿ ಪ್ಯಾಟೆ ಹುಡ್ಗ್ಯಾರ ಎಂಬ ನಾಟಕದಲ್ಲಿ ಪೂಜಾ ಪಾತ್ರ ನಿರ್ವಹಿಸಿ ಭೇಷ ಅನಿಸಿಕೊಂಡರು. ಸದ್ಯ ಇವರು ಮಂಜು ಗಂಗಾವತಿ ನಿದೇರ್ಶನದ ಹಳ್ಳಿ ಹೈಕ್ಳ ಪ್ಯಾಟೆ ಲೈಪ್ ಎಂಬ ಸಿನಿಮಾದಲ್ಲಿ ಮುಖ್ಯ ಪಾತ್ರದಲ್ಲಿ ನಟನೆ ಮಾಡುತ್ತಿದ್ದಾರೆ. 

ಇವರ ತಾಯಿಯೇ ಟೈಲರ್:

ಇವರು ಹಾಕುವ ಪ್ರತಿಯೊಂದು ಹೆಣ್ಣಿ ಪಾತ್ರಗಳಿಗೂ ಇವರ ತಾಯಿ ಬಟ್ಟೆ ಹೊಲೆದು ಕೊಡುತ್ತಿದ್ದರು. ಮಗನ ಈ ಹೆಣ್ಣಿನ ಪಾತ್ರ ನಿರ್ವಹಿಸಲು ತಾಯಿಯ ಸಹಕಾರ ತುಂಬಾನೆ ಇದೆ. ರಾಘವೇಂದ್ರ ಅವರು ಮಾಡುವ ಪ್ರತಿ ಪಾತ್ರಕ್ಕೂ ಅದಕ್ಕೆ ಒಪ್ಪುವಂತಹ ಕಾಸ್ಟ್ಯೊಂಗಳಲ್ಲಿ ಅವರ ತಾಯೇ ಅಳತೆ ಮಾಡಿ ಹೊಲೆದು ಕೊಡುತ್ತಾರೆ. ನನ್ನ ತಂದೆ-ತಾಯಿ ನೀ ಹೆಣ್ಣಿನ ಪಾತ್ರಗಳಲ್ಲಿ ಮಾಡಬೇಡ ಎಂದು ಹೇಳಿದವಲ್ಲ. ನಾನು ಯಾವುದೇ ಪಾತ್ರ ಹಾಕಿದರೂ, ಅದಕ್ಕೆ ಬೆನ್ನ ಹಿಂದೆ ನಿಂತು ಪ್ರೋತ್ಸಾಹಿಸುತ್ತಿದ್ದಾರೆ. ಬಣ್ಣ ಹಚ್ಚಿದ ಮೇಲೆ ನಾವು ಆ ಪಾತ್ರಧಾರಿಗಳಾಗಬೇಕು. ಬಣ್ಣ ತೆಗೆದ ಮೇಲೆ ನಾವು ನಾವಾಗಿರಬೇಕು ಅಂದಾಗ ನಾವು ನಮ್ಮತನ ಎಂದು ಕಳೆದುಕೊಳ್ಳುವುದಿಲ್ಲ. ಹೆಣ್ಣಿನ ಪಾತ್ರ ಹಾಕಿದ ಮಾತ್ರಕ್ಕೆ ಯಾರು ಕೀಳಾಗಿ ನೋಡುವ ಅವಶ್ಯಕತೆ ಇಲ್ಲ. ಏಕೆಂದ್ರೆ ಹೆಣ್ಣಿನ ಪಾತ್ರ ನಿರ್ವಹಣೆ ಮಾಡುವುದು ಎಷ್ಟೊಂದು ಕಷ್ಟ ಇದೆ ಅಂತ ನಟನೆ ಮಾಡುವವರಿಗೆ ಗೊತ್ತು. ನಾನು ಹೆಣ್ಣಿನ ಪಾತ್ರಗಳಲ್ಲಿ ಹೆಣ್ಣು ಕೂಡಾ ನಾಚುವಂತೆ ನಟನೆ ಮಾಡುತ್ತೇನೆ ಎಂದರೆ ಅದು ನನಗೆ ದೇವರು ಕೊಟ್ಟ ವರ. ಇದರಲ್ಲಿ ಯಾವುದೇ ಕೀಳರಿಮೆ ಇಲ್ಲ ಎಂದು ಹೇಳುತ್ತಾರೆ ರಾಘವೇಂದ್ರ.
- March 22, 2019 1 comment:
Email ThisBlogThis!Share to XShare to FacebookShare to Pinterest

Sunday, 17 March 2019

ರಂಗೇರಿದ ರಂಗಿನ ನೆನಪು..


Manjunath Gadagin -
ಪ್ರಕೃತಿ ಸಂಪೂರ್ಣ ಸೊರಗಿರುತ್ತದೆ, ಉದುರಿದ ಎಲೆಗಳು, ಬಾಡಿದ ಬಳ್ಳಿಗಳು, ಬೆತ್ತಲಾಗಿ ನಿಂತ ಮರಗಳು ಮತ್ತೆ ಮರು ಜೀವ ಪಡೆಯಲು ಕಾತರಿಸುತ್ತಿರುತ್ತವೆ. ಇಂತಹ ಸಮಯದಲ್ಲೆ ಬಣ್ಣಗುಂದಿದ ನಮ್ಮ ಬದುಕಿನಲ್ಲಿ ಬಣ್ಣ ತುಂಬಲು ರಂಗನ್ನು ಹೋದ್ದು, ಬಂದೇ ಬೀಡುತ್ತದೆ, ರಂಗಿನ ಹಬ್ಬ ಹೋಳಿ. ಇಂತಹ ರಂಗಿನ ನೆನಪುಗಳು ರಂಗಾಗಿ ರಂಗೇರಿ ಗರಿ ಬಿಚ್ಚಿ ನಲಿದಾಡುತ್ತಿವೆ.
ಮಹಾ ಶಿವರಾತ್ರಿ ಮುಗಿದ ಕೂಡಲೇ, ನಮ್ಮ ರಂಗಿನಾಟಗಳು ಶುರುವಾಗುತ್ತಿದ್ದವು. ಅಟ್ಟದ ಮೇಲೆ ಬೆಚ್ಚಗೆ ಮಲಗಿದ್ದ ಹಲಗೆಗಳು ಈ ವೇಳೆ ಧೂಳಗೊಡವಿ ಮೇಲೆಲುತ್ತಿದ್ದವು. ಓಣಿ ತುಂಡಹೈಕ್ಳುಗಳು ಒಂದು ಕಡೆ ಹಲಗೆ ಬಾರಿಸುತ್ತಿದ್ದರೆ, ಹೋಗೋ,ಬರೋರು ಹಾ..ಹಾ..ಶುರುವಾಯಿತ್ತಪ್ಪ ಈ ಕಪ್ಪಿಯಾಟಗಳು ಎಂದು ಗೋಣಗುತ್ತಾ ಹೋಗುತ್ತಿದ್ದರು. ಮತ್ತೊಂದಿಷ್ಟು ಜನರು ಅಯ್ಯೋ..!ಪಾಪಾ ಕಣ್ರಿ ಮಕ್ಳಾದ್ರು ಯಾವಾಗ ಹಲಗೆ ಬಾರಿಸ್ಬೇಕು ಎಂದು ಕನಿಕರ ಪಟ್ಟುಕೊಳ್ಳುತ್ತಿದ್ದರು.
ಹೀಗೆ ಶುರುವಾದ ನಮ್ಮ ಹೋಳಿಯ ಸಂಭ್ರಮ, ದಿನದಿಂದ ದಿನಕ್ಕೆ ವಿಭಿನ್ನ ಆಯಾಮಗಳನ್ನು ಪಡೆದುಕೊಂಡು ರಂಗೆರುತ್ತಿತ್ತು. ಕೆಲವೊಂದಿಷ್ಟು ಸಾರಿ ನಮ್ಮ ಹಲಗೆಯ ಸದ್ದಿಗೆ ಓಣಿಯ ಹಿರಿಯರು ಮಂಗಳಾರತಿ ಮಾಡುತ್ತಿದ್ದರು. ಈ ಹೋಳಿ ಹುಣ್ಣಿಮೆಯ ಹೈಲೈಟ್ಸ್‌ಗಳಾದ ತಮಟೆ ಪಡೆಯುವುದು, ಬಣ್ಣದಲ್ಲಿ ಮಿಂದೆಳುವು ಇದರೊಟ್ಟಿಗೆ ಹೊಯ್ಕೋಳೋದು. ಹೌದು! ಹೋಳಿ ಶುರುವಾದ್ರೆ ಹೊಯ್ಕೋಂಡವರ ಬಾಯಿಗೆ ಹೋಳಿಗೆ ಎನ್ನುತ್ತಾ, ಸಾಮೂಹಿಕವಾಗಿ ನಾಲ್ಕು ಮಂದಿಗೆ ಕಿರಿಕಿರಿಯಾಗುವ ಹಾಗೆ ಹೊಯ್ಕೋಳ್ತಾಯಿದ್ವಿ.
ಮಹಾಶಿವರಾತ್ರಿ ಮುಗಿತಾ, ಇದ್ದಂತೆ ನಮ್ಮ ಓಣಿಯ ಮಾಸ್ಟರ ಮೈಂಡಗಳು ಕಾರ್ಯಪ್ರವೃತ್ತವಾಗುತ್ತಿದ್ದವು. ಓಣಿಯಲ್ಲಿ ಯಾವ ರೀತಿಯಾಗಿ ಕಟ್ಟಿಯನ್ನು ಕಳ್ಳತನ ಮಾಡ್ಬೇಕು, ಯಾರು ಮಾಡಬೇಕು, ಹೇಗೆ ಮಾಡ್ಬೇಕೆಂಬ ಗುಸು-ಗುಸು,ಪಿಸು,ಪಿಸು ಮಾತುಗಳ ಭರಾಟೆ ಜೋರಾಗಿ ನಡೆಯುತ್ತಿದ್ದವು. ನಮ್ಮ ಮಾಸ್ಟರ ಪ್ಲಾನಗಳಿಗೆ ಸಂಧಿ,ಗೊಂದಿಯಲ್ಲಿ ಬಚ್ಚಿಟ ಕಟ್ಟಿಗಳು ಕ್ಷಣಾರ್ಧದಲ್ಲಿ ಮಾಯವಾಗಿ ಕಾಮಣ್ಣನ ಬೀದಿ ಸೇರುತ್ತಿದ್ದವು. ಅವತ್ತೊಂದು ದಿನ ನಮ್ಮ ಓಣಿಯ ಹುಡುಗರೆಲ್ಲ ಸೇರಿ ರಾತ್ರಿ ವೇಳೆಯಲ್ಲಿ ಕಟ್ಟಿಗೆ ಕಳ್ಳತನ ಮಾಡಲು ಹೋದಾಗ, ಸಿಕ್ಕಿ ಹಾಕಿಕೊಂಡು, ಹೊಡೆತ ತಿಂದಿದ್ವಿ, ನಮ್ಮ ಓಣಿಯಲ್ಲಿ ನಾವೆಲ್ಲರೂ ಕಟ್ಟಿಗೆ ಕಳ್ಳರೆಂದೆ ರಾತ್ರೋ ರಾತ್ರಿ ಪ್ರಸಿದ್ದಿ ಪಡೆದುಕೊಂಡಿದ್ದೆವು.
ಬೀದಿ ಕಾಮಣ್ಣನನ್ನು ಸುಡುವುದಕ್ಕೂ ಮುನ್ನಾದಿನ, ನಮ್ಮ ಕಡೆ ಮನೆ ಕಾಮಣ್ಣನನ್ನು ಸುಡುವುದು ವಾಡಿಕೆ ಇದೆ. ಈ ಸಮಯದಲ್ಲಿ ಓಣಿಯ ಹುಡುಗರೆಲ್ಲ ತಮ್ಮ ಹಲಗೆಯನ್ನು ತಂದು ಬಾರಿಸುತ್ತಿದ್ದರು. ಈ ಸಮಯದಲ್ಲಿ ಗೊಬ್ಬರಿ ಚೂರೊಂದನ್ನು ಕಾಮಣ್ಣನಿಗೆ ಹಾಕಲಾಗುತ್ತದೆ. ಈ ಗೊಬ್ಬರಿ ಚೂರಿಗಾಗಿ ನಮ್ಮ ಹುಡುಗರು ಜಿದ್ದಿಗೆ ಬಿದ್ದು ಅದನ್ನು ಪಡೆದುಕೊಳ್ಳುತ್ತಿದ್ದರು. ಯಾರಿಗೆ ಆ ಗೊಬ್ಬರಿ ಸಿಗುತ್ತದೆಯೋ..ಅವರು ಗೊಬ್ಬರಿಯ ಕರಿ ಮಸಿಯಿಂದ ಇತರೆ ಹುಡುಗರಿಗೆ ಮೀಸೆ ಕೊರೆಯುತ್ತಿದ್ದರು. ಹೀಗೆ ಮಾಡುವುದರಿಂದ ಬೇಗ ಮೀಸೆ ಚಿಗುರತ್ತವೆ ಎಂದು ನಮ್ಮ ಹಿರಿಯರು ಹೇಳುತ್ತಿದ್ದರು.
ಕಾಮಣ್ಣನ ದಹನದ ದಿನ  ಅಪ್ಪ, ನೀರ ಬಣ್ಣ ಮಾಡಿ ಕೊಡುತ್ತಿದ್ದ. ನಾ ಅದನ್ನು ತುಂಬಿಕೊಂಡು ಹೋಗೋ,ಬರೋರಗೆ ಮಾರುದ್ಧ ದೂರದಿಂದಲೇ ಪಿಚಕಾರಿಯಿಂದ ಹೊಡೆಯುತ್ತಿದೆ. ಈ ಸಂದರ್ಭದಲ್ಲಿ ಯಾರಾದ್ರು ನನಗೆ ಬಣ್ಣ ಹಚ್ಚಲು ಬಂದ್ರೆ, ನಮ್ಮಪ್ಪ ಅವರನ್ನು ಗದರಿಸಿ ಕಳುಹಿಸುತ್ತಿದ್ದ. ರಂಗಿನಾಟ ಮುಗಿದ ಮೇಲೆ ಅವ್ವ ಮೂರು ಗುಂಡೆ ನೀರು ಕಾಯಿಸಿ, ಬಣ್ಣ ಹೋಗೋವರೆಗೂ ಸ್ನಾನ ಮಾಡಿಸುತ್ತಿದ್ಳು. ನಂತರ ಬಿಸಿ ಬಿಸಿ ಹೋಳಿಗೆ ಮಾಡಿ ತಿನ್ನಿಸುತ್ತಿದ್ದಳು.
ಈ ರೀತಿಯಾಗಿ ಬಾಲದ್ಯ ರಂಗಿನಾಟ ಬಲು ಮೋಜಿನಿಂದ ಕೂಡಿತ್ತು. ಆದರೆ ಮೂರು ವರ್ಷಗಳಿಂದ ಊರಿನ ರಂಗಿನಾಟಕ್ಕೆ ಹೋಗೆ ಇಲ್ಲ. ಈ ಸಾರಿ ರಂಗಿನಾಟಕ್ಕೆ ಹೋಗಿ, ಅವ್ವನ ಕೈಯಿಂದ ಹೋಳಿಗೆ ಸವಿಯನ್ನು ಸವಿಯಲು ಸಿದ್ದನಾಗಿದ್ದೇನೆ. 
- March 17, 2019 No comments:
Email ThisBlogThis!Share to XShare to FacebookShare to Pinterest

Friday, 1 March 2019

ನುಡಿ ತೇರ ಎಳೆಯೋಣ ಬನ್ನಿ....




ಮಂಜುನಾಥ ಗದಗಿನ
ನಾಡಾಗಲಿ, ನುಡಿಯಾಗಲಿ
ಎಂದೆಂದೂ ಕನ್ನಡ ಅಭಿಮಾನ
ನಮ್ಮದಾಗಿರಲಿ.

ತನು, ಮನ ನಿಮ್ಮದಾಗಲಿ
ಕನ್ನಡ ಉಸಿರಾಗಲಿ, ನಮ್ಮೂರ
ನುಡಿ ಹಬ್ಬ ಎಲ್ಲರ ಮನದ ಮಾತಾಗಲಿ.

ಕುವೆಂಪು, ಬೇಂದ್ರೆ, ಮಾಸ್ತಿ ಬೆಳೆಸಿದ
ಕನ್ನಡ ಕಟ್ಟೋಣ, ನಮ್ಮೂರ ನುಡಿ
ತೇರಲ್ಲಿ ಹೊತ್ತು ಮೆರೆಯೋಣ.

ಕನ್ನಡಾಂಬೆಯ ಸೇವೆಗೆ
ಸಿದ್ಧರಾಗೋಣ, ನಮ್ಮೂರ
ನುಡಿ ತೇರು ಎಳೆದು ಪುನೀತರಾಗೋಣ.
                                            -ಮಂಜುನಾಥ ಗದಗಿನ

ರಾಮದುರ್ಗ ತಾಲೂಕಿನ 7ನೇ ಕನ್ನಡ ಸಾಹಿತ್ಯ ಸಮ್ಮೇಳನ ಕಟಕೋಳ ಗ್ರಾಮದಲ್ಲಿ ಮಾ.7ರಂದು ಅದ್ಧೂರಿಯಾಗಿ ಜರುಗಲಿದೆ. ಈಗಾಗಲೇ ಹಲವಾರು ಸಭೆಗಳ ಮೂಲಕ ಕನ್ನಡ ನುಡಿ ತೇರು ಎಳೆಯಲು ಯುವ ಮನಸ್ಸುಗಳು ಸಕಲ ಸನ್ನದ್ಧವಾಗಿದೆ. ಇದಷ್ಟೇ ಅಲ್ಲದೇ ನಮ್ಮೇಲ್ಲರ ಹೆಮ್ಮೆಯ ಲೇಖಕಿ ಕಲ್ಯಾಣಮ್ಮ ಲಂಗೋಟಿಯವರು ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರರಾಗಿ ಆಯ್ಕೆಯಾಗಿದ್ದಾರೆ. ಹೀಗಾಗಿ ನುಡಿ ತೇರು ಎಳೆಯುವ ಮುನ್ನ ನಮ್ಮ ರಾಮದುರ್ಗದ ಸಾಹಿತಿಗಳ ಹಾಗೂ ರಾಮದುರ್ಗ ಪರಿಚಯವನ್ನು ಕಟ್ಟಿಕೊಡಲು ಪ್ರಯತ್ನಿಸಿದ್ದೇನೆ...
ರಾಮದುರ್ಗ ತಾಲ್ಲೂಕಿನಲ್ಲಿ ಮುಂಚಿನಿಂದಲೂ ಸಾಹಿತ್ಯಿಕ ವಾತಾವರಣವಿದೆ. ಸಾಹಿತ್ಯ ಬದುಕಿನ ಬೇರುಗಳೊಂದಿಗೆ ಮಾತನಾಡಿದಾಗ ಮಾತ್ರ ತನ್ನ ಗುರುತನ್ನು ಕಾಲಾಂತರದಲ್ಲೂ ಉಳಿಸಿಕೊಳ್ಳಬಲ್ಲದು. ಇಲ್ಲವಾಗಿದ್ದಲ್ಲಿ ಕಾಲ ಅದನ್ನು ಉಳಿಸಿಕೊಳ್ಳಲಾರದು. ಅದಕ್ಕೆ ಒಬ್ಬ ಸಾಹಿತಿಯ ಸಾಹಿತ್ಯದ ಮೌಲ್ಯೀಕರಣ ವಿಮರ್ಶಕರಿಂದಲೇ ನಿರ್ಣಯವಾಗಲಾರದು. ಆಗಬಹುದಾದರೂ ಅದು ತಾತ್ಕಾಲಿಕವಾದುದು. ಸಾಹಿತಿಗಿಂತ-ಸಹೃದಯ; ಸಹೃದಯನಿಗಿಂತ ಸಮಾಜ, ಸಮಾಜಕ್ಕಿಂತ ವ್ಯವಸ್ಥೆ ದೊಡ್ಡದು. ಈ ವ್ಯವಸ್ಥೆಯು ಜಾತಿ, ಮತ, ತತ್ವಗಳು, ಸಂಘ-ಸಂಸ್ಥೆಗಳು, ಧಾರ್ಮಿಕ- ರಾಜಕೀಯ-ಸಾಮಾಜಿಕ ನೀತಿಗಳು, ನಾಡು-ನುಡಿ, ನದಿಗಳ ಅಭಿಮಾನ ಈ ಮುಂತಾದ ಸಾಂಸ್ಕೃತೀಕರಣದ ಮಡುವಾಗಿದೆ. ಇದು ಜೊಳ್ಳು ಸಾಹಿತ್ಯವನ್ನು ಉಗುಳಬಲ್ಲದು, ಹಾಗೆಯೇ ಗಟ್ಟಿ ಸಾಹಿತ್ಯವನ್ನು ಉಳಿಸಿಕೊಳ್ಳಬಲ್ಲದು. ರಾತ್ರಿಯಿಡಿ ಮಳೆ ಸುರಿದು ಮರುದಿನ ಬೆಳಗಿನಲ್ಲಿ ಕಿರಿಯರಿಂದ ಹಿರಿಯರು ಕೂಡಿ ಮಳೆಯ ಕುರಿತು ಮಾತನಾಡುವಂತೆ ಸಾಹಿತ್ಯ ಸಮೀಕ್ಷಕನ ಕಾರ್ಯವೆನ್ನಬಹುದು. ಈ ತಾಲ್ಲೂಕಿನ ಸಾಹಿತ್ಯ ಸಮೀಕ್ಷೆ ಮಾಡುವುದು ಹುಣ್ಣಿಮೆಯ ರಾತ್ರಿಯಲ್ಲಿ ಚುಕ್ಕೆಗಳನ್ನು ಕಾಣುವಂತಾಗಿದೆ. ಕಾಣಿಸಿಕೊಂಡ ಚುಕ್ಕೆಗಳು ಬೆಳಕಿನಲ್ಲಿ ಬೆಳಕಾಗಿ ಕಂಡಿವೆ. ಈ ದೃಷ್ಠಿಯಿಂದ ವಿದ್ವಾಂಸರ ಗಮನವನ್ನು ತನ್ನ ಕಡೆಗೆ ಸೆಳೆದುಕೊಳ್ಳುತ್ತಿದೆ ಈ ತಾಲ್ಲೂಕು. ಈ ತಾಲೂಕಿನ ತೊರಗಲ್ಲು, ಬನ್ನೂರು, ಸುನ್ನಾಳ, ಮುದೇನೂರು, ಬಟಕುರ್ಕಿ ಗ್ರಾಮಗಳಲ್ಲಿ ಶಾಸನಗಳಿವೆ. ತೊರಗಲ್ಲು ಶಾಸನವು ಸುಗ್ಗಲದೇವಿಯ ’ಘಟಸರ್ಪ ಮಾಡಿದ ಪವಾಡ’ ಮತ್ತು ಅವಳು ಪುಣ್ಯಾಂಗನೆಯೆಂಬ ಸಂಗತಿಯನ್ನು ಹಾಗೂ ತೊರಗಲ್ಲು ಕಲ್ಯಾಣ ಚಾಲುಕ್ಯರ ಆಡಳಿತದಲ್ಲಿದ್ದುದನ್ನು ಸೂಚಿಸುತ್ತದೆ. ಕಲ್ಯಾಣ ಕ್ರಾಂತಿಯಾದಾಗ ಇಲ್ಲಿಯ ರಾಜಕೀಯವೂ ಬದಲಾವಣೆಗೊಂಡದ್ದಲ್ಲದೇ ಮಡಿವಾಳ ಮಾಚಿದೇವರ ನೇತೃತ್ವದಲ್ಲಿ ಉಳವಿಗೆ ಹೊರಟಿದ್ದ ಚೆನ್ನಬಸವಣ್ಣ -ನಾಗಲಾಂಬಿಕೆ ಈ ಮೊದಲಾದ ಶರಣರನ್ನು ಕಲ್ಯಾಣ ಚಾಲುಕ್ಯರ ಸೈನ್ಯ ಬೆನ್ನಟ್ಟಿದಾಗ ಈ ಭಾಗದ ಜನರು ಅವರ ವಿರುದ್ಧ ಯುದ್ಧವನ್ನೇ ಮಾಡಿ ಸೋಲಿಸಿದ್ದಲ್ಲದೇ ಶರಣರನ್ನು ರಕ್ಷಿಸಿದ್ದಾರೆ. ಯುದ್ಧ ಮಾಡಿದ ಆ ಸ್ಥಳಕ್ಕೆ ’ರಣಬಾಜಿ ಎಂಬುದಾಗಿ ಗೊಡಚಿಯಲ್ಲಿ ಈಗಲೂ ಕರೆಯುತ್ತಾರೆ. ನಮ್ಮ ಜನತೆ 13 ರಿಂದ 14ನೆಯ ಶತಮಾನದಲ್ಲಿ ಮುಸ್ಲಿಂರ ಆಕ್ರಮಣದ ವಿರುದ್ಧವೂ ಹೋರಾಟ ಮಾಡಿದ್ದಾರೆ. 16ನೆಯ ಶತಮಾನದಲ್ಲಿ ಅಲಿ ಆದಿಲ್ ಶಾಹಿಯ ವಿರುದ್ಧವೂ ಈ ನಾಡಿನ ವೀರರು ಯುದ್ಧ ಮಾಡಿದ್ದಾರೆ. ಅಂಥವರಲ್ಲಿ ಅವರಾದಿಯ ವಿಟ್ಟಪ್ಪಗೌಡರೂ ಒಬ್ಬರು. ಈತನ ಪರಾಕ್ರಮವನ್ನು ಕಂಡು ಆದಿಲ್‌ಶಾಹಿಯು ನವಲಗುಂದದ ಬೆಳವಲನಾಡು, ಶಿರಸಂಗಿ, ತೊರಗಲ್ಲು ಸೀಮೆಗಳನ್ನು ಈತನಿಗೆ ಜಹಗೀರಾಗಿ ಕೊಟ್ಟು ಮಹಾ ಸಾಮಂತನನ್ನಾಗಿ ಮಾಡಿದ್ದಾನೆಂಬುದಾಗಿ ತಿಳಿದು ಬರುತ್ತದೆ. 17ನೆಯ ಶತಮಾನದಲ್ಲಿ ಮರಾಠಿಗರೊಂದಿಗೆ, 18ನೆಯ ಶತಮಾನದಲ್ಲಿ ಬ್ರಿಟಿಷರೊಂದಿಗೆ ಹೋರಾಟ ಮಾಡಿದ್ದು ಸ್ಮರಣೀಯ. ಈ ತಾಲೂಕಿನ ಕಾಲು ಭಾಗದಲ್ಲಿ ಹರಿದಿರುವ ನದಿಯು ಮಲಪ್ರ್ರಭೆ’ ಅಂದರೆ ವೀರಹೊಳೆ. ಈ ನಾಡ ಜನರ ಬದುಕಿನಲ್ಲಿ ಹರಿದು ಬಂದಿದೆ ಎಂಬುದನ್ನು ಈ ಮೇಲಿನ ಐತಿಹಾಸಿಕ ಸಂಗತಿಗಳು ದಾಖಲಾತಿಗಳೊಂದಿಗೆ ಸಮರ್ಥಿಸುತ್ತವೆ.
ಈ ತಾಲೂಕಿನ ’ಕನ್ನಡ ಕುವಲಯಾನಂದಲಂಕಾರ’ ಗ್ರಂಥದ ಕರ್ತೃ ಜಾಯೇಂದ್ರ ಅಥವಾ ಜಾಗೊಂಡ ದೇಸಾಯಿ ಎಂದು ತಿಳಿದು ಬಂದ ಸಂಗತಿ. ಈತನ ತಂದೆಯ ಹೆಸರು ಲಿಂಗಭೂವರನೆಂದೂ, ಇವರು ತೊರಗಲ್ಲ ಸೀಮೆಗೆ ಅರಸರಾಗಿದ್ದರೆಂಬ ಮಾಹಿತಿಯಿದೆ. ಅದು ಹೀಗಿದೆ-
’ಇತಿ ಕುವಲಯಾನಂದಲಂಕಾರ ಶಾಸ್ತ್ರಂ ಕರ್ನಾಟಕ ಭಾಷಾಯಾಂ
ಜಾಯಗೊಂಡ ದೇಸಾಯಿ ವಿರಚಿತ ಕವನಂ ಸಂಪೂರ್ಣಂ
-ಕನ್ನಡ ಕುವಲಯಾನಂದ ಪುಟ-81, ಮಂಗಳಾಚರಣ’
ಇದು ಸಂಸ್ಕೃತದ ಕವಿ ಅಪ್ಪಯ್ಯ ದೀಕ್ಷಿತರ ದಟ್ಟವಾದ ಪ್ರಭಾವವನ್ನು ಸೂಚಿಸುತ್ತದೆ. ಈ ತಾಲ್ಲೂಕಿನ ಮೊಟ್ಟ ಮೊದಲ ಕವಿಯೇ ಜಾಯೇಂದ್ರ ದೇಸಾಯಿಯೆಂಬುದು ಸುಸ್ಪಷ್ಟ, ಇವರ ’ಕನ್ನಡ ಕುವಲಯಾನಂದ’ ಕೃತಿಯನ್ನು ಶಿ.ಚೆ. ನಂದೀಮಠ ಅವರು ಸಂಪಾದಿಸಿ 1970 ರಲ್ಲಿ ಪ್ರಕಟಿಸಿದ್ದಾರೆ. ಈ ಕೃತಿಯ ಪೂರ್ವ ಪೀಠಿಕೆಯಲ್ಲಿ ಇತಿ ಜಾಯೇಂದ್ರ ಭೂಪಾಲ ವಿರಚಿತ ಶೃಂಗಾರ ತಿಲಕ ಸಮಾಪ್ತ ಎಂಬ ಉಲ್ಲೇಖದಿಂದ ಜಾಯೇಂದ್ರ ದೇಸಾಯಿಯು ಶೃಂಗಾರ ತಿಲಕವೆಂಬ ಎರಡನೆಯ ಗ್ರಂಥವನ್ನು ರಚಿಸಿದ್ದಾನೆಂದು ಹೇಳಬಹುದು. ಈ ಕವಿಯ ಕಾಲ 1735 ರಿಂದ  1785 ಎಂದು ತಿಳಿದು ಬರುತ್ತದೆ. ಅಂದರೆ ರಾಮದುರ್ಗ ತಾಲ್ಲೂಕಿನ ಮೊದಲ ಸಾಹಿತಿ/ ಕವಿಯೇ ಜಾಯೇಂದ್ರ ದೇಸಾಯಿ. ಈತನ ಕನ್ನಡ ಕುವಲಯಾನಂದವೇ ಮೊದಲ ಕೃತಿ ಎಂದು ಸದ್ಯ ಉಪಲಬ್ಧ ಮಾಹಿತಿಗಳಿಂದ ನಿರ್ಣಯಿಸಬಹುದಾಗಿದೆ.
ಈ ತಾಲ್ಲೂಕಿನ ಸಾಹಿತಿಗಳು ಬೇರೆ ಬೇರೆ ತಾಲೂಕುಗಳಲ್ಲಿ ನೆಲೆಸಿದವರು, ಬೇರೆ ತಾಲೂಕಿನವರು ಈ ತಾಲೂಕಿನಲ್ಲಿ ನೆಲೆಸಿದವರು ಇದ್ದುದರಿಂದ ಅವರೆಲ್ಲರ ಕುರಿತಾಗಿ ಬಣ್ಣಿಸುವುದು ಕಷ್ಟಸಾಧ್ಯವಾದರೂ ಕ್ರಿಕೆಟ್ ಆಟದ ಹೈಲೇಟ್ ಎಂಬಂತೆ ಸಂಕ್ಷಿಪ್ತದಲ್ಲಿ ಇಲ್ಲಿಯ ಸಾಹಿತಿಗಳ ಕಿರುಪರಿಚಯ ಮತ್ತು ಸಾಧನೆಯ ಹೆಜ್ಜೆಯ ಗುರುತುಗಳನ್ನು ಪರಿಚಯಿಸಲು ಪ್ರಯತ್ನಿಸಲಾಗಿದೆ.

ಋಷಿಕವಿ ಸಾಲಿಗ್ರಾಮ ಚಂದ್ರರಾಯರು:  

  ಋಷಿಯಲ್ಲದವನು ಕಾವ್ಯ ಬರೆಯಲಾರ ಎಂಬ ಮಾತು ಸಾಲಿ ರಾಮಚಂದ್ರರಾಯರಿಗೆ ಸರಿಯಾಗಿ ಅನ್ವಯಿಸುತ್ತದೆ. ಅವರು ಬಾಳಿ ಬದುಕಿದ ಜೀವನ ಸಂದೇಶವೇ ಅವರ ಸಾಹಿತ್ಯ ಸಂದೇಶವಾಗಿದೆ. ಯದ್ಭಾವಂ ತದ್ಭವತಿ ಎಂಬೋಕ್ತಿಯಂತೆ ಅವರ ಬದುಕು ಮತ್ತು ಬರಹ ಒಂದೇಯಾಗಿದ್ದವು. ಅವರು ತಮ್ಮ ಜೀವನದಲ್ಲಿ ಪಟ್ಟ ಯಾತನೆ, ನೋವು-ನಲಿವುಗಳೆಲ್ಲ ಅವರ ಸಾಹಿತ್ಯದ ಅಂಗಗಳಾಗಿವೆ. ಜೀವನವು ಅವರಿಗೆ ಅಮೃತಕ್ಕಿಂತ ವಿಷವನ್ನೇ ಹೆಚ್ಚು ಕೊಟ್ಟಿದೆಯೆಂದರೆ ತಪ್ಪಾಗಲಾರದು. ಅವರು ವಿಷವನ್ನು ಉಂಡು ವಿಷಕಂಠರಾಗಿ, ತಮ್ಮ ಸಾಹಿತ್ಯದ ಮುಖಾಂತರ ಅಮೃತ ಸಿಂಚನಗೈದಿದ್ದಾರೆ. ಇವರದು ಆದರ್ಶ ವ್ಯಕ್ತಿತ್ವ. ಗಾಂಧೀಜಿಯವರ ಅನುಯಾಯಿಯಾಗಿ ಅಂಚೆ ಕಚೇರಿಯ ಕೆಲಸಕ್ಕೆ ವಿದಾಯ ಹೇಳಿ ಗಾಂಧೀಜಿಯವರ ಕರೆಗೆ ಓಗೊಟ್ಟು ಹೋದವರು. ’ಯದುಪತಿ’ ಅವರ ಕಾದಂಬರಿ ತಮ್ಮದೇ ಚರಿತ್ರೆಯಾಗಿದೆ. ’ತಿಲಾಂಜಲಿ’ ಮಗನ ಆಗಲುವಿಕೆಯಿಂದ ರಚಿತವಾದ ಶೋಕಗೀತೆ. ಅವರ ಮತ್ತೊಂದು ಕೃತಿ ’ಚಿತ್ರ ಸೃಷ್ಠಿ’ (ಕ.ಸಂ). ಉತ್ತರ ಕರ್ನಾಟಕದಲ್ಲೆಲ್ಲ ಕನ್ನಡ ಶಾಲೆಗಳೇ ಇರದೆ, ಮರಾಠಿ ಮಾಧ್ಯಮದ ಶಾಲೆಗಳಲ್ಲಿಯೇ ಅಚ್ಚ ಕನ್ನಡ ಮಕ್ಕಳು ಓದುತ್ತಿರುವ ಸಂದರ್ಭದಲ್ಲಿ ಸಾಲಿಯವರು ರಚಿಸಿದ ಷಟ್ಪದಿಯು ಕರ್ನಾಟಕದ ನಾಡಗೀತೆಯೆಂದೇ ಹೇಳಬೇಕು.
ಕನ್ನಡದ ನೆಲದ ಪುಲ್ಲೆನಗೆ ಪಾವನ ತುಳಸಿ
ಕನ್ನಡದ ನೆಲದ ನೀರ್ ಹೊನಲೆನಗೆ ದೇವನದಿ!
ಕನ್ನಡ ನೆಲದ ಕಲ್ಲೆನಗೆ ಸಾಲಿಗ್ರಾಮಶಿಲೆ! ಕನ್ನಡವೇ ದೈವಮ್ಮೆ
ಕನ್ನಡ ಶಬ್ದಮೆನಗೋಂಕಾರಮೀಯನ್ನ
ಕನ್ನಡದ ನುಡಿಯೆ ಗಾಯತ್ರಿಯದ್ಬುತ ಮಂತ್ರ
ಮಿನ್ನಾವುದೈ ಪೆರತು ಕನ್ನಡದ ಸೇವೆಯಿಂದಕಮೀ ಜಗದೊಳೆನಗೆ !
ಎಂದು ಮುಂತಾಗಿ ಹಾಡಿದ ಸಾಲಿಯವರ ಕವನವನ್ನು ನಾವು ಮರೆಯಲು ಹೇಗೆ ಸಾಧ್ಯ? (1888-1978) ಕುಸುಮಾಂಜಲಿ, ಚಿಗುರೆಲೆ, ಅಭಿಸಾರ, ಶ್ರೀರಾಮ ಚರಿತ, ಅಯೋಧ್ಯಾಕಾಂಡ, ಸುಕಲ್ಯಾಣ, ಸಿಪಾಯಪ್ಪ, ಜಾಣ ಪ್ರಣಿಗಳು, ಜಯ ಗುರುದೇವ, ಹಿಂದೂಸ್ತಾನದ ಇತಿಹಾಸ, ಜೀವನ ಲೀಲೆ, ಸುಧಾಮಚರಿತಂ, ಶರಣಾಗತಿ, ಗದ್ಯ ರಾಮಾಯಣ ಮುಂತಾದ 21 ಕ್ಕೂ ಮಿಕ್ಕು ಕೃತಿಗಳನ್ನು ರಚಿಸಿ ಸಾಹಿತ್ಯ ಲೋಕವನ್ನು ಶ್ರೀಮಂತಗೊಳಿಸಿದ್ದಾರೆ.

ಡಾ. ಡಿ.ಎಸ್. ಕರ್ಕಿ: (1907-1984): 

  ಮೂರ್ತಿ ಚಿಕ್ಕದಾದರೂ ಕೀರ್ತಿ ದೊಡ್ಡದೆಂಬಂತೆ ಡಾ. ಕರ್ಕಿಯವರು ಈ ತಾಲೂಕಿನ ಭಾಗೋಜಿ (ಹಿರೇ)ಕೊಪ್ಪ ಗ್ರಾಮದವರು. ಹಚ್ಚೇವು ಕನ್ನಡದ ದೀಪದಿಂದ ಕರುನಾಡ, ಭಾರತ, ವಿಶ್ವಕ್ಕೆ ಬೆಳಕು ನೀಡಿದವರು. ಕನ್ನಡಿಗರ ಪ್ರೀತಿಯ, ನಲ್ಮೆಯ, ಅಚ್ಚುಮೆಚ್ಚಿನ ಸ್ನೇಹದ ಕವಿ. ಸದುವಿನಯ ಸದಾಚಾರದ ಸಾತ್ವಿಕ ಕವಿಯೀತ. ಅವರೊಂದು ಜೀವಂತ ಕಾವ್ಯವಾಗಿದ್ದರು. ಹಿರಿಯರಿರಲಿ, ಕಿರಿಯರಿರಲಿ ಅವರೊಂದಿಗೆ ಕಾವ್ಯ ಶಾಸ್ತ್ರದ ವಿನೋದದಲ್ಲಿ ತೊಡಗುತ್ತಿದ್ದರು. ರಸಿಕತನದ ಸುಳಿಸುಖದಲ್ಲಿ ಅವರು ಕಾಲವನ್ನೇ ಪರಿಗಣಿಸುತ್ತಿರಲಿಲ್ಲ. ಪ್ರಕೃತಿಯಲ್ಲಿ ಜೀವನ ಯಾನದಲ್ಲಿ ಸಾತ್ವಿಕ ಸೌಂದರ್ಯವನ್ನು ಆಸ್ವಾದಿಸಿ, ಆರಾಧಿಸುವ ಅದರ ನಾದ-ಲಯಕ್ಕೆ ಮಗುವಿನ ಮುಗ್ದತೆ ದೈವೀಕರುಣೆಗೆ ಮಾರು ಹೋಗುವ ಮನೋಧರ್ಮ ಅವರದಾಗಿತ್ತು.
’ಬೆಳು ನಗೆಯಲಿ’ ಚೆಲುವಿನ ಮೊಗದಲಿ, ತುಳುಕುವ ಆನಂದ
ಅದಾವ ಪೂರ್ವದ ಉದಾರ ಹೃದಯರು ಚೆಲ್ಲಿದ ಪ್ರತಿಬಿಂಬ
ಸದಾ ನಗುಮೊಗದ, ಸಮಾಧಾನದ ಸಾತ್ವಿಕ ಕಲೆಯನ್ನುಕ್ಕಿಸುವ ಸರಸ ಸಜ್ಜನಿಕೆಯ, ನಿರ್ಮಲ ಅಂತಃಕರಣದ ಸಾಕಾರ ಮೂರ್ತಿ ಡಾ. ಕರ್ಕಿಯವರಾಗಿದ್ದರು. ನವೋದಯದ ಕವಿಗಳಲ್ಲಿ ಒಬ್ಬರಾದವರು. ಇವರ ಭಾವಾಭಿವ್ಯಕ್ತಿಗೆ ಹಿರಿಯ ಕವಿಗಳಾದ ಮಧುರಚೆನ್ನ, ಬೇಂದ್ರೆ, ಕುವೆಂಪು, ವೀ.ಸೀ. ಮುಂತಾದವರು ನಮ್ರತೆಯ ದೀಕ್ಷೆ ಕೊಟ್ಟಿದ್ದರೇನೋ ಎಂಬಂತೆ ಚಿಕ್ಕವರನ್ನು ದೊಡ್ಡವರನ್ನು ನಮ್ರತೆಯಿಂದ ಕಾಣುತ್ತಿದ್ದ ಕವಿ. ಅವರ ಸಾಹಿತ್ಯಿಕ ಸಾಧನೆ ಅಪೂರ್ವವಾದುದು. ಮೃದು ಮಧುರ ಭಾವನೆಗಳ ನಿಸರ್ಗ ಪ್ರೇಮ ಕವಿಯಿಂದ ರಚನೆಗೊಂಡ ’ಭಾವಗೀತ’ ಕವನ ಸಂಕಲನಗಳು ಕನ್ನಡಿಗರ ಮನೆ ಮಾತಾಗಿವೆ. ನಕ್ಷತ್ರಗಾನ, ಭಾವತೀರ್ಥ, ಗೀತಗೌರವ, ಕರಿಕೆ ಕಣಗಿಲ, ನಮನ, ಬಣ್ಣದ ಚೆಂಡು, ತನನ ತೋಂ, ಪದ್ಮಪಾಣಿ ಮುಂತಾದವು. ಅವರ ಗದ್ಯವೂ ಕಾವ್ಯದಷ್ಟು ಸುಸಂಬದ್ಧವೂ, ಸುಸಂಗತವಾದುದು. ನಾಲ್ದೆಸೆಯ ನೋಟ, ಅಂಗಡಿ ದಂಪತಿಗಳು, ಐವರು ಶಿಕ್ಷಣ ತಜ್ಞರು, ಸಾಹಿತ್ಯ ಸಂಸ್ಕೃತಿ ಮುಂತಾದವು ಓದುಗರಿಗೆ ಆಪ್ಯಾಯಮಾನವಾಗಿವೆ. ಕನ್ನಡ ಛಂದೋವಿಕಾಸ ಕನ್ನಡದಲ್ಲಿರುವ ಮೊಟ್ಟಮೊದಲ ಛಂದೋಗ್ರಂಥ. ಇದು ಇವರ ಪಿ.ಎಚ್.ಡಿ. ಮಹಾಪ್ರಬಂಧವೂ ಹೌದು. ಇದು ಹದಿಮೂರು ಸಲ ಮರುಮುದ್ರಣಗೊಂಡಿದೆ. ಪ್ರಾಧ್ಯಾಪಕರಾಗಿ, ಪ್ರಾಚಾರ್ಯರಾಗಿ, ಕ.ವಿ.ವಿ. ಗೌರವ ಪ್ರಾಧ್ಯಾಪಕರಾಗಿ (ನಿವೃತ್ತಿ ನಂತರ) ಆಧುನಿಕ ವಚನಕಾರರಾಗಿ, ಕವಿಯಾಗಿ, ವಿಮರ್ಶಕರಾಗಿ, ಛಂದಶಾಸ್ತ್ರಜ್ಞ, ಸಂಶೋಧಕರಾಗಿ ನವೋದಯ ಸಾಹಿತ್ಯದಲ್ಲಿ ಶ್ರೇಷ್ಠರಾಗಿ 20ಕ್ಕೂ ಮಿಕ್ಕು ಕೃತಿಗಳನ್ನು ಸಾರಸ್ವತ ಲೋಕಕ್ಕೆ ನೀಡಿದ ಕವಿ ಕರ್ಕಿಯವರಾಗಿದ್ದು, ನಮ್ಮ ತಾಲ್ಲೂಕಿನ ಹಿರಿಮೆ ಗರಿಮೆಯನ್ನು ಹೆಚ್ಚಿಸಿದ ಧೀಮಂತ ಸಾಹಿತಿ! ಅವರು ಗಾಂಧೀಜಿಯವರನ್ನು ಅಗಲಿದಾಗ ಬರೆದ ಸರ್ವಶ್ರೇಷ್ಠ ಕವನ ದಿವ್ಯಜ್ಯೋತಿ ಎಂಬುದಾಗಿದ್ದು; ಗಾಂಧೀಜಿ ಅವರು ತಿಳಿ ನೀಲದ ನೀಲವಾಗಿ ದೂರ ಹೋದರೂ ಗಾಂಧೀಸ್ಮತಿ ದೇಶ ಬಾಂಧವರಿಗೆ ನಂದಾದೀಪವಾಗಿದೆ. ಅದರ ಪಲ್ಲವಿ-
ತಿಳಿ ನೀಲದಲ್ಲಿ ತಾ ನೀಲವಾಗಿ ಅವ ಹೋದ ದೂರ ದೂರ
ಬೆಳಗಿಹುದು ಇಲ್ಲಿ ಅವ ಬಿಟ್ಟ ಬೆಳಕು ಇನ್ನೊಮ್ಮೆ ಏಕೆ ಬಾರ’
ಡಾ. ಕರ್ಕಿಯವರ ಹಿರೇಮೆಗೆ ಈ ಕವನವೊಂದೇ ಸಾಕ್ಷಿ!

ಹುಲಕುಂದ ಭೀಮಕವಿ (1909-1970): 

  ಬಸಪ್ಪ ಸಂಗಪ್ಪ ಬೆಟಗೇರಿ ಇವರ ಕಾವ್ಯನಾಮ ಭೀಮಕವಿ, ಇವರೊಬ್ಬ ಆಶುಕವಿ, ಗೀಗೀ ಪದಗಳ ರಚಕ ಮತ್ತು ಹಾಡುಗಾರ. ಗಾಂವಟಿ ಶಾಲೆಯ 4ನೆಯ ತರಗತಿ ಓದಿದವರು. ದಾನಮ್ಮ ಇವರ ಧರ್ಮಪತ್ನಿ. 1930 ರಲ್ಲಿ ಮುರಗೋಡ-ಹೊಸೂರಿನಲ್ಲಿ ಗಾಂಧೀಜಿ ವಿನೋಭಾಜಿಯವರ ಶಿಷ್ಯರಾಗಿದ್ದ ಇವರು ಸಿದ್ರಾಮ ಗುರೂಜಿ ಹರಕುಣಿ ಯವರೊಂದಿಗೆ ಆಶ್ರಮ ಕಟ್ಟಿಕೊಂಡು ರಾಷ್ಟ್ರೀಯ ಆಂದೋಲನದ ಕಾರ್ಯಕ್ರಮ ನಡೆಸುತ್ತಿದ್ದರು. ತಮ್ಮ ಗೀಗೀ ಪದಗಳ ಮೂಲಕ ಗಾಂಧೀ ತತ್ವ ಮತ್ತು ಕಾಂಗ್ರೆಸ್ ಸಂಸ್ಥೆಯ ಪ್ರಚಾರ ಮಾಡಿದವರು. ಇವರು ಭೀಮಕವಿಗೀತ ಮೇಳ ಕಟ್ಟಿ ನಾಡಿನ ತುಂಬ ಸಭೆ ಸಮಾರಂಭಗಳಲ್ಲಿ ಗೀಗೀ ಪದಗಳನ್ನು ಹಾಡುತ್ತಿದ್ದರು. ಇವರು ನಮ್ಮ ಅಜ್ಜ ಸಂಗಪ್ಪ ಬೆಟಗೇರಿ ಅವರ ಮಗ. ಸಂಗಪ್ಪನವರ ಮಗಳನ್ನೇ ನಮ್ಮ ಅಣ್ಣನಿಗೆ ಧರ್ಮಪತ್ನಿಯನ್ನಾಗಿ ಸ್ವೀಕರಿಸಿದ್ದು ನಮ್ಮ ವೈನಿಯಾಗಿದ್ದಾರೆ. ಭೀಮಕವಿಯ ಜೊತೆ ಮಲ್ಲಪ್ಪ ಮೂಗಬಸು, ಸೋಮಲಿಂಗಪ್ಪ ದೊಡವಾಡ ಮುಂತಾದವರು ಕೂಡಿಕೊಂಡು ’ಗಾಂಧೀಗೀತ ಮೇಳ ಕಟ್ಟಿ ಅದರ ಅಡಿಯಲ್ಲಿ ಕಾರ್ಯಕ್ರಮ ಮಾಡಿದವರು. ಅವರು 1942 ರಲ್ಲಿ ಸತ್ಯಾಗ್ರಹ ಚಳವಳಿಯಲ್ಲಿ ಭಾಗವಹಿಸಿದ್ದುದರಿಂದ ನಾಲ್ಕು ತಿಂಗಳ ಕಾರಾಗೃಹ ವಾಸ ಮಾಡಿದವರು. ತಾವು ಉಸಿರು ಇರುವವರೆಗೂ ಹುಲಕುಂದ ಗೆಳೆಯರ ಗುಂಪು ಕಟ್ಟಿ ಹಲವಾರು ರಾಷ್ಟ್ರೀಯ, ಸಾರ್ವಜನಿಕ ಕಾರ್ಯಕ್ರಮ ನಡೆಸಿಕೊಟ್ಟವರು. ಸಾಹಿತ್ಯ ರಚನೆಯನ್ನು ಮಾಡಿದವರು. ಅವರ ಲಾವಣಿ ಪದಗಳು ನಾಡಿನಾದ್ಯಂತ ಪ್ರಸಿದ್ಧಿ ಪಡೆದಿವೆ. ಇತರ ಜನಪದ ಗೀತೆಗಳನ್ನು ರಚಿಸಿ ಜನರಲ್ಲಿರುವ ಮೂಢ ನಂಬಿಕೆ, ಅಂಧಕಾರವನ್ನು ತೊಡೆದು ಹಾಕುವಲ್ಲಿ ಶ್ರಮಿಸಿದವರು. ’ಜನಪದ ರಾಷ್ಟ್ರೀಯ ಗೀತೆಗಳು’ ಎಂಬುದು ಪ್ರಸಿದ್ಧ ಕೃತಿ ಮತ್ತು ’ಸರ್ವೋದಯ ಗ್ರಾಮೀಣ ಜನಪದ ಗೀತೆಗಳು’ ಎಂಬ ಕೃತಿಗಳನ್ನು ಪ್ರಕಟಿಸಿದರು. ಇವರು ರಾಷ್ಟ್ರಮಟ್ಟದ- ರಾಜ್ಯ ಮಟ್ಟದ ಪ್ರಶಸ್ತಿಗಳನ್ನು ಬಾಚಿಕೊಂಡಿದ್ದರೆಂದು ಹೇಳಲು ಹೆಮ್ಮೆ ಎನಿಸುತ್ತದೆ. 1947 ರಲ್ಲಿ ನಡೆದ ಬೆಳಗಾವಿ ಜಿಲ್ಲೆಯ ಕನ್ನಡ ಜನಪದ ಮೇಳ ಪರಿಷತ್ತಿನ ಅಧ್ಯಕ್ಷರಾಗಿದ್ದರು. ಇದು ಅವರ ವಿದ್ವತ್ತು ಮತ್ತು ಬಹುಮುಖ ವ್ಯಕ್ತಿತ್ವಕ್ಕೆ ಸಂದ ಗೌರವವಾಗಿದೆ.

ಹುಲಕುಂದದ ಶಿವಲಿಂಗ ಕವಿ (1890-1955): 

  ಶಿವಲಿಂಗ ಕವಿಯು ’ಕಲಗಿ’ ಮತ್ತು ’ತುರಾಯಿ’ ಪ್ರಕಾರಗಳಲ್ಲಿ ಗೀಗೀ ಪದಗಳನ್ನು ರಚಿಸಿ ಹಾಡಿದ್ದಾರೆ. ಇವರು ಹಿರೇಮಠದ ಪಟ್ಟದ ಸ್ವಾಮಿಗಳಾಗಿದ್ದರು. ಜಾತಿ-ಮತ-ಪಂಥಗಳನ್ನು ಮೀರಿದವರಾಗಿದ್ದರು. ಗೀಗೀ ಮೇಳ ಕಟ್ಟಿ ನಾಡಿನ ತುಂಬೆಲ್ಲ ಸಂಚಾರ ಮಾಡಿದವರು. ಇವರ ಮೇಳದವರೂ, ಶಿಷ್ಯರೂ ಆಗಿದ್ದ ದುಂಡಿರಾಜ ಲಿಮಯೆ ಅವರು; ಈ ಕವಿಯ ಶಿವಲಿಂಗಸ್ವಾಮಿ ರಚಿತ ಗೀಗೀ ಪದಗಳು ಎಂಬ ಕೃತಿಯನ್ನು ರಕಟಿಸಿದ್ದಾರೆ. ರುದ್ರಯ್ಯ- ಈರವ್ವನವರ ಪುತ್ರರೇ ಶಿವಲಿಂಗ ಸ್ವಾಮಿ 1890 ರಲ್ಲಿ ಜನಿಸಿ 1955 ರಲ್ಲಿ ಲಿಂಗೈಕ್ಯರಾದವರು. ಇವರ ಕವಿತ್ವದ ಶಕ್ತಿಯೇ ಭೀಮಕವಿಗೆ ಪೂರಕವಾಗಿದ್ದುದು ಸ್ಮರಣೀಯ.

ಲಿಂಗನಗೌಡಾ ಪಾಟೀಲ (1908-1994): 

  ಇವರು ಈ ತಾಲೂಕಿನ ಚಿಕ್ಕೊಪ್ಪ ಗ್ರಾಮದವರು. ಲೋಕಮತ ಪತ್ರಿಕೆಯ ಸಂಪಾದಕರೂ ಹಾಗೆಯೇ ವಿಶಾಲ ಕರ್ನಾಟಕ ಮತ್ತು ನವಯುಗ ಪತ್ರಿಕೆಗಳ ಸಹ ಸಂಪಾದಕರಾಗಿಯೂ ಮತ್ತು ಕೆಲವು ವರ್ಷ ಶಿಕ್ಷಕರಾಗಿಯೂ ಕೆಲಸ ಮಾಡಿದ್ದಾರೆ. ಒಮ್ಮೆ ಎಂ.ಎಲ್.ಸಿಯೂ ಆಗಿದ್ದರು. ’ವೈರಾಗ್ಯ ಫಲ’, ’ರಾಮದುರ್ಗ ಸಂಸ್ಥಾನ ವಿಮೋಚಹೋರಾಟ’, ಹೀಗೆ ಎರಡು ಗದ್ಯ ಕೃತಿಗಳನ್ನು ರಚಿಸಿದ ಕೀರ್ತಿ ವಿಶಾರದರು. ಇವರ ಗದ್ಯ ಸರಳವೂ, ಸುಭಗವೂ ಆಗಿದ್ದು, ಜನಸಾಮಾನ್ಯರಿಗೂ ತಿಳಿಯವಂತಹ ಶೈಲಿಯಾಗಿತ್ತು.

ಶ್ರೀ ಬಿ.ಸಿ. ದೇಸಾಯಿ (1941-1990):

  ಇವರು ಸಾಲಹಳ್ಳಿ ಗ್ರಾಮದವರು. ನವ್ಯ ಸಾಹಿತ್ಯದ ಗಟ್ಟಿ ಬರಹಗಾರರು. ಶ್ರೀಮಂತ ವತನದಾರರು, ಚಂದೂರಾವ-ಗೋಪುಬಾಯಿಯವರ ಮಗನಾಗಿ 1941 ರಲ್ಲಿ ಜನಿಸಿದವರು. ಬಿ.ಎ. ಪದವಿಯನ್ನು ಆಂಗ್ಲ ಭಾಷೆಯಲ್ಲಿ ಪೂರೈಸಿಕೊಂಡವರು. ಇವರ ಬಾಳ ಸಂಗಾತಿ ಘೋಡಗೇರಿಯ ಪಾಟೀಲ ಮನೆತನದ ರಾಜಲಕ್ಷ್ಮೀಯವರೊಂದಿಗೆ ವಿವಾಹವಾದವರು. ಇವರಿಗೆ ಮೂವರು ಸುಪುತ್ರರು. ಅವರದು ಚಿಂತನಶೀಲ ವ್ಯಕ್ತಿತ್ವ ಮತ್ತು ಸತತ ಅಧ್ಯಯನ ಮುಖಿಯಾದವರು. ಓದು ಅವರ ಜೀವನದುದ್ದಕ್ಕೂ ಅಂಟಿಕೊಂಡು ಬಂದಿತು. ಮೃತ್ಯುದೇವಿಯ ಮಡಿಲಿನವರೆಗೂ ಅವರ ಕೈಯಲ್ಲಿ ಗ್ರಂಥವಿರುತ್ತಿತ್ತು. ಹೊಸ ಪುಸ್ತಕ ಬಂದರೆ ಇವರ ಕೈಯಲ್ಲಿಯೇ ಮೊದಲು ಸೇರುತ್ತಿತ್ತು.
  ಇವರು ಚತುರ್ ಭಾಷಾ ಬಲ್ಲಿದರಾಗಿದ್ದರು. ಹಳ್ಳಿಯ ಜಾನಪದವನ್ನು ಒಳಹೊಕ್ಕು ನೋಡಿದವರು. ಅವರು ಜ್ಞಾನ ಭಂಡಾರವೇ; ನಡೆದಾಡುವ ವಿಶ್ವಕೋಶವೇ ಆಗಿದ್ದರು. ಮನೆಯೇ ಗ್ರಂಥಾಲಯವಾಗಿತ್ತು. ಅದೆಷ್ಟೋ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ಇವರಿಂದ ಹಿತೋಕ್ತಿಗಳನ್ನು, ವೈಚಾರಿಕತೆಯನ್ನು ಹೇಳಿಸಿಕೊಂಡು ತೃಪ್ತಿ-ಸಂತಸ ಪಟ್ಟವರುಂಟು. ಇವರ ’ಹುಸಿ’ ಎಂಬ ಕವನ ಸಂಕಲನ ’ಸಾವು ಮತ್ತು ಇತರ ಕಥೆಗಳು’ ಎಂಬ ಕಥಾ ಸಂಕಲನಗಳನ್ನು ಕನ್ನಡ ಸಾರಸ್ವತ ಪ್ರಪಂಚಕ್ಕೆ ಅವರಿತ್ತ ಎರಡು ಕೃತಿರತ್ನಗಳು. ಇಂತಹ ಅಪರೂಪದ ಚಿಂತಕ, ಸಾಹಿತಿಯ ಗೌರವಾರ್ಥಕವಾಗಿ ರಾಮದುರ್ಗ ಪಟ್ಟಣದಲ್ಲಿ ಶ್ರೀ ಬಿ.ಸಿ. ದೇಸಾಯಿಯವರ ಮಾರ್ಗವೆಂಬ ಹೆಸರನ್ನಿಟ್ಟು ಗೌರವ ಸಲ್ಲಿಸಿದ್ದು ಪ್ರಶಂಸನೀಯವಾದುದು.

ಡಾ. ವ್ಹಿ. ಜಿ. ಪೂಜಾರ: 

  ಇವರು ಈ ತಾಲ್ಲೂಕಿನ ಹೊಸೂರು ಗ್ರಾಮದವರು. ಗುಲಬರ್ಗಾ ವಿಶ್ವವಿದ್ಯಾಲಯದ ಪ್ರಾಧ್ಯಾಪಕರಾಗಿ ನಿವೃತ್ತಿ ಹೊಂದಿರುವರು. ಈ ತಾಲ್ಲೂಕಿನ ಪ್ರಪ್ರಥಮ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿದ್ದು; ವೀರಶೈವ ಸಾಹಿತ್ಯದಲ್ಲಿ ಪವಾಡ ಕಥೆಗಳು ಎಂಬುದು ಇವರ ಸಂಶೋಧನಾ ಮಹಾಪ್ರಬಂಧ, ಕವಿವಾಣಿಯಲ್ಲಿ ಶ್ರೀ ಷಣ್ಮುಖ ಶಿವಯೋಗಿಗಳು, ನಿಷ್ಠೆಯ ಕಡಲಪ್ಪ- ವೀರಪ್ಪನವರು, ಸ್ವರವಚನಗಳಲ್ಲಿ ವಿಡಂಬನೆ, ಸಾಹಿತ್ಯ ಸಮಾವೇಶ, ಸಾಹಿತ್ಯ ಮಾರ್ಗ, ಶರಣರ ಎರಡು ನಾಟಕಗಳು, ಕನ್ನಡ ಸಾಹಿತ್ಯ, ಸಾಹಿತ್ಯ ಸಂಬಂಧ, ಶೋಧ, ಸಮೀಕ್ಷೆ, ರಾಮಪುರ ಚಿಕ್ಕಪ್ಪಯ್ಯನ ಸ್ವರ ವಚನ, ತ್ರಿವಿಧಿ, ಸಂಗವಿಭು ಮುಂತಾಗಿ ಅರವತ್ತಕ್ಕೆ ಮಿಕ್ಕು ಕೃತಿಗಳನ್ನು ರಚಿಸಿದ ಕೀರ್ತಿವಂತರು. ಸಂಪಾದನೆ, ಸಂಶೋಧನೆ, ನಡುಗನ್ನಡ ಸಾಹಿತ್ಯದ ವಿಮರ್ಶೆ-ಹೀಗೆ ಹಲವು ವಿಧದಲ್ಲಿ ತಮ್ಮ ಸಾಹಿತ್ಯದ ವಿಮರ್ಶೆ ಮಾಡಿ ಸಾಹಿತ್ಯದ ಸೊಬಗನ್ನು ಈ ನಾಡು-ನುಡಿಗೆ ಅರ್ಪಿಸಿದ್ದಾರೆ.

ಮಾರ್ಕಂಡೇಯ ದೊಡಮನಿ: 

  ಇವರು ರಾಮದುರ್ಗದವರಲ್ಲದೆ ನಲವತ್ತು ವರ್ಷಗಳ ಕಾಲ ಶಿಕ್ಷಕರಾಗಿ, ಡೈಯಟ್‌ದ ಉಪನ್ಯಾಸಕರಾಗಿ ಈಗ ಧಾರವಾಡದಲ್ಲಿ ವಾಸಿಸಿರುವರು. ವಯಸ್ಸು 80 ರ ಮೇಲ್ಪಟ್ಟಾದರೂ ಧಾರವಾಡದ ಸಾಹಿತ್ಯ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಕ್ರಿಯಾಶೀಲರಾಗಿರುವರು. ಸಮಗಾರ ಹರಳಯ್ಯ ಮಾಸಪತ್ರಿಕೆಯ ಸಂಪಾದಕರು. ಇವರ ಸಾಹಿತ್ಯ ರಚನೆ ಅಪಾರವಾದುದು. ಹೂಮಾಲೆ, ಜಗದಾನಂದ (ಕ.ಸಂ.). ಪ್ರಶ್ನೋತ್ತರ ವ್ಯಾಕರಣ, ಶಿವಶರಣ ಸಮಗಾರ ಹರಳಯ್ಯ, ಶ್ರೀ ಸದ್ಗುರು ಶಿವಾನಂದ ಸ್ವಾಮಿಗಳು, ಮೋಹಿತೆ ಗೋವಿಂದ ಮಹರಾಜರು, ನಾವು ನಮ್ಮ ನಡತೆ, ನೀನಾಗು ಭಾರತೀಯ, ಆತ್ಮಾನಂದ ತಂದೆ, ಮದುವೆ, ಗುರುಶಿಷ್ಯ, ಗುರುವಿನೊಡನೆ ಆತ್ಮದೆಡೆಗೆ, ಪರಮಾನಂದದೆಡೆಗೆ ಈ ಮುಂತಾದ ಕವನ, ಚರಿತೆ, ಮಕ್ಕಳ ಚರಿತ್ರೆ, ಸಂಶೋಧನೆ, ಪ್ರಬಂಧ, ಆಧ್ಯಾತ್ಮ ಗ್ರಂಥಗಳನ್ನು ರಚಿಸಿ ನಾಡು ನುಡಿಗೆ ಕೃತಕೃತ್ಯರಾಗಿದ್ದಾರೆ. ರಾಷ್ಟ್ರ- ರಾಜ್ಯ ಪ್ರಶಸ್ತಿ ಅಂಬೇಡ್ಕರರ ಪ್ರಶಸ್ತಿ ಮುಂತಾದ ಪ್ರಶಸ್ತಿಗಳಿಗೆ ಭಾಜನರಾಗಿದ್ದಾರೆ.

ಪ್ರೊ. ವೆಂಕಟೇಶ ಹುಣಸೀಕಟ್ಟಿ: 

  ಕಾಕತಾಳಿಯವೇನೋ ಎನ್ನುವಂತೆ ಹುಣಸೀಕಟ್ಟಿಯವರು ಹೊಸಕೋಟಿ ಗ್ರಾಮದವರು, ನಾನೂ ಅಲ್ಲಿಯವನು. ಹಲಗತ್ತಿ ಅವರ ಬೀಗರ ಊರು. ನನ್ನ ತಾಯಿಯ ತವರು ಮನೆಯೂ ಹಲಗತ್ತಿ. ಇದು ಎಂಥ ಅವಿನಾಭಾವ ಸಂಬಂಧ ನೋಡಿ! ಹೊಸಕೋಟಿಯಿಂದ ಈಗ ನಿಕಟ ಪೂರ್ವ ಅಧ್ಯಕ್ಷರಾಗಿ ತಮಗೆಲ್ಲ ವರ್ಷದುದ್ದಕ್ಕೂ ಸಾಹಿತ್ಯದ ರಸದೌತಣವನ್ನು ಉಣಬಡಿಸಿದವರು. ಅವರಿಗಿಂತ ಹತ್ತು ವರ್ಷ ಚಿಕ್ಕವನು. ನನ್ನನ್ನು ಸರ್ವಾಧ್ಯಕ್ಷನನ್ನಾಗಿ ಮಾಡಿದ್ದುದು ಹೊಸಕೋಟೆಗೆ ಜೋಡು ದೀಪ್ತಿ ಬೆಳಗುವಂತಾದುದು. ಈ ಸಮ್ಮೇಳನದಲ್ಲಿ ನಮ್ಮೀರ್ವರ ಸೌಭಾಗ್ಯವೆಂದೇ ಭಾವಿಸಿದ್ದೇನೆ! ಆದರೆ ನಮ್ಮಿಬ್ಬರಲ್ಲಿ ಒಂದು ವ್ಯತ್ಯಾಸವೇನೆಂದರೆ ಅವರು ಬೀಗರ ಊರಿನಲ್ಲಿ ವಾಸವಾಗಿದ್ದಾರೆ. ನಾನು ಧಾರವಾಡದಲ್ಲಿದ್ದೇನೆ. ಊರು ಬಿಟ್ಟರೂ ಊರಿನ ಮೇಲೆ, ಅಭಿಮಾನ, ಪ್ರೀತಿಯುಳ್ಳವರು ಎಂಬುದನ್ನು ವಿನಮ್ರದಿಂದ ಹೇಳಿಕೊಳ್ಳುವೆ. ಅವರು ಹೊನ್ನಾವರ ಕಾಲೇಜಿನಲ್ಲಿ ಭೌತ- ರಸಾಯನಶಾಸ್ತ್ರದ ಬೋಧಕರಾಗಿ ಸೇವೆ ಸಲ್ಲಿಸಿ ವಿಶ್ರಾಂತದ ಬದುಕಿಗೆ ಆಸರೆಯಾಗಿರುವರು. ಆದರೆ ಅವರು ಸಾಹಿತ್ಯ ರಚನೆಗೆ ತೊಡಗಿಸಿಕೊಂಡು ಮೂವ್ವತ್ತಕ್ಕೂ ಮಿಕ್ಕು ಕೃತಿಗಳನ್ನು ರಚಿಸಿ, ಕನ್ನಡ ಸಾಹಿತ್ಯದ ಕಣಜವನ್ನು ಶ್ರೀಮಂತಗೊಳಿಸಿದ್ದುದಕ್ಕೆ ತಮ್ಮೆಲ್ಲರ ಪರವಾಗಿ ಶ್ರೀಯುತರಿಗೆ ಅಭಿನಂದನೆಗಳನ್ನು ಸಲ್ಲಿಸುತ್ತೇನೆ.

ಶ್ರೀ ಹನುಮಂತಗೌಡಾ ಮುದಿಗೌಡರ: 

  ಶ್ರೀಯುತರು ಕಿಲ್ಲಾ ಹೊಸಕೋಟಿಯಲ್ಲಿ ಜನಿಸಿ, ಗುತ್ತಿಗೋಳಿ ಹೊಸಕೋಟಿಯ ಅಳಿಯರಾಗಿ ಬಂದು ನೆಲೆಸಿ, ಗಣ್ಯ ವ್ಯಾಪಾರಸ್ಥರೂ, ಸಮಾಜ ಸೇವಕರೂ, ನುರಿತ ಭಾಷಣಕಾರರೂ ಆಗಿ ಸೇವೆ ಸಲ್ಲಿಸುತ್ತಲಿರುವರು. ಇವರು ಹಲಗಲಿ ಬಂಡಾಯದಂತಹ ಸುಮಾರು ಎಂಟ್ಹತ್ತು ಕಾವ್ಯ, ನಾಟಕ, ಪ್ರಬಂಧ, ಸಂಕಲನಗಳನ್ನು ರಚಿಸಿ ಉದ್ದಾಮ ಸಾಹಿತಿಯಾದವರು. ಅವರಿಂದ ಕನ್ನಡ ನಾಡು ನುಡಿಯ ಸೇವೆ ಸದಾ ಕ್ರಿಯಾಶೀಲವಾಗಿದೆಯೆಂಬುದು ಕಂಡ ಸತ್ಯ!

ಶ್ರೀ ಶಿರೀಫ್ ಜೋಶಿ: 

  ರಾಮದುರ್ಗದವರೇ ಆದ ಇವರು ಚಿಕ್ಕೋಡಿಯ ನೀರಾವರಿ ಇಲಾಖೆಯಲ್ಲಿ ಸದ್ಯ ಸೇವೆಯಲ್ಲಿದ್ದಾರೆ. ರಾಘವೆಂದ್ರ ಸ್ತುತಿ, ಯಶೋಗಾಥೆ, ಮಿಂಚು ಎಲ್ಲಾರೂ ಮಾಡೂದು ಹೊಟ್ಟೆಗಾಗಿ, ಕನ್ನಡ ಕನ್ನಡಿ, ಚೆಲುವ ಕನ್ನಡ ನಾಡು, ಸಾಂಸ್ಕೃತಿಕ ಐತಿಹಾಸಿಕ ಕೈಪಿಡಿ ಎಂಬಿತ್ಯಾದಿ ಕೃತಿಗಳನ್ನು ರಚಿಸಿದ್ದಾರೆ. ಇವರು ರೂಪಾಂತರ ಮಾಡಿದ ಕೃತಿಗಳುಂಟು! ಇವರ ನಾಟಕಗಳು ರಂಗ ಪ್ರಯೋಗ ಕಂಡಿವೆ. ಹೀಗೆ ಸಾಹಿತ್ಯ ಕೃಷಿ ಮಾಡಿದ ಉತ್ತಮ ಸಾಹಿತಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ಶ್ರೀ ಜಿ.ಬಿ. ಕುಲಗೋಡ:  

  ಅವರು ಇದೇ ಗ್ರಾಮ ಬಟಕುರ್ಕಿಯವರು. ಈಗ ಬೆಳಗಾವಿಯಲ್ಲಿ ನೆಲೆಸಿದ್ದಾರೆ. ನಗೆಹನಿ ಕವನ ಸಂಕಲನ, ನಕ್ಕು ನೋಡಿ, ಚುಟುಕುಗಳ ಸಂಕಲನವನ್ನು ಪ್ರಕಟಿಸಿದ ಶ್ರೀಯುತರು
10-02-1947 ರಲ್ಲಿ ಜನಿಸಿ ಸಾಹಿತ್ಯ ಸೇವೆಯನ್ನು ಮಾಡುತ್ತಿರುವ ಗಮನಾರ್ಹ ವ್ಯಕ್ತಿತ್ವ ಹೊಂದಿದವರು.

ಶ್ರೀ ರಾಮಣ್ಣ ಬ್ಯಾಟಿ:  

  ಸುರೇಬಾನ ಮನಿ ಹಾಳದವರು, ಓದಿದ್ದು 3ನೇಯ ತರಗತಿ, ವೃತ್ತಿ ನೇಕಾರಿಕೆ, ಈಗ ಸದ್ಯ ಗದಗ-ಬೆಟಗೇರಿಯಲ್ಲಿ ವಾಸವಾಗಿದ್ದಾರೆ. ಎಲೆಯ ಮರೆಯ ಫಲದಂತೆ ಸಾಹಿತ್ಯ ಕ್ಷೇತ್ರದಲ್ಲಿ ತಮ್ಮನ್ನೇ ತೊಡಗಿಸಿಕೊಂಡವರು. ಸಿದ್ಧಲಿಂಗನ ಕಾವ್ಯ ಸುಧೆ, ಭಕ್ತಿ ಕುಸುಮ, ಶ್ರೀದೇವಾಂಗ ಶತಕ, ಶ್ರೀ ಹೊಳಲಮ್ಮದೇವಿ ಶತಕ, ಅನ್ನದಾನೇಶ್ವರಿ ಶತಕ, ನಿವೃತ್ತಿನಾಥರ ಚರಿತ್ರೆ, ಗೌರಿಶಂಕರ ಚರಿತಾಮೃತ, ಶ್ರೀ ಗುಡ್ಡಾಪುರ ದಾನಮ್ಮದೇವಿ ಪುರಾಣ, ಶ್ರೀ ಇಟಗಿ ಭೀಮಂಬಿಕಾ ಪುರಾಣ, ಮುಂತಾಗಿ ಷಟ್ಪದಿ ಕಾವ್ಯಗಳನ್ನು ರಚಿಸಿದ್ದಲ್ಲದೆ, ಯಾತಾಳಿ ಚನ್ನಬಸಪ್ಪನ ಚರಿತ್ರೆ, ಮುಕ್ಕಣ್ಣೇಶ್ವರ ಚರಿತಾಮೃತ, ಬದಾಮಿ ರುದ್ರಪ್ಪಜ್ಜನವರು -ಹೀಗೆ ಮುಂತಾದ 20 ಕ್ಕೂ ಮಿಕ್ಕು ಕೃತಿಗಳನ್ನು ರಚಿಸಿದ್ದು ಅವರನ್ನು ಸ್ಮರಿಸಲೇಬೇಕಾದುದು.
ಶ್ರೀ ಅಶೋಕ ಚೊಳಚಗುಡ್ಡ:
  ಅವರು ಸದ್ಯ ಧಾರವಾಡದಲ್ಲಿದ್ದು ಚುಟುಕು ಕವಿಯೆಂದೇ ಖ್ಯಾತನಾಮರು. ಪುಟ್ಟನ ಹಾಡು, ಮತ್ತು ಚುಟುಕು ನಗು-ಹಾಸ್ಯ ಕವನ ಸಂಕಲನಗಳನ್ನು ರಚಿಸಿರುವರು.

ಹಸನ್ ನಮೀಂ ಸುರಕೋಡ: 

  ಅವರು ಪತ್ರಿಕಾ ವರದಿಗಾರರಾಗಿ ಸೇವೆ ಸಲ್ಲಿಸುತ್ತಿದ್ದು, ಜಾತಿ ಪದ್ಧತಿ, ಅನುವಾದಿತ ಕೃತಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿಯ ಬಹುಮಾನ ಪಡೆದವರು. ವಾದಿರಾಜ ಭಟ್ಟ ರವರು, ತಿಳಿಯಾದ ನೀರು (ಕಾದಂಬರಿ) ಚೆನ್ನ ಚೆಲುವ ಚೆಂಬೆಳಕು ಜೀವನ ಚರಿತ್ರೆಯನ್ನು ಬರೆದು ಪ್ರಕಟಿಸಿರುವರು.

ಮಹಾದೇವ ತೇರದಾಳ: 

  ಅವರು ಅಂಚೆ ಇಲಾಖೆಯ ನೌಕರರು, ಅವರು ಹರಳಯ್ಯನ ಭಕ್ತಿ, ವಿಜಯ ಮಾಲೆ ನಾಳಿನ ಪ್ರಜೆ-ನಾವು ಮುಂತಾದ ಕೃತಿಗಳನ್ನು ರಚಿಸಿದ್ದಾರೆ.

ಅವರಾದಿಯ ಸಿದ್ದು ಮೋಟೆ: 

  ಅವರು ಅರಿವು ನೀಡಯ್ಯ (ಕ.ಸಂ) ರಚಿಸಿದ್ದಾರಲ್ಲದೇ ಓಂ ಫಲಹಾರೇಶ್ವರ, ಡೊಳ್ಳಿನ ಮೇಳ, ಕಟ್ಟಿ ಡೊಳ್ಳಿನ ಹಾಡುಗಳನ್ನು ರಚಿಸಿ ನಾಡಿನುದ್ದಗಲಕ್ಕೂ ಹಾಡುತ್ತಲಿದ್ದಾರೆ. ಇದೇ ಗ್ರಾಮದ ಬೀರಪ್ಪ ಮೋಟೆ ಎಂಬುವವರೂ ಸ್ವರಚಿತ ಡೊಳ್ಳಿನ ಹಾಡುಗಳು ಮತ್ತು ಸಿದ್ಧರ ಬಂಢಾರ ಎಂಬ ಕೃತಿಗಳೆರಡನ್ನು ರಚಿಸಿದ್ದಾರೆ. ಪಂಚಗಾವಿ ಗ್ರಾಮದ ಡಾ. ಬಿ. ಎಸ್. ಭಜಂತ್ರಿ ಅವರು ’ಹುಲಕುಂದದ ಲಾವಣಿ ಸಂಪ್ರದಾಯ: ಒಂದು ಅಧ್ಯಯನ’ ಎಂಬ ಸಂಶೋಧನಾ ಮಹಾ ಪ್ರಬಂಧ ರಚಿಸಿದ್ದುದಲ್ಲದೇ ’ಜಾನಪದ ಒಗಟುಗಳು’ ಕೃತಿಯನ್ನು ಪ್ರಕಟಿಸಿದ್ದಾರೆ. ಸಿದ್ನಾಳ ಗ್ರಾಮದ ಹಿರೇಮಠ ವ್ಹಿ.ವ್ಹಿ. ಮತ್ತು ಚಂದರಗಿಯ ಪಿ. ಸುಭಾಸ ಇವರಿಬ್ಬರೂ ಸೇರಿ ’ಬಿಂಬ-ಪ್ರತಿಬಿಂಬ ಕವನ ಸಂಕಲನ ಪ್ರಕಟಿಸಿದ್ದಾರೆ. ಹಲಗತ್ತಿಯ ಕೆ.ವ್ಹಿ. ಅಜವಾನ ಅವರು ಬಾಳು ಮುರಿದರೂ ತಾಳ ತಪ್ಪಲಿಲ್ಲ ಎಂಬ ವೃತ್ತಿ ರಂಗಭೂಮಿಯ ಸಾಮಾಜಿಕ ನಾಟಕ ರಚಿಸಿದ್ದಾರೆ.
  ಬೇರೆ ತಾಲ್ಲೂಕಿನವರಾದ ಸಂಗಮೇಶ ಆರ್. ಗುರವ ಅವರು ಸುರೇಬಾನದಲ್ಲಿ ನೆಲೆಸಿದ್ದಾರೆ. ವಿದ್ಯೆಯಿದ್ದರೂ ದುಡಿಮೆ ಬೇಕು, ಕೂಡಿ ಬಾಳಿದರೆ ಸ್ವರ್ಗಸುಖ, ಸಿಂಧೂರ ಲಕ್ಷ್ಮಣ, ಶಿವಶರಣೆ ಆಯ್ದಕ್ಕಿ ಲಕ್ಕಮ್ಮ ಇವು ಇವರ ಪ್ರಕಟಿತ ನಾಟಕಗಳು.

ಚಾಂದಕವಟೆಯ ಪ್ರೊ. ಸಿದ್ದಣ್ಣ ಲಂಗೋಟಿ: 

  ಅವರು ರಾಮದುರ್ಗದಲ್ಲಿ ನೆಲೆಸಿದ್ದಾರೆ. ಇವರ ಧರ್ಮಪತ್ನಿ ಡಾ. ಕಲ್ಯಾಣಮ್ಮ ಎಸ್. ಲಂಗೋಟಿಯವರೂ ರಾಮದುರ್ಗ ಕಾಲೇಜಿನಲ್ಲಿ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿ ವಿಶ್ರಾಂತ ಬದುಕಿಗೆ ಆಶ್ರಯವಾಗಿದ್ದಾರೆ. ಇವರು ಆಧುನಿಕ ವಚನಕಾರ ’ಕುಮಾರ ಕಕ್ಕಯ್ಯ ಮೋಳ: ಒಂದು ಅಧ್ಯಯನ’ ಸಂಶೋಧನೆ ಮಹಾಪ್ರಬಂಧವನ್ನು ರಚಿಸಿದ್ದಾರೆ ಮತ್ತು ಸ್ತ್ರೀ ಸಂವೇದನೆಗಳು, ಜಯದೇವಿ ತಾಯಿ ಲಿಗಾಡೆ ಮುಂತಾದ ಕೃತಿಗಳನ್ನು ರಚಿಸಿದ್ದಾರೆ. ಪ್ರೊ. ಸಿದ್ದಣ್ಣ ಅವರು ಶರಣರ ಚರಿತ್ರೆಗಳನ್ನು ಸುಮಾರು 80ಕ್ಕೂ ಮಿಕ್ಕು ಬರೆದು ಪ್ರಕಟಿಸಿದ್ದಾರೆ. ಇಲಕಲ್ಲದ ಡಾ. ಮಹಾಂತ ಶಿವಯೋಗಿಗಳು ಹೊರಡಿಸುವ ಬಸವ ಬೆಳಗು ಮಾಸಿಕ ಪತ್ರಿಕೆಯ ಸಂಪಾದಕರಾಗಿ ಕಾರ್ಯನಿರ್ವಹಿಸುತ್ತಿರುವರು. ಇಂಥ ಶರಣರ ಬದುಕು-ಬರಹ ಹಿತಮಿತವಾಗಿ ಸಾಗಿರುವುದು ಮಾದರಿಯಾಗಿದೆ. ಅವರದು ಸತಿ-ಪತಿಗಳೊಂದಾದ ಭಕ್ತಿ ಹಿತವಾಗಿರುವುದು ಶಿವನಿಗೆ ಎಂದು ಹೇಳಬಹುದು.

ಡಾ. ರಾಜೇಂದ್ರ ಅಣ್ಣಾನವರ: 

  ಇವರು ಬೆಂಬಳಗಿ ಕಾಲೇಜಿನಲ್ಲಿ ಕನ್ನಡ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿರುವರು. ನೋವಿನ ಎಳೆಗಳು, ಕತ್ತಲೆಯ ದಾರಿ, ಇಂಚರ ಸ್ಮರಣೆ, ಮೂರು ಕವನ ಸಂಕಲನಗಳು, ಪ್ರೇಮದಂಬರ, ಬೇಂದ್ರೆ ಸ್ಮರಣೆ, ಲಿಂಗನಗೌಡ ಪಾಟೀಲರ ಸಮನ್ವಯ ಭಾಗ-1, 2, 3,4 ಸಂಪಾದಿತ ಕೃತಿಗಳನ್ನು ಪ್ರಕಟಿಸಿದ್ದಾರೆ. ’ಅದೃಶ್ಯ ಕವಿಯ ಜೀವನ ಮತ್ತು ಕೃತಿಗಳು’ ಇದು ಸಂಶೋಧನ ಮಹಾ ಪ್ರಬಂಧವನ್ನು ಪ್ರಕಟಿಸಿ ಸಾಹಿತ್ಯದ ಕಣಜವನ್ನು ಶ್ರೀಮಂತಿಕೆಗೊಳಿಸಿದ್ದಾರೆ.
ಇವರಲ್ಲದೇ ಇನ್ನೂ ಎಲೆಯ ಮರೆಯ ಕಾಯಿಯಂತೆ ಅನೇಕ ಕವಿ, ಸಾಹಿತಿ, ನಾಟಕ, ರಂಗ ಕಲಾವಿದರು, ಜನಪದ ಹಾಡುಗಾರರು ನನ್ನ ಗಮನಕ್ಕೆ ಬಾರದೇ ಉಳಿದಿರಬಹುದು. ಬೆಳಗಾವಿ ಜಿಲ್ಲೆಯ ಉಳಿದೆಲ್ಲ ತಾಲ್ಲೂಕುಗಳಿಗಿಂತಲೂ ಕನ್ನಡ ಸಾಹಿತ್ಯ ಶ್ರೀಮಂತಗೊಳಿಸಿದ್ದು ರಾಮದುರ್ಗ ತಾಲೂಕು ಪ್ರಮುಖ ಪಾತ್ರ ವಹಿಸಿದೆಯೆಂದು ಹೇಳಲು ಹೆಮ್ಮೆಯೆನಿಸುತ್ತದೆ. ಕನ್ನಡ ವೃತ್ತಿ ರಂಗಭೂಮಿಗೂ, ರಾಮದುರ್ಗ ತಾಲೂಕಿನಿಂದ ಚಾರಿತ್ರಿಕ ಕೊಡುಗೆ ಸಂದಿದೆ. ಜನಪದ ಸಾಹಿತ್ಯದ ಕೊಡುಗೆಯೂ ಅಪಾರವಾಗಿದೆ. ಯಾವುದೇ ದೇಶದ ನಾಡಿನ ಸಂಸ್ಕೃತಿಗೆ ಮೂಲ ಸೆಲೆಯಾಗಿ ಜಾನಪದ ಸಂಸ್ಕೃತಿಯಿದ್ದೇ ಇರುತ್ತದೆ ಎಂಬುದರಲ್ಲಿ ಅನುಮಾನವಿಲ್ಲ. ಶಿಷ್ಟ ಸಾಹಿತ್ಯವು ಸೃಷ್ಟಿಯಾದದ್ದು ಜನಪದ ಮೂಲದಿಂದಲೇ ಎಂಬುದನ್ನು ನಾವು ಅಲ್ಲಗಳೆಯುವಂತಿಲ್ಲ.
ಪ್ರೇಕ್ಷಣಿಯ ಸ್ಥಳ:
ರಾಮದುರ್ಗ ತಾಲ್ಲೂಕಿನ ಪ್ರೇಕ್ಷಣೀಯ ಸ್ಥಳಗಳಲ್ಲದೇ ಗೊಡಚಿಯ ವೀರಭದ್ರೇಶ್ವರ ದೇವಸ್ಥಾನ, ರಾಮದುರ್ಗದ ವೆಂಕಟೇಶ್ವರ ದೇವಸ್ಥಾನ, ಹಲಗತ್ತಿಯ ಬಸವೇಶ್ವರ ದೇವಸ್ಥಾನ, ಶಬರಿಕೊಳ್ಳ, ಸಿದ್ಧೇಶ್ವರ ಕೊಳ್ಳ, ಮೇಗುಂಡೇಶ್ವರ ಕೊಳ್ಳ, ಅವರಾದಿಯ ಶ್ರೀ ಫಲಹಾರೇಶ್ವರ ಮಠ, ಕುಳ್ಳೂರು- ಶಿವಯೋಗಿಗಳು ಮತ್ತು ಸಿದ್ಧರಾಮೇಶ್ವರರು, ರೇವಯ್ಯ ಮಹಾಸ್ವಾಮಿಗಳ ಕಲ್ಮಠ, ಹೊಸಕೋಟಿಯ ರೇವಯ್ಯ ಸ್ವಾಮಿ ಮಠ ಮತ್ತು ಜಲಕನ್ಯೆಯರ ಹೊಕ್ಕು ತುಂಬುವ ಬಾವಿ (ಜಕನ್ಯಾರ ಬಾವಿ), ಮುದೇನೂರಿನ ಹಾಗೂ ಚಿಪ್ಪಲಕಟ್ಟಿಯ ಲಕ್ಷ್ಮೀದೇವಿ, ಸಾಲಹಳ್ಳಿಯವರೇ ಆದ ಪರಮಪೂಜ್ಯ ಶ್ರೀ ಲಿಂಗೈಕ್ಯ ಮಹಾಂತ ಶಿವಯೋಗಿಗಳು ನಿರ್ಮಿಸಿದ ನೆರೆಯ ತಾಲ್ಲೂಕುಗಳಾದ ಅರಬಾವಿ ಮಠ, ಮುರಗೋಡ ಮಠ ಇನ್ನೂ  ಮುಂತಾದ ಸರ್ವಧರ್ಮ ಸಮನ್ವಯ ದೃಷ್ಠಿಯನ್ನು ಸಾರಿ ಪ್ರಸಾರ ಮಾಡುವ ಹಿಂದೂ-ಮುಸ್ಲಿಂ ಭಾವೈಕ್ಯತೆಯ ಪ್ರತೀಕದಂತಿರುವ ಮಸಜೀದಗಳು ಇಲ್ಲಿವೆ.
 ಹಚ್ಚೇವು ಕನ್ನಡದ ದೀಪ!
ಕರುನಾಡ ದೀಪ, ಸಿರಿನುಡಿಯ ದೀಪ
ಒಲವೆತ್ತಿ ತೋರುವಾ ದೀಪ! 
(ಸಂಗ್ರಹ ಮಾಹಿತಿ)

- March 01, 2019 No comments:
Email ThisBlogThis!Share to XShare to FacebookShare to Pinterest

Wednesday, 20 February 2019

ಬ್ರಹ್ಮಗಂಟು

ಮಂಜುನಾಥ ಗದಗಿನ

ಅಪರಿಚಿತರಿವರು, ಅಪರಿಚಿತರು
ಎಲ್ಲೋ ಹುಟ್ಟಿ, ಎಲ್ಲೋ
ಬೆಳೆದು ಮೂರು ಗಂಟಲ್ಲಿ
ಒಂದಾದವರು..
!
ಮೂರು ಗಂಟಲ್ಲೆ ನಂಟು ಕಂಡು
ನೆಂಟರಾದವರು,
ಪ್ರೀತಿ, ವಾತ್ಸಲ್ಯ, ಮಮತೆ
ಒಂಚೂರು ಹುಸಿ ಕೋಪ, ಹಟ
ಕಟ್ಟಿಕೊಂಡು ಮುಂದೆ ಸಾಗುವವರು.
!
ಕಷ್ಟ, ಸುಖಃಗಳಲ್ಲಿ ಜೊತೆಯಾಗಿ
ಸಂಸಾರ ಎಂಬ ಸುಂದರ
ಅರಮನೆಯಲ್ಲಿ ಚಂದದ ನಗು
ಚಲ್ಲಿ ಹೆಗಲಿಗೆ ಹೆಗಲು ಕೊಟ್ಟು
ಬಾಳ ನಡೆಸುವವರು, ಅವರೇ
ಬ್ರಹ್ಮ ಹಾಕಿದ ಗಂಟಿನಲ್ಲಿ
ಸತಿ, ಪತಿ ಆದವರು.
#ಎಂಜಿ..💪🏼🌹
- February 20, 2019 No comments:
Email ThisBlogThis!Share to XShare to FacebookShare to Pinterest

ಸ್ನೇಹದ ಕಡಲು


ಮಂಜುನಾಥ ಗದಗಿನ
ಇಂದು-ನಾಳೆ ಮುಗಿಯದೇ,ನಿತ್ಯ ನಿರಂತರ ಹರಿಯುವುದೇ ಸ್ನೇಹದ ಕಡಲು. ಆ ಕಡಲಲ್ಲಿ ನಮ್ಮ ನೆನೆಪುಗಳು ಮಿಂಚು ದೋಣಿಗಳು ಇದ್ದ ಹಾಗೆ, ಬಂದು ಹೀಗೆ ಹೋಗುತ್ತೆ. ಅದರೊಟ್ಟಿಗೆ ಸಾಗರದ ಅಲೆಯ ಹಾಗೆ ಮಧುರಕ್ಷಣಗಳನ್ನು ಹೊತ್ತುಕೊಂಡು ಬಂದು ಎದೆಯಾಳದಲ್ಲಿ ತುಂಟ ನೆನಪುಗಳನ್ನು ಸುರಿಸುತ್ತವೆ.
ಬೆಟ್ಟದಂತಹ ಕನಸುಗಳೊಂದಿಗೆ, ಒಂದು ಭರವಸೆಯೊಂದಿಗೆ ಅದೇಷ್ಟೋ ವಿದ್ಯಾರ್ಥಿಗಳು ತಂದೆ-ತಾಯಿ,ಬಂಧುಬಳಗ, ಬಾಲ್ಯದ ಸ್ನೇಹಿತರುನ್ನು ಬಿಟ್ಟು ಕಾಣದ ಊರಿಗೆ ಬಂದು ಶಿಕ್ಷಣ ಪಡೆಯುತ್ತಾರೆ. ಅದರಲ್ಲೂ ಸ್ನಾತಕೋತ್ತರ ಶಿಕ್ಷಣ ಪಡೆಯಬೇಕೆಂದರೆ ಊರು ಬಿಟ್ಟು ಬರಲೇ ಬೇಕು. ಹ್ಞೂ! ನಾನು ಕೂಡಾ ಒಂದು ಚಿಕ್ಕ ಭರವಸೆಯೊಂದಿಗೆ ನಗರಕ್ಕೆ ಅಂಬೆಗಾಲಿಟ್ಟವನು. ಗೊತ್ತಿಲ್ಲದ ಊರಿಗೆ ಬಂದ ಮೇಲೆ ಪ್ರಾರಂಭದಲ್ಲಿ ಎಡವುದು ಸಹಜ. ಮತ್ತೆ ಚೇತರಿಸಿಕೊಂಡು ಮುನ್ನುಗುವದು ಕಾಲ ಸಹಜ. ನಾನು ಕೂಡಾ ಪ್ರಾರಂಭದ ಎಲ್ಲ ಕಷ್ಟಗಳನ್ನು ಅನುಭವಿಸಿ ಸ್ನಾತಕೋತ್ತರ ಮುಗಿಸಿದವನೇ. ಆದರೆ ನನ್ನ ಆ ಕಷ್ಟಗಳಿಗೆ, ಸುಖಗಳಿಗೆ ಹೇಗಲಾಗಿ ನಿಂತುಕೊಂಡಿದ್ದು ನನ್ನ ಸ್ನೇಹಿತರು.
ಅವು ಕಾಲೇಜಿನ ಆರಂಭದ ದಿನಗಳು. ಕಂಡಷ್ಟು ಬಗೆದಷ್ಟು ಎಲ್ಲವೂ ಹೊಸದು. ಅದರೊಟ್ಟಿಗೆ ಹೊಸ ಮುಖಗಳ ದರ್ಶನ. ಅನಂತರ ಅವೇ ಮುಖಗಳು ಮಾಗದರ್ಶ ನೀಡಿದ್ದು ಈಗ ಇತಿಹಾಸ. ಕಾಲಗಳು ಗತಿಸಿದರು ನೆನಪುಗಳು ಗತಿಸವು ಎಂಬುದಕ್ಕೆ ಕ್ಯಾಂಪಸನ್ ಕೆಲವು ಸ್ನೇಹದ ಸಹಾಯಗಳು,ಕಿಟಲೆಗಳು, ಮುನಿಸು, ದ್ವೇಷ, ಜಗಳ, ಕಾಡು ದಾರಯಲ್ಲಿ ಕಾಡಿಸಿದ್ದು ಎಲ್ಲವೂ ನೆನಪಿನ ದೋಣಿಯಲ್ಲಿ ಸಾಗುವವೇ.

ದಿನದ ಖರ್ಚಿಗೆ ಎಂದು ತಂದಿದ್ದ ಸಾವಿರ ರೂಪಾಯಿ, ಕಾಡುದಾರಿ ಮಧ್ಯೆ ಕಳೆದು ಹೋದಾಗಿ,ಊರಿಗೆ ಹೋಗಲು ದುಡ್ಡು ಇಲ್ಲದಿದ್ದಾಗ, ನನ್ನ ಕಷ್ಟವನ್ನು ಆಲಿಸಿ, ತನ್ನ ಜೇಬಿನಿಂದ ನೂರರ ಮೂರು ನೋಟುಗಳನ್ನು ನನ್ನ ಕೈಗಿಟ್ಟು ಮಂಜು ಈ ದುಡ್ಡು ತೆಗೆದುಕೊಂಡು ಹೋಗು, ನಿನ್ನ ಖರ್ಚಿಗೂ ಆಗುತ್ತದೆ, ನೀನು ಊರಿಂದ ಬಂದ ಮೇಲೆ ಕೊಡುವಂತೆ ಎಂದು ಕಷ್ಟ ಕಾಲದಲ್ಲಿ ಕನಿಕರದಿಂದ ಸಹಾಯ ಮಾಡಿದ ಸುರೇಶಣ್ಣ. ಎಕ್ಸಾಂ ಬಂದಾಗ ವಾರ್ಡನ ಎದುರು ಹಾಕಿಕೊಂಡು ಸ್ನೇಹಕ್ಕೆ ತನ್ನ ಹಾಸ್ಟೇಲ್‌ನಲ್ಲಿ ನೆಲೆಸಲು ಅವಕಾಶ ಕೊಡುತ್ತಿದ್ದ, ಪ್ರತಿದಿನ ಮಧ್ಯಾಹ್ನ ತುತ್ತು ಊಟ ಕೊಡುತ್ತಿದ್ದ ಯಲ್ಲಪ್ಪ, ಪ್ರತಿದಿನ ದುಡ್ಡು ಖರ್ಚು ಮಾಡಿ ಲೇಖನಗಳನ್ನು ಟೈಫ ಮಾಡಲು ಹೋಗುತ್ತಿದ್ದಾಗ ಅಣ್ಣ ನನ್ನ ಲ್ಯಾಫಿ ಇದೆ. ಮನೆಗೆ ತೆಗೆದುಕೊಂಡು ಹೋಗಿ ಟೈಫ್ ಮಾಡು ಎಂದು ಸಹದಯ ತೋರಿದ ಮಧುಶ್ರೀ. ಸ್ಟೋರ್ಟ ಟೀಶರ್ಟಗೆ ಕೊಡಲು ದುಡ್ಡು ಇಲ್ಲದಾದ ತನ್ನ ಕೈಯಿಂದ ದುಡ್ಡು ನೀಡಿದ ಸುಬ್ಬು, ಪ್ರತಿದಿನ ಪ್ರಯಾಣದಲ್ಲಿ ಜತೆಯಾಗಿ ಇರುತ್ತಿದ್ದ ಶ್ರೀ ಹೀಗೆ ಸ್ನೇಹ ಎಂಬ ಸುಂದರ ಕಡಲನ್ನು ತೆರೆಯುತ್ತಾ ಹೋದ ಹಾಗೆ ಅದರ ಹರವು ಹೆಚ್ಚಾಗುತ್ತಾ ಸಾಗುತ್ತದೆ.

  ಲೇಖನ ಕಳುಹಿಸಲು ಲ್ಯಾಫಿ ಕೊಡಲಿಲ್ಲ ಎಂದು, ಮಲ್ಲಿಕಾರ್ಜುನ ಜೊತೆ ಮಾತು ಬಿಟ್ಟದ್ದು, ಅಕ್ಕನ ಮದುವೆಗೆ ಕರೆದಿಲ್ಲ ಎಂದು ಮೂನಿಸಿಕೊಂಡದ್ದು, ಕಾಲೇಜಗೆ ನನ್ನ ಬಿಟ್ಟು ಹೋಗಾದ ಗೆಳೆಯನೊಂದಿಗೆ ಸೆಟಗೊಂಡಿದ್ದು, ಎಕ್ಸಾಂ ನಲ್ಲಿ ತೊರಿಸಲಿಲ್ಲ ಎಂದು ಕೋಪಗೊಂಡಿದ್ದು, ಹಾಸ್ಟೇಲ್ ದಾರಿಯಲ್ಲಿ ಮಾವು ಕದ್ದು ತಿನ್ನಂದ್ದು, ರೈಲ್ವೆ ಹಳಿಗಳ ಮೇಲೆ ಬೇಕಾಬಿಟ್ಟಿ ಸೇಲ್ಪಿ ತೆಗೆದುಕೊಂಡದ್ದು, ಶ್ರೀನಗರ ಸರ್ಕಲ್‌ನಲ್ಲಿ ನಿಂತು ಸ್ನೇಹಿತರೊಟ್ಟಿಗೆ ಹುಡ್ಗಿಯರಿಗೆ ಕಾಳಹಾಕಿದ್ದು, ಒಂದೇ ಬೈಕ್ ಮೇಲೆ ಪಂಚಪಾಂಡವರು ಪ್ರಯಾಣಿಸಿದ್ದು, ಒಂದೇ ಪ್ಲೇಟ್‌ನಲ್ಲಿ ಮೂವರು ಊಟ ಮಾಡಿದ್ದು, ನೇರಳೆ ಹಣ್ಣಿಗಾಗಿ ಗಿಡ ನೇತಾಡಿದ್ದು ಎಲ್ಲವು ಸ್ನೇಹದ ಸುಮಧುರ ಕ್ಷಣಗಳೆ. ಆದರೆ ಆ ಸ್ನೇಹಿತರು ಈಗ ನನ್ನೊಟ್ಟಗಿಲ್ಲ. ಆದರೆ ಅವರ ನೆನಪು ಮಾತ್ರ ನನ್ನೊಟ್ಟಿಗೆ ಸದಾ ಇರುತ್ತವೆ. ವತ್ತಿ ಬದುಕಿನಲ್ಲಿ ಎಲ್ಲ ಸ್ನೇಹಿತರು ಒಂದೊಳ್ಳೆ ಹುದ್ದೆ ಪಡೆಕೊಳ್ಳಿ ಎಂದು ಆಶಿಸುವ ನಿಮ್ಮ ಸ್ನೇಹಿತ ಮಂಜು.

- February 20, 2019 No comments:
Email ThisBlogThis!Share to XShare to FacebookShare to Pinterest

Tuesday, 12 February 2019

ಓ ನೇಕಾರ....!!

ನೇಕಾರ, ನೀ ಜಗಕ್ಕೆಲ್ಲ

ವಸ್ತ್ರ ಉಡಿಸುವ ನೇತಾರ,
ಕಷ್ಟಗಳಿಗೆ ಅಂಜದೆ,
ಸುಖಕ್ಕೆ ಹಿಗ್ಗದೆ ಜನರ 
ಮಾನ ರಕ್ಷಿಸುತಿರುವ 
ಸಾಹುಕಾರ.

ನೂಲು ಇಲ್ಲದೇ ನೋವು
ತಿಂದರೂ, ನಲಿವು ಹಂಚುವ
ಮೇಧಾವಿ, ಬೆಲೆ ಎರಿದರು,
ಬೆಲೆ ಇಳಿದರೂ ಎಂದು
ಬೀದಿಗಿಳಿಯದ ಕರುನಾಳು.

ಹಣವನೇ ಬಯಸದೇ
ಮಾನ ರಕ್ಷಣೆಯೇ ಕಾಯಕ
ಎಂದು ತಿಳಿದಿರುವ ಕಾಯಕ
ಯೋಗಿ ನೀ. ನಿನ್ನ ರಕ್ಷಣೆಗೆ
ಇಲ್ಲ ಇಲ್ಲಿ ಯಾವ ಅಸ್ತ್ರ,
ಹೋರಾಡಿ ಜಯಿಸು ನೀ
ವಸ್ತ್ರವೇ ನಿನ್ನ ಅಸ್ತ್ರ..
------------------------

ಹುಟ್ಟಿಸಿ ಬಿಟ್ಟ ಆ ದೇವರು

ಬೆತ್ತಲಾಗಿ,  ಬದುಕು ನೀನೆಂದು
ಬತ್ತದ ಉತ್ಸಾಹದ ನಡುವೆಯೂ
ದುಡಿದರೂ ಧಕ್ಕುತ್ತಿಲ್ಲ
ಹಿಡಿ ನೆಮ್ಮದಿ ಇನ್ನು,

ಧನಿವಿಗೆ ಶರಣಾಗಿ
ಶ್ರಮಕ್ಕೆ ಕೂಲಿಯಾಗಿ
ಹೊತ್ತಿಗೆ ಮೆತ್ತಗಾಗಿ
ದುಡಿದರೂ ಧಕ್ಕುತ್ತಿಲ್ಲ
ಕೈತುಂಬ ದುಡ್ಡು ಇನ್ನು.

ಹೊಟ್ಟೆಯ ಹಿಟ್ಟಿಗಾಗಿ
ಗೇಣು ಬಟ್ಟೆಗಾಗಿ
ರಟ್ಟೆ ಮಣಿಸಿ ತೊಡೆ ತಟ್ಟಲೆ
ಬೇಕು ಬಡತನ ಎಂಬ ವೈರಿಗೆ
ಧಕ್ಕಿಸಿಕೊಳ್ಳಬೇಕು ಸಿರಿತನ
ಎಂಬ ಸುಪತ್ತಿಗೆ.

ಆದರೂ ಬಾಳಲೇ ಬೇಕು
ಕನಸು ಕಣ್ಗಳ ನಡುವೆ.
ಕೊನೆಗೆ ಸೇರಲೆ ಬೇಕು
ಆರಡಿ, ಮೂರಡಿ ಗುಂಡಿಗೆ.

ಇಳಿ ಸಂಜೆ ಇಣುಕುವಾಗ
ಮಗ್ಗಕ್ಕೆ ಕೈ ಮುಗಿದು
ಎಳತಿದ್ದ ಅಪ್ಪ, ಪಕ್ಕದಲ್ಲಿ
ನಾನು ಕುಳಿತಿರುತ್ತಿದ್ದೆ ಗಪ್ಪ.
----------------------------

ಚೂಟುದ್ದ ಕಾಲ ಚಾಚಿ

ಅಣಿ ಹಲಗೆಯ ಒದ್ದು
ಇತ್ತಿಂದ ಅತ್ತ, ಹತ್ತಿಂದ ಇತ್ತ
ಲಾಳಿಯ ಒಗೆದು, ಕಲಿತಿದ್ದೆ
ವೃತ್ತಿಯ ಕೌಶಲ್ಯ. ಅಪ್ಪ
ನೋಡ್ತಿದ್ದ ಗಪ್ಪಚುಪ್ಪ.

ತಿರುಗುವ ರಾಟೆಯ ಮುಂದ
ಕುಂತ ಅವ್ವನ ಮಡಿಲ ಸೇರಿ,
ತಿರುತಿದ್ದೆ, ನೂಲಿಲ್ಲದ್ದ ರಾಟೆ,
ಅವ್ವ ನೂಲಿದ್ರ ನಾ ತಿರುತ್ತಿದೆ
ಗರಗರ ರಾಟೆ. ನೆಟ್ಟ ಕಣ್ಣ 
ಮಿಟಗಸ್ತ ನೋಡ್ತಿದ್ಲ ನಮ್ಮ
ಮಾತೆ.

ಸೀರೆ ಗಳಿಗೆ ಹಾಕೋವಾಗ
ನೋಡ್ತಿದ್ದೆ, ಅವ್ವನ ಬೆನ್ನೇರಿ
ನಲಿತ್ತಿದ್ದೆ, ಅಪ್ಪ ಬೈದ್ರ ಮಗ್ಗದ
ಸಂದ್ಯಾಗ ಓಡಿ ಹೋಗ್ತಿದ್ದೆ. 

ಸೀರಿ ಕೊಡಾಕ ಅಪ್ಪನ ಜೊತೆ
ಓಡ್ತಿದ್ದೆ, ಸೆಡಜೀ ಗಂಜೂಸ್
ನೋಡಿ ಒಳ ಒಳಗ ನೋಡಿ
ನಗ್ತಿದ್ದೆ. ವಾರಾ ಪೂರ್ತಿ ದುಡದ್ರು
ಅಪ್ಪ ತರದಿದ್ದ 50 ರುಪಾಯಿ
ಅದ್ರಾಗ ನಡಿತಿತ್ತು  ಜೀವನ ಯಾತ್ರೆ.

ಈಗ ನಡದೈತಿ ದುಬಾರಿ ಜಾತ್ರಿ, 
ಬದುಕಿಗಿಲ್ಲ ಖಾತ್ರಿ. ಆದ್ರು ಮತ್ತ
ಮತ್ತ ಬರತೈತಿ ನೆನಪಿನ ಜಾತ್ರಿ
ನಾ ಅದಲ್ರಿ ಕಳೆದ ಹೋಗೋದ ಖಾತ್ರಿ.
-------------------

"ಹೇ ನೇಕಾರ"

ನೀ ಏಳು, ಕೊಟ್ಟಿಲ್ಲವೆಂದು
ಕೊರಗಿ ಕೈ ಕಟ್ಟಿ ಕುರದಿರಿ
ನಿನ್ನೊಟ್ಟಿಗೆ ಇನ್ನೊಬ್ಬನನ್ನು
ಎಬ್ಬಿಸು, ಅವನು ಮತ್ತೊಬ್ಬರನು
ಎಬ್ಬಿಸಲಿ.

ಕೇಳದೆ ಕೊಟ್ಟ ಇತಿಹಾಸ
ನಮ್ಮದ, ಕೈ ಜೋಡಿಸಿ
ಕೆರಳಿದಾಗಲೇ ಕೊಟ್ಟ
ಇತಿಹಾಸ ನಮ್ಮದು. 
ಒಗ್ಗಟ್ಡಾಗಿ ಕೈ ಜೋಡಿಸಿ
ಕಣ್ಣಕ್ಕಿದು ಹೋರಾಡು.

ನಿನಗೆಂದೆ  ಕೊಟ್ಟ
ಯೋಜನೆಗಳು ಬರೀ
ಕಾಗದದ ಹುಲಿಗಳಾಗಿ
ಗರ್ಜಿಸಿ ಸರ್ಕಾರದ ಸಾಧನೆ
ಸೇರಿವೆ. ನಿನ್ನದೆಂಬುದು ಇಲ್ಲಿ
ಬರೀ ವಸ್ತ್ರ ಮಾತ್ರ, ಇದ್ನೆ
ನೀ ಜಗಕ್ಕೆಲ್ಲ ಉಡಿಸಿ 
ಹೇಳು ನಾ ನೇಕಾರನೆಂದು.

ನೀ ಏಳದಿದ್ದರೆ, ನಿನ್ನ ಅಳಿವು
ನಿನ್ನ ಮರಿಮೊಮ್ಮಕಳಿಗೆ
ನಿನ್ನ ಬಟ್ಟೆಯಲ್ಲೆ ಚಿತ್ರ ಬಿಡಿಸಿ
ಇದು ನೇಕಾರ ಎನ್ನಬೇಕಾಗುತ್ತೆ
ಎದ್ದೇಳು, ಎದುರಿಗೆ ಗುರಿ ಇರಲಿ
ಹಿಂದೆ ಪಣ ಇರಲಿ ಜಯ ಸದಾ
ನಿನ್ನದಾಗಲಿ. ಜೈ ನೇಕಾರ.
---------------------

ಹಿಡಿ ಜೀವದ ಬದುಕಲ್ಲಿ

ಚಲಿಸುತ್ತಿಲ್ಲ ಲಾಳಿ,
ಜಿಡ್ಡು ಗಟ್ಟಿದ ಹಗ್ಗಕ್ಕಿಲ್ಲ
ಮೊದಲಿನ ಚಾಳಿ.

ಜಂಗು ಹಿಡಿದು, ಜೋತು
ಬಿದ್ದಾವೂ ತಂತಿ. ಮನಿ
ಮಾಳಿಗೆ ಮ್ಯಾಲೆ ಬಿದ್ದಾವೂ
ಕುಂಟಿ, ಕೋಲು, ಶೇಟಲ್.

ಕುಣಿ ಇಲ್ಲದ ಮನಿ
ಕಾಣತೈತಿ ಗುರುವಿಲ್ಲ
ಮಠದ ಹಂಗ್, ದಾರಿ
ಸವೆಸಿ ಬಂದು ನಿಂತೇವ್
ವಿದ್ಯುತ್ ಕೆಳಗ.

ರಟ್ಟಿಗೆ ಇಲ್ಲ ಮೊದಲಿನ
ಗಟ್ಟಿ, ರೊಟ್ಟಿ ತಿಂದು 
ಕುಳಿತರೆ, ಖಣ ಆಗತ್ತಿತ್ತ
ಗಟ್ಟಿಮುಟ್ಟಿ.

ಬಣ್ಣದ ಬದುಕಿನ್ಯಾಗ 
ನಡದೈತಿ ಜೀವನ
ಸಂತಿ, ಯಾರಿಗೆ ಬೇಕೇಳಿ
ನೇಕಾರನ ಚಿಂತಿ. ಇದ್ಕ
ಆಗೈತಿ ನೇಕಾರನ ಜೀವನ
ಹರಿದ ತಂತಿ.

Written by-Manjunath Gadagin 
ReplyForward
- February 12, 2019 No comments:
Email ThisBlogThis!Share to XShare to FacebookShare to Pinterest

Sunday, 10 February 2019

ಮಕ್ಕಳ "ಧ್ವನಿ" ಈ ಮಂಜುಳಾ




ಮಂಜುನಾಥ ಗದಗಿನ
‘ಮಲಾಲ’ ಹೆಸರಲ್ಲೇ ಏನೋ ಒಂದು ಕಿಚ್ಚು ಇದೆ. ಉಗ್ರರ ಗುಂಡಿಗೂ ಬಗ್ಗದೇ ಮುನ್ನುಗ್ಗಿ ಮಕ್ಕಳ ಹಕ್ಕುಗಳ ರಕ್ಷಣೆಗೆ ಪಣತೊಟ್ಟ ವೀರ ಮಹಿಳೆ ಮಲಾಲ ಯೂಸೂಫ ಝಾಯಿ. ನಮ್ಮ ನಡುವೆಯೂ ಒಬ್ಬರು ಮಲಾಲ ಇದ್ದಾರೆ. ಇವರು ಕೂಡಾ ಮಕ್ಕಳ ಹಕ್ಕುಗಳ ರಕ್ಷಣೆಗೆ ಹೋರಾಡುತ್ತಾ, ಸ್ವಿಡ್ಜರ್ಲೆಂಡ್ ಜಿನೆವಾಕ್ಕೆ ಹೋಗಿ ನಮ್ಮ ದೇಶದ ಮಕ್ಕಳ ಹಕ್ಕುಗಳ ಬಗ್ಗೆ ಭಾಷಣ ಮಾಡಿ ಎಲ್ಲರ ಹುಬ್ಬೇರಿಸಿದ್ದಾರೆ.
ಹೌದು! ಅವರೇ ಧಾರವಾಡ ಜಿಲ್ಲೆಯ ರಾಮಾಪುರದ ಮಂಜುಳಾ ಮುನವಳ್ಳಿ. ಎಲೆಮರೆಯ ಕಾಯಿಯಂತೆ ಗ್ರಾಮೀಣ ಭಾಗದಲ್ಲಿ ಮಕ್ಕಳ ಹಕ್ಕುಗಳ ರಕ್ಷಣೆಗೆ ಟೊಂಕಕಟ್ಟಿ, ಹಲವಾರು ಉಪನ್ಯಾಸ, ಕಾರ್ಯಾಗಾರಗಳ ಮೂಲಕ ಮಕ್ಕಳ ಹಕ್ಕುಗಳ ಬಗ್ಗೆ ತಿಳಿಸುತ್ತಿದ್ದಾರೆ. 2013 ಅ.10 ರಿಂದ ಸ್ವಿಡ್ಜರ್ಲೆಂಡ್‌ನ ಜಿನೆವಾದಲ್ಲಿ ನಡೆದ 66ನೇ ಅಂತಾರಾಷ್ಟ್ರೀಯ ಮಕ್ಕಳ ಹಕ್ಕುಗಳ ಸಮಾವೇಶದಲ್ಲಿ ಪಾಲ್ಗೊಂಡು ನಿರಾಳವಾಗಿ 20 ನಿಮಿಷಕ್ಕೂ ಹೆಚ್ಚು ಸಮಯ ಭಾರತದ ಮಕ್ಕಳ ಹಕ್ಕುಗಳ ಕುರಿತು ಕನ್ನಡದಲ್ಲಿ ಮಾತನಾಡಿದರು. ಇವರು ಮಾತನಾಡಿದ ವಿಷಯ ಎಷ್ಟು ಪರಿಣಾಮಕಾರಿಯಾಗಿತ್ತು ಅಂದರೆ, ಈ ವಿಷಯವಾಗಿಯೇ ಅಂದಿನ ಸಮಾವೇಶದಲ್ಲಿ ಬರೋಬ್ಬರು ಒಂದುವರೆ ಗಂಟೆಗೂ ಅಧಿಕ ಕಾಲ ಚರ್ಚೆ ನಡೆಯಿತು. ಇವರ ಮಾತಿಗೆ ಶಬ್ಬಾಷಗಿರಿ ದೊರೆತ್ತಿತ್ತು. ಇಂತಹ ಅದ್ಭುತ್ ಮಕ್ಕಳ ಹಕ್ಕುಗಳ ಹೋರಾಟಗಾರ್ತಿ ನಮ್ಮ ನಡುವೆ ಇದ್ದಾರೆ ಎಂಬುವುದೇ ಒಂದು ಹೆಮ್ಮೆ.

ಗ್ರಾಮೀಣ ಪ್ರತಿಭೆ:

ಧಾರವಾಡ ಜಿಲ್ಲೆಯಿಂದ 15 ಕಿ.ಮೀ ದೂರದ ರಾಮಾಪುರ ಈಕೆಯ ಊರು. ಅಲ್ಲಿಯ ಜನಸಂಖ್ಯೆ 3000ಕ್ಕೂ ಅಧಿಕ ಮಾತ್ರ. ಇಂತಹ ಗ್ರಾಮೀಣ ಮಟ್ಟದ ಒಂದು ಪ್ರತಿಭೆ ಅಂತಾರಾಷ್ಟ್ರಿಯ ಮಟ್ಟದಲ್ಲಿ ರಾಷ್ಟ್ರದ ಕೀರ್ತಿ ಫತಾಕೆಯನ್ನು ಹಾರಿಸಿದ್ದು ನಿಜಕ್ಕೂ ಶ್ಲಾಘನೀಯ. ರೈತ ಕುಟುಂಬದ ಮಹಾಂತೇಶ ಹಾಗೂ ಮಹಾದೇವಿ ಮಗಳೇ ಮಂಜುಳಾ. ಸದ್ಯ ಇವಳು ಧಾರವಾಡದ ಕರ್ನಾಟಕ ಕಾನೂನು ವಿಶ್ವ ವಿದ್ಯಾಲಯದಲ್ಲಿ ಮೂರನೇ ಸೆಮಿಸ್ಟರ್ ವಿದ್ಯಾರ್ಥಿಯಾಗಿ ಕಲಿಯುತ್ತಿದ್ದಾರೆ. ಕಲಿಕೆಯೊಂದಿಗೆ ಮಕ್ಕಳ ಹಕ್ಕುಗಳ ರಕ್ಷಣೆಯಲ್ಲಿ ತೊಡಗಿಕೊಂಡಿದ್ದಾರೆ ಈ ಮಲಾಲ ಅಲಿಯಾಸ್ ಮಂಜುಳಾ.

ಆಯ್ಕೆಯಾದಾಕ 16 ವರ್ಷ:

2013ರಲ್ಲಿ ಕಿಡ್ಸ್ ಸಂಸ್ಥೆಯ ಗುಬ್ಬಚ್ಚಿ ಮಕ್ಕಳ ಮಹಾ ಸಂಘದ ಉಪಾಧ್ಯಕ್ಷೆಯಾಗಿ ಕಾರ್ಯನಿರ್ವಹಿಸುತ್ತಿದ್ದರು. ಈ ಸಮಯದಲ್ಲಿ ಅವರು ಮಕ್ಕಳ ಹಕ್ಕುಗಳ ಕುರಿತಾಗಿ ವಿಷಯಗಳನ್ನು ಮಂಡನೆ ಮಾಡುತ್ತಾ, ತಾಲೂಕು, ರಾಜ್ಯ, ದೇಶದಲ್ಲಿ ಸಂಚರಿಸಿದರು. ಇದೇ ಅವರಿಗೆ ವರದಾನವಾಯಿತು. ನಂತರ ಇವರ ಮಕ್ಕಳ ಹಕ್ಕುಗಳ ಬಗ್ಗೆ ಇರುವ ಆಸಕ್ತಿ ನೋಡಿ ಜಿನೇವಾದಲ್ಲಿ ನಡೆದ ಸಮಾವೇಶಕ್ಕೆ ಆಯ್ಕೆ ಮಾಡಲಾಯಿತು. ಆಗ ಮಂಜುಳಾ ಅವರಿಗೆ 16 ವರ್ಷ ಈಗ 20 ವರ್ಷ. ಈ ಸಂದರ್ಭದಲ್ಲಿ ಮಂಜುಳಾ ಅವರ ಜೊತೆ ಗುಜರಾತ್‌ನ ಅಫ್ಸಾನಾ ನೋಯಿಡಾ ಕೂಡಾ ಆಯ್ಕೆಯಾಗಿ ಮಕ್ಕಳ ಹಕ್ಕುಗಳ ಬಗ್ಗೆ ಮಾತನಾಡಿದರು. ಈ ವೇಳೆ ಕನ್ನಡವನ್ನು ಭಾಷಾಂತರಿಸಿದ್ದು ಮುಂಬೈ ಮೂಲದ ಮೇರಿ ಎಂಬುವವರು.
ಸದ್ಯ ವಿಶ್ವ ಸಂಸ್ಥೆಯ ಮಕ್ಕಳ ಹಕ್ಕುಗಳ ರಕ್ಷಣೆಗಾಗಿ ‘ಮಕ್ಕಳ ಧ್ವನಿ’ ಎಂಬ ಕಾರ್ಯಕ್ರಮ ಹಮ್ಮಿಕೊಂಡಿದೆ. ಈ ಯೋಜನೆಯಿಡಿಯಲ್ಲಿ ಮಂಜುಳಾ ಅವರು ಮಕ್ಕಳ ಹಕ್ಕುಗಳ ಬಗ್ಗೆ ಜಾಗೃತಿ ಮೂಡಿಸುತ್ತಿದ್ದಾರೆ. ಶಾಲಾ-ಕಾಲೇಜುಗಳಿಗೆ ಹೋಗಿ ಉಪನ್ಯಾಸಗಳನ್ನು ನೀಡಿ ಜಾಗೃತಿ ಮೂಡಿಸುತ್ತಿದ್ದಾರೆ. ಅಷ್ಟೇ ಅಲ್ಲದೇ ಹಲವಾರು ವೇದಿಕೆಗಳಲ್ಲಿ ತಮ್ಮ ವಾಕ್‌ಚಾತುರ್ಯವನ್ನು ತೊರಿಸಿದ್ದಾರೆ. ಇಲ್ಲಿವರೆಗೂ ಅನೇಕ ಬಾಲ್ಯ ವಿವಾಹ ಹಾಗೂ ಬಾಲ ಕಾರ್ಮಿಕ ಪದ್ಧತಿಗಳ ವಿರುದ್ಧ ಹೋರಾಡಿ ತಡೆ ಗಟ್ಟಿದ್ದ ಗರಿ ಮಂಜುಳಾ ಅವರಿಗೆ ಸಲ್ಲುತ್ತದೆ.
ಒಲಿದ ಪ್ರಶಸ್ತಿಗಳ ಗರಿ:
ಬಸವರಾಜ ಹೊರಟ್ಟಿ ಅವರ ಅವ್ವ ಸೇವಾ ಸಂಸ್ಥೆಯಿಂದ 2013ರಲ್ಲಿ ‘ಅವ್ವ’ ಪ್ರಶಸ್ತಿ, ಬಾಲ ವಿಕಾಸ ಅಕಾಡೆಮಿಯಿಂದ 2012-14ನೇ ಸಾಲಿನ ಪ್ರಶಸ್ತಿ, ಕರ್ನಾಟ ನವ ನಿರ್ಮಾಣ ವೇದಿಕೆಯಿಂದ ರಾಜ್ಯೋತ್ಸವ ಪ್ರಶಸ್ತಿ, 2015ರಲ್ಲಿ ಬೆಳಗಾವಿ ಕೆಎಲ್‌ಇಯಿಂದ ಪ್ರೈಡ್ ಆಫ್ ಕೆಎಲ್‌ಇ ಪ್ರಶಸ್ತಿ, ಪ್ರತಿಭಾ ಪುರಸ್ಕಾರ, ಬೇಂದ್ರ ಪುರಸ್ಕಾರ, ಕನಕ ಪುರಸ್ಕಾರ ಹೀಗೆ ಹತ್ತು ಹಲವು ಪ್ರಶಸ್ತಿಗಳು ಇವರ ಮಕ್ಕಳ ಹಕ್ಕುಗಳ ರಕ್ಷಣೆಗೆ ಅರಸಿ ಬಂದು, ಇವರ ಜವಾಬ್ದಾರಿಯನ್ನು ಮತ್ತಷ್ಟು ಹೆಚ್ಚಿಸಿವೆ.
ಮಕ್ಕಳ ಹಕ್ಕುಗಳ ರಕ್ಷಣೆಗೆ ಕೆಚ್ಚೆದೆಯಿಂದ ಹೋರಾಡುತ್ತಿರುವ ಮಂಜುಳಾ ಮುನವಳ್ಳಿಯವ ಕಾರ್ಯ ಇತರೆ ಹೆಣ್ಣು ಮಕ್ಕಳಿಗೂ ಮಾದರಿಯಾಗಿದೆ. ಇದೇ ರೀತಿ ಇವರ ಸಮಾಜ ಕಾರ್ಯ ಮುಂದುವರೆಯಲಿ, ಸಮಾಜಕ್ಕೆ ಮತ್ತಷ್ಟು, ಮಗದಷ್ಟು ಒಳಿತಾಗಲಿ, ಇನ್ನಷ್ಟು ಪ್ರಶಸ್ತಿ, ಪುರಸ್ಕಾರಗಳು ಇವರನ್ನು ಅರಸಿ ಬರಲಿ ಎಂಬುವುದು ಜನತೆಯ ಹಾರೈಕೆ.
---
ಮಕ್ಕಳ ಹಕ್ಕುಗಳ ರಕ್ಷಣೆಯಲ್ಲಿ ನನ್ನನ್ನು ನಾನು ತೊಡಗಿಸಿಕೊಂಡಿದ್ದು ನನಗೆ ಸಂತಸದ ಸಂಗತಿ. ಅದೇಷ್ಟೋ ಮಕ್ಕಳಿಗೆ ತಮ್ಮ ಹಕ್ಕುಗಳ ಬಗ್ಗೆ ಗೊತ್ತಿರುವುದಿಲ್ಲ. ಈ ಬಗ್ಗೆ ತಿಳಿಸುವ ಕಾರ್ಯ ಮಾಡುತ್ತಿದ್ದೇನೆ. ಮುಂದಿನ ದಿನಗಳಲ್ಲಿ ಎನ್‌ಜಿಒ ಮೂಲಕ ಕಾರ್ಯ ಮಾಡುತ್ತೇನೆ.
-ಮಂಜುಳಾ ಮುನವಳ್ಳಿ, ಮಕ್ಕಳ ಹಕ್ಕುಗಳ ಹೋರಾಟಗಾರ್ತಿ.
- February 10, 2019 No comments:
Email ThisBlogThis!Share to XShare to FacebookShare to Pinterest
Newer Posts Older Posts Home
Subscribe to: Posts (Atom)

ಆರು ಸರ್ಕಾರಿ ನೌಕ್ರಿ ಪಡೆದ ವಿಕಲಚೇತನ ಸಾಧಕಿ

  ಮಂಜುನಾಥ ಗದಗಿನ -- ಇಂದಿನ ಸ್ಪರ್ಧಾ ತ್ಮಕ ಯುಗದಲ್ಲಿ ಸರ್ಕಾರಿ ನೌಕರಿ ಪಡೆದುಕೊಳ್ಳುವುದು ಎಲ್ಲರ ಕನಸು ಹಾಗೂ ಗುರಿ ಹೌದು. ಆದರೆ, ಸರ್ಕಾರಿ ನೌಕರಿ ಪಡೆಯಬೇಕು...

  • ನುಡಿ ತೇರ ಎಳೆಯೋಣ ಬನ್ನಿ....
    ಮಂಜುನಾಥ ಗದಗಿನ ನಾಡಾಗಲಿ, ನುಡಿಯಾಗಲಿ ಎಂದೆಂದೂ ಕನ್ನಡ ಅಭಿಮಾನ ನಮ್ಮದಾಗಿರಲಿ. ತನು, ಮನ ನಿಮ್ಮದಾಗಲಿ ಕನ್ನಡ ಉಸಿರಾಗಲಿ, ನಮ್ಮೂರ ನುಡಿ ಹಬ್...
  • ಆಟಗಳು ಉಂಟು ಲೆಕ್ಕಕ್ಕಿಲ್ಲ..!
    ಮಂಜುನಾಥ ಗದಗಿನ   ಆಟದೊಂದಿಗೆ ಪಾಠ ಕೇಳುತ್ತಿದ್ದರೆ, ಅದೆನೋ, ಹರುಷ. ಮತ್ತಷ್ಟು ಕಲಿಬೇಕು, ತಿಳಿದುಕೊಳ್ಳಬೇಕು ಎಂಬ ಹಂಬಲ ವ್ಯಕ್ತಿಗತವಾಗಿ ಪರಕಾಯ ಪ್ರವೇಶ ಮಾಡುತ್...
  • ಹೋರಾಟಗಾರಲ್ಲಿ ಜಾಗೃತಿ ಮೂಡಿಸಿದ ನಾಟಕ ಕಂಪನಿ
    ಮಹಾದೇವಪ್ಪ ಪಟ್ಟಣ ಸ್ಥಾಪಿಸಿದ್ದ ಶ್ರೀಭಕ್ತಿವರ್ಧಕ ಸಂಗೀತ ನಾಟಕ ಕಂಪನಿ -ಮಂಜುನಾಥ ಗದಗಿನ ಸ್ವಾತಂತ್ರ್ಯ ಹೋರಾಟ ತೀವ್ರಗತಿಯಲ್ಲಿ ಸಾಗಿದ್ದ ಸಮಯ. ಈ ವೇಳೆ ಬ್ರಿಟಿಷರು ಹೆಚ...

Search This Blog

  • Home

About Me

manjunath Gadagin
View my complete profile

Report Abuse

Blog Archive

  • ►  2024 (1)
    • ►  March (1)
  • ►  2023 (2)
    • ►  July (2)
  • ►  2022 (7)
    • ►  August (6)
    • ►  July (1)
  • ►  2020 (2)
    • ►  December (1)
    • ►  September (1)
  • ▼  2019 (20)
    • ▼  October (2)
      • ಸರಿಗಮಪದಲ್ಲಿ "'ಓಂಕಾರ''
      • ನೋಡ ಬನ್ನಿ ಬೆಳಗಾವಿ ರಾಜ್ಯೋತ್ಸವ!
    • ►  September (2)
      • "ಪೈಲ್ವಾನ್" ಅಖಾಡದಲ್ಲಿ ರಾಮದುರ್ಗ ನಗೆ ಟಾನಿಕ್
      • ಕಂಡಕ್ಟರ್ ಮೂಗಿನಿಂದ ಕೊಳಲು ನಾದ!!!!
    • ►  July (3)
      • ಅಂಗವೈಕಲ್ಯತೆ ಶಾಪವಲ್ಲ
      • ಕರ್ ನಾಟಕಾ ಡ್ರಾಮಾ
      • ಖಾಸಗಿ ಶಾಲೆ ಮೀರಿಸುವ ಸರ್ಕಾರಿ ಶಾಲೆ!
    • ►  March (3)
      • ಹೆಣ್ಣಿನ ಪಾತ್ರಗಳಲ್ಲಿ ಸೈ ಅನಿಕೊಂಡ ರಾಘವೇಂದ್ರ
      • ರಂಗೇರಿದ ರಂಗಿನ ನೆನಪು..
      • ನುಡಿ ತೇರ ಎಳೆಯೋಣ ಬನ್ನಿ....
    • ►  February (7)
      • ಬ್ರಹ್ಮಗಂಟು
      • ಸ್ನೇಹದ ಕಡಲು
      • ಓ ನೇಕಾರ....!!
      • ಮಕ್ಕಳ "ಧ್ವನಿ" ಈ ಮಂಜುಳಾ
    • ►  January (3)
  • ►  2018 (22)
    • ►  December (9)
    • ►  April (2)
    • ►  March (6)
    • ►  February (2)
    • ►  January (3)
  • ►  2017 (6)
    • ►  September (1)
    • ►  January (5)
  • ►  2016 (17)
    • ►  November (1)
    • ►  October (2)
    • ►  September (1)
    • ►  July (1)
    • ►  June (2)
    • ►  May (2)
    • ►  April (2)
    • ►  March (2)
    • ►  February (4)
  • ►  2015 (8)
    • ►  September (1)
    • ►  August (1)
    • ►  July (3)
    • ►  April (2)
    • ►  January (1)
Awesome Inc. theme. Powered by Blogger.